ಮದುವೆ ದಿನ ಡಾನ್ಸ್ ಮಾಡಲು ಹೋಗಿ ಸ್ಟೇಜಲ್ಲೇ ಬಿದ್ದ ವಧುವರರು: ವಿಡಿಯೋ ವೈರಲ್

By Anusha KbFirst Published Dec 28, 2022, 4:28 PM IST
Highlights

ಇಲ್ಲೊಂದು ಕಡೆ ವಧುವರರು ಎಲ್ಲ ನವವಧುವರರಂತೆ ತಮ್ಮ ಮದುವೆಯ ದಿನ ಡಾನ್ಸ್ ಮಾಡಲು ಹೋಗಿದ್ದು, ಈ ವೇಳೆ ಅಲ್ಲೊಂದು ಎಡವಟ್ಟಾಗಿದೆ. ವಧು ಹಾಗೂ ವರ ಇಬ್ಬರೂ ಡಾನ್ಸ್ ಮಾಡಲು ಹೋಗಿ ಕೆಳಗೆ ಬಿದ್ದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮದುವೆ ಜೀವನದ ಒಂದು ಪ್ರಮುಖ ಹಂತ ಈ ದಿನ ಬಹಳ ಸೊಗಸಾಗಿರಬೇಕು. ಎಲ್ಲರಿಗಿಂತಲೂ ಭಿನ್ನವಾಗಿರಬೇಕು ಎಂದು ಬಹುತೇಕ ನವಜೋಡಿಗಳು ಬಯಸುತ್ತಾರೆ. ಮದುವೆಯ ದಿನ ಧರಿಸುವ ಬಟ್ಟೆಯಿಂದ ಹಿಡಿದು ವಧುವರರ ಅಲಂಕಾರ, ಮದುವೆ ನಡೆಯುವ ಸ್ಥಳದ ಅಲಂಕಾರ ಸೇರಿದಂತೆ ಎಲ್ಲವೂ ಭಿನ್ನವಾಗಿರಲು ಬಯಸುತ್ತಾರೆ. ಇನ್ನು ಮದುವೆ ದಿನ ಡಾನ್ಸ್ ಮಾಡಲೇಬೇಕು ಎಂಬುದು ಒಂದು ಅಲಿಖಿತ ನಿಯಮ. ಮದುವೆ ದಿನ ಮದುವೆಗೆ ಬಂದ ಸ್ನೇಹಿತರು, ಗೆಳೆಯರು, ಕುಟುಂಬದವರು ಕಸಿನ್ಸ್‌ಗಳು ಎಲ್ಲರೂ  ಬಿಂದಾಸ್ ಆಗಿ ಡಾನ್ಸ್ ಮಾಡೋದು ಈ ಹಿಂದಿನಿಂದಲೂ ನಡೆದು ಬಂದು ಒಂದು ಅಲಿಖಿತ ಸಂಪ್ರದಾಯ. ಇದರ ಜೊತೆಗೆ ಇತ್ತೀಚೆಗೆ ವಧುವರರು ಕೂಡ ಡಿಫರೆಂಟ್ ಆಗಿ ಡಾನ್ಸ್ ಮಾಡುವುದನ್ನು ನಾವು ನೋಡಿದ್ದೇವೆ. ಮದುವೆಯ ಇಂತಹ ಹಲವು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಕಡೆ ವಧುವರರು ಎಲ್ಲ ನವವಧುವರರಂತೆ ತಮ್ಮ ಮದುವೆಯ ದಿನ ಡಾನ್ಸ್ ಮಾಡಲು ಹೋಗಿದ್ದು, ಈ ವೇಳೆ ಅಲ್ಲೊಂದು ಎಡವಟ್ಟಾಗಿದೆ. ವಧು ಹಾಗೂ ವರ ಇಬ್ಬರೂ ಡಾನ್ಸ್ ಮಾಡಲು ಹೋಗಿ ಕೆಳಗೆ ಬಿದ್ದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ವಿಡಿಯೋವನ್ನು ಜೈಪುರ ಪ್ರೀವೆಡ್ಡಿಂಗ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ (Instagram page) ಅಪ್‌ಲೋಡ್ ಮಾಡಲಾಗಿದ್ದು, 12. 6 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಧು (Bride) ಹಾಗೂ ವರನ (Groom) ರೋಮ್ಯಾಂಟಿಕ್ ಕ್ಷಣ ನೋಡುಗರಿಗೆ ಹಾಸ್ಯಮಯವಾಗಿ ಬದಲಾಗಿದೆ. ಡಾನ್ಸ್ ಮಾಡಲು ಹೋಗಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ವರ ಬಿಳಿ ಬಣ್ಣದ ಶೇರ್ವಾನಿ ಧರಿಸಿದ್ದು, ವಧು ಕೆಂಪು ಬಣ್ಣದ ಉತ್ತರ ಭಾರತದಲ್ಲಿ ಮದುವೆಗೆ ವಧುಗಳು ಧರಿಸುವ ಲೆಹೆಂಗಾ (Lehenga) ಧರಿಸಿದ್ದಾಳೆ. ಇಬ್ಬರು ಹಾಡೊಂದಕ್ಕೆ ಡಾನ್ಸ್ (Dance) ಮಾಡುತ್ತ ಕೈ ಕೈ ಹಿಡಿದುಕೊಂಡ ರೋಮ್ಯಾಂಟಿಕ್ (Romantic) ಆಗಿ ವರನ ತೋಳಲ್ಲಿ ವಧು ಬೆಂಡಾಗಲು ಹೋಗಿದ್ದಾಳೆ. ಅಷ್ಟೊತ್ತಿಗೆ ವರ ಬ್ಯಾಲೆನ್ಸ್ ಕಳೆದುಕೊಂಡಿದ್ದಾನೆ. ಪರಿಣಾಮ ವಧು ಕೆಳಗೆ ಬಿದ್ದಿದ್ದಾಳೆ. ವರನ್ನು ಬೀಳುವಂತೆ ಬಾಗಿ ಬೀಳುವುದರಿಂದ ಸ್ವಲ್ಪದರಲ್ಲಿ ಪಾರಾಗಿದ್ದಾನೆ. 

ಮದುವೆಯಲ್ಲಿ ಉತ್ಸಾಹದಿಂದ ಚಂಡೆ ಬಾರಿಸಿದ ಕೇರಳದ ವಧು: ವಿಡಿಯೋ ವೈರಲ್..!

ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದು, ಈ ರೀತಿ ಆಗುತ್ತದೆ. ಇಷ್ಟೊಂದು ಭಾರವಾದ ಧಿರಿಸು ಧರಿಸಿರುವಾಗ ಹೀಗೆ ಆಗುತ್ತದೆ ಕೆಲವೊಮ್ಮೆ ಎಂದು ಸಮಾಧಾನ ಮಾಡಿದ್ದಾರೆ. ಮತ್ತೆ ಕೆಲವರು ಇಬ್ಬರು ನಿಜವಾಗಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೊಂದು ದೊಡ್ಡ ವಿಷಯವಲ್ಲ ಎಂದು ಬಡೇ ಬಡೇ ಶಹರೋಮೆಂ ಚೋಟಿ ಚೋಟಿ ಬಾತೆ ಹೋತೆ ರಹ್ತಿ ಹೈ ಆದರೆ ಜೋಡಿ ಸೂಪರ್ ಆಗಿದೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಪ್ರೀತಿಯಲ್ಲಿ ಕೆಲವೊಮ್ಮೆ ಹೀಗಾಗುವುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮದುವೆಯ ದಿನ ನಡೆಯುವ ಕೆಲ ಅವಾಂತರಗಳು ಚಿರಕಾಲ ನೆನಪಿನಲ್ಲಿ ಉಳಿಯುತ್ತವೆ. ಕೆಲವೊಮ್ಮೆ ಆ ಸಂದರ್ಭದಲ್ಲಿ ಅದು ಮುಜುಗರಕ್ಕೀಡು ಮಾಡಿದರೂ ನಂತರ ಅದು ನಗು ತರಿಸುವುದು. ಅದೇ ರೀತಿ ಇಲ್ಲಿ ಜೋಡಿಗಳಿಗೆ ಈ ನೆನಪು ಚಿರಕಾಲ ಉಳಿಯುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. 

ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ! ಜಿಲ್ಲಾಧಿಕಾರಿ ಕಚೇರಿಗೆ ಯುವಕರ ಕುದುರೆ ಪರೇಡ್‌

ದಿನಗಳ ಹಿಂದಷ್ಟೇ ಕೇರಳದ ವಧುವೊಬ್ಬರು ಚೆಂಡೆ ಬಾರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಕೇರಳದ ಗುರುವಾಯೂರ್ ದೇವಾಲಯದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ವಧು ಚೆಂಡೆ ಬಾರಿಸುವ ಸ್ಟೈಲ್‌ಗೆ ನೆಟ್ಟಿಗರು ಫಿದಾ ಆಗಿದ್ದರು. ಚೆಂಡೆ ಬಾರಿಸುವ ಜೊತೆ ವಧುವಿನ ಮೋಹಕ ನಗು ಎಲ್ಲರ ಗಮನ ಸೆಳೆದಿತ್ತು. ವಧುವಿನ ತಂದೆ ಚೆಂಡೆ ವಾದಕರಾಗಿದ್ದು, ಪುತ್ರಿಗೂ ಇದು ತಂದೆಯಿಂದ ಬಳುವಳಿಯಾಗಿ ಬಂದಿದೆ. ಆಕೆಯ ಸಹೋದರ ಕೂಡ ಚೆಂಡೆ ಬಾರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಡಿಸೆಂಬರ್ 26, 2022 ರಂದು ಪೋಸ್ಟ್ ಆದ ಈ ವಿಡಿಯೋವನ್ನು  1 ಲಕ್ಷ 57 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 


 

click me!