Real Story : ಪತ್ನಿ ಲೈವ್ ಲೊಕೇಶನ್ ಕೇಳಿದ್ರೆ ಕೋಪಗೊಳ್ತಾಳೆ ಏನ್ ಮಾಡ್ಲಿ?

By Suvarna NewsFirst Published Sep 27, 2022, 7:15 PM IST
Highlights

ಪತಿ – ಪತ್ನಿ ಸಂಬಂಧ ಸೂಕ್ಷ್ಮವಾಗಿರುತ್ತದೆ. ಇಬ್ಬರೂ ಒಬ್ಬರನ್ನೊಬ್ಬರು ಅರಿತು ನಡೆಯುವುದು ಮಾತ್ರವಲ್ಲ ಪರಸ್ಪರ ವೈಯಕ್ತಿಕ ಸ್ಪೇಸ್ ನೀಡ್ಬೇಕಾಗುತ್ತದೆ. ಈ ಸ್ಪೇಸ್ ಸಿಗದೆ ಹೋದಾಗ, ಎಲ್ಲವನ್ನೂ ಸಂಗಾತಿ ಮುಂದೆ ಹೇಳ್ಬೇಕು ಎಂದಾಗ ಸಂಬಂಧ ಮುರಿದು ಬೀಳುವ ಸಾಧ್ಯತೆಯೂ ಇದೆ.
 

ಮದುವೆಯಾದ್ಮೇಲೆ ದಂಪತಿ ಮಧ್ಯೆ ಯಾವುದೇ ಗುಟ್ಟಿರಬಾರದು ಎಂದು ಕೆಲವರು ಹೇಳ್ತಾರೆ. ಮತ್ತೊಂದಿಷ್ಟು ಜನ ಎಲ್ಲವನ್ನೂ ಪತಿ ಅಥವಾ ಪತ್ನಿಗೆ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ. ನಮ್ಮದೆ ಆದ ಪ್ರೈವಸಿ ನಮಗೆ ಬೇಕು ಎನ್ನುವವರಿದ್ದಾರೆ. ಪತಿ ಅಥವಾ ಪತ್ನಿ ನಮ್ಮ ಎಲ್ಲ ವಿಷ್ಯಕ್ಕೂ ತಲೆ ಹಾಕಿದಾಗ ಕೆಲವರು ಕಿರಿಕಿರಿಗೊಳ್ತಾರೆ. ಆದ್ರೆ ಅವರ ವರ್ತನೆ ಸಂಗಾತಿಗೆ ವಿಚಿತ್ರವೆನ್ನಿಸುತ್ತದೆ. ಸಂಗಾತಿ ತನ್ನಿಂದ ಏನೋ ಮುಚ್ಚಿಡ್ತಿದ್ದಾರೆನ್ನುವ ಅಭಿಪ್ರಾಯಕ್ಕೆ ಬರ್ತಾರೆ. ಈ ವ್ಯಕ್ತಿಗೂ ಇದೇ ಆಗಿದೆ. ಪತ್ನಿಯನ್ನು ಪ್ರೀತಿ ಮಾಡುವ ವ್ಯಕ್ತಿ ಆಕೆಯ ಒಂದು ವರ್ತನೆಗೆ ಬೇಸತ್ತಿದ್ದಾನೆ. 

ಆತನಿಗೆ ಮದುವೆ (Marriage) ಯಾಗಿ ಹೆಚ್ಚು ವರ್ಷವಾಗಿಲ್ಲ. ಪತಿ- ಪತ್ನಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದ್ರೆ ಪತ್ನಿಯ ಒಂದು ವರ್ತನೆ (Behavior ) ಈತನಿಗೆ ಇಷ್ಟವಾಗ್ತಿಲ್ಲ. ಯಾವಾಗ ಲೈವ್ ಲೊಕೇಶನ್ (Live Location) ಕೇಳಿದ್ರೂ ಪತ್ನಿ ಮುನಿಸಿಕೊಳ್ತಾಳೆ ಎನ್ನುತ್ತಾನೆ ವ್ಯಕ್ತಿ.  ಪತ್ನಿ ಸ್ವತಂತ್ರಳಂತೆ. ಆಕೆ ಎಲ್ಲಿಗೆ ಹೋದ್ರೂ ಪತಿ ಪ್ರಶ್ನೆ ಮಾಡೋದಿಲ್ಲವಂತೆ. ಆದ್ರೆ ಆಕೆ ಸುರಕ್ಷತೆ ಆತನಿಗೆ ಮುಖ್ಯವಂತೆ. ಹಾಗಾಗಿ ಪತ್ನಿ ಸುರಕ್ಷಿತವಾಗಿದ್ದಾಳಾ ಎಂಬುದನ್ನು ತಿಳಿದುಕೊಳ್ಳಲು ಲೈವ್ ಲೊಕೇಶನ್ ಕೇಳ್ತಾನಂತೆ. ಪತಿ ಲೈವ್ ಲೊಕೇಶನ್ ಕೇಳ್ತಿದ್ದಂತೆ ಪತ್ನಿ ಕೋಪ ನೆತ್ತಿಗೇರುತ್ತದೆಯಂತೆ. ಎಂದೂ ತನಗೆ ಪತ್ನಿ ಲೈವ್ ಲೊಕೇಶನ್ ಕಳುಹಿಸಿಲ್ಲ ಎನ್ನುತ್ತಾನೆ ಪತಿ. 

ಪತ್ನಿಯ ಈ ವರ್ತನೆ ವಿಚಿತ್ರವೆನ್ನಿಸಿದೆ. ಆಕೆ ಯಾಕೆ ಲೈವ್ ಲೊಕೇಶನ್ ಕೇಳಿದಾಗ ಮುನಿಸಿಕೊಳ್ತಿದ್ದಾಳೆ ಎಂಬುದು ನನಗೆ ಗೊತ್ತಾಗ್ತಿಲ್ಲ ಎನ್ನುತ್ತಾನೆ ಆತ. ಅಪ್ಪ ಲೊಕೇಶನ್ ಕೇಳಿದಾಗ ಎಂದೂ ಅಮ್ಮ ಮುನಿಸಿಕೊಳ್ಳುವುದಿಲ್ಲ ಎನ್ನುವುದು ಈತನ ಬೇಸರ. 

ತಜ್ಞರ ಸಲಹೆ : ಪತ್ನಿ ಲೈವ್ ಲೊಕೇಶನ್ ಕಳುಹಿಸುತ್ತಿಲ್ಲ ಎನ್ನುವ ಕಾರಣಕ್ಕೆ ನೀವು ಮನಸ್ಸು ಹಾಳು ಮಾಡಿಕೊಂಡಿದ್ದೀರಿ. ಆದ್ರೆ ಸಣ್ಣ ಸಣ್ಣ ವಿಷ್ಯವನ್ನು ಕೇಳುವ ಹಾಗೂ ತಿಳಿದುಕೊಳ್ಳಲು ಕುತೂಹಲ ತೋರಿಸುವ ನಿಮ್ಮ ಸ್ವಭಾವ ನಿಮ್ಮ ಪತ್ನಿಗೆ ಕಿರಿಕಿರಿ ಎನ್ನಿಸಬಹುದು ಎನ್ನುತ್ತಾರೆ ತಜ್ಞರು. ಇದ್ರಿಂದ ದಂಪತಿ ಮಧ್ಯೆ ಪ್ರೀತಿ, ವಿಶ್ವಾಸ, ಗೌರವ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಎಲ್ಲ ಸಂಬಂಧವೂ ಭಿನ್ನವಾಗಿರುತ್ತದೆ. ಕೆಲವರು ತಮ್ಮ ಜೀವನದ ಸಣ್ಣ ಸಣ್ಣ ವಿಷ್ಯಗಳನ್ನೂ ಸಂಗಾತಿ ಜೊತೆ ಹಂಚಿಕೊಳ್ತಾರೆ. ಆದ್ರೆ ಮತ್ತೆ ಕೆಲವರು ಎಲ್ಲ ವಿಷ್ಯವನ್ನೂ ಹಂಚಿಕೊಳ್ಳುವುದಿಲ್ಲ. ನಿಮ್ಮ ಪತ್ನಿ ಸ್ವಭಾವ ಕೂಡ ಹಾಗೆ ಆಗಿರಬಹುದು ಎನ್ನುತ್ತಾರೆ ತಜ್ಞರು.

ಪತ್ನಿ ಜೊತೆ ಮಾತನಾಡಿ : ಈ ವಿಷ್ಯದ ಬಗ್ಗೆ ಪತ್ನಿ ಜೊತೆ ಮಾತನಾಡುವುದು ಸೂಕ್ತ ಎನ್ನುತ್ತಾರೆ ತಜ್ಞರು. ನಿನ್ನ ಮೇಲೆ ನನಗೆ ಸಂಶಯವಿಲ್ಲ. ನೀನು ಎಲ್ಲಿ ಬೇಕಾದ್ರೂ ಓಡಾಡಬಹುದು. ಆದ್ರೆ ನಿನ್ನ ಸುರಕ್ಷತೆ ನನಗೆ ಮುಖ್ಯ. ನೀವು ಸುರಕ್ಷಿತವಾಗಿದ್ದೀಯಾ ಎಂಬುದನ್ನು ದೃಢಪಡಿಸಿಕೊಳ್ಳಲು ನಾನು ಲೈವ್ ಲೊಕೇಶನ್ ಕೇಳ್ತೇನೆ ಅಷ್ಟೇ ಎಂದು ಪತ್ನಿಗೆ ಹೇಳಿ ಎನ್ನುತ್ತಾರೆ ತಜ್ಞರು.

FEELFREE: ಬಾಸ್ ಜತೆಗೆ ಸೆಕ್ಸ್ ಮಾಡಿದಂತೆ ಕನಸು ಬೀಳೋದ್ಯಾಕೆ?

ಮಾತುಕತೆ ವೇಳೆ ಯಾವುದೇ ಕಾರಣಕ್ಕೂ ಕೋಪಗೊಳ್ಳಬೇಡಿ ಎಂದಿದ್ದಾರೆ ತಜ್ಞರು. ಶಾಂತವಾಗಿ ಪತ್ನಿ ಜೊತೆ ಮಾತನಾಡಬೇಕು. ನಿಮ್ಮ ಮನಸ್ಸಿನಲ್ಲಿ ಯಾವುದೇ ಕಲ್ಮಶವಿಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸಬೇಕು ಎನ್ನುತ್ತಾರೆ ತಜ್ಞರು. ನೀವು ಮಾತುಕತೆ ನಡೆಸಿದ್ರೂ ಪತ್ನಿ ಲೈವ್ ಲೊಕೇಶನ್ ಕಳುಹಿಸಲು ಒಪ್ಪಿಕೊಳ್ತಿಲ್ಲವೆಂದ್ರೆ ಮೊದಲು ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ ಎಂದಿದ್ದಾರೆ ತಜ್ಞರು.

ಕಾಂಪ್ರೋಮೈಸ್ ಆಗಬೇಕು ನಿಜ, ಆದರೆ ಅದಕ್ಕೂ ಒಂದು ಇತಿ ಮಿತಿ ಬೇಡ್ವಾ?

ದಾಂಪತ್ಯ ತುಂಬಾ ಸೂಕ್ಷ್ಮವಾಗಿರುತ್ತದೆ. ಅದನ್ನು ಎಚ್ಚರಿಕೆಯಿಂದ ಸಂಭಾಳಿಸಬೇಕು. ಸಣ್ಣ ಸಣ್ಣ ವಿಷ್ಯಗಳು ದಾಂಪತ್ಯ ಹಾಳು ಮಾಡಬಾರದು. ಪತ್ನಿ ಲೈವ್ ಲೊಕೇಶನ್ ಕಳುಹಿಸದಿರಲು ಕಾರಣ ಹೇಳಿದ್ರೆ ಅದನ್ನು ಬಗೆಹರಿಸುವ ಪ್ರಯತ್ನ ಮಾಡಿ. ಒಂದ್ವೇಳೆ ಅದು ಸಾಧ್ಯವಾಗಿಲ್ಲವೆಂದ್ರೆ ಅವಳ ಪಾಡಿಗೆ ಅವಳನ್ನು ಬಿಡಿ ಎನ್ನುತ್ತಾರೆ ತಜ್ಞರು.
 

click me!