ಜಗತ್ತಿನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಮನುಷ್ಯರಿಗಿಂತ ಪ್ರಾಣಿಗಳನ್ನು ಹೆಚ್ಚು ನಂಬುವ ಜನರಿದ್ದಾರೆ. ಸಾಕು ಪ್ರಾಣಿ ಮೇಲಿನ ಪ್ರೀತಿಗೆ ಮಹಿಳೆಯೊಬ್ಬಳು ದಾಂಪತ್ಯ ಮುರಿದುಕೊಳ್ಳುವ ನಿರ್ಧಾರ ಕೈಗೊಂಡಿದ್ದಾಳೆ. ರೆಡ್ಡಿಟ್ ನಲ್ಲಿ ತನ್ನ ಕಥೆ ಹೇಳಿಕೊಂಡಿದ್ದಾಳೆ.
ಹೆತ್ತ ಮಕ್ಕಳಿಗಿಂತ ಕೆಲವರಿಗೆ ಸಾಕು ಪ್ರಾಣಿಗಳ ಮೇಲೆ ಪ್ರೀತಿ ಹೆಚ್ಚಿರುತ್ತದೆ. ಸಾಕು ಪ್ರಾಣಿಗಳನ್ನು ಮನುಷ್ಯರಂತೆ ನೋಡುವ ಜನರು, ಅವುಗಳ ಜೊತೆ ಬೆರೆತು, ಸಮಯ ಕಳೆದು ತಮ್ಮ ಮೂಡ್ ಸರಿಮಾಡಿಕೊಳ್ತಾರೆ. ಸಾಕು ಪ್ರಾಣಿಯನ್ನೇ ಮದುವೆಯಾದ ಕೆಲ ಘಟನೆಗಳು ಕೂಡ ನಮ್ಮಲ್ಲಿವೆ. ಸಾಕು ಪ್ರಾಣಿಗಳನ್ನು ತಮ್ಮ ಪೂರ್ವಜರನ್ನು ನೋಡುವವರಿದ್ದಾರೆ. ಈ ಸಾಕು ಪ್ರಾಣಿ ಮೇಲಿನ ಪ್ರೀತಿ ಹಾಗೂ ಒಂದು ನಂಬಿಕೆ, ಮಹಿಳೆಯೊಬ್ಬಳು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ. ಅಷ್ಟಕ್ಕೂ ಮಹಿಳೆ ಹಾಗೂ ಆಕೆ ಪತಿ ಮಧ್ಯೆ ಬಂದಿದ್ದು ಯಾವ ಪ್ರಾಣಿ, ಅಲ್ಲಿ ನಡೆದಿದ್ದು ಏನು ಎಂಬುದನ್ನು ನಾವು ಹೇಳ್ತೇವೆ.
ರೆಡ್ಡಿಟ್ (Reddit) ನಲ್ಲಿ ಮಹಿಳೆಯೊಬ್ಬಳು ತನ್ನ ಕಥೆಯನ್ನು ಬರೆದಿದ್ದಾಳೆ. ಆಕೆ ಎಲ್ಲೂ ತನ್ನ ಹೆಸರನ್ನು ಹೇಳಿಲ್ಲ. ಆಕೆ ಹಾಗೂ ಆಕೆ ಪತಿ ಮಧ್ಯೆ ವಿಚ್ಛೇದನ (Divorce) ದ ವಿಚಾರ ಬರಲು ಆಕೆ ಸಾಕಿರುವ ಬೆಕ್ಕು ಕಾರಣ. ಬೆಕ್ಕನ್ನು ಮಹಿಳೆ ಅತಿಯಾಗಿ ಪ್ರೀತಿ (love) ಮಾಡ್ತಾಳೆ. ಅದರಲ್ಲಿ ತಂದೆಯ ಆತ್ಮವಿದೆ ಎಂದು ಭಾವಿಸಿದ್ದಾಳೆ. ಇದೇ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಿದೆ. ಮಹಿಳೆ ರೆಡ್ಡಿಟ್ ನಲ್ಲಿ ಬರೆದಿರುವ ಪ್ರಕಾರ, ಮಹಿಳೆ ತಂದೆ ಸಾವಿನ ನಂತ್ರ ಅದ್ರ ನೋವನ್ನು ಮರೆಯಲು ಬೆಕ್ಕ (Cat) ನ್ನು ಸಾಕಿದ್ದಳಂತೆ. ಬೆಕ್ಕಿಗೆ ತುಂಬಾ ಹತ್ತಿರವಾಗಿದ್ದ ಮಹಿಳೆ ಬೆಕ್ಕಿನಲ್ಲಿ ತನ್ನ ತಂದೆ ಆತ್ಮವಿದೆ ಎಂದು ನಂಬಲು ಶುರುಮಾಡಿದ್ದಳು. ಆದ್ರೆ ರಜೆ ಮುಗಿಸಿ ಬರುವ ಮೊದಲೇ ಆಕೆ ಪತಿ, ಬೆಕ್ಕನ್ನು ಮಾರಿದ್ದಾನೆ. ಇದು ಮಹಿಳೆ ಬೇಸರ, ಕೋಪಕ್ಕೆ ಕಾರಣವಾಗಿದೆ.
ಏಳು ವರ್ಷ ವಯಸ್ಸಿನಿಂದ ಸಾಕಿದ್ದ ಮಲಮಗನಿಂದಲೇ ಮಗುವನ್ನು ಪಡೆದ ಮಹಿಳೆ!
ಬೆಕ್ಕಿಗೆ ಮಹಿಳೆ ಬೆಂಜಿ ಎಂದು ಹೆಸರಿಟ್ಟಿದ್ದಾಳೆ. ಬೆಕ್ಕು ಸಣ್ಣದಿರುವಾಗ ಗಾಯಗೊಂಡ ಸಂದರ್ಭದಲ್ಲಿ ಮಹಿಳೆಗೆ ಸಿಕ್ಕಿದೆ. ಮಹಿಳೆ ಅದನ್ನು ರಕ್ಷಿಸಿದ್ದಲ್ಲದೆ ಸಾಕಲು ಶುರು ಮಾಡಿದ್ದಾಳೆ. ಕಳೆದ ಎರಡು ವರ್ಷಗಳಿಂದ ಬೆಕ್ಕು ಮಹಿಳೆ ಮನೆಯಲ್ಲಿ ಬೆಳೆಯುತ್ತಿದೆ. ಬೆಕ್ಕಿನಲ್ಲಿ ತನ್ನ ತಂದೆಯ ಆತ್ಮವಿದೆ, ಇದು ತಂದೆಯ ಪುನರ್ಜನ್ಮವೆಂದು ಆಕೆ ಗಾಢವಾಗಿ ನಂಬಿದ್ದಾಳೆ. ಆದ್ರೆ ಈಕೆ ನಂಬಿಕೆ ಬೇರೆಯವರಿಗೆ ಹುಚ್ಚುತನವೆನ್ನಿಸುತ್ತದೆ. ಬೆಕ್ಕಿನ ಕಣ್ಣು ಸ್ವಲ್ಪ ವಿಚಿತ್ರವಾಗಿದೆ. ಈ ಕಣ್ಣನ್ನು ನಾನು ಬೆಕ್ಕಿಗಿಂತ ಹೆಚ್ಚೆಂದು ಭಾವಿಸ್ತೇನೆ. ಆದರೆ ನನ್ನ ಪತಿ ಈ ಬೆಕ್ಕನ್ನು ವಿಲಕ್ಷಣ ಹಾಗೂ ಅನಾರೋಗ್ಯಕ್ಕೆ ಒಳಗಾದ ಪ್ರಾಣಿ ಎಂದು ಭಾವಿಸುತ್ತಾನೆ ಎಂದು ಮಹಿಳೆ ಹೇಳಿದ್ದಾಳೆ. ನಾನು ಬೆಕ್ಕಿನಲ್ಲಿ ತಂದೆ ಆತ್ಮವಿದೆ ಎಂದು ನಂಬುವುದು ಆತನಿಗೆ ಸರಿ ಬರ್ತಿಲ್ಲ. ಬೆಕ್ಕಿನ ಜೊತೆ ನನಗಿರುವ ಸಂಬಂಧವನ್ನು ಅವನಿಗೆ ಸಹಿಸಲು ಸಾಧ್ಯವಾಗ್ತಿಲ್ಲ ಎಂದು ಮಹಿಳೆ ರೆಡ್ಡಿಟ್ ನಲ್ಲಿ ಬರೆದಿದ್ದಾಳೆ.
ಮಕ್ಕಳಿಗೆ ಬ್ಯಾಡ್, ಗುಡ್ ಟಚ್ ಪಾಠ ಮಾಡೋದು ಪೋಷಕರ ಕರ್ತವ್ಯ!
ಮಹಿಳೆ ರಜೆಯ ಮೇಲೆ ಮನೆಯಿಂದ ಹೊರಗೆ ಹೋಗಿದ್ದಳು. ವಾಪಸ್ ಬಂದಾಗ ಆಕೆ ಬೆಕ್ಕು ಕಾಣಲಿಲ್ಲ. ಗಂಡನ ಬಳಿ ಈ ಬಗ್ಗೆ ವಿಚಾರಿಸಿದ್ದಾಳೆ. ಗಂಡ, ಬೆಕ್ಕನ್ನು ಸಹೋದ್ಯೋಗಿಗೆ ನೀಡಿದ್ದಾಗಿ ಹೇಳಿದ್ದಾಳೆ. ಸಹೋದ್ಯೋಗಿಯನ್ನು ಮಹಿಳೆ ವಿಚಾರಿಸಿದ್ದಾಳೆ. ಆದ್ರೆ ಪತಿಯ ಸಹೋದ್ಯೋಗಿ ಬೆಕ್ಕನ್ನು ವಾಪಸ್ ನೀಡಲು ನಿರಾಕರಿಸಿದ್ದಾನೆ. ಆಕೆ ಸಹೋದ್ಯೋಗಿ ಪತ್ನಿಯನ್ನೂ ವಿಚಾರಿಸಿದ್ದಾಳೆ. ಆದ್ರೆ ಆಕೆ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದ್ರಿಂದ ಕೋಪಗೊಂಡ ಮಹಿಳೆ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ನೀಡಿದ್ದಾಳೆ. ಈ ಎಲ್ಲ ಘಟನೆ ಮಧ್ಯೆ ಬೆಕ್ಕನ್ನು ಹತ್ತಿರದ ಆಶ್ರಮದಲ್ಲಿ ಬಿಟ್ಟು ಬಂದಿರೋದಾಗಿ ಪತಿ ಹೇಳಿದ್ದಾನೆ. ತಂದೆಯಂತೆ ಬೆಕ್ಕನ್ನು ನೋಡಿಕೊಳ್ತಿದ್ದ ಮಹಿಳೆಗೆ ಘಟನೆಯಿಂದ ಆಘಾತವಾಗಿದೆ. ಬೆಕ್ಕನ್ನು ಕಳೆದುಕೊಂಡ ನೋವು ಕಾಡ್ತಿದೆ. ಇದೇ ಸಮಯದಲ್ಲಿ ಆಕೆ ಪತಿಯಿಂದ ದೂರವಾಗುವ ನಿರ್ಧಾರ ಕೈಗೊಂಡಿದ್ದಾಳೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.