
ದಾಂಪತ್ಯ ಅತ್ಯಂತ ಸುಂದರವಾದ ಸಂಬಂಧ ಎಂಬುದರಲ್ಲಿ ಎರಡು ಮಾತಿಲ್ಲ. ಅರೇಂಜ್ಡ್ ಮ್ಯಾರೇಜ್ ಆಗಿರಲಿ ಅಥವಾ ಲವ್ ಮ್ಯಾರೇಜ್ ಆಗಿರಲಿ ಸಂಬಂಧ ಸುಮಧುರವಾಗಿರುತ್ತದೆ. ಮದುವೆಯಾದ್ಮೇಲೆ ದಂಪತಿ ಪ್ರೀತಿಯಿಂದ ಜಗಳವಾಡೋದು, ಕಿರುಚಾಡೋದು ಮಾಮೂಲಿ. ಸಣ್ಣಪುಟ್ಟ ಜಗಳಗಳು ಸಂಬಂಧವನ್ನು ಗಟ್ಟಿ ಮಾಡುತ್ವೆ ಎಂದು ಹಿರಿಯರು ಹೇಳ್ತಾರೆ. ಇಬ್ಬರು ಎಷ್ಟೇ ಅರ್ಥ ಮಾಡಿಕೊಂಡಿದ್ದಾರೆ ಎಂದ್ರೂ, ಸಂಸಾರ ಶುರುವಾಗಿ 30 ವರ್ಷ ದಾಟಿದ್ರೂ, ಲಕ್ಷಾಂತರ ಪ್ರಯತ್ನಗಳ ನಂತರವೂ, ದಂಪತಿ ನಡುವೆ ದೈನಂದಿನ ಜೀವನದಲ್ಲಿ ವಿವಾದಗಳು ಉದ್ಭವಿಸುತ್ತವೆ. ಆಗಾಗ ನಡೆಯುವ ಗಲಾಟೆ ಹಿತವೆನಿಸಬಹುದು. ಆದ್ರೆ ಪ್ರತಿ ದಿನ, ಪ್ರತಿ ಕೆಲಸಕ್ಕೂ ಇಬ್ಬರ ಮಧ್ಯೆ ಜಗಳ ಶುರುವಾದ್ರೆ, ಸಣ್ಣ ವಿಷ್ಯಗಳು ದೊಡ್ಡದಾದ್ರೆ ಆಗ ಸಂಬಂಧ ಹಾಳಾಗುತ್ತದೆ.
ದಾಂಪತ್ಯದಲ್ಲಿ (Married life) ಬಿರುಕು ಶುರುವಾಗುತ್ತದೆ. ದಂಪತಿ (Couple), ಸಂಸಾರದಲ್ಲಿ ಸಾರ ಕಳೆದುಕೊಳ್ತಾರೆ. ಅನೇಕ ಬಾರಿ ಸಂಗಾತಿ ಮಧ್ಯೆ ಶುರುವಾಗುವ ಜಗಳ ತುಂಬಾ ಸಣ್ಣ ಕಾರಣಕ್ಕಾಗಿರುತ್ತದೆ. ಆದ್ರೆ ಬರ್ತಾ ಬರ್ತಾ ಅದು ದೊಡ್ಡದಾಗುತ್ತದೆ. ವಿಚ್ಛೇದಿತರು ತಮ್ಮ ದಾಂಪತ್ಯ ಮುರಿದು ಬೀಳಲು ಕಾರಣವೇನು ಎಂಬ ಸಂಗತಿಯನ್ನು ಹೇಳಿದ್ದಾರೆ. ಅದರಲ್ಲಿ ಕೆಲವೊಂದು ಚಿತ್ರ-ವಿಚಿತ್ರ ಕಾರಣಗಳಿವೆ. ಅದನ್ನು ತಿಳ್ಕೊಂಡ್ರೆ ನೀವು ಸಹ ಬೆಚ್ಚಿಬೀಳೋದು ಖಂಡಿತ.
ಆಕೆ ವೈದ್ಯೆ, ಗಂಡನೂ ವೈದ್ಯ, ಮೊದಲ ರಾತ್ರೀಲಿ ಬ್ಲೀಡ್ ಆಗದಿದ್ದಕ್ಕೆ ಚಚ್ಚಿದ ಪತಿ ರಾಯ!
ಹೆಂಡತಿ ಹೆಚ್ಚು ಲೈಂಗಿಕತೆ ಬಯಸುತ್ತಾಳೆ: ಮುಂಬೈನ ವ್ಯಕ್ತಿಯೊಬ್ಬ ತನ್ನ ವಿಚ್ಛೇದನಕ್ಕೆ ಪ್ರಮುಖ ಕಾರಣ ಹೆಂಡತಿಯ ಅತಿಯಾದ ಲೈಂಗಿಕತೆ (Sex) ಎಂದು ಹೇಳಿಕೊಂಡಿದ್ದಾನೆ. ತನ್ನ ಹೆಂಡತಿಗೆ ಓವರ್ ಲೈಂಗಿಕತೆಯ ಅಗತ್ಯತೆ ಇದೆ ಎಂದು ಹೇಳಿಕೊಂಡಿದ್ದಾನೆ. ಪತಿಯು ತನ್ನ ಹೆಂಡತಿಯನ್ನು ತುಂಬಾ ಬಲವಂತವಾಗಿ ಮತ್ತು ಅಸ್ವಾಭಾವಿಕ ಸಂಭೋಗಕ್ಕೆ ಒತ್ತಡ ಹೇರುತ್ತಿದ್ದಳು ಎಂದು ಆರೋಪಿಸಿದ್ದಾನೆ. ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿಲ್ಲದಿದ್ದರೆ ಮಾಜಿ ಪ್ರಿಯಕರನೊಂದಿಗೆ ಸಂಬಂಧ (Relationship) ಹೊಂದಲು ಬೆದರಿಕೆ ಹಾಕುವ ಮೂಲಕ ಆತನೊಂದಿಗೆ ಸಹಬಾಳ್ವೆ ನಡೆಸಲು ಸಾಧ್ಯವಾಗದಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂಬ ಆರೋಪವೂ ಮಹಿಳೆಯ ಮೇಲಿತ್ತು. ಹೀಗಾಗಿ ವ್ಯಕ್ತಿ ಡೈವೋರ್ಸ್ ಪಡೆಯಲು ಅರ್ಜಿ ಹಾಕಿದ್ದಾಗಿ ಹೇಳಿಕೊಂಡಿದ್ದಾನೆ.
ತಾಯಿಯಂತೆ ಹೆಂಡತಿ ಅಡುಗೆ ಮಾಡುತ್ತಿಲ್ಲ: ವ್ಯಕ್ತಿಯೊಬ್ಬ ಹೆಂಡತಿ, ತಾಯಿಯಷ್ಟು ರುಚಿಕರವಾಗಿ ಅಡುಗೆ ಮಾಡುತ್ತಿಲ್ಲವೆಂದು ಸಿಟ್ಟುಗೊಂಡಿದ್ದಾನೆ. ತಾಯಿ ಚಿಕನ್ ಕರಿಯನ್ನು ರುಚಿಕರವಾಗಿ ತಯಾರಿಸುತ್ತಿದ್ದರು. ಆದರೆ ಹೆಂಡತಿ (Wife) ಮಾಂಸವನ್ನು ಕುಕ್ಕರ್‌ನಲ್ಲಿ ಬೇಯಿಸಿ ಹಾಳು ಮಾಡುತ್ತಾಳೆ ಎಂದು ವ್ಯಕ್ತಿ, ಹೆಂಡತಿಗೆ ವಿಚ್ಛೇದನ ನೀಡಲು ಮುಂದಾದನು.
ಕರ್ವಾ ಚೌತ್‌ನಲ್ಲಿ ಗಂಡನ ಪಾದಗಳನ್ನು ಮುಟ್ಟದ ಹೆಂಡತಿ : ಉತ್ತರಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬ (Festival)ಗಳಲ್ಲೊಂದು ಕರ್ವಾಚೌತ್. ಈ ದಿನ ಹೆಂಡತಿ ಗಂಡನಿಗಾಗಿ ಉಪವಾಸ ಮಾಡಿ ಆತನಿಗಾಗಿ ಪೂಜೆ ಮಾಡುತ್ತಾಳೆ. ರಾತ್ರಿ ಚಂದ್ರನನ್ನು ನೋಡಿ ಗಂಡನ ಕೈಯಿಂದಲೇ ಆಹಾರ ಸೇವಿಸಿ ಉಪಾಹಾರ ಮುರಿಯುತ್ತಾಳೆ. ಈ ಸಂದರ್ಭದಲ್ಲಿ ಗಂಡನ ಕಾಲನ್ನು ಮುಟ್ಟಿ ನಮಸ್ಕರಿಸುವ ಪದ್ಧತಿಯೂ ಇದೆ. ಆದರೆ ಇಂಥಾ ಸಂಪ್ರದಾಯವನ್ನು ಇಷ್ಟಪಡದ ಪತಿ ವಿಚ್ಛೇದನ ಕೋರಿದಳು. ಈ ಮಹಿಳೆ ಕರ್ವಾ ಚೌತ್‌ನಲ್ಲಿ ತನ್ನ ಗಂಡನ ಪಾದಗಳನ್ನು ಮುದ್ದಿಸುವ ಪರಿಕಲ್ಪನೆಯನ್ನು ಇಷ್ಟಪಡಲಿಲ್ಲ ಮತ್ತು ಇಬ್ಬರೂ ಬೇರೆಯಾಗಬೇಕೆಂದು ನಿರ್ಧರಿಸಿದರು.
Marriage life ಲಿವಿಂಗ್ ಟುಗೆದರ್ ಹೆಚ್ಚಳಕ್ಕೆ ಆತಂಕ, ಡಿವೋರ್ಸ್ ತಿರಸ್ಕರಿಸಿ ಜೊತೆಯಾಗಿರಲು ಸೂಚಿಸಿದ ಹೈಕೋರ್ಟ್!
ಗಂಡನ ಮನೆ ತುಂಬಾ ಚಿಕ್ಕದು: ಮದುವೆಗೆ ಮೊದಲು ವಾಸವಾಗಿದ್ದ ಮನೆ ಮದುವೆಯಾದ ಮನೆಗಿಂತ ದೊಡ್ಡದಾಗಿದೆ ಎಂಬ ಕಾರಣಕ್ಕೆ ಮಹಿಳೆಯರು ವಿಚ್ಛೇದನಕ್ಕೆ ಯತ್ನಿಸಿದ ಸಂದರ್ಭಗಳಿವೆ.
ಗಂಡ ಜಗಳವಾಡುವುದೇ ಇಲ್ಲ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮಹಿಳೆಯೊಬ್ಬರು ವಿವಾಹವಾದ 18 ತಿಂಗಳ ನಂತರ ತನ್ನ ಸಂಗಾತಿ (Partner)ಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಚ್ಛೇದನಕ್ಕಾಗಿ ಸಂಭಾಲ್‌ನಲ್ಲಿರುವ ಶರಿಯಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವನ್ನು ಗೊಂದಲಕ್ಕೆ ಸಿಲುಕಿಸಿದೆ. ಏಕೆ? ಅವಳ ಸಂಗಾತಿಯು ಅವಳನ್ನು ಆರಾಧಿಸುತ್ತಾಳೆ ಮತ್ತು ಅವಳೊಂದಿಗೆ ವಾದ ಮಾಡುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.