ಪುರುಷರು ಯಾವ ವಯಸ್ಸಿನಲ್ಲಿ ತಂದೆಯಾಗುವುದು ಸೂಕ್ತ? ಇಲ್ಲಿದೆ ನೋಡಿ ಎಲ್ಲೂ ಸಿಗದ ಮಾಹಿತಿ!

Published : Jan 25, 2026, 04:55 PM IST
Male Fertility

ಸಾರಾಂಶ

ಪುರುಷರಿಗೆ ತಂದೆಯಾಗಲು ನಿಖರವಾದ ವಯಸ್ಸಿನ ಮಿತಿ ಇಲ್ಲ. ಆದರೂ ವಯಸ್ಸು ಹೆಚ್ಚಾದಂತೆ ಅಪಾಯಗಳು ಖಂಡಿತವಾಗಿ ಹೆಚ್ಚು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಈ ವರ್ಷಗಳ ನಡುವೆ ತಂದೆಯಾಗುವುದು ಸುರಕ್ಷಿತ ಹಾಗೂ ಬುದ್ಧಿವಂತಿಕೆಯ ನಿರ್ಧಾರ ಎನ್ನುತ್ತಾರೆ ಆರೋಗ್ಯ ತಜ್ಞರು. ಯಾವುದು ಆ ವಯಸ್ಸು?

ತಂದೆಯಾಗಲು ಸೂಕ್ತ ವಯಸ್ಸು ಯಾವುದು?

ಕಳೆದ ಹಲವು ದಶಕಗಳ ಹಿಂದೆ ಅನೇಕ ಜನರು 20 ರಿಂದ 30 ವರ್ಷಗಳ ನಡುವೆಯೇ ವಿವಾಹವಾಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ 30 ವರ್ಷ ಹಾಗಿರಲಿ, 35-45 ವರ್ಷ ಆದರೂ ಹಲವು ಪುರುಷರು ವಿವಾಹವಾಗುವ ಆಲೋಚನೆಯನ್ನೇ ಮಾಡುತ್ತಿಲ್ಲ. ಜೀವನದಲ್ಲಿ ಒಂದು ಹಂತಕ್ಕೆ ಸ್ಥಿರವಾಗಿ ನೆಲೆಸಿ (Settled) ಆದಮೇಲೆಯೇ ಮದುವೆಯಾಗಬೇಕೆಂದು ಹಲವರು ಯೋಚಿಸುತ್ತಾರೆ. ಕೆಲವರಿಗೆ ಸೂಕ್ತ ಸಂಬಂಧಗಳು ಸಿಗುವುದಿಲ್ಲ, ಮತ್ತೆ ಕೆಲವರಿಗೆ ಮದುವೆಯ ಬಗ್ಗೆ ಆಸಕ್ತಿಯೇ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ ಬಹಳಷ್ಟು ಜನರು ಸೂಕ್ತ ಸಮಯಕ್ಕೆ ಮದುವೆ ಆಗುತ್ತಿಲ್ಲ. ಕೆಲವರು ಈ ವಿವಾಹ ಬಂಧನದದಿಂದಲೇ ದೂರ ಉಳಿಯುತ್ತಿದ್ದಾರೆ.

ಮದುವೆಗೆ ಸೂಕ್ತ ವಯಸ್ಸಯ ಯಾವುದು?

30-35 ವರ್ಷಗಳ ನಂತರ ವಿವಾಹವಾದರೆ ಮಕ್ಕಳ ಪರಿಸ್ಥಿತಿ ಏನು ಎಂಬುದು ಈಗ ಚರ್ಚಾಸ್ಪದ ವಿಷಯವಾಗಿದೆ. ಸಾಮಾನ್ಯವಾಗಿ ಸಂತಾನೋತ್ಪತ್ತಿಯ ಬಗ್ಗೆ ಮಾತನಾಡುವಾಗ ಮಹಿಳೆಯರ ವಯಸ್ಸಿನ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತದೆ. ಋತುಬಂಧದ (Menopause) ನಂತರ ಮಹಿಳೆಯರು ನೈಸರ್ಗಿಕವಾಗಿ ತಾಯಂದಿರಾಗಲು ಸಾಧ್ಯವಿಲ್ಲ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಸಾಮಾನ್ಯವಾಗಿ ಇದು 45-50 ವರ್ಷಗಳ ವಯಸ್ಸಿನ ಹತ್ತಿರ ಸಂಭವಿಸುತ್ತದೆ. ಆದರೆ, ಪುರುಷರ ವಿಷಯದಲ್ಲಿ ಮಾತ್ರ 'ವೃದ್ಧಾಪ್ಯದಲ್ಲಿಯೂ ತಂದೆಯಾಗಬಹುದು" ಎಂಬ ಅಭಿಪ್ರಾಯ ಅನೇಕರಲ್ಲಿದೆ. ಆದರೆ, ಇದು ಸಂಪೂರ್ಣವಾಗಿ ನಿಜವಲ್ಲ ಎಂದು ವಿಜ್ಞಾನ ಹೇಳುತ್ತಿದೆ.

ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ವಯಸ್ಸಿನೊಂದಿಗೆ ಹೇಗೆ ಸಂಬಂಧವಿದೆ?

ವಿಜ್ಞಾನಿಗಳ ಪ್ರಕಾರ, ಪುರುಷರಿಗೆ ಪ್ರೌಢಾವಸ್ಥೆಗೆ ಬಂದ ನಂತರ ವೀರ್ಯಾಣು ಉತ್ಪಾದನೆ ಪ್ರಾರಂಭವಾಗುತ್ತದೆ. ತಾಂತ್ರಿಕವಾಗಿ ಜೀವನದ ಕೊನೆಯವರೆಗೂ ವೀರ್ಯಾಣು ಉತ್ಪಾದನೆ ಇದ್ದೇ ಇರುತ್ತದೆ. ಆದ್ದರಿಂದ ಪುರುಷರು 60, 70 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿಯೂ ತಂದೆಯಾಗಲು ಸಾಧ್ಯವಿದೆ. ಆದರೆ, ಇದರರ್ಥ ಎಲ್ಲಾ ವಯಸ್ಸಿನಲ್ಲೂ ವೀರ್ಯಾಣುವಿನ ಗುಣಮಟ್ಟ ಒಂದೇ ಆಗಿರುತ್ತದೆ ಎಂದಲ್ಲ.

ವಯಸ್ಸು ಹೆಚ್ಚಾದಂತೆ ಏನಾಗುತ್ತದೆ?

ವಿಜ್ಞಾನಿಗಳ ಪ್ರಕಾರ, ಪುರುಷರ ವಯಸ್ಸು ಹೆಚ್ಚಾದಂತೆ ವೀರ್ಯಾಣು ಸಂಖ್ಯೆ (Sperm Count) ಕಡಿಮೆಯಾಗುತ್ತದೆ. ವೀರ್ಯಾಣು ಚಲನಶೀಲತೆ (Motility) ಕಡಿಮೆಯಾಗುತ್ತದೆ. ವೀರ್ಯಾಣುಗಳ ಚಲಿಸುವ ವೇಗವೂ ಕಡಿಮೆಯಾಗುತ್ತದೆ. ವೀರ್ಯಾಣುವಿನ ಡಿಎನ್‌ಎ (DNA) ಗುಣಮಟ್ಟ ಕ್ಷೀಣಿಸುತ್ತದೆ.

ಸಂಶೋಧನೆಗಳ ಪ್ರಕಾರ, 30 ವರ್ಷಗಳ ನಂತರ ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯದಲ್ಲಿ ಸ್ವಲ್ಪ ಬದಲಾವಣೆಗಳು ಹಂತಹಂತವಾಗಿ ಪ್ರಾರಂಭವಾಗುತ್ತವೆ. 40 ವರ್ಷಗಳ ನಂತರ ಈ ಪ್ರಭಾವವು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವಯಸ್ಸಿನ ನಂತರ ತಂದೆಯಾಗಲು ಹೆಚ್ಚಿನ ಸಮಯ ಬೇಕಾಗಬಹುದು.

ತಂದೆಯಾಗಲು ಅತ್ಯುತ್ತಮ ವಯಸ್ಸು ಯಾವುದು?

ವಿಜ್ಞಾನದ ಪ್ರಕಾರ, ಪುರುಷರು ತಂದೆಯಾಗಲು 25 ರಿಂದ 35 ವರ್ಷಗಳ ನಡುವಿನ ವಯಸ್ಸು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ವೀರ್ಯಾಣುವಿನ ಗುಣಮಟ್ಟ ಉತ್ತಮವಾಗಿರುತ್ತದೆ. ಜೆನೆಟಿಕ್ ದೋಷಗಳ ಅಪಾಯ ಕಡಿಮೆ ಇರುತ್ತದೆ. ನೈಸರ್ಗಿಕ ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚಿರುತ್ತವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು 'ಯುವರ್ ಫರ್ಟಿಲಿಟಿ ಆಸ್ಟ್ರೇಲಿಯಾ'ದಂತಹ ಸಂಸ್ಥೆಗಳ ವರದಿಗಳ ಪ್ರಕಾರ, 35 ವರ್ಷದೊಳಗಿನ ಮಹಿಳೆಯರು ಮತ್ತು 40 ವರ್ಷದೊಳಗಿನ ಪುರುಷರು ಪೋಷಕರಾಗುವುದು ಸುರಕ್ಷಿತ ಮತ್ತು ಸುಲಭ. ನೈಸರ್ಗಿಕ ಗರ್ಭಧಾರಣೆ ಅಥವಾ IVF ನಂತಹ ವಿಧಾನಗಳಲ್ಲಿ ಕೂಡ, ನಿಗದಿತ ವಯಸ್ಸು ಮೀರಿದ ನಂತರ ಯಶಸ್ಸಿನ ಸಾಧ್ಯತೆಗಳು ಕ್ರಮೇಣ ಕಡಿಮೆಯಾಗುತ್ತವೆ.

40 ವರ್ಷಗಳ ಬಳಿಕ ತಂದೆಯಾದರೆ ಏನು ಸಮಸ್ಯೆ?

40-50 ವರ್ಷಗಳ ನಂತರ ಪುರುಷರು ತಂದೆಯಾಗುವುದು ಸಂಪೂರ್ಣ ಅಸಾಧ್ಯವಲ್ಲದಿದ್ದರೂ, ಕೆಲವು ಅಪಾಯಗಳು ಹೆಚ್ಚಾಗುತ್ತವೆ. ಗರ್ಭಧಾರಣೆಗೆ ಹೆಚ್ಚು ಸಮಯ ಹಿಡಿಯುವುದು. ವೀರ್ಯಾಣುಗಳಲ್ಲಿ ಜೆನೆಟಿಕ್ ಮ್ಯುಟೇಶನ್ (Genetic mutations) ಅಪಾಯ ಹೆಚ್ಚಾಗುವುದು.

ಮಕ್ಕಳಲ್ಲಿ ಆಟಿಸಂ (Autism), ಸ್ಕಿಜೋಫೋನಿಯಾ ಮುಂತಾದ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಹೀಗಾಗಿ, ಹೆಚ್ಚಿನ ವಯಸ್ಸಿನಲ್ಲಿ ತಂದೆಯಾಗುವುದು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಜೀವನಶೈಲಿಯ ಪ್ರಭಾವ ಎಷ್ಟು?

ವಯಸ್ಸಿನ ಜೊತೆಗೆ ಜೀವನಶೈಲಿಯೂ ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಜ್ಞರ ಪ್ರಕಾರ, ಆರೋಗ್ಯಕ್ಕೆ ಹಾನಿಕಾರಕ ಅಂಶಗಳನ್ನು ಸೇವಿಸಬಾರದು. ಬೊಜ್ಜು, ಅತಿಯಾದ ಒತ್ತಡ, ನಿದ್ರಾಹೀನತೆ, ಧೂಮಪಾನ, ಮದ್ಯಪಾನ ಮತ್ತು ಅಸಮತೋಲಿತ ಆಹಾರ ಇವೆಲ್ಲವೂ ವೀರ್ಯಾಣುವಿನ ಗುಣಮಟ್ಟವನ್ನು ಹಾಳುಮಾಡುತ್ತವೆ.

ಸಂರಕ್ಷಣೆ ಹೇಗೆ?

ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸರಿಯಾದ ನಿದ್ರೆ ಮತ್ತು ಒತ್ತಡವನ್ನು ನಿಯಂತ್ರಿಸುವುದು ವಯಸ್ಸಾದರೂ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಸ್ವಲ್ಪ ಮಟ್ಟಿಗೆ ಕಾಪಾಡಬಲ್ಲವು.

ಪುರುಷರಿಗೆ ತಂದೆಯಾಗಲು ನಿಖರವಾದ ವಯಸ್ಸಿನ ಮಿತಿ ಇಲ್ಲದಿದ್ದರೂ, ವಯಸ್ಸು ಹೆಚ್ಚಾದಂತೆ ಅಪಾಯಗಳು ಖಂಡಿತವಾಗಿಯೂ ಹೆಚ್ಚು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಆದ್ದರಿಂದ 35-40 ವರ್ಷಗಳ ನಡುವೆ ತಂದೆಯಾಗುವುದು ಸುರಕ್ಷಿತ ಹಾಗೂ ಬುದ್ಧಿವಂತಿಕೆಯ ನಿರ್ಧಾರ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಏನೇ ಇದ್ದರೂ ಪ್ರತಿಯೊಬ್ಬರೂ ತಮ್ಮತಮ್ಮ ಕುಟುಂಬವೈದ್ಯರ ಸಲಹೆ ಪಡೆದು ನಿರ್ಧಾರ ಮಾಡುವುದು ಸೂಕ್ತ! ಏಕೆಂದರೆ, ಪ್ರತಿಯೊಬ್ಬರೂ ಬೇರೆಬೇರೆಯ ರೀತಿಯ ದೈಹಿಕ ಸಾಮರ್ಥ್ಯ ಹೊಂದಿರುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪತಿಯೊಂದಿಗೆ ಮುಂಬೈನಲ್ಲಿ ಪ್ರತ್ಯಕ್ಷರಾದ ಸಮಂತಾ.. ಮದುವೆ ಬಳಿಕ ಸಿಂಗಲ್ ಸುತ್ತಾಟದಿಂದ ದೂರ!
ಒಳ್ಳೆಯದು ಮಾಡೋಕೆ ಹೋಗಿ ಕೇಸ್‌ ಹಾಕಿಸಿಕೊಂಡಿದ್ದ ಜೋಡಿ; 3 ವರ್ಷದ ಬಳಿಕ ಲವ್‌ ಮ್ಯಾರೇಜ್‌ ಒಪ್ಪಿದ ಪಾಲಕರು; Hassan Love story