ಫೇಸ್‌ಬುಕ್‌ನಿಂದ ಪತ್ನಿಗೆ ಗೊತ್ತಾಯ್ತು ಗಂಡನ ರಾಸಲೀಲೆ! ಮಾಡಿದ್ದೇನು?

By Suvarna News  |  First Published Apr 9, 2024, 6:00 PM IST

ದಾಂಪತ್ಯದಲ್ಲಿ ಪ್ರೀತಿ, ವಿಶ್ವಾಸ ಮುಖ್ಯ. ನಂಬಿಕೆ ದ್ರೋಹ ಮಾಡಿದ ಸಂಗಾತಿ ಜೊತೆ ಜೀವನ ನಡೆಸೋದು ಕಷ್ಟಸಾಧ್ಯ. ಈ ಮಹಿಳೆಗೂ ಫೇಸ್ಬುಕ್ ಮೂಲಕ ಪತಿಯ ಬಣ್ಣ ಗೊತ್ತಾಗಿದೆ. ದಂಗಾದ ಮಹಿಳೆ ವಿಚ್ಛೇದನದ ನಿರ್ಧಾರ ಕೈಗೊಂಡಿದ್ದಾಳೆ. 
 


ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ ಅತಿ ಹೆಚ್ಚಿದೆ. ಅದ್ರಲ್ಲಿ ಅನೇಕ ವಿಷ್ಯಗಳನ್ನು ಜನರು ನೋಡ್ತಿರುತ್ತಾರೆ. ಕೆಲವು ಮನರಂಜನೆ ನೀಡಿದ್ರೆ ಮತ್ತೆ ಕೆಲವು ನಮ್ಮ ಜ್ಞಾನ ವೃದ್ಧಿಸುತ್ತವೆ. ಇನ್ನು ಕೆಲ ಪೋಸ್ಟ್ ಜನರ ಗುಟ್ಟನ್ನು ಬಿಚ್ಚಿಡುತ್ತವೆ. ಈ ಗುಟ್ಟು ಕೆಲ ಸಂಸಾರವನ್ನು ಹಾಳು ಮಾಡಿದ್ದಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಒಂದು ಪೋಸ್ಟ್ ನೋಡಿದ್ದಾಳೆ. ಅದನ್ನು ನೋಡ್ತಿದ್ದಂತೆ ಆಕೆ ನಿಂತ ನೆಲ ಕುಸಿದ ಅನುಭವವಾಗಿದೆ. ಹತ್ತು ವರ್ಷಗಳಿಂದ ಪ್ರೀತಿಯ ಬಾಳ್ವೆ ನಡೆಸುತ್ತಿದ್ದ ಮಹಿಳೆ ಜೀವನ ಈಗ ಬರಿದಾಗಿದೆ. ದಾಂಪತ್ಯ ಜೀವನ ಮುರಿದು ಬಿದ್ದಿದೆ. 

ಸಾಮಾಜಿಕ ಜಾಲತಾಣ (Social Network ) ದಲ್ಲಿಯೇ ಮಹಿಳೆ ತನ್ನ ಬಾಳಿನಲ್ಲಾದ ಘಟನೆಯನ್ನು ಹಂಚಿಕೊಂಡಿದ್ದಾಳೆ. ಆಕೆ ಫೇಸ್ಬುಕ್ (Facebook) ಬಳಕೆ ಮಾಡ್ತಾಳೆ. ಅಲ್ಲಿ ಗಂಡನ ದೊಡ್ಡ ಸತ್ಯವೊಂದು ಆಕೆಯ ಕಣ್ಣಿಗೆ ಬಿದ್ದಿದೆ. ಫೇಸ್ಬುಕ್ ನಲ್ಲಿ ಮಹಿಳೆಗೆ ಸಂಬಂಧಿಸಿದ ಒಂದು ಗ್ರೂಪಿನಲ್ಲಿ ಹಾಕಿದ್ದ ಪೋಸ್ಟ್ (Post) ಗಳನ್ನು ಮಹಿಳೆ ನೋಡ್ತಿದ್ದಳು. ಈ ಗ್ರೂಪಿನಲ್ಲಿ ಮಹಿಳೆಯೊಬ್ಬಳು, ತನ್ನ ಗಂಡ ನಾಳೆ ಫುಟ್ಬಾಲ್ ಮ್ಯಾಚಿಗೆ ಹೋಗೋದನ್ನು ತಡೆಯುತ್ತೇನೆ. ಆತನ ಟೀಗೆ ಮಾತ್ರೆ ಬೆರೆಸಿ ನೀಡ್ತೇನೆ ಎಂದು ಬರೆದಿದ್ದಳು. ಆಕೆ ಪೋಸ್ಟ್ ಓದಿದ್ದಲ್ಲದೆ ಸ್ಕ್ರೋಲ್ ಮಾಡ್ತಾ ಉಳಿದ ಮಹಿಳೆಯರ ಕಮೆಂಟ್ ನೋಡಿದ್ದಾಳೆ ಮಹಿಳೆ. ಆಗ ಒಬ್ಬ ಮಹಿಳೆ ಪ್ರೊಫೈಲ್ ಪಿಚ್ಚರ್ ಮೇಲೆ ಬಿದ್ದಿದೆ. ಅದನ್ನು ನೋಡಿ ಈ ಮಹಿಳೆ ದಂಗಾಗಿದ್ದಾಳೆ. ಆ ಮಹಿಳೆ ಜೊತೆ ಪತಿ ಇರುವುದು ಕಂಡು ಬಂದಿದೆ. 

Tap to resize

Latest Videos

ಜ್ಯೂನಿಯರ್ ಪತ್ನಿಗಾಗಿ ಜಾಹೀರಾತು,ಅನುಭವ ಬೇಡ, ಆಕರ್ಷಕ ವೇತನ; ಲಿಂಕ್ಡ್ಇನ್ ಪೋಸ್ಟ್ ವೈರಲ್!

ತಕ್ಷಣ ಮಹಿಳೆ ಆ ಮಹಿಳೆಯ ಖಾತೆ ಓಪನ್ ಮಾಡಿ ಎಲ್ಲ ಪೋಸ್ಟ್ ಗಳ ಮೇಲೆ ಕಣ್ಣಾಡಿಸಿದ್ದಾಳೆ. ಆಗ ತನ್ನ ಪತಿ ಇಷ್ಟು ದಿನ ಮೋಸ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಈ ಮಹಿಳೆ ಪತಿ ಇನ್ನೊಬ್ಬ ಮಹಿಳೆ ಜೊತೆ ಮದುವೆಯಾಗಿದ್ದಾನೆ ಎಂಬುದು ಗೊತ್ತಾಗಿದೆ. ಅಲ್ಲದೆ ಇವರಿಬ್ಬರಿಗೆ ಒಂದು ಮಗು ಕೂಡ ಇತ್ತು. 

ಮಹಿಳೆ ರೆಡ್ಡಿಟ್ ನಲ್ಲಿ ಈ ವಿಷ್ಯ ಹಂಚಿಕೊಂಡಿದ್ದಾಳೆ. ಪತಿ ತನ್ನ ಹೆಸರು ಮತ್ತು ಅಡ್ಡ ಹೆಸರನ್ನು ಬದಲಿಸಿ ಎರಡನೇ ಮದುವೆಯಾಗಿದ್ದಾನೆ. ಎಲ್ಲರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಆತ ತನ್ನ ಬೇರೆ ಹೆಸರಿನಲ್ಲೇ ಬೇರೆ ಖಾತೆ ತೆರೆದಿದ್ದಾನೆ. ಮಗನ ಸರ್ ನೇಮ್ ಕೂಡ ಭಿನ್ನವಾಗಿದೆ ಎಂದು ಮಹಿಳೆ ರೆಡ್ಡಿಟ್ ಪೋಸ್ಟ್ ನಲ್ಲಿ ಬರೆದಿದ್ದಾಳೆ. 

ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ ಮಹಿಳೆ, ಪತಿಯ ಎರಡನೇ ಪತ್ನಿಗೂ ಮೆಸ್ಸೇಜ್ ಮಾಡಿದ್ದಳು. ಆಕೆ ನನಗೆ ಪತಿ ಮೊದಲೇ ಮದುವೆಯಾಗಿದ್ದ ಎನ್ನುವ ವಿಷ್ಯ ಗೊತ್ತಿಲ್ಲ. ಎರಡು ವರ್ಷಗಳ ಹಿಂದೆ ನನ್ನ ಮದುವೆ ಆಗಿದೆ. ನನ್ನ ಮಗುವಿಗೆ ಇನ್ನೂ ಹದಿನಾಲ್ಕು ತಿಂಗಳು ಎಂದು ಆಕೆ ಮೆಸ್ಸೇಜ್ ಕಳುಹಿಸಿದ್ದಾಳೆ. ಈ ಮೆಸ್ಸೇಜ್ ನೋಡಿದ ನಂತ್ರ ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.  

ಸೆಕ್ಸ್ ಜೀವನ ಆರಂಭಿಸುವ ಮುನ್ನ ಲೈಂಗಿಕತೆ, ಸಂಭೋಗದ ಬಗ್ಗೆ ಗೊತ್ತಿರಲಿ ವ್ಯತ್ಯಾಸ

ಪತಿಯ ಮುಂದೆ ಆಯ್ಕೆ ಇಟ್ಟಾಗ ಆತ ಎರಡನೇ ಪತ್ನಿ ಜೊತೆ ಹೋಗೋದಾಗಿ ಹೇಳಿದ್ದಲ್ಲದೆ ಮನೆ ಖಾಲಿ ಮಾಡಿದ್ದ. ಜೀವನಾಂಶ (maintenance) ನೀಡಲೂ ಆತ ನಿರಾಕರಿಸಿದ್ದಾನೆ. ಮಕ್ಕಳಿಗೆ ಹಣ ನೀಡಲೂ ನಿರಾಕರಿಸುತ್ತಿರುವ ವ್ಯಕ್ತಿ, ಕೆಲಸ ಬಿಡೋದಾಗಿ ಧಮಕಿ ಹಾಕಿದ್ದಾನೆ. ಮಹಿಳೆಗೆ STD ಸಮಸ್ಯೆ ಇದ್ದು, ಆಕೆ ಈಗ ನೋವಿನಲ್ಲಿದ್ದಾಳೆ. ವಿಚ್ಛೇದನ ಪ್ರಕ್ರಿಯೆ ಕೋರ್ಟಿನಲ್ಲಿದೆ. ರೆಡ್ಡಿಟ್ ಪೋಸ್ಟ್ ನೋಡಿದ ಬಳಕೆದಾರರು ಮಹಿಳೆಗೆ ಸಲಹೆ ನೀಡ್ತಿದ್ದಾರೆ.    

click me!