ಮಕ್ಕಳು ಹಣ್ಣು ತಿನ್ನುತ್ತಿಲ್ಲ ಎಂದು ಬೊಬ್ಬೆ ಹಾಕುವ ಪಾಲಕರು, ಮಕ್ಕಳು ಅಪ್ಪಿತಪ್ಪಿ ಅತಿ ಹೆಚ್ಚು ಹಣ್ಣು ತಿನ್ನೋಕೆ ಶುರು ಮಾಡಿದ್ರೆ ಸಂಕಷ್ಟಕ್ಕೆ ಒಳಗಾಗ್ತಾರೆ. ಮಕ್ಕಳ ಆರೋಗ್ಯ ಒಂದ್ಕಡೆ ಆದ್ರೆ ಇನ್ನೊಂದು ಕಡೆ ಹಣದ ಸಮಸ್ಯೆ ಅವರನ್ನು ಕಾಡುತ್ತೆ.
ಮಕ್ಕಳು ಸರಿಯಾಗಿ ಆಹಾರ ಸೇವನೆ ಮಾಡೋದಿಲ್ಲ ಎನ್ನುವುದು ಅಮ್ಮಂದಿರ ನೋವು. ಎಲ್ಲ ಪೋಷಕಾಂಶವಿರುವ ಹಣ್ಣುಗಳನ್ನು ಮಕ್ಕಳು ತಿನ್ನೋದೇ ಇಲ್ಲ. ಒಂದು ಪೀಸ್ ಸೇಬು ಹಣ್ಣು ತಿನ್ನಿಸೋದಕ್ಕೆ ಪಾಲಕರು ಹರಸಾಹಸಪಡುತ್ತಾರೆ. ಹಾಗಿರುವಾಗ ಮಕ್ಕಳು ಒಂದಿಷ್ಟು ಹಣ್ಣನ್ನು ಇಷ್ಟಪಟ್ಟು ತಿಂದ್ರೆ ಮನೆಯಲ್ಲಿರುವ ಎಲ್ಲರೂ ಖುಷಿಪಡ್ತಾರೆ. ಆದ್ರೆ ಕೆಲ ಮಕ್ಕಳು ಅತಿಯಾಗಿ ತಿನ್ನುತ್ತಾರೆ. ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡ್ಬೇಕು ಎನ್ನುವುದು ಗೊತ್ತಿರೋದಿಲ್ಲ. ಪಾಲಕರು ಹೇಳಿದ್ರೂ ಅದನ್ನು ಕೇಳೋದಿಲ್ಲ. ಆಗ ಪಾಲಕರು ಕೋಪಗೊಳ್ತಾರೆ. ಯಾವ ಹಣ್ಣನ್ನು ಹೇಗೆ, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎನ್ನುವ ಸಲಹೆ ನೀಡ್ತಾರೆ.
ಸ್ವಂತ ಮಕ್ಕಳಾದ್ರೆ ಬೈದು ಬುದ್ದಿ ಹೇಳ್ಬಹುದು. ಮಲ ಮಕ್ಕಳಾದ್ರೆ ಅವರಿಗೆ ಬೈಯ್ಯೋದು ಕಷ್ಟವಾಗುತ್ತದೆ. ಹಾಗಂತ ಸುಮ್ಮನಿದ್ರೂ ಸಮಸ್ಯೆಯಾಗುತ್ತದೆ. ಈ ಮಹಿಳೆ (Woman) ಸ್ಥಿತಿ ಈಗ ಅದೇ ಆಗಿದೆ. ಆಕೆ ಮಲ ಮಗು ಹೆಚ್ಚು ಪ್ರಮಾಣದಲ್ಲಿ ಹಣ್ಣು ತಿನ್ನೋದೇ ತಲೆಬಿಸಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ (Social Network ) ದಲ್ಲಿ ಮಲಮಗಳು ಹಣ್ಣು ತಿನ್ನುವ ವಿಷ್ಯ ಪೋಸ್ಟ್ ಮಾಡಿದ್ದಾಳೆ ತಾಯಿ. ಆದ್ರೆ ಆಕೆ ಪೋಸ್ಟ್ (Post) ಬಳಕೆದಾರರ ಕೋಪಕ್ಕೆ ಗುರಿಯಾಗಿದೆ. ಮಲ ಮಗಳು ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವ ಕಾರಣ ಜೇಬು ಖಾಲಿಯಾಗ್ತಿರೋದು ಒಂದು ಕಡೆಯಾದ್ರೆ ಇನ್ನೊಂದು ಮಗುವಿನ ಆರೋಗ್ಯ ಎನ್ನುತ್ತಾಳೆ ಮಹಿಳೆ. ಮಲ ಮಗಳು, ನನ್ನ ಒಪ್ಪಿಗೆ ಇಲ್ಲದೆ ಫ್ರಿಜ್ ನಲ್ಲಿಟ್ಟ ಹಣ್ಣುಗಳನ್ನು ತಿನ್ನುತ್ತಾಳೆ. ಅವಳ ಈ ವರ್ತನೆ ನನಗೆ ದುಬಾರಿಯಾಗಿದೆ. ಮಲಮಗಳು ದುರಾಸೆ ಹೊಂದಿದ್ದಾಳೆ ಎಂದು ಮಹಿಳೆ ಪೋಸ್ಟ್ ಹಾಕಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಈ ಮಹಿಳೆಗೆ ಐದು ತಿಂಗಳ ಮಗುವಿದೆ. ಮಲ ಮಗಳ ವಯಸ್ಸು ಏಳು ವರ್ಷ. ಕೆಲ ತಿಂಗಳಿಂದ ಮಲಮಗಳು ಈಕೆ ಜೊತೆ ವಾಸವಾಗಿದ್ದಾಳೆ. ಸದ್ಯ ಮಹಿಳೆ ಹೆರಿಗೆ ರಜೆಯಲ್ಲಿದ್ದಾಳೆ. ಮನೆಯಲ್ಲಿ ಅತಿ ಹೆಚ್ಚು ಸಂಪಾದನೆ ಮಾಡುವ ಸದಸ್ಯೆ ಈ ಮಹಿಳೆ. ಆದ್ರೆ ಹೆರಿಗೆ ರಜೆಯಲ್ಲಿರುವ ಕಾರಣ ಆಕೆಗೂ ಸರಿಯಾಗಿ ಸಂಬಳ ಬರ್ತಿಲ್ಲ. ಆಕೆ ಪತಿ ಕೂಡ ಅರೆಕಾಲಿಕ ಕೆಲಸ ಮಾಡುತ್ತಿದ್ದಾನೆ. ಮಲ ಮಗಳು ಹೋಗ್ತಾ ಬರ್ತಾ ಹಣ್ಣು ತಿನ್ನೋದು ಬಜೆಟ್ (Budget) ಮೇಲೆ ಪ್ರಭಾವ ಬೀರುತ್ತಿದೆ. ಹಣ್ಣು ಖರೀದಿಗೆ ಹೆಚ್ಚಿನ ಹಣ ಖರ್ಚಾಗುತ್ತಿದೆ. ಮಗಳು ಪರಿಸ್ಥಿತಿಯನ್ನು ಅರಿಯುತ್ತಿಲ್ಲ. ಆಕೆ ನಮ್ಮ ಸ್ಥಿತಿ ಅರ್ಥಮಾಡಿಕೊಳ್ಳಬೇಕು ಎಂದು ಮಹಿಳೆ ಹೇಳಿದ್ದಾಳೆ.
ಸೊಸೆ ಮೇಲೆ ಅತ್ತೆಗಿತ್ತು ಸಿಕ್ಕಾಪಟ್ಟೆ ಡೌಟ್, ಹೀಗ್ಯಾಕೆ ಅಂತ ಡಿಎನ್‌ಎ ಟೆಸ್ಟ್ ಮಾಡಿಸಿದ ಸೊಸೆ ಶಾಕ್!
ಮಗಳು ಒಂದುವರೆ ರಸ್ಬೆರಿ, ಮೂರು ಪೀಚ್, ನಾಲ್ಕು ಟ್ಯಾಂಗರಿನ್, ಕೆಲವು ದ್ರಾಕ್ಷಿ ಹಣ್ಣು ಹಾಗೂ ಕಲ್ಲಂಗಡಿ ಹಣ್ಣು ಮತ್ತು ಎರಡು ಬಾಳೆ ಹಣ್ಣನ್ನು ಏಳು ವರ್ಷದ ಹುಡುಗಿ ತಿನ್ನುತ್ತಾಳಂತೆ. ತಂದೆಗೆ ಕೂಡ ಮಗಳು ಹಣ್ಣು ಇಡ್ತಿಲ್ಲ. ಪತಿಯಿಂದ ಬೆಂಬಲವೂ ಸಿಗ್ತಿಲ್ಲ. ಕುಟುಂಬ ನಿರ್ವಹಣೆ ತುಂಬಾ ದುಬಾರಿಯಾಗಿದೆ. ಮುಂದೇನು ಮಾಡ್ಬೇಕು ಗೊತ್ತಾಗುತ್ತಿಲ್ಲ ಎಂದು ಮಹಿಳೆ ಪೋಸ್ಟ್ ನಲ್ಲಿ ಬರೆದಿದ್ದಾಳೆ.
ಬರೀ ಹಣದ ವಿಷ್ಯ ಮಾತ್ರವಲ್ಲ ನನಗೆ ಮಗುವಿನ ಆರೋಗ್ಯದ ಭಯವೂ ಇದೆ. ಮಗುವಿನ ಆರೋಗ್ಯ, ಪೋಷಕಾಂಶ, ರುಚಿ ಎಲ್ಲವನ್ನೂ ಪರಿಗಣಿಸಿ ಆಕೆಗೆ ಆಹಾರ ನೀಡಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಮಹಿಳೆ ಪೋಸ್ಟ್ ನಲ್ಲಿ ಬರೆದಿದ್ದಾಳೆ.
ಮಕ್ಕಳು ಸುಮ್ ಸುಮ್ನೆ ದುಡ್ಡು ಖರ್ಚು ಮಾಡ್ತಾರಾ, ಹಣ ಉಳಿಸಲು ಕಲಿಸುವುದು ಹೇಗೆ..?
ಮಹಿಳೆ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಕೆಲವರು ಮಹಿಳೆಯ ಕೆಲಸವನ್ನು ಖಂಡಿಸಿದ್ದಾರೆ. ಮಗಳನ್ನು ದುರಾಸೆಯುಳ್ಳವಳು ಎಂದು ಕರೆಯಬಾರದು ಎಂದಿದ್ದಾರೆ. ಮಲಮಗಳಿಗೆ ಬೇಧ ಮಾಡುತ್ತಿದ್ದಾಳೆ ಎಂದು ಮತ್ತೆ ಕೆಲವರು ಕಮೆಂಟ್ (Comment) ಮಾಡಿದ್ದಾರೆ. ಆದ್ರೆ ಮಹಿಳೆ ಸ್ಥಿತಿಯನ್ನು ಅರಿತು ಅನುಕಂಪ ವ್ಯಕ್ತಪಡಿಸಿದವರು, ಬಾಲಕಿ ಆರೋಗ್ಯದ (health) ಬಗ್ಗೆಯೂ ಆತಂಕವ್ಯಕ್ತಪಡಿಸಿದ್ದಾರೆ.