Love Story : ಅನಂತ್ ಅಂಬಾನಿ – ರಾಧಿಕಾ ಲವ್ ಸ್ಟೋರಿ ಇದು!

Published : Apr 15, 2023, 06:14 PM IST
Love Story : ಅನಂತ್ ಅಂಬಾನಿ – ರಾಧಿಕಾ ಲವ್ ಸ್ಟೋರಿ ಇದು!

ಸಾರಾಂಶ

ಅಂಬಾನಿ ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಿದೆ. ರಾಧಿಕಾ ಈಗಾಗ್ಲೇ ಅನಂತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರ ಮಧ್ಯೆ ಏನೋ ಇದೆ ಎನ್ನುವ ವದಂತಿ ಸತ್ಯವಾಗಿದ್ದು, ಅವರಿಬ್ಬರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.  

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಕಳೆದ ವರ್ಷ ಡಿಸೆಂಬರ್‌ನಲ್ಲಿ  ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸುದ್ದಿ ಹೊರ ಬರ್ತಿದ್ದಂತೆ ಅವರ ಲವ್ ಸ್ಟೋರಿ ತಿಳಿಯಲು ಜನರು ಉತ್ಸುಕರಾಗಿದ್ದರು. ನಾವಿಂದು ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಲವ್ ಸ್ಟೋರಿಯನ್ನು ನಿಮಗೆ ಹೇಳ್ತೇವೆ. 

ರಾಧಿಕಾ (Radhika) ಮರ್ಚೆಂಟ್ ಯಾರು? : ರಾಧಿಕಾ ಮರ್ಚೆಂಟ್ ಗುಜರಾತ್‌ (Gujarat) ನ ದೊಡ್ಡ ಉದ್ಯಮಿ ವೀರೇನ್ ಮರ್ಚೆಂಟ್ ಅವರ ಮಗಳು. ವೀರೇನ್ ಮರ್ಚಂಟ್ ಮುಖ್ಯವಾಗಿ ಗುಜರಾತ್‌ನ ಕಚ್‌ನಿಂದ ಬಂದವರು. ಅವರು ಎಡಿಎಫ್ ಫುಡ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕರು ಮತ್ತು ಎನ್‌ಕೋರ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಮತ್ತು ಉಪಾಧ್ಯಕ್ಷರಾಗಿದ್ದಾರೆ.

ರೀಲ್​ ಲೈಫ್​ನಲ್ಲಿ ಲವ್ವಾಗಿ ರಿಯಲ್​ ಲೈಫಲ್ಲಿ ಮದ್ವೆಯಾದ ಸೂಪರ್​ ಜೋಡಿಗಳಿವು!

ಬಾಲ್ಯದ ಗೆಳೆಯರು ಅನಂತ್ – ರಾಧಿಕಾ : ಅನಂತ್ (Anant) ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಬಾಲ್ಯದ ಸ್ನೇಹಿತರು. ಆದರೆ  ಬಹಳ ವರ್ಷಗಳ ನಂತ್ರ ಅವರು ಡೇಟಿಂಗ್  ಶುರು ಮಾಡಿದ್ದರು. ಚಿಕ್ಕವರಿದ್ದಾಗ ರಾಧಿಕಾ ಹಾಗೂ ಅನಂತ್ ಅನೇಕ ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ. ಒಂದೇ ಸರ್ಕಲ್ ನಲ್ಲಿ ಹ್ಯಾಂಗ್ ಔಟ್ ಮಾಡಿದ್ದಾರೆ.  ಶಾಲಾ ಶಿಕ್ಷಣ ಮುಗಿದ ನಂತ್ರ ಅನಂತ್ ಅಂಬಾನಿ, ಉನ್ನತ ಶಿಕ್ಷಣಕ್ಕಾಗಿ ರೋಡ್ ಐಲೆಂಡ್‌ನ ಬ್ರೌನ್ ವಿಶ್ವವಿದ್ಯಾಲಯಕ್ಕೆ ಹೋದ್ರು. ರಾಧಿಕಾ ಮರ್ಚೆಂಟ್ ನ್ಯೂಯಾರ್ಕ್ ವಿಶ್ವವಿದ್ಯಾಲಯಕ್ಕೆ ಹೋದ್ರು. ಭಾರತಕ್ಕೆ ವಾಪಸ್ ಆದ್ಮೇಲೆ ಮತ್ತೆ ಹತ್ತಿರವಾಗಿದ್ದಾರೆ. 

ಅಂಬಾನಿ ಕುಟುಂಬದ ಜೊತೆ ರಾಧಿಕಾ ನಂಟು : ರಾಧಿಕಾ ಹಾಗೂ ಅನಂತ್, ಒಂದೇ ಬಣ್ಣದ ಬಟ್ಟೆ ಧರಿಸಿ ಫೋಟೋಕ್ಕೆ ಫೋಸ್ ನೀಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗ್ಲೇ ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂಬ ವದಂತಿ ಹಬ್ಬಿತ್ತು. ನಂತ್ರ ರಾಧಿಕಾ ಮರ್ಚೆಂಟ್, ಇಶಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಮದುವೆಯಲ್ಲಿ ಭಾಗವಹಿಸಿದ್ದರು. ಆಗ ಈ ವದಂತಿಗಳಿಗೆ ಬಲ ಸಿಕ್ಕಿತು. ರಾಧಿಕಾ ಮರ್ಚೆಂಟ್, ಅಂಬಾನಿ ಕುಟುಂಬದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದರು. ಇಷ್ಟೇ ಅಲ್ಲ, ಇಟಲಿಯ ಲೇಕ್ ಕೊಮೊದಲ್ಲಿ  ನಡೆದ ಇಶಾ ಅಂಬಾನಿ ಅವರ ನಿಶ್ಚಿತಾರ್ಥದ ಸಂದರ್ಭದಲ್ಲಿಯೂ ರಾಧಿಕಾ ಮರ್ಚೆಂಟ್ ಕಾಣಿಸಿಕೊಂಡಿದ್ದರು. ಅನಂತ್ ಅಂಬಾನಿ ಅವರೊಂದಿಗೆ ಕೆಂಪು ಡ್ರೆಸ್‌ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಮಗ ಪೃಥ್ವಿಯವರ ಮೊದಲ ಹುಟ್ಟುಹಬ್ಬದ ಸಮಾರಂಭದಲ್ಲಿಯೂ ರಾಧಿಕಾ ಮರ್ಚೆಂಟ್ ಕಾಣಿಸಿಕೊಂಡಿದ್ದರು. 

Wedding Anniversary ದಿನ ಶಾಕಿಂಗ್​ ಹೇಳಿಕೆ ಕೊಟ್ಟ ರಣಬೀರ್​ ಕಪೂರ್​

ರಾಧಿಕಾ ಹಾಗೂ ನೀತಾ ಅಂಬಾನಿ ಮಧ್ಯೆ ಬಾಂಡಿಂಗ್ ಚೆನ್ನಾಗಿದೆ. ಇಬ್ಬರ ಮಧ್ಯೆ ಅಧ್ಬುತ ಬಾಂಧವ್ಯವನ್ನು ನೀವು ನೋಡ್ಬಹುದು. ಮದುವೆ ಪಾರ್ಟಿಗಳಲ್ಲಿ ರಾಧಿಕಾ ಹಾಗೂ ನೀತಾ ಆಗಾಗ ಒಟ್ಟಿಗೆ ಕಾಣಿಸಿಕೊಳ್ತಾರೆ. ರಾಧಿಕಾ, ಅಂಬಾನಿ ಕುಟುಂಬದಲ್ಲಿ ನಡೆಯುವ ಎಲ್ಲ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ಶ್ಲೋಕಾ ಅವರಂತೆ ಕುಟುಂಬದಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ನಡುವೆ ಉತ್ತಮ ಬಾಂಧವ್ಯವಿದೆ. ಸಹೋದರಿಯರಿಗಿಂತ ಹೆಚ್ಚು ಪ್ರೀತಿಯನ್ನು ಹೊಂದಿದ್ದಾರೆ. ನಿಶ್ವಿತಾರ್ಥಕ್ಕಿಂತ ಮೊದಲೇ ಶ್ಲೋಕಾ ಹಾಗೂ ರಾಧಿಕಾ ಹತ್ತಿರವಾಗಿದ್ದಾರೆ. ರಾಧಿಕಾ ಕುಟುಂಬದಲ್ಲಿ ಯಾವುದೇ ಸಮಸ್ಯೆ ಬಂದ್ರೂ ಶ್ಲೋಕಾ ಅಲ್ಲಿರ್ತಾರೆ. 

ಸ್ಟಾರ್ ಇಮೇಜ್  ಗೆ ಅವಕಾಶ ನೀಡಿಲ್ಲ : ರಾಧಿಕಾ ಸರಳ ಹುಡುಗಿ. ಅಂಬಾನಿ ಕುಟುಂಬದಲ್ಲಿ ಹೆಸರು ಸೇರ್ಪಡೆಯಾದ ನಂತ್ರವೂ ರಾಧಿಕಾ ಬದಲಾಗಿಲ್ಲ. ರಾಧಿಕಾ ಹೆಚ್ಚು ಪ್ರಚಾರಕ್ಕೆ ಬಂದಿದ್ದರೂ ಮೊದಲಿನಂತೆಯೇ ಇದ್ದಾರೆ ಅನ್ನೋದೆ ವಿಶೇಷ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

No Gold Bride: ಸಾಲ ಮಾಡಿ ಮದುವೆಯಾಗೋ ಈ ಕಾಲದಲ್ಲಿ, ಗುಲಗಂಜಿ ಚಿನ್ನವಿಲ್ಲ; ನಿರಾಭರಣಳಾಗಿ ಮಂಟಪಕ್ಕೆ ಬಂದ ವಧು!
'ನೀ ಇರಲು ಜೊತೆಯಲ್ಲಿ'... ತಮಿಳುನಾಡಿನ ನಟಿ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಕನ್ನಡ ನಟ Pavan Ravindra