ಪ್ರೀತಿಗೆ ಜಾತಿ, ಮತ ಮಾತ್ರವಲ್ಲ ಲಿಂಗದ ಬೇಧವಿಲ್ಲ. ಮದುವೆಯಾಗಿ 53 ವರ್ಷ ಪತ್ನಿ ಜೊತೆ ಸಂಸಾರ ಮಾಡಿದ್ರೂ ಪುರುಷರ ಮೇಲೆ ಆಕರ್ಷಣೆ ಕಡಿಮೆಯಾಗದ ವ್ಯಕ್ತಿಗೆ ಕೊನೆಗೂ ಪ್ರೀತಿ ಸಿಕ್ಕಿದೆ.
ನೀವು ಸಾಕಷ್ಟು ಪ್ರೇಮ ಕಥೆಗಳನ್ನು ಕೇಳಿರ್ತೀರಿ. ಪ್ರತಿಯೊಬ್ಬರ ಲವ್ ಸ್ಟೋರಿ ಭಿನ್ನವಾಗಿರುತ್ತದೆ. ಶುಗರ್ ಮಮ್ಮಿ, ಶುಗರ್ ಡ್ಯಾಡಿ ಸೇರಿದಂತೆ ವಯಸ್ಸಿನ ಅಂತರವಿರುವ ಇಬ್ಬರು ಒಂದಾಗಿ ಜೀವನ ಮಾಡ್ತಿರುವ ಅನೇಕ ಪ್ರೇಮಿಗಳು ನಮ್ಮಲ್ಲಿದ್ದಾರೆ. ಜಾತಿ, ಬೇಧ ಮರೆತು ನೂರಾರು ಮೈಲಿ ದೂರ ಕ್ರಮಿಸಿ ಪ್ರೀತಿಯಲ್ಲಿ ಬೀಳುವ ಅನೇಕರಿದ್ದಾರೆ. ಆದ್ರೆ ನಾವೀಗ ಹೇಳ್ತಿರುವ ಪ್ರೇಮಿಗಳು ಸಂಪೂರ್ಣ ಭಿನ್ನವಾಗಿದ್ದಾರೆ. ಇಬ್ಬರ ಮಧ್ಯೆ 46 ವರ್ಷಗಳ ಅಂತರವಿದೆ. ಪ್ರೀತಿಯಲ್ಲಿ ಬಿದ್ದವರು ಇಬ್ಬರು ಹುಡುಗ – ಹುಡುಗಿ ಅಲ್ಲ. ಇಬ್ಬರು ಹುಡುಗರು. ಈ ಗೇ ಪ್ರೇಮಿಗಳಲ್ಲಿ ಒಬ್ಬರ ವಯಸ್ಸು 52 ವರ್ಷವಾದ್ರೆ ಇನ್ನೊಬ್ಬರ ವಯಸ್ಸು 98 ವರ್ಷ ವಯಸ್ಸು. ಅವರಿಬ್ಬರ ಪ್ರೇಮ ಕಥೆ ಈಗ ಸುದ್ದಿಯಲ್ಲಿದೆ.
ಏಳು ವರ್ಷಗಳ ಹಿಂದೆ ಇಬ್ಬರೂ ಆನ್ಲೈನ್ (Online) ನಲ್ಲಿ ಭೇಟಿಯಾಗಿದ್ದರು. 52 ವರ್ಷದ ವ್ಯಕ್ತಿ ಹೆಸರು ಇವಾನ್. ಆತ ವೃತ್ತಿಯಲ್ಲಿ ಸಂಗೀತಗಾರ (musician). 98 ವರ್ಷದ ವ್ಯಕ್ತಿ ಹೆಸರು ಬಿಲ್. ಇವಾನ್ ಮತ್ತು ಬಿಲ್ ಹಿರಿಯ ನಾಗರಿಕರ ಡೇಟಿಂಗ್ (Dating) ವೆಬ್‌ಸೈಟ್ ಸಿಲ್ವರ್ ಡ್ಯಾಡೀಸ್‌ನಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಈ ಸಮಯದಲ್ಲೇ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ಈಗ ಇಬ್ಬರೂ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಒಟ್ಟಿಗೆ ವಾಸವಾಗಿದ್ದಾರೆ. ಇಬ್ಬರೂ ಎಲ್ಲ ದಂಪತಿಯಂತೆ ಜೀವನ ಮಾಡ್ತಿದ್ದೇವೆ ಎಂದು ಇವಾನ್ ಹೇಳಿದ್ದಾರೆ. ದಂಪತಿ ಇತ್ತೀಚೆಗೆ ಯೂಟ್ಯೂಬ್ ಸ್ಟಾರ್ ಮ್ಯಾಟ್ ಕಲೆನ್ ಅವರ Our Queer Life series ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ತಮ್ಮ ಸಂಬಂಧದ ಬಗ್ಗೆ ಅವರು ಮಾತನಾಡಿದ್ದರು, ಇವಾನ್, ಅನೇಕ ವರ್ಷಗಳಿಂದ ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ಬಳಸುತ್ತಿದ್ದಾರೆ. ಬಿಲ್, ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ಬಳಸುವಂತೆ ಇವಾನ್ ಗೆ ಸಲಹೆ ನೀಡಿದ್ದಲ್ಲದೆ, ಸಂಪೂರ್ಣ ಒಪ್ಪಿಗೆ ನೀಡಿದ್ದಾರಂತೆ.
ಕರೀನಾ ಹೆಸರಿನ ಟ್ಯಾಟೂ ಅಳಿಸಿ ಹಾಕಿದ ಸೈಫ್! ಮೂರನೇ ಮದ್ವೆಗೆ ರೆಡಿನಾ ಕೇಳ್ತಿದ್ದಾರೆ ನೆಟ್ಟಿಗರು...
ಆನ್ಲೈನ್ ಮೊದಲ ಭೇಟಿ ನಂತ್ರ ಇಬ್ಬರೂ ಮುಖಾಮುಖಿ ಭೇಟಿಗೆ ನಿರ್ಧರಿಸಿದ್ದರು. ಇವಾನ್ ಅವರನ್ನು ಮೊದಲು ನೋಡಿದ ಬೆಲ್, ಕ್ಲೀನ್ ಬೋಲ್ಡ್ ಆಗಿದ್ದರು. ಇವಾನ್ ನೋಡ್ತಾನೇ ಇದ್ದೆ ಎಂದು ಬೆಲ್ ಹೇಳಿದ್ದಾರೆ. ಇವಾನ್ ನೋಡಿದ ತಕ್ಷಣ ಇವನೊಬ್ಬ ಸುಂದರಾಂಗ ಎಂದುಕೊಂಡ ಬಿಲ್, ಆತನನ್ನೇ ನೋಡ್ತಿದ್ದನಂತೆ. ಆತ ಅಪಾರ್ಟ್ಮೆಂಟ್ ಗೆ ಬರ್ತಿದ್ದಂತೆ ಇವಾನ್, ಬಿಲ್ ಗೆ ಮುತ್ತಿಟ್ಟಿದ್ದಾನೆ. ಆಗ್ಲೇ, ನಾನು ಇಷ್ಟುವರ್ಷ ಬಯಸಿದ್ದ ವ್ಯಕ್ತಿ ಇವಾನ್ ಎಂಬುದು ನನ್ನ ಅರಿವಿಗೆ ಬಂತು. ಈಗ್ಲೂ ನನಗೆ ಅದೇ ಅನುಭವವಾಗುತ್ತದೆ ಎಂದು ಬಿಲ್ ಹೇಳಿದ್ದಾರೆ.
ಇವಾನ್ ಕೂಡ ತಮ್ಮ ಮೊದಲ ಭೇಟಿ ಬಗ್ಗೆ ಹೇಳಿದ್ದಾರೆ. ಬಿಲ್ ರನ್ನು ಮೊದಲ ಬಾರಿ ನೋಡ್ತಿದ್ದಂತೆ ನನ್ನ ಬಾಯಿಂದ ಬಂದ ಮೊದಲ ಮಾತು, ವಾವ್.. ಎಷ್ಟು ಚೆನ್ನಾಗಿದ್ದಾರೆ ಎಂಬುದು ಎಂದು ಇವಾನ್ ಹೇಳಿದ್ದಾರೆ.
ಮದುವೆ ಬಳಿಕ ಸೀಸನ್ ಸಂಬಂಧ ಕುರಿತು ಮಾತನಾಡಿದ ವಿದ್ಯಾ ಬಾಲನ್; ಏನಿದರ ಒಳಗುಟ್ಟು?
ಬಿಲ್, ಹತ್ತು ಜನ ಸಹೋದರ – ಸಹೋದರಿಯರನ್ನು ಹೊಂದಿದ್ದಾರೆ. ಅವರು ಒಂಭತ್ತನೇ ಸಂತಾನ. ಎರಡನೇ ವಿಶ್ವಯುದ್ಧದ ಸಮಯದಲ್ಲಿ ಸೇನೆಗೆ ಸೇರುವ ಸಮಯ ಬಂದಾಗ ಬಿಲ್ ಗೆ ತಾನು ಗೇ ಎಂಬುದು ಗೊತ್ತಾಯ್ತು. ಆ ಸಮಯದಲ್ಲಿ ವ್ಯಕ್ತಿಯೊಬ್ಬ ಬಿಲ್ ಗೆ ಸಿಕ್ಕದ್ದ. ಆದ್ರೆ ಯುದ್ಧ ಮುಗಿದ ಮೇಲೆ ಆತ ತನ್ನ ನಗರಕ್ಕೆ ವಾಪಸ್ ಹೋಗಿದ್ದ. ನಂತ್ರ ಬಿಲ್ ಗೆ ಯಾವುದೇ ಪ್ರೀತಿ ಸಿಕ್ಕಿಲ್ಲ. ತನ್ನ ಜೀವನ ಸರಿಪಡಿಸಿಕೊಳ್ಳಲು ಬಿಲ್, ಐವತ್ತರಿಂದ ಅರವತ್ತು ವೈದ್ಯರನ್ನು ಭೇಟಿಯಾಗಿದ್ದರು. ನಂತ್ರ ಹುಡುಗಿ ಪರಿಚಯವಾಗಿ ಮದುವೆಯಾಯ್ತು. 53 ವರ್ಷದವರೆಗೆ ಇಬ್ಬರ ಮಧ್ಯೆ ಪ್ರೀತಿಯಿತ್ತು. ಪತ್ನಿ ಇರಿವಾಗ್ಲೂ, ಪತ್ನಿ ಸತ್ತ ಮೇಲೂ ಬಿಲ್ ಗೆ ಪುರುಷರ ಮೇಲಿನ ಆಸಕ್ತಿ ಕಡಿಮೆ ಆಗಿರಲಿಲ್ಲ. ಕೊನೆಗೂ ಇವಾನ್ ರೂಪದಲ್ಲಿ ಪ್ರೀತಿ ಸಿಕ್ಕಿದೆ.