ಸಂಗಾತಿ ಲೈಂಗಿಕ ಸಂಬಂಧ ನಿರಾಕರಿಸೋದು ಕ್ರೌರ್ಯಕ್ಕೆ ಸಮ: ಹೈಕೋರ್ಟ್

Published : Sep 18, 2023, 06:41 PM ISTUpdated : Sep 18, 2023, 06:42 PM IST
 ಸಂಗಾತಿ ಲೈಂಗಿಕ ಸಂಬಂಧ ನಿರಾಕರಿಸೋದು ಕ್ರೌರ್ಯಕ್ಕೆ ಸಮ: ಹೈಕೋರ್ಟ್

ಸಾರಾಂಶ

ಈ ಪ್ರಕರಣದಲ್ಲಿ ಕೇವಲ 35 ದಿನಗಳ ಕಾಲ ಇವರ ದಾಂಪತ್ಯ ಪರಿಣಾಮಕಾರಿಯಾಗಿ ಉಳಿದುಕೊಂಡಿದ್ದು, ನಂತರ ವಿಫಲರಾಗಿರುವ ಹಿನ್ನೆಲೆ ದಂಪತಿಗೆ ನೀಡಲಾದ ವಿಚ್ಛೇದನವನ್ನು ದೆಹಲಿ ಹೈಕೋರ್ಟ್‌ ಎತ್ತಿಹಿಡಿದಿದೆ.

ನವದೆಹಲಿ (ಸೆಪ್ಟೆಂಬರ್ 18, 2023): ಸಂಗಾತಿಯು ಉದ್ದೇಶಪೂರ್ವಕವಾಗಿ ಲೈಂಗಿಕ ಸಂಬಂಧವನ್ನು ನಿರಾಕರಿಸುವುದು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಲೈಂಗಿಕ ರಹಿತ ವಿವಾಹವು ಅಸಹ್ಯಕರ ಎಂದೂ ತೀರ್ಪು ನೀಡಿದೆ ಮತ್ತು ಮದುವೆಯ ನಂತರ ಲೈಂಗಿಕ ಸಂಬಂಧದಲ್ಲಿ ನಿರಾಶೆಗಿಂತ ಹೆಚ್ಚು ವಿನಾಶಕಾರಿ ಇನ್ನೊಂದಿಲ್ಲ ಎಂದೂ ಹೇಳಿದ್ದಾರೆ. 

ಇನ್ನು, ಈ ಪ್ರಕರಣದಲ್ಲಿ ಕೇವಲ 35 ದಿನಗಳ ಕಾಲ ಇವರ ದಾಂಪತ್ಯ ಪರಿಣಾಮಕಾರಿಯಾಗಿ ಉಳಿದುಕೊಂಡಿದ್ದು, ನಂತರ ವಿಫಲರಾಗಿರುವ ಹಿನ್ನೆಲೆ ದಂಪತಿಗೆ ನೀಡಲಾದ ವಿಚ್ಛೇದನವನ್ನು ದೆಹಲಿ ಹೈಕೋರ್ಟ್‌ ಎತ್ತಿಹಿಡಿದಿದೆ. ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯದ ತೀರ್ಪಿನ ವಿರುದ್ಧ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ನೇತೃತ್ವದ ಪೀಠ, ಹೈಕೋರ್ಟ್ ಪ್ರಕರಣದಲ್ಲಿ "ಲೈಂಗಿಕ ರಹಿತ ವಿವಾಹವು ಅಸಹ್ಯಕರ" ಎಂದು ತೀರ್ಪು ನೀಡಿದೆ. ಮದುವೆಯ ಬಳಿಕ ಲೈಂಗಿಕ ಸಂಬಂಧದಲ್ಲಿ ನಿರಾಶೆಗಿಂತ ಹೆಚ್ಚು ವಿನಾಶಕಾರಿ ಏನೂ ಇಲ್ಲ ಎಂದೂ ಹೇಳಿದ್ದಾರೆ. 

ಇದನ್ನು ಓದಿ: ಗಂಡು ಮಗು ಆಗ್ಲಿ ಅಂತ ಹೆಣ್ಣು ಮಕ್ಕಳ ಮೇಲೆ ಸತತ 10 ವರ್ಷ ರೇಪ್‌ ಮಾಡಿದ ನೀಚ ತಂದೆ!

ಪ್ರಸ್ತುತ ಪ್ರಕರಣದಲ್ಲಿ, ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದು, ಆದರೆ ಇದಕ್ಕೆ "ಯಾವುದೇ ಸಾಕ್ಷ್ಯಾಧಾರಗಳಿಲ್ಲ" ಎಂದು ನ್ಯಾಯಾಲಯವು ಗಮನಿಸಿತು.  ಪತ್ನಿಯ ಪ್ರತಿರೋಧದ ಕಾರಣದಿಂದಾಗಿ ಮದುವೆಯನ್ನು ಪೂರ್ಣಗೊಳಿಸಲಾಗಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಇದನ್ನು ಕ್ರೌರ್ಯ ಎಂದೂ ಕರೆಯಬಹುದು ಎಂದು ಹೇಳಿದೆ. ಸಂಗಾತಿಯಿಂದ ಲೈಂಗಿಕ ಸಂಬಂಧವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುವುದು ಕ್ರೌರ್ಯಕ್ಕೆ ಸಮಾನವಾಗಿದೆ. ವಿಶೇಷವಾಗಿ ಹೊಸದಾಗಿ ಮದುವೆಯಾದಾಗ ಮತ್ತು ಇದು ವಿಚ್ಛೇದನದ ಮಂಜೂರಾತಿಗೆ ಆಧಾರವಾಗಿದೆ ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರನ್ನೊಳಗೊಂಡ ಪೀಠವು ಸೆಪ್ಟೆಂಬರ್ 11 ರಂದು ಆದೇಶ ನೀಡಿದೆ.

 "ಪ್ರಸ್ತುತ ಪ್ರಕರಣದಲ್ಲಿ, ಕಕ್ಷಿದಾರರ ನಡುವಿನ ವಿವಾಹವು ಕೇವಲ 35 ದಿನಗಳವರೆಗೆ ಅಸ್ತಿತ್ವದಲ್ಲಿದೆ. ಬಳಿಕ, 18 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಇಂತಹ ಅಭಾವವು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ನಿರ್ಲಕ್ಷಿಸಲಾಗುವುದಿಲ್ಲ. 2004 ರಲ್ಲಿ ದಂಪತಿ ಹಿಂದೂ ಸಂಪ್ರದಾಯಗಳು ಮತ್ತು ವಿಧಿಗಳ ಪ್ರಕಾರ ವಿವಾಹವಾದರು ಮತ್ತು ಶೀಘ್ರದಲ್ಲೇ ಪತ್ನಿ ತನ್ನ ಪೋಷಕರ ಮನೆಗೆ ಹಿಂದಿರುಗಿದರು ಮತ್ತು ಹಿಂತಿರುಗಲಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ಪತಿ ನಂತರ ಕ್ರೌರ್ಯ ಮತ್ತು ತೊರೆದುಹೋದ ಆಧಾರದ ಮೇಲೆ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ನಂತರ, ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿತ್ತು. 

ಇದನ್ನು ಓದಿ: ಬ್ರೇಕಪ್​ಗೆ ಒಪ್ಪದಿದ್ದಕ್ಕೆ ಪ್ರಿಯಕರನ ಹತ್ಯೆ: ವಿಷ ನೀಡಿದ್ದ ಗ್ರೀಷ್ಮಾ ಕಾಟಕ್ಕೆ ಬೇಸತ್ತ ಕೈದಿಗಳು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?