ಡಿಎನ್ ಎ ಪರೀಕ್ಷೆ ಈಗ ಸುಲಭ. ಸಂಗಾತಿ ಮೇಲೆ ಅನುಮಾನ ಬಂದಾಗೆಲ್ಲ ಮಕ್ಕಳ ಡಿಎನ್ ಎ ಪರೀಕ್ಷೆ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಟ್ರೋಲರ್ ಬಾಯಿಗೆ ಬೆಚ್ಚಿ, ಪಾಲಕರು ಮಗುವಿನ ಪರೀಕ್ಷೆ ಮಾಡಿದ್ರು. ಬಂದ ವರದಿ ನೆಮ್ಮದಿ ನೀಡ್ತಾ?
ಮಗು ಥೇಟ್ ಅಮ್ಮನನ್ನೇ ಹೋಲುತ್ತೆ ಅಲ್ವಾ? ಅದೇ ಬಣ್ಣ, ಅದೇ ಮುಖ…ಬಹುತೇಕರ ಬಾಯಲ್ಲಿ ಬರುವ ಮಾತು ಇದು. ಮಗು ಬಣ್ಣ, ರೂಪದಲ್ಲಿ ಸ್ವಲ್ಪ ಬದಲಾವಣೆಯಾದ್ರೂ ಯಾಕೋ ಮಗು, ಪೇರೆಂಟ್ಸ್ ಹೋಲೋದೇ ಇಲ್ಲ ಎನ್ನುತ್ತಾರೆ. ಹಿಂದೆ ಇದನ್ನು ಗಂಭೀರವಾಗಿ ಪರಿಗಣಿಸ್ತಿರಲಿಲ್ಲ. ಈಗ ಸೋಶಿಯಲ್ ಮೀಡಿಯಾ ಹಾವಳಿ ಹೆಚ್ಚಾಗಿದೆ. ಕೆಲ ಕಮೆಂಟ್ ಗಳು ಜನರ ತಲೆಕೊರೆಯುತ್ತಿರುತ್ತದೆ. ಇದೇ ವಿಷ್ಯಕ್ಕೆ ಗಲಾಟೆಯಾಗೋದಿದೆ. ಪರೀಕ್ಷೆಗೂ ಕೆಲ ಪಾಲಕರು ಮುಂದಾಗ್ತಾರೆ. ವಿದೇಶದಲ್ಲಿ ಡಿಎನ್ ಎ ಪರೀಕ್ಷೆ ಅತ್ಯಂತ ಸುಲಭವಾಗಿದೆ. ಹಾಗಾಗಿ ಸಣ್ಣ ವಿಚಾರಕ್ಕೂ ಡಿಎನ್ ಎ ಕಾಮನ್ ಎನ್ನುವಂತಾಗಿದೆ. ಟ್ರೋಲರ್ ಬಾಯಿಗೆ ಆಹಾರವಾಗಿ ನಾಲ್ಕು ಮಕ್ಕಳ ತಾಯಿಯೊಬ್ಬಳು ಡಿಎನ್ ಎ ಪರೀಕ್ಷೆಗೆ ಮುಂದಾಗಿದ್ದಾಳೆ. ಪರೀಕ್ಷಾ ವರದಿ ನೋಡಿ ಎಲ್ಲರೂ ದಂಗಾಗಿದ್ದಾರೆ.
ಅಲೆಕ್ಸ್ ಮತ್ತು ರಾಬ್ ದಂಪತಿಗೆ ನಾಲ್ವರು ಮಕ್ಕಳು. ಅಲೆಕ್ಸ್ ಮೈಬಣ್ಣ ಕಪ್ಪಾಗಿದೆ. ರಾಬ್ ಬೆಳ್ಳಗಿದ್ದಾರೆ. ಅಲೆಕ್ಸ್ ಹಾಗೂ ರಾಬ್ ಗೆ ಜನಿಸಿದ ಮೂವರು ಮಕ್ಕಳ ಬಣ್ಣ ಅಲೆಕ್ಸ್ ಹೋಲುತ್ತದೆ. ಅದೇ ನಾಲ್ಕನೇ ಮಗು ಮಾತ್ರ ಬೆಳ್ಳಗಿದ್ದಾಳೆ. ಅಲೆಕ್ಸ್ ತನ್ನ ನಾಲ್ಕನೇ ಮಗುವಿನ ಫೋಟೋವನ್ನು ಸೋಶಿಯಲ್ ಮೀಡಿಯಾ (Social media)ದಲ್ಲಿ ಪೋಸ್ಟ್ ಮಾಡಿದ್ದಳು. ಇದನ್ನು ನೋಡಿದ ಜನರು ಟ್ರೋಲ್ ಮಾಡಲು ಶುರು ಮಾಡಿದ್ದರು. ತಾಯಿ ಹಾಗೂ ಮಗಳ ಬಣ್ಣದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಈ ಮಗುವನ್ನು ದತ್ತು ಪಡೆಯಲಾಗಿದೆಯೇ, ಇದನ್ನು ಎಲ್ಲಿಂದ ತಂದಿದ್ದೀರಿ, ಅಲೆಕ್ಸ್, ರಾಬ್ ಗೆ ಮೋಸ ಮಾಡಿದ್ದಾಳೆ ಹೀಗೆ ನಾನಾ ಕಮೆಂಟ್ ಗಳನ್ನು ಕೇಳಿದ ಅಲೆಕ್ಸ್ ಗಾಬರಿಯಾಗಿದ್ದಳು. ದಂಪತಿಗೆ ಅನವಶ್ಯಕವಾಗಿ ಟೆನ್ಷನ್ ಶುರುವಾಗಿತ್ತು. ಟ್ರೋಲರ್ ಬಾಯಿ ಮುಚ್ಚುವ ನಿರ್ಧಾರಕ್ಕೆ ದಂಪತಿ ಬಂದ್ರು. ಮಗುವಿನ ಡಿಎನ್ ಎ ಪರೀಕ್ಷೆ (DNA test ) ಗೆ ಮುಂದಾದ್ರು.
undefined
ಒಂದು ವರ್ಷದ ಬ್ರೇಕ್, ವೈಯಕ್ತಿಕ ವಿಷ್ಯಕ್ಕೆ ಟ್ರೋಲ್ ಆದ ಸಮಂತಾ ರೋಲ್ ಮಾಡೆಲ್ ಇವ್ರು!
ಡಿಎನ್ ಎ ಪರೀಕ್ಷಾ ವರದಿಯಲ್ಲಿ ಏನಿದೆ? : ಅಲೆಕ್ಸ್ ಗೆ ಜನಿಸಿದ ನಾಲ್ಕನೇ ಮಗು ಹೆಣ್ಣು ಮಗು. ಇದು ಅಲೆಕ್ಸ್ ಹಾಗೂ ರಾಬ್ ಅವರ ಮಗು ಎಂಬುದು ಡಿಎನ್ ಎ ಪರೀಕ್ಷೆಯಿಂದ ಸ್ಪಷ್ಟವಾಗಿದೆ. ವಾಸ್ತವವಾಗಿ ಅಲೆಕ್ಸ್, ನಾಲ್ಕನೇ ಮಗುವನ್ನು ಐವಿಎಫ್ ಮೂಲಕ ಪಡೆದಿದ್ದಾಳೆ. ಹಾಗಾಗಿ ಈ ಮಗುವಿನ ಬಣ್ಣದಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.
ಟ್ರೂಲಿ ಹೆಸರಿನ ಯೂಟ್ಯೂಬ್ ಚಾನೆಲ್ (YouTube Channel)ನೊಂದಿಗೆ ಮಾತನಾಡಿದ ಅಲೆಕ್ಸ್, ಜನರು ನನ್ನ ಮಗಳನ್ನು ನೋಡಿದಾಗ ನಮ್ಮ ಸಂಬಂಧವನ್ನು ಪ್ರಶ್ನಿಸಲು ಶುರು ಮಾಡಿದ್ದರು. ಮಗುವಿನ ಫೋಟೋಕ್ಕೆ ಸಾಕಷ್ಟು ಕಮೆಂಟ್ ಬಂದಿತ್ತು ಎಂದಿದ್ದಾರೆ. ಇನ್ನು ರಾಬ್, ತನ್ನ ಮಗಳು ಐವಿಎಫ್ ಮೂಲಕ ಜನಿಸಿದ್ದಾಳೆ. ಅದಕ್ಕಾಗಿಯೇ ತನ್ನ ಮಗಳು ಹಾಲಿನಷ್ಟು ಬಿಳಿಯಾಗಿದ್ದಾಳೆ ಎಂದಿದ್ದಾರೆ.
ಈ ವಿಷ್ಯ ತಿಳಿಯುತ್ತಿದ್ದಂತೆ ಬಳಕೆದಾರರಲ್ಲಿ ಕೆಲವರು ರಾಬ್ ಮತ್ತು ಅಲೆಕ್ಸ್ ಬೆಂಬಲಕ್ಕೆ ನಿಂತಿದ್ದಾರೆ. ತಂದೆ ರಾಬ್ ಬೆಳ್ಳಗಿರುವ ಕಾರಣ ಮಗಳು ಬೆಳ್ಳಗಿದ್ದಾಳೆ. ತಾಯಿಯಂತೆ ಮಗು ಇರಬೇಕೆಂದೇನಿಲ್ಲ. ಮಗು ಬಣ್ಣದಿಂದ ಜನರಿಗೆ ಏನು ಸಮಸ್ಯೆ, ಪೋಷಕರ ಬಣ್ಣದಂತೆ ಮಕ್ಕಳ ಬಣ್ಣ ಇರಬೇಕು ಎಂಬುದಿಲ್ಲ ಎಂದು ಕೆಲವರು ಅಲೆಕ್ಸ್ ಪರ ನಿಂತಿದ್ದಾರೆ.
ಟ್ರಂಪ್ಗೆ ಪಾಕ್ನಲ್ಲೂ ಒಬ್ಬಳು ರಹಸ್ಯ ಪುತ್ರಿ? ಮೀಡಿಯಾ ಮುಂದೆ ಹುಡುಗಿ ಹೇಳಿದ್ದೇನು? ವಿಡಿಯೋ ವೈರಲ್
ಚೀನಾದಲ್ಲಿ ಕೆಲ ದಿನಗಳ ಹಿಂದೆ ಇಂಥ ಘಟನೆಯೊಂದು ನಡೆದಿತ್ತು. ಆದ್ರೆ ಡಿಎನ್ ಎ ಪರೀಕ್ಷೆಯಲ್ಲಿ ಮಗು, ಪಾಲಕರದ್ದಲ್ಲ ಎಂಬ ಕಹಿ ಸತ್ಯ ಹೊರಗೆ ಬಿದ್ದಿತ್ತು. ಮಗುವಿನ ಮುಖ ನೋಡಿ ತಂದೆ – ತಾಯಿಯನ್ನು ಗುರುತಿಸುವ ಕಾಲ ಈಗಿಲ್ಲ. ವಿಜ್ಞಾನ ಮುಂದುವರೆದಂತೆ ಪಾಲಕರು ತಮ್ಮಿಷ್ಟದ ಮಗುವನ್ನು ಪಡೆಯಲು ಸಾಧ್ಯವಾಗ್ತಿದೆ. ಐವಿಎಫ್, ಎಗ್ ಫ್ರೀಜಿಂಗ್ ಸೇರಿದಂತೆ ನಾನಾ ವಿಧಾನಗಳಿಂದ ಈಗ ಜನರು ಮಕ್ಕಳನ್ನು ಪಡೆಯುತ್ತಿದ್ದಾರೆ.