ದಪ್ಪಗಿರುವ ವ್ಯಕ್ತಿಗಳು ನೋಡೋಕೆ ಗುಂಡು ಗುಂಡಾಗಿ ಕಾಣಿಸ್ತಾರೆ ನಿಜ. ಆದ್ರೆ ನಿತ್ಯ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಅವರು ಎದುರಿಸುತ್ತಾರೆ. ಈ ದಪ್ಪದ ದೇಹ ಅವರ ದಾಂಪತ್ಯಕ್ಕೆ ಮುಳ್ಳಾಗುವ ಸಾಧ್ಯತೆಯೂ ಇರುತ್ತದೆ. ಹೆಂಡತಿ ದಪ್ಪಗಿದ್ದಾಳೆ ಎನ್ನುವ ಕಾರಣಕ್ಕೆ ಪತಿ ಬೇರೆ ಮನೆಯನ್ನು ಇಣುಕಿ ನೋಡುವ ಸಾಧ್ಯತೆಯಿರುತ್ತದೆ.
ಪುರುಷರು ಅವರ ಸೌಂದರ್ಯಕ್ಕೆ ಹೆಚ್ಚು ಬೆಲೆ ನೀಡದೆ ಹೋಗ್ಬಹುದು ಆದ್ರೆ ತನ್ನ ಪ್ರೇಯಸಿ ಅಥವಾ ಪತ್ನಿ ಸುಂದರವಾಗಿರಬೇಕೆಂದು ಬಯಸ್ತಾರೆ. ಮದುವೆಯಾದ್ಮೇಲೆ ಪತ್ನಿ ದಪ್ಪಗಿದ್ದಾಳೆನ್ನುವ ಕಾರಣಕ್ಕೆ ದೂರವಾಗುವ ಅನೇಕ ಪುರುಷರಿದ್ದಾರೆ. ದೇಹದಲ್ಲಿ ಹೊಟ್ಟೆ ಭಾಗ ದಪ್ಪವಾದ್ರೆ ಅದು ಎಲ್ಲರ ಮುಂದೆ ತಲೆ ತಗ್ಗಿಸುವಂತೆ ಮಾಡುತ್ತದೆ. ಮಹಿಳೆಯರು ನಟಿಮಣಿಗಳಂತೆ ತಾವು ಕೂಡ ಸ್ಲಿಮ್ ಆಗಿರಬೇಕೆಂದು ಬಯಸ್ತಾರೆ. ಆದ್ರೆ ಅದು ಕಷ್ಟವಾಗುತ್ತದೆ. ಭಾರತದ ಜೀವನ ಶೈಲಿಯಲ್ಲಿ ಸ್ಲಿಮ್ ಹೊಟ್ಟೆ ಪಡೆಯೋದು ಒಂದು ಹರಸಾಹಸ ಎನ್ನಬಹುದು. ಆದ್ರೆ ಇದೇ ಹೊಟ್ಟೆ ಮಹಿಳೆಯನ್ನು ದಾಂಪತ್ಯ ಸುಖದಿಂದ ದೂರ ಮಾಡಿದ್ದೂ ಇದೆ.
ಬಹುತೇಕ ಹುಡುಗಿಯರು ಮದುವೆ (Marriage) ಗೆ ಮುನ್ನ ಸ್ಲಿಮ್ (Slim) ಆಗಿರ್ತಾರೆ. ಮದುವೆಯಾಗ್ತಿದ್ದಂತೆ ಅಥವಾ ಮದುವೆಯಾಗಿ ಎರಡು ವರ್ಷದ ನಂತ್ರ ಕೈಗೆ ಒಂದು ಮಗು ಬಂದ್ಮೇಲೆ ಅವರು ಫಿಟ್ನೆಸ್ ಗೆ ಆದ್ಯತೆ ನೀಡೋದನ್ನು ಮರೆಯುತ್ತಾರೆ. ಇದೇ ಕಾರಣಕ್ಕೆ ಹೊಟ್ಟೆ, ಸೊಂಟದ ಭಾಗ ದಪ್ಪವಾಗಲು ಶುರುವಾಗುತ್ತದೆ. ಮಹಿಳೆಯರ ಈ ಹೊಟ್ಟೆ (Stomach) ಯೇ ಅವರಿಗೆ ಶಾಪವಾಗುತ್ತದೆ.
undefined
ಅವೈಡ್ ಮಾಡ್ತಾನೆ ಪತಿ : ಮೊದಲೇ ಹೇಳಿದಂತೆ ಹೆಂಡತಿ ಸುಂದರವಾಗಿ ಕಾಣ್ಬೇಕು, ಫಿಗರ್ ಮೆಂಟೇನ್ ಮಾಡ್ಬೇಕು ಎನ್ನುವ ಪುರುಷರು ದಪ್ಪಗಿರುವ ಪತ್ನಿಯನ್ನು ನಿಧಾನವಾಗಿ ಅವೈಡ್ ಮಾಡಲು ಶುರು ಮಾಡ್ತಾರೆ. ಯಾವುದೇ ಪಾರ್ಟಿಗೆ ಅವಳನ್ನು ಕರೆದೊಯ್ಯುವುದಿಲ್ಲ. ಒಂದೆರಡು ಪಾರ್ಟಿಗೆ ಕರೆದೊಯ್ದಾಗ ಹಿಂದಿನಿಂದ ಬಂದ ಗುಸುಪಿಸು ಕೇಳಿರುವ ಗಂಡ ಮುಂದಿನ ಪಾರ್ಟಿಗೆ ತಾನೊಬ್ಬನೇ ಹೋಗಲು ಶುರು ಮಾಡ್ತಾನೆ.
SCHOOL ADMISSION ವೇಳೆ ಮಕ್ಕಳು ಮಾತ್ರವಲ್ಲ ಪಾಲಕರೂ ಸಿದ್ಧರಾಗ್ಬೇಕು!
ಕಡಿಮೆಯಾಗುತ್ತೆ ಸೆಕ್ಸ್ : ಮಹಿಳೆಯರ ಹೊಟ್ಟೆ ಸೆಕ್ಸ್ ಸುಖಕ್ಕೆ ಕೂಡ ಅಡ್ಡಿಯಾಗುತ್ತದೆ. ಪ್ರೀತಿಯ ವಿಷ್ಯದಲ್ಲೂ ಹೊಟ್ಟೆ ಅಡ್ಡಿಯಾಗುತ್ತದೆ. ಹೊಟ್ಟೆ ನಿಮ್ಮ ಪ್ರೀತಿಯ ಕ್ಷಣಗಳ ವಿನೋದವನ್ನು ಕಡಿಮೆ ಮಾಡುತ್ತದೆ. ಅತಿಯಾದ ಬೊಜ್ಜು, ದೊಡ್ಡ ಹೊಟ್ಟೆ ಬೇಗನೆ ಸುಸ್ತಾಗುವಂತೆ ಮಾಡುತ್ತದೆ. ಇದ್ರಿಂದ ಸಂಗಾತಿ ಜೊತೆ ಸೆಕ್ಸ್ ಪತಿಗೆ ಬೇಡವಾಗುತ್ತದೆ. ಅವರ ಮನಸ್ಸು ಬೇರೆಡೆ ಹುಡುಕಾಟ ಶುರು ಮಾಡುತ್ತದೆ. ನಮ್ಮಿಂದ ಸಂಗಾತಿ ಖುಷಿ ಹಾಳಾಯ್ತು ಎಂದು ಪತ್ನಿಗೆ ಟೆನ್ಶನ್ ಶುರುವಾಗುತ್ತದೆ.
ಗಂಡನ ಈ ಆಸೆಗೂ ಬೀಳುತ್ತೆ ತಣ್ಣೀರು : ಮದುವೆಯಾಗಿ ಮಕ್ಕಳಾದ್ಮೇಲೆ ಜೀವನ ಮುಗಿದಿಲ್ಲ. ಆಗ್ಲೂ ಪತಿ ನಿಮ್ಮನ್ನು ಪ್ರೀತಿಸುತ್ತಾನೆ. ನಿಮಗೆ ಒಂದಿಷ್ಟು ಸುಂದರ ಡ್ರೆಸ್ ತರಲು ಮುಂದಾಗ್ತಾನೆ. ಆದ್ರೆ ನಿಮ್ಮ ದೇಹಕ್ಕೆ ತಕ್ಕ ಡ್ರೆಸ್ ಸಿಗೋದಿಲ್ಲ. ಮಹಿಳೆಗೆ ಕೂಡ ತನ್ನ ಗಂಡನನ್ನು ಆಕರ್ಷಿಸಲು ಮೊದಲು ಧರಿಸುತ್ತಿದ್ದ ಬಟ್ಟೆಯನ್ನು ತೊಡಲು ಸಾಧ್ಯವಾಗುವುದಿಲ್ಲ.
ಹೆಚ್ಚಾದಂತೆ ಕಾಣುತ್ತೆ ವಯಸ್ಸು : ಗಂಡ ನಿಮಗಿಂತ ದೊಡ್ಡವನಿರಬಹುದು. ಆದ್ರೆ ನೀವು ಗಾತ್ರದಲ್ಲಿ ದೊಡ್ಡವರಾಗಿರುವ ಕಾರಣ ಪತಿಗಿಂತ ನಿಮಗೆ ವಯಸ್ಸಾದಂತೆ ಕಾಣುತ್ತದೆ. ಇಬ್ಬರು ಒಟ್ಟಿಗೆ ನಿಂತು ಫೋಟೋ ತೆಗೆದಾಗ ನಿಮಗೆ ಮಾತ್ರವಲ್ಲ ನಿಮ್ಮ ಪತಿಗೆ ಕೂಡ ಇರುಸುಮುರುಸಾಗಬಹುದು.
ತೂಕ ಹೆಚ್ಚಾಗಲು ಕಾರಣ : ಮೊದಲನೇಯದಾಗಿ ಮಹಿಳೆಯರು, ದಪ್ಪಗಾದ್ರೆ ಗಂಡನ ಪ್ರೀತಿ ಕಡಿಮೆಯೇನಾಗಲ್ಲ ಎನ್ನುವ ಭಾವನೆಯಲ್ಲಿರುತ್ತಾರೆ. ಇದೇ ಕಾರಣಕ್ಕೆ ತೂಕ ಇಳಿಸಿಕೊಳ್ಳುವ ಪ್ರಯತ್ನಕ್ಕೆ ಹೋಗುವುದಿಲ್ಲ. ಇದಲ್ಲದೆ ಹಾರ್ಮೋನ್ ಬದಲಾವಣೆ, ಮಹಿಳೆಯರಲ್ಲಿ ಕಾಡುವ ಕೆಲ ರೋಗಗಳು, ಜೀವನಶೈಲಿ ಇವೆಲ್ಲವೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ.
Adventures ಸಂಗಾತಿಯ ಜೊತೆಗೆ ಡೇಟಿಂಗ್ ಹೋಗುವುದೆಂದರೆ ಇವರಿಗೆ ಇಷ್ಟ!
ಪತಿಗಾಗಿ ಇಳಿಸಿ ತೂಕ : ದಪ್ಪಗಿರುವ ಪತ್ನಿಯನ್ನು ಪತಿ ಇಷ್ಟಪಡೋದಿಲ್ಲ ಎಂದಲ್ಲ. ಕೆಲ ಪುರುಷರಿಗೆ ದಪ್ಪಗಿರುವ ಮಹಿಳೆ ಇಷ್ಟವಾಗ್ತಾಳೆ. ಹಾಗಂತ ಬೊಜ್ಜು ಹೆಚ್ಚು ಮಾಡಿಕೊಂಡ್ರೆ ನಿಮ್ಮ ಆರೋಗ್ಯ ಹದಗೆಡುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಗಮನ ನೀಡಿ. ಊಟ ಬಿಟ್ಟು ನೀವು ತೂಕ ಇಳಿಸಿಕೊಳ್ಳಬೇಕಾಗಿಲ್ಲ. ಹೆಚ್ಚಿನ ಪ್ರಮಾಣದ ಫೈಬರ್ ಆಹಾರ, ವ್ಯಾಯಾಮ, ಗ್ರೀನ್ ಟೀ ಸೇವನೆ ಸೇರಿದಂತೆ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡು ನೀವು ಫಿಟ್ ಆಗಿ.