
ಇತ್ತೀಚಿನ ದಿನಗಳಲ್ಲಿ ವಿಚ್ಛೇದನ (Divorce) ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಹಲವು ಕಾರಣಗಳಿವೆ. ಹೆಚ್ಚಿನ ವಿಚ್ಛೇದನಗಳು ಮದುವೆಯಾದ 2 ರಿಂದ 5 ವರ್ಷಗಳ ಒಳಗೆ ಸಂಭವಿಸುತ್ತವೆ. ಆದರೆ ಇಲ್ಲಿ ಒಬ್ಬ ಮಹಿಳೆ ಮದುವೆಯಾದ 30 ವರ್ಷಗಳ ನಂತರ ವಿಚ್ಛೇದನ ಪಡೆದರು. ಹೌದು, 30 ವರ್ಷಗಳಿಂದ ಸಂತೋಷದಿಂದ ನಡೆಯುತ್ತಿದ್ದ ಅವರ ದಾಂಪತ್ಯ ಜೀವನ ಇದ್ದಕ್ಕಿದ್ದಂತೆ ಸುನಾಮಿಯಂತಹ ಸಮಸ್ಯೆಯನ್ನು ಎದುರಿಸಿತು. ಆ ಮಹಿಳೆ ತನ್ನ ಪತಿಯ ಅಸಹ್ಯಕರ ಮತ್ತು ವಿಚಿತ್ರ ಅಭ್ಯಾಸಗಳ ಬಗ್ಗೆ ತಿಳಿದ ತಕ್ಷಣ ಅವನೊಂದಿಗಿನ ಸಂಬಂಧವನ್ನು ಮುರಿದುಕೊಂಡಳು. ಹಾಗಾದರೆ ಅವನ ಆ ಅಭ್ಯಾಸವೇನು..? ಅವಳು ವಿಚ್ಛೇದನದ ಮಟ್ಟಕ್ಕೆ ಏಕೆ ಹೋಗಬೇಕಾಯಿತು.. ನೀವು ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ಬಯಸಿದರೆ ಮುಂದೆ ಓದಿ..
ವರದಿಯ ಪ್ರಕಾರ, ಒರ್ವ ಮಹಿಳೆ ತನ್ನ 30 ವರ್ಷಗಳ ದಾಂಪತ್ಯವನ್ನು ವಿಚ್ಛೇದನದೊಂದಿಗೆ ಕೊನೆಗೊಳಿಸಿದಳು. ತನ್ನ ಪ್ರೀತಿಯ ಪತಿಗೆ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ಕೆಟ್ಟ ಅಭ್ಯಾಸವಿದೆ ಎಂದು ತಿಳಿದು ಅವಳು ಶಾಕ್ ಆದಳು. ಇಲ್ಲಿ ಆಘಾತಕಾರಿ ವಿಷಯವೆಂದರೆ ಅವನು ಅಪರಿಚಿತ ಮಹಿಳೆಯರಿಂದ ಅದನ್ನು ಕದಿಯುತ್ತಿರಲಿಲ್ಲ. ತನ್ನ ಕುಟುಂಬ ಸದಸ್ಯರು, ಆಪ್ತರು ಮತ್ತು ಸ್ನೇಹಿತರು ಬಳಸಿದ ಒಳ ಉಡುಪುಗಳನ್ನು ರಹಸ್ಯವಾಗಿ ಕದಿಯುತ್ತಿದ್ದಾನೆಂದು ತಿಳಿದಾಗ ಅವಳಿಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಸುಮಾರು 30 ವರ್ಷಗಳ ಕಾಲ ಸಂಸಾರ ನಡೆಸಿದ ನಂತರ ಈ ಭಯಾನಕ ಸಂಗತಿ ಬೆಳಕಿಗೆ ಬಂದಿತು. ಈ ಸತ್ಯವನ್ನು ತಿಳಿದ ಕ್ಷಣ ಆಕೆ ಭಾವನಾತ್ಮಕವಾಗಿ ಕುಗ್ಗಿ ಹೋದಳು. ಅದರ ಬಗ್ಗೆ ತಿಳಿದ ತಕ್ಷಣ ತನ್ನ ಗಂಡನನ್ನು ನೇರವಾಗಿ ಪ್ರಶ್ನಿಸಿದಳು. ಅವನು ಆರಂಭದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಅಂತಿಮವಾಗಿ ಅವನು ತನ್ನ ತಪ್ಪನ್ನು ಒಪ್ಪಿಕೊಂಡನು.
ತನ್ನ ಗಂಡನಿಗೆ ಒಳ ಉಡುಪುಗಳ ಗೀಳು ಇದೆ ಎಂದು ತಿಳಿದಿತ್ತು. ಆದರೆ ಅವನು ಇಷ್ಟೊಂದು ಅಸಹ್ಯಕರವಾದ ಕೆಲಸವನ್ನು ಮಾಡಿ ತನ್ನ ಕುಟುಂಬವನ್ನೇ ಕಾಡುತ್ತಾನೆಂದು ತಾನು ಎಂದಿಗೂ ಊಹಿಸಿರಲಿಲ್ಲ ಎಂದು ಪತ್ನಿ ದುಃಖಿಸಿದಳು. ಇಂತಹ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ಹೆಂಡತಿಯ ಕಥೆಯನ್ನು ಕೌನ್ಸೆಲಿಂಗ್ ವೆಬ್‌ಸೈಟ್ ಹಂಚಿಕೊಂಡಿದೆ. ಅವಳು ತನ್ನ ಗಂಡನ ನಡವಳಿಕೆಯನ್ನು ಸಂಪೂರ್ಣವಾಗಿ ದ್ವೇಷಿಸುತ್ತಾಳೆ.
ಸಂತ್ರಸ್ತೆಯ ಪ್ರಕಾರ, ಇದು ಕೇವಲ ವಿಚಿತ್ರ ಅಭ್ಯಾಸವಲ್ಲ. ಬದಲಾಗಿ ತನ್ನ ಭಾವನೆಗಳಿಗೆ ಮಾಡಿರುವ ದೊಡ್ಡ ದ್ರೋಹ. ಪತಿ ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಗೌಪ್ಯತೆಯನ್ನು ಉಲ್ಲಂಘಿಸಿರುವುದರಿಂದ ತಾನು ತುಂಬಾ ಬಾಲಿಶ ಮತ್ತು ಅಸಹಾಯಕಳಾಗಿದ್ದೇನೆ ಎಂದು ಹೇಳಿದಳು. ಇಂತಹ ಕೃತ್ಯವು ಅವರ ಪವಿತ್ರ ವೈವಾಹಿಕ ಬಂಧವನ್ನು ಸಂಪೂರ್ಣವಾಗಿ ನಾಶಪಡಿಸಿದೆ ಮತ್ತು ಈಗ ಅವರ ನಡುವಿನ ಗೌರವವು ಎಂದಿಗೂ ಮೊದಲಿನಂತೆಯೇ ಇರುವುದಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ.
ಅವರಿಗೆ ಕೌನ್ಸಿಲಿಂಗ್ ನೀಡುತ್ತಿದ್ದ ತಜ್ಞರು ಕೂಡ ಮಹಿಳೆಯ ಕಥೆಯನ್ನು ಕೇಳಿ ಶಾಕ್ ಆದರು. ಇದನ್ನು ಗಂಭೀರ ಸಮಸ್ಯೆ ಎಂದು ಅವರು ಬಣ್ಣಿಸಿದರು. ಈ ನಡವಳಿಕೆಯು ಅನೈತಿಕ ಮಾತ್ರವಲ್ಲದೆ, ಬಟ್ಟೆಗಳನ್ನು ಕದ್ದ ಮಹಿಳೆಯರ ಸುರಕ್ಷತೆ ಮತ್ತು ಗೌಪ್ಯತೆಯನ್ನು ಉಲ್ಲಂಘಿಸುತ್ತದೆ ಎಂದು ಸಲಹೆಗಾರರು ಹೇಳಿದರು. ಈ ವಿಷಯ ಮಹಿಳೆಯರಿಗೆ ತಿಳಿದರೆ ಅವರು ಅನುಭವಿಸುವ ಮಾನಸಿಕ ಯಾತನೆಯನ್ನು ಊಹಿಸಿಕೊಳ್ಳುವುದು ಕಷ್ಟ ಎಂದು ತಜ್ಞರು ಹೇಳಿದರು. ಪ್ರಸ್ತುತ ಈ ಸಂತ್ರಸ್ತೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ತನ್ನ ಸ್ನೇಹಿತರ ಮುಖಗಳನ್ನು ನೋಡಲು ನಾಚಿಕೆಪಡುತ್ತೇನೆ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.