ಪತ್ನಿ ಶಾರೀರಿಕ ಸಂಬಂಧ ಬೆಳೆಸ್ತಿಲ್ಲ, ಡಿವೋರ್ಸ್ ಬೇಕು ಅಂತ ವ್ಯಕ್ತಿಯೊಬ್ಬ ಕೋರ್ಟ್ಗೆ ಹೋಗಿದ್ದ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೊನೆಗೆ ಆತನಿಗೆ ವಿಚ್ಛೇದನ ಸಿಕ್ತಾ ಎಂಬ ವಿವರ ಇಲ್ಲಿದೆ.
ಜನರು ವಿಚ್ಛೇದನ (Divorce) ಕ್ಕೆ ಚಿತ್ರ – ವಿಚಿತ್ರ ಕಾರಣವನ್ನು ಹುಡುಕ್ತಾರೆ. ಪತ್ನಿ ಶಾರೀರಿಕ ಸಂಬಂಧ (physical relationship) ಬೆಳೆಸ್ತಿಲ್ಲ ಎನ್ನುವ ಆರೋಪದ ಮೇಲೆ ವ್ಯಕ್ತಿಯೊಬ್ಬ ಕೋರ್ಟ್ (court) ಮೊರೆ ಹೋಗಿದ್ದಾನೆ. ಲೈಂಗಿಕತೆ ನಿರಾಕರಣೆ ಆಧಾರದ ಮೇಲೆ ಡಿವೋರ್ಸ್ ಪಡೆಯಲು ಕಾನೂನು ಹೋರಾಟ ನಡೆಸಬಹುದು. ಆದ್ರೆ ಅದಕ್ಕೂ ಒಂದಿಷ್ಟು ನಿಯಮವಿದೆ. ಅಲಹಾಬಾದ್ ಕೋರ್ಟ್ ವ್ಯಕ್ತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿದೆ. ದೀರ್ಘಕಾಲ ದಂಪತಿ ದೈಹಿಕವಾಗಿ ದೂರವಿದ್ದರು ಎನ್ನುವುದಕ್ಕೆ ಸೂಕ್ತ ಸಾಕ್ಷ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಸೌಮಿತ್ರ ದಯಾಳ್ ಸಿಂಗ್ ಮತ್ತು ನ್ಯಾಯಮೂರ್ತಿ ಡೊನಾಡಿ ರಮೇಶ್ ಪೀಠ, ದೈಹಿಕ ಅನ್ಯೋನ್ಯತೆಯ ವಿಷಯವು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿದೆ.
ಏನಿದು ಪ್ರಕರಣ? : ಕೋರ್ಟ್ ಮೊರೆ ಹೋದ ವ್ಯಕ್ತಿ ವೃತ್ತಿಯಲ್ಲಿ ವೈದ್ಯ. ದೆಹಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದಾರೆ. ಪತ್ನಿ ಕೂಡ ವೈದ್ಯೆಯಾಗಿ ಕೆಲಸ ಮಾಡ್ತಿದ್ದರು. ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. 1999ರಲ್ಲಿ ಇಬ್ಬರ ಮದುವೆಯಾಗಿತ್ತು. ಮದುವೆಯಾದ ಎರಡೇ ವರ್ಷಕ್ಕೆ ಇಬ್ಬರು ಮಕ್ಕಳನ್ನು ಇವರು ಪಡೆದಿದ್ದಾರೆ. ಮಕ್ಕಳಲ್ಲಿ ಒಬ್ಬರು ತಂದೆಯೊಂದಿಗೆ ಹಾಗೂ ಇನ್ನೊಬ್ಬರು ತಾಯಿಯೊಂದಿಗೆ ವಾಸ ಮಾಡ್ತಿದ್ದಾರೆ. ಮದುವೆಯಾದ 9 ವರ್ಷಗಳ ನಂತ್ರ ವೈದ್ಯ, ಪತ್ನಿ ಶಾರೀರಿಕ ಸಂಬಂಧ ಬೆಳೆಸಲು ನಿರಾಕರಿಸುತ್ತಿದ್ದಾಳೆಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದ. ಮೊದಲು ಮಿರ್ಜಾಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಕೌಟುಂಬಿಕ ನ್ಯಾಯಾಲಯ ಆತನ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ.
undefined
ರೀಲ್ಸ್ ಮಾಡಿ ಐಶ್‌ಗೆ ಟಾಂಟ್ ನೀಡಿದ್ರಾ ನಿಮ್ರತಾ ಕೌರ್?
ಪತ್ನಿ, ಧಾರ್ಮಿಕ ಗುರುವಿನ ಪ್ರಭಾವಕ್ಕೆ ಒಳಗಾಗಿದ್ದಾಳೆ. ಹಾಗಾಗಿ ಲೈಂಗಿಕತೆಯನ್ನು ನಿರಾಕರಿಸುತ್ತಿದ್ದಾಳೆ ಎಂದು ಪತಿ ಆರೋಪ ಮಾಡಿದ್ದಾನೆ. ಆದ್ರೆ ಈತನ ಆರೋಪವನ್ನು ಪತ್ನಿ ನಿರಾಕರಿಸಿದ್ದಾಳೆ. ನಮ್ಮಿಬ್ಬರಿಗೆ ಇಬ್ಬರು ಮಕ್ಕಳಿವೆ. ನಾವು ಸಾಮಾನ್ಯ ಮತ್ತು ಆರೋಗ್ಯಕರ ಸಂಬಂಧ ಹೊಂದಿದ್ದೆವು ಎಂಬುದನ್ನು ಸಾಭೀತುಪಡಿಸುತ್ತದೆ ಎಂದಿದ್ದಾಳೆ.
ಕೋರ್ಟ್ ಹೇಳಿದ್ದೇನು? : ಡಾಕ್ಟರ್ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ವಿಚ್ಛೇದನ ನೀಡಲು ನಿರಾಕರಿಸಿದೆ. ಇಬ್ಬರ ಮಧ್ಯೆ ಸಾಮಾನ್ಯ ದೈಹಿಕ ಸಂಬಂಧವಿದೆ ಎನ್ನುವುದಕ್ಕೆ ಸಾಕ್ಷ್ಯವಿದೆ. ಮದುವೆಯಾದ ಎರಡೇ ವರ್ಷದಲ್ಲಿ ಇಬ್ಬರು ಮಕ್ಕಳು ಜನಿಸಿದ್ದಾರೆ. ದೈಹಿಕ ಅನ್ಯೂನ್ಯತೆಯಲ್ಲಿ ದಂಪತಿ ಹೇಗೆ ಇರಬೇಕು ಎಂಬುದು ಕಾನೂನಿನ ಅಡಿಯಲ್ಲಿ ಬರೋದಿಲ್ಲ. ಅದು ಅವರ ವೈಯಕ್ತಿಕ ವಿಷ್ಯವಾಗಿದೆ. ದೈಹಿಕ ಸಂಬಂಧದ ವಿಷ್ಯದಲ್ಲಿ ಕಾನೂನು ಮಾಡುವುದು ಕೋರ್ಟ್ ಕೆಲಸವಲ್ಲ. ಲೈಂಗಿಕ ಸಂಬಂಧವನ್ನು ನಿರಾಕರಿಸಿದ್ರೆ ವಿಚ್ಛೇದನ ನೀಡಬಹುದು. ಆದ್ರೆ ಇದು ಅವಧಿಯನ್ನು ಆಧರಿಸಿದೆ. ದೀರ್ಘಾವಧಿಯಿಂದ ದಂಪತಿ ದೂರವಿದ್ದಾರೆ ಎಂಬುದು ಸಾಭೀತಾದ್ರೆ ಮಾತ್ರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ಹೇಳಿದೆ.
ಮದುವೆ ಎಂದರೆ ಎಚ್ಚರಿಕೆ ಇರಲಿ, ಪ್ರೀತಿಯಲ್ಲಿ ಗೆಲ್ಲೋರು ಯಾರು: ಚಾಣಕ್ಯ ನೀತಿ ಇಲ್ಲಿದೆ
ಇಂಥ ತೀರ್ಪು ನೀಡಿತ್ತು ಮಧ್ಯಪ್ರದೇಶ ಹೈಕೋರ್ಟ್ : ಕೆಲ ದಿನಗಳ ಹಿಂದೆ, ಪತಿ ಜೊತೆ ಶಾರೀರಿಕ ಸಂಬಂಧ ಬೆಳೆಸಲು ನಿರಾಕರಿಸೋದು ಕ್ರೌರ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿತ್ತು. ಪತಿ-ಪತ್ನಿಯರ ನಡುವಿನ ದೈಹಿಕ ಸಂಬಂಧವು ಪ್ರಮುಖ ಅಂಶವಾಗಿದೆ. ಪತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಹೆಂಡತಿಯ ನಿರಂತರ ನಿರಾಕರಣೆ ಪತಿಗೆ ಮಾನಸಿಕ ಅಥವಾ ಭಾವನಾತ್ಮಕ ನೋವನ್ನು ಉಂಟುಮಾಡುತ್ತದೆ ಎಂದು ನ್ಯಾಯಾಲಯ ಹೇಳಿತ್ತು. ಪತಿಯ ಈ ಹಕ್ಕನ್ನು ಒಪ್ಪಿಕೊಂಡ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತ್ತು. ಹಿಂದೂ ವಿವಾಹ ಕಾಯ್ದೆಯಡಿ ಇದು ವಿಚ್ಛೇದನಕ್ಕೆ ಆಧಾರವಾಗಿದೆ ಎಂದ ಕೋರ್ಟ್, ವಿಚ್ಛೇದನಕ್ಕೆ ಒಪ್ಪಿಗೆ ನೀಡಿತ್ತು.