ಕೇಳದಿದ್ದರೂ ವರದಕ್ಷಿಣೆ ಕೊಟ್ಟ ಮಾವ, ಕೋರ್ಟ್ ಮೆಟ್ಟಿಲೇರಿದ ಅಳಿಯ!

By Roopa Hegde  |  First Published Nov 9, 2024, 4:05 PM IST

ವರದಕ್ಷಿಣೆ ಕಿರುಕುಳ ಪ್ರಕರಣ ಭಾರತದಲ್ಲಿ ಕಡಿಮೆ ಏನಾಗಿಲ್ಲ. ಇದಕ್ಕೆ ಸಂಬಂಧಿಸಿದ ಭಿನ್ನ ಪ್ರಕರಣಗಳು ಬೆಳಕಿಗೆ ಬರ್ತಿರುತ್ತವೆ. ಈಗ ಪತಿಯೊಬ್ಬ ಕೋರ್ಟ್ ಮೆಟ್ಟಿಲೇರಿದ್ದಾನೆ. ಆತನ ಕಾರಣ ವಿಚಿತ್ರವಾಗಿದೆ, 
 


ವರದಕ್ಷಿಣೆ (dowry) ಒಂದು ಪಿಡುಗು. ಇದ್ರ ನಿಯಂತ್ರಣಕ್ಕೆ ನಿರಂತರ ಪ್ರಯತ್ನ ನಡೆಯುತ್ತಿದ್ದರೂ ಪ್ರಯೋಜನವಾಗಿಲ್ಲ. ಈಗ್ಲೂ ಕದ್ದುಮುಚ್ಚಿ ವರದಕ್ಷಿಣೆ ಪಡೆಯುವವರಿದ್ದಾರೆ. ಅನೇಕ ಬಾರಿ, ವಧು ಪಾಲಕರೇ, ತಮ್ಮ ಇಚ್ಛೆಯಂತೆ ಒಂದಿಷ್ಟು ಹಣ, ಬಂಗಾರವನ್ನು ವಧುವಿಗೆ ನೀಡ್ತಾರೆ. ವರನ ಕಡೆಯವರು ವರದಕ್ಷಿಣೆ ಕಿರುಕುಳ ನೀಡ್ತಿದ್ದಾರೆ ಎಂದು ಆರೋಪಿಸಿ ಕೋರ್ಟ್ (Court) ಮೆಟ್ಟಿಲೇರುವ ಅನೇಕ ಪ್ರಕರಣಗಳಿವೆ. ಆದ್ರೆ ಈಗ ನಾವು ಹೇಳ್ತಿರೋ ಪ್ರಕರಣ ಸ್ವಲ್ಪ ಭಿನ್ನವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಧು ಬದಲು ವರ ಕೋರ್ಟ್ ಮೆಟ್ಟಿಲೇರಿದ್ದಾನೆ. ಪತ್ನಿ ಕುಟುಂಬಸ್ಥರು, ನಾನು ವರದಕ್ಷಿಣೆಗೆ ಬೇಡಿಕೆ ಇಟ್ಟಿಲ್ಲವಾದ್ರೂ ನನಗೆ ವರದಕ್ಷಿಣೆ ನೀಡಿದ್ದಾರೆಂದು ಆರೋಪಿಸಿ, ಕೋರ್ಟ್ ಮೆಟ್ಟಿಲೇರಿದ್ದಾನೆ. ನನ್ನನ್ನು ಕೇಳದೆ ವರದಕ್ಷಿಣೆ ನೀಡಿದ ಆರೋಪದ ಮೇಲೆ ಪತ್ನಿ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತೆ ವ್ಯಕ್ತಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಇದನ್ನು ನ್ಯಾಯಾಲಯ ತಿರಸ್ಕರಿಸಿದೆ. ಇಷ್ಟಾದ್ರೂ ಬಿಡದೆ ಅರ್ಜಿ ವಜಾ ಆದೇಶವನ್ನು ಪ್ರಶ್ನಿಸಿದ್ದ ವ್ಯಕ್ತಿಗೆ ಕೊನೆಗೂ ಹಿನ್ನಡೆಯಾಗಿದೆ. 

2022ರಲ್ಲಿ ಶುರುವಾಗಿತ್ತು ಪ್ರಕರಣ : ಮ್ಯಾಜಿಸ್ಟ್ರೇಟ್ ನ್ಯಾಯಾಲಯ (magistrates court) ದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ (Sessions Court) ದಲ್ಲಿ ಅರ್ಜಿ ಸಲ್ಲಿಸಿದ್ದ. ನ್ಯಾಯಾಧೀಶ ನವಜಿತ್ ಬುಧಿರಾಜ ಅವರು ಜುಲೈ 2022 ರಂದು ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದರು. ವ್ಯಕ್ತಿ, ವರದಕ್ಷಿಣೆ ನೀಡಿದ್ದಾರೆಂದು  ತನ್ನ ಅತ್ತೆ, ಮಾವ ಮತ್ತು ಸೋದರ ಮಾವನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮೊದಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಸೂಕ್ತ ದಾಖಲೆ ಇಲ್ಲದ ಕಾರಣ ಕೋರ್ಟ್ ಈತನ ಅರ್ಜಿಯನ್ನು ತಿರಸ್ಕರಿಸಿತ್ತು. ಆ ನಂತ್ರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಮುಂದೆ ಬಂದಿದ್ದ ವ್ಯಕ್ತಿ, ಅಲ್ಲಿ ಕೂಡ ಸೂಕ್ತ ದಾಖಲೆ ನೀಡಲು ವಿಫಲನಾಗಿದ್ದ. 

Latest Videos

undefined

ಇದ್ಹೆಂಗ್ ಆಯ್ತು? ಅಮ್ಮನಿಗೆ ತದ್ವಿರುದ್ಧ ಬಣ್ಣ ಮಗುವಿನದ್ದು, ಇದಕ್ಕೂ ಟ್ರೋಲ್ ಮಾಡ್ತಿದ್ದಾರೆ

ಕೋರ್ಟ್ ಹೇಳಿದ್ದೇನು? : ವಿಚಾರಣೆ ವೇಳೆ, ಪತಿ ವಿರುದ್ಧ ಪತ್ನಿ ಕುಟುಂಬಸ್ಥರು ಹಿಂಸೆ ಪ್ರಕರಣವನ್ನು ದಾಖಲಿಸಿರೋದು ತಿಳಿದುಬಂದಿದೆ. ಎರಡೂ ಕಡೆಯವರು ಸಾಕ್ಷ್ಯಗಳನ್ನು ಒದಗಿಸುವ ಅಗತ್ಯವಿದೆ. ಸೂಕ್ತ ಸಾಕ್ಷ್ಯಧಾರದ ಮೇಲೆ ವರದಕ್ಷಿಣೆ ಕೇಳಲಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಬೇಕು ಎಂದು ಕೋರ್ಟ್ ಹೇಳಿದೆ. ಅರ್ಜಿ ಸಲ್ಲಿಸಿದ ವ್ಯಕ್ತಿ, ನಾನು ಪತ್ನಿ ಕಡೆಯವರಿಂದ ಎಂದೂ ವರದಕ್ಷಿಣೆ ಕೇಳಿಲ್ಲ. ಅವರೇ ನನ್ನ ಖಾತೆಗೆ 25,000 ರೂಪಾಯಿ ಒಂದು ಬಾರಿ ಮತ್ತೊಮ್ಮೆ 46,500 ರೂಪಾಯಿ ಚೆಕ್ ಹಾಕಿದ್ದಾರೆಂದು ಹೇಳಿದ್ದಾನೆ. ಇದು ಆತನ ದೃಷ್ಟಿಕೋನದಿಂದ ಹೇಳಿರುವ ಹೇಳಿಕೆ ಎಂದು ಕೋರ್ಟ್ ಹೇಳಿದೆ.

ಪತ್ನಿ ಕಡೆಯಿಂದ ಸಲ್ಲಿಸಲಾಗಿದೆ ಈ ದೂರು : ಅಕ್ಟೋಬರ್ 5 ರಂದು ನೀಡಲಾದ ಆದೇಶದಲ್ಲಿ, ನ್ಯಾಯಮೂರ್ತಿ ಬುಧಿರಾಜ ಅವರು ಈಗಾಗಲೇ ವ್ಯಕ್ತಿಯ ವಿರುದ್ಧ ಪತ್ನಿ ಕುಟುಂಬಸ್ಥರು ದೂರು ನೀಡಿದ್ದಾರೆ ಎಂದಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 498 ಎ  ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಮದುವೆಗೂ ಮೊದಲೇ ಜೊತೆಗೆ ವಾಸ ಮಾಡ್ತಿದ್ದ ಬಾಲಿವುಡ್‌ ಜೋಡಿಗಳು

ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ, ಮಾವನ ಕಡೆಯವರು ವರದಕ್ಷಿಣೆ ಕೊಟ್ಟಿರುವುದನ್ನು ಒಪ್ಪಿಕೊಂಡಿದ್ದರು. ಅಳಿಯನಿಗೆ ವರದಕ್ಷಿಣೆ ರೂಪದಲ್ಲಿ ಹಣ ನೀಡಿರುವುದಾಗಿ ಹೇಳಿದ್ದರು. ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್, ವರದಕ್ಷಿಣೆ ಸ್ವೀಕರಿಸುವುದು ವರದಕ್ಷಿಣೆ ನಿಷೇಧ ಕಾಯಿದೆಯಡಿ ಶಿಕ್ಷಾರ್ಹವಾಗಿದೆ ಎಂದಿತ್ತು. ಹೆಚ್ಚುವರಿ ಸೆಷನ್ ನ್ಯಾಯಾಲಯ, ಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದಿದೆ. ಭಾರತದಲ್ಲಿ ಮೇ 1, 1961ರಿಂದಲೇ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ವರದಕ್ಷಿಣೆ ಪಡೆಯುವುದು ಹಾಗೂ ಕೊಡುವುದು ಎರಡೂ ಅಪರಾಧವಾಗಿದೆ.   
 

click me!