ಬೆತ್ತಲೆಯಾಗಿ ನೃತ್ಯ ಮಾಡಿದ ವ್ಯಕ್ತಿಯ ವೀಡಿಯೋವನ್ನು ಮಹಿಳೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ವೇಶ್ಯೆಯಾಗಿರುವ ಮಹಿಳೆ 54ರ ಹರೆಯದ ಪ್ರಿಯಕರನಿಗೆ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದು, ಗೋರೆಗಾಂವ್ ಪೊಲೀಸರು ಬಂಧಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮುಂಬೈ: ಬೆತ್ತಲೆಯಾಗಿ ನೃತ್ಯ ಮಾಡಿದ ವ್ಯಕ್ತಿಯ ವೀಡಿಯೋವನ್ನು ಮಹಿಳೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ವೇಶ್ಯೆಯಾಗಿರುವ 21 ವರ್ಷದ ಮಹಿಳೆ 54ರ ಹರೆಯದ ಪ್ರಿಯಕರನಿಗೆ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದಾಳೆ. ವ್ಯಕ್ತಿ ತನ್ನೊಂದಿಗೆ ಸಮಯ ಕಳೆದಾಗ ಮಹಿಳೆ ಬೆತ್ತಲೆ ಡ್ಯಾನ್ಸ್‌ನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾಳೆ. ಇದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಮಹಿಳೆಗೆ ಬ್ಲಾಕ್ ಮೇಲ್ ಮಾಡಲು ಯತ್ನಿಸಿದ 21 ವರ್ಷದ ಯುವತಿಯನ್ನು ಗೋರೆಗಾಂವ್ ಪೊಲೀಸರು ಬಂಧಿಸಿದ್ದಾರೆ.
ವೀಡಿಯೋವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡದಿರಲು ಮಹಿಳೆ 10 ಲಕ್ಷ ರೂಪಾಯಿ ಅಥವಾ ಎಂಟು ತೊಲದ ಚಿನ್ನದ ಬಳೆಯನ್ನು ಕೊಡುವಂತೆ ವ್ಯಕ್ತಿಗೆ ಬೇಡಿಕೆಯಿಟ್ಟಿದ್ದಳು. ಬ್ಲ್ಯಾಕ್‌ಮೇಲಿಂಗ್ ಬೇಡಿಕೆಗಳಿಗೆ ಮಣಿಯಲು ವ್ಯಕ್ತಿ ನಿರಾಕರಿಸಿದ್ದರಿಂದ, ಮಹಿಳೆ ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ರಚಿಸಿ, ವೀಡಿಯೊವನ್ನು ಅಪ್‌ಲೋಡ್ ಮಾಡಿ ಅದನ್ನು ವ್ಯಕ್ತಿಯ ಪರಿಚಿತರಿಗೆ ಶೇರ್ ಮಾಡಿದ್ದಾಳೆ.
ಕೆಲಸ ಕೊಟ್ಟ ಬಾಸ್‌ನ ಹೆಂಡ್ತಿ ಜೊತೆ ಉದ್ಯೋಗಿಯ ಅಕ್ರಮ ಸಂಬಂಧ, ವಿಷ್ಯ ಗೊತ್ತಾದ ಮೇಲೆ ಮನೆಗೆ ಕರೆಸಿದ..!
ವ್ಯಕ್ತಿ ಫೆಬ್ರವರಿಯಲ್ಲಿ ಗೋರೆಗಾಂವ್ ಪೊಲೀಸರನ್ನು ಸಂಪರ್ಕಿಸಿ ದೂರು ಕೊಟ್ಟಿದ್ದು, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಆರೋಪಿ ಮಹಿಳೆಯನ್ನು ಭಾನುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ವ್ಯಕ್ತಿ ಭದ್ರತಾ ಏಜೆನ್ಸಿಯನ್ನು ನಿರ್ವಹಿಸುತ್ತಿದ್ದಾರೆ ಮತ್ತು ಅಂಧೇರಿಯಲ್ಲಿ ವಾಸಿಸುತ್ತಿದ್ದಾರೆ.
2021ರಲ್ಲಿ, ವ್ಯಕ್ತಿ ಕಾಮಾಟಿಪುರದಲ್ಲಿರುವ ವೇಶ್ಯಾಗೃಹದಲ್ಲಿ ಮಹಿಳೆಯನ್ನು ಭೇಟಿಯಾದರು. ಆಕೆಗೆ ಹಲವಾರು ಕಾಸ್ಟ್ಲೀ ಉಡುಗೊರೆಗಳನ್ನು ಸಹ ನೀಡಿದ್ದರು. ಆಗಾಗ ಮಹಿಳೆಯನ್ನು ಭೇಟಿಯಾಗುತ್ತಿದ್ದ ಕಾರಣ ವ್ಯಕ್ತಿ ಗೋರೆಗಾಂವ್‌ನಲ್ಲಿ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡರು. ಇಬ್ಬರೂ ಅಲ್ಲಿ ಆಗಾಗ ಭೇಟಿಯಾಗುತ್ತಿದ್ದರು. ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ವ್ಯಕ್ತಿ ಇನ್ನೊಬ್ಬ ವೇಶ್ಯೆಯನ್ನು ಗೋರೆಗಾಂವ್‌ನ ಬಾಡಿಗೆ ಮನೆಗೆ ಆಹ್ವಾನಿಸಿದನು, ಅಲ್ಲಿ ಅವಳು ಬೆತ್ತಲೆ ನೃತ್ಯ ಮಾಡಿದ್ದಳು. ನಂತರ ಮಹಿಳೆ ತನ್ನೊಂದಿಗೆ ವಿವಸ್ತ್ರವಾಗಿ ನೃತ್ಯ ಮಾಡುವಂತೆ ವ್ಯಕ್ತಿಗೆ ಮನವೊಲಿಸಿದರು. ಇನ್ನೊಬ್ಬ ಮಹಿಳೆ ಇದನ್ನು ರಹಸ್ಯವಾಗಿ ಮೊಬೈಲ್ ಫೋನ್‌ನಲ್ಲಿ ಕೃತ್ಯವನ್ನು ಸೆರೆಹಿಡಿದ್ದಳು.
ಕಳ್ಳತನ ಕಲಿಸುವ ಬೆಂಗಳೂರಿನ ತಾಯಿ ; ಅಪ್ರಾಪ್ತ ಮಗನಿಗೆ ಕಳ್ಳತನದ ಟ್ರೈನಿಂಗ್ ಕೊಡ್ತಿದ್ದ ಹೆತ್ತಮ್ಮ
ಕೆಲವು ದಿನಗಳ ನಂತರ, ವ್ಯಕ್ತಿಯ ಪರಿಚಯಸ್ಥರಿಗೆ ಈ ನಗ್ನ ಡ್ಯಾನ್ಸ್ ವೀಡಿಯೋವನ್ನು ಕಳುಹಿಸಿಕೊಡಲಾಯಿತು. ಗೊರೆಗಾಂವ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅದೇ ಮಹಿಳೆ ವೀಡಿಯೊವನ್ನು ತನಗೆ ಕಳುಹಿಸಿದ್ದಾಳೆ ಎಂದು ವ್ಯಕ್ತಿ ತನ್ನ ಸ್ನೇಹಿತರಿಂದ ತಿಳಿದುಕೊಂಡನು. ಮಹಿಳೆ ಕಳೆದ ವಾರ ಗೋರೆಗಾಂವ್‌ನಲ್ಲಿ ವ್ಯಕ್ತಿಯನ್ನು ಭೇಟಿಯಾಗಿದ್ದು, 10 ಲಕ್ಷ ರೂಪಾಯಿ ನೀಡದಿದ್ದರೆ ಅಥವಾ ಚಿನ್ನದ ಬಳೆ ನೀಡದಿದ್ದರೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು.
ನಿರಾಕರಿಸಿದಾಗ, ಮಹಿಳೆ ವೀಡಿಯೊವನ್ನು ವೈರಲ್ ಮಾಡಲು ಮುಂದಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾವು ಐಪಿಸಿ ಮತ್ತು ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ಮಹಿಳೆಯನ್ನು ಬಂಧಿಸಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.