ಮೊಬೈಲ್ ಸೀಕ್ರೆಟ್ ಲಾಕ್ ಓಪನ್ ಮಾಡ್ತಿಲ್ವಂತೆ ಗಂಡ, ಠಾಣೆಯಲ್ಲಿ ದೂರು ದಾಖಲಿಸಿದ ಹೆಂಡ್ತಿ!

By Vinutha PerlaFirst Published Feb 3, 2023, 12:37 PM IST
Highlights

ಮೊಬೈಲ್ ಪಾಸ್‌ವರ್ಡ್‌ ಗೊತ್ತಿಲ್ಲದ ಕಾರಣಕ್ಕೆ ಹೆಚ್ಚಿನ ದಾಂಪತ್ಯಗಳಲ್ಲಿ ಜಗಳಗಳು ಹೆಚ್ಚಾಗುತ್ತವೆ. ಇಬ್ಬರ ನಡುವೆ ಮುನಿಸು ಕಾಣಿಸಿಕೊಳ್ಳುತ್ತದೆ. ಅನುಮಾನ, ಅಸಮಾಧಾನ ಎಲ್ಲವೂ ಬರುತ್ತದೆ. ಕೊನೆಗಿದು ಡಿವೋರ್ಸ್‌ಗೂ ಬಂದು ತಲುಪುತ್ತದೆ. ಹೈದರಾಬಾದ್‌ನಲ್ಲೂ ಇಂಥಹದ್ದೇ ಘಟನೆಯೊಂದು ನಡ್ದಿದೆ.

ಹೈದರಾಬಾದ್: ಇವತ್ತಿನ ಕಾಲದಲ್ಲಿ ವ್ಯಕ್ತಿಯೊಬ್ಬನ ಮೊಬೈಲ್‌ ಪಾಸ್‌ವರ್ಡ್ ಗೊತ್ತಾಗಿ ಕೈಗೆ ಸಿಕ್ಕಿಬಿಡ್ತು ಅಂದ್ರೆ ಆತನ ಜಾತಕವೇ ಕೈಗೆ ಬಂದ್‌ಬಿಡ್ತು ಅಂತರ್ಥ. ಮೊಬೈಲ್ ಅನ್ನೋದು ಮನುಷ್ಯನ ಪಾಲಿಗೆ ಅಷ್ಟು ಇಂಪಾರ್ಟೆಂಟ್ ಆಗಿಬಿಟ್ಟಿದೆ. ಎಲ್ಲಾ ಸೀಕ್ರೆಟ್‌ಗಳು ಮೊಬೈಲ್‌ನಲ್ಲೇ ಇರುತ್ತವೆ. ಮೊಬೈಲ್‌ ಲಾಕ್ ಆಗಿಲ್ಲದೆ ಇದ್ರೆ ಆ ವ್ಯಕ್ತಿ ತನ್ನ ಯಾವ ವಿಷಯವನ್ನು ಯಾರಿಂದಲೂ ಮುಚ್ಚಿಡುತ್ತಿಲ್ಲ ಎಂದು ತಿಳಿದುಕೊಳ್ಳಬಹುದು. ದಾಂಪತ್ಯದ ವಿಷಯಕ್ಕೆ ಬಂದಾಗ ಸೋಷಿಯಲ್ ಮೀಡಿಯಾ, ಮೊಬೈಲ್ ಫೋನ್, ಪಾಸ್‌ವರ್ಡ್‌ ಮೊದಲಾದ ವಿಷಯಗಳು ಹೆಚ್ಚು ಸೂಕ್ಷ್ಮವಾಗುತ್ತವೆ. ಗಂಡ ಆತನ ಫೋನ್ ಮುಟ್ಟೋಕೆ ಬಿಟ್ಟಿಲ್ಲಾಂದ್ರೆ ಹೆಂಡ್ತಿ ಸಿಡಿಮಿಡಿಗೊಳ್ಳುತ್ತಾಳೆ. ಹೆಂಡ್ತಿ ಪ್ಯಾಟರ್ನ್‌ ಲಾಕ್ ಗೊತ್ತಾಗಿಲ್ಲಾಂದ್ರೆ ಗಂಡನ ಪಿತ್ತ ನೆತ್ತಿಗೇರುತ್ತದೆ. 

ಮೊಬೈಲ್ ಪಾಸ್‌ವರ್ಡ್‌ ಗೊತ್ತಿಲ್ಲದ ಕಾರಣಕ್ಕೆ ಹೆಚ್ಚಿನ ದಾಂಪತ್ಯಗಳಲ್ಲಿ (Married life) ಜಗಳಗಳು ಹೆಚ್ಚಾಗುತ್ತವೆ. ಇಬ್ಬರ ನಡುವೆ ಮುನಿಸು ಕಾಣಿಸಿಕೊಳ್ಳುತ್ತದೆ. ಅನುಮಾನ, ಅಸಮಾಧಾನ ಎಲ್ಲವೂ ಬರುತ್ತದೆ. ಕೊನೆಗಿದು ಡಿವೋರ್ಸ್‌ಗೂ ಬಂದು ತಲುಪುತ್ತದೆ. ಹೈದರಾಬಾದ್‌ನಲ್ಲೂ ಇಂಥಹದ್ದೇ ಘಟನೆಯೊಂದು ನಡ್ದಿದೆ.

ಅವರು ಸುಳ್ಳು ಹೇಳ್ತಾ ಇದ್ದಾರಾ, ಹೀಗ್ ಕಂಡು ಹಿಡೀಬಹುದು ನೋಡಿ

ಮೊಬೈಲ್ ಲಾಕ್‌ ಗಂಡನ ವಿರುದ್ಧ ದೂರು ನೀಡಿದ ಹೆಂಡ್ತಿ
ಗಂಡ ಅನಿಸಿಕೊಂಡೋನು ಅದೇನ್‌ ಮಾಡಿದ್ರೂ ಮೊಬೈಲ್ ಲಾಕ್‌ ತೆಗೆದು ಹೆಂಡ್ತಿ ಕೈಗೆ ಕೊಡ್ತಿರಲ್ಲಿಲ್ಲ. ಅವಳಾದ್ರೂ ಎಷ್ಟ್ ಸಹಿಸಿಕೊಳ್ತಾಳೆ ಪಾಪ. ಮೊಬೈಲ್​​ ಫೋನ್​​​ ಸೀಕ್ರೆಟ್​​ ಲಾಕ್​​ ಓಪನ್​ ಮಾಡಲಿಲ್ಲ ಎಂದು ಗಂಡನ ವಿರುದ್ಧ ಪತ್ನಿ ದೂರು (Complaint) ನೀಡಿದ್ದಾಳೆ. ಪೊಲೀಸರು ಈ ಬಗ್ಗೆ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಗಂಡ-ಹೆಂಡತಿ (Husband-wife) ನಡುವೆ ಏರ್ಪಟ ವಿಚಿತ್ರ ಸಮಸ್ಯೆಯೊಂದು ಪೊಲೀಸರಿಗೆ ತಲೆನೋವು ತಂದಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ಸರ್ಕಾರಿ ಕೆಲಸದಲ್ಲಿರುವ ಪತಿ-ಪತ್ನಿ ಇಬ್ಬರು ಒಬ್ಬರ ವಿರುದ್ಧ ಒಬ್ಬರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಮೊಬೈಲ್​ ಫೋನ್​ ಸೀಕ್ರೆಟ್​ ಲಾಕ್​ ಹೇಳಲಿಲ್ಲ ಮತ್ತು ಅನುಮಾನಪಟ್ಟು ಪತಿ ಕಿರುಕುಳ (Torture) ನೀಡುತ್ತಿದ್ದಾನೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೊಂದೆಡೆ ಗಂಡ ಕೂಡಾ ಹೆಂಡ್ತಿ ಮೊಬೈಲ್ ಪಾಸ್‌ವರ್ಡ್‌ ಹೇಳ್ತಿಲ್ಲ ಅಂತ ದೂರಿದ್ದಾನೆ. 
 ದಂಪತಿಯನ್ನು ಒಂದು ಮಾಡಲು ಕೌನ್ಸಿಲ್​​​ಗೆ ಕರೆದಿದ್ದ ವೇಳೆ ಗಂಡ-ಹೆಂಡತಿ ಹೇಳಿದ ವಿಚಾರಗಳು ಪೊಲೀಸರಿಗೆ ತಲೆನೋವು ತಂದಿತ್ತಂತೆ. ಕೊನೆಗೆ ಪತ್ನಿ ಕೊಟ್ಟ ದೂರಿನ ಮೇರೆಗೆ ಪೊಲೀಸರು ಪತಿಯ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಚಿನ್ನ ಅಲ್ಲ, ವಜ್ರವೂ ಅಲ್ಲ ಹೆಂಡ್ತಿ ತನ್ನ ಗಂಡನಿಂದ ಬಯಸೋದೇನು ಗೊತ್ತಾ?

ಮೊಬೈಲ್ ಬಳಕೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ ಅನ್ನೋದಕ್ಕಿಂತ ಕುಟುಂಬಗಳಲ್ಲಿ ಜಗಳ ಬರಲು ಕಾರಣವಾಗುತ್ತಿದೆ ಎಂದು ಹೇಳಬಹುದು. ಈ ಪ್ರಕರಣದಲ್ಲೂ ದಂಪತಿಯ ನಡುವಿನ ಜಗಳಕ್ಕೆ ಮೊಬೈಲ್ ಫೋನ್​ ಕಾರಣವಾಗಿದೆ.. ತನ್ನ ಪತಿ ಮೊಬೈಲ್​ಗೆ ಸೀಕ್ರೆಟ್ ಲಾಕ್​ ಇಟ್ಟಿದ್ದಾರೆ, ನನ್ನ ಮೇಲೆ ಅನುಮಾನಪಟ್ಟು ಕಿರುಕುಳ ನೀಡ್ತಿದ್ದಾನೆ ಎಂದು ಪತ್ನಿ, ಪತಿಯ ವಿರುದ್ಧ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೇ ಮೊಬೈಲ್ ಸೀಕ್ರೆಟ್​ ಲಾಕ್​ ನನಗೆ ತಿಳಿಸಿಬೇಕು ಎಂದು ಪಟ್ಟು ಹಿಡಿದಿದ್ದಾಗಿ ತಿಳಿಸಿದ್ದಾರೆ.

ಕೃಷ್ಣಾ ಜಿಲ್ಲೆಯ ಇಬ್ರಾಹಿಂ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆ ಘಟನೆ ನಡೆದಿದ್ದು, ಇನ್ನು ಏನು ಮಾಡಲಾಗದೆ ಪೊಲೀಸರು ಮಹಿಳೆ ನೀಡಿದ ದೂರಿನ ಮೇರೆಗೆ ಪತಿ ವಿರುದ್ಧ ಎಫ್​ಐಆರ್ ದಾಖಲು ಮಾಡಿದ್ದಾರೆ. ಅದೇನೆ ಇರ್ಲಿ, ಹಿಂದೆಲ್ಲಾ ದಾಂಪತ್ಯ ಮುರಿಯೋಕೆ ಮುರಿಯೋಕೆ ಗಂಡನ ಕೆಟ್ಟ ಅಭ್ಯಾಸ, ಸಂಬಂಧಗಳು ಕಾರಣವಾಗ್ತಿದ್ವು. ಆದ್ರೆ ಈಗ ಮೊಬೈಲೇ ಮನೆಹಾಳ್ ಮಾಡ್ತಿರೋದು ವಿಪರ್ಯಾಸವೇ ಸರಿ.

click me!