
ಮದುವೆ ಅನ್ನೋದು ಈಗ ಹಿಂದಿನಷ್ಟು ಪವಿತ್ರ ಸಂಬಂಧವಾಗಿ ಉಳಿದಿಲ್ಲ. ಸಣ್ಣಪುಟ್ಟ ಕಾರಣಗಳಿಗೆ ಡಿವೋರ್ಸ್, ಲಿವ್ ಇನ್ ರಿಲೇಶನ್ ಶಿಪ್ ಮೊದಲಾದ ಕಾರಣಗಳಿಂದಾಗಿ ದಾಂಪತ್ಯದ ಮಹತ್ವವೇ ಕಡಿಮೆಯಾಗುತ್ತಿದೆ. ಮಾತ್ರವಲ್ಲ ಸೋಲೋಗಮಿ, ಸೇಮ್ ಸೆಕ್ಸ್ ಮ್ಯಾರೇಜ್‌ಗಳು ಈಗ ಸಾಮಾನ್ಯವಾಗುತ್ತಿರುವ ಕಾರಣ ಮದುವೆ ಅನ್ನೋದು ಹಲವರ ಪಾಲಿಗೆ ಕ್ಲಿಷ್ಟಕರವಾಗಿ ಪರಿಣಮಿಸುತ್ತಿದೆ. ಹುಡುಗರು ನೋಡಿದ್ರೆ ಮದುವೆಯಾಗೋಕೆ ಹುಡುಗಿ ಸಿಗ್ತಿಲ್ಲ ಅಂತ ಅಲವತ್ತುಕೊಳ್ಳುತ್ತಿದ್ದಾರೆ. ಮ್ಯಾಟ್ರಿಮೋನಿ, ವಧು-ವರರ ವೇದಿಕೆ ಮೊದಲಾದ ಕಡೆ ರಿಜಿಸ್ಟರ್ ಮಾಡಿದರೂ ಹುಡುಗಿ (Girl) ಸೆಟ್ ಆಗ್ತಿಲ್ಲಾಂತ ನೊಂದುಕೊಳ್ತಿದ್ದಾರೆ. ಕೆಲವೊಬ್ಬರು ಆತ್ಮಹತ್ಯೆ ಮಾಡಿಕೊಳ್ಳೋದು, ಮದುವೆಯ (Marriage) ಬಗ್ಗೆ ಕೇಳಿದವರಿಗೆ ಹಿಂಸೆ ಮಾಡಿರೋ ಘಟನೆಯೂ ನಡೆದಿದೆ. ಹೀಗಿರುವಾಗ ಹುಡುಗರು ಬೆಚ್ಚಿ ಬೀಳುವಂಥಾ ಇನ್ನೊಂದು ಆಘಾತಕಾರಿ ವಿಚಾರ ಬಯಲಾಗಿದೆ.
ಹುಡುಗಿಯರಿಗೆ ಒಂಟಿ ಒಂಟಿಯಾಗಿರೋದೆ ಇಷ್ಟವಂತೆ
ದೇಶದಲ್ಲಿ 81 ಪ್ರತಿಶತದಷ್ಟು ಹುಡುಗಿಯರು ಮದುವೆಯಾಗಲು ಬಯಸುವುದಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ. ಡೇಟಿಂಗ್ ಅಪ್ಲಿಕೇಶನ್ ಬಂಬಲ್‌ನ ಇತ್ತೀಚಿನ ಅಧ್ಯಯನದ (Study) ಪ್ರಕಾರ, ಸುಮಾರು 5ರಲ್ಲಿ 2 (39 ಪ್ರತಿಶತ) ಮಂದಿ ಭಾರತದಲ್ಲಿ ಮದುವೆ ಸೀಸನ್ ಶುರುವಾದಾಗ ಮನೆಯಲ್ಲಿ ಮದುವೆಗೆ ಒತ್ತಡ (Pressure) ಹೆಚ್ಚಾಗುತ್ತದೆ ಎಂದು ಒಪ್ಪಿಕೊಂಡಿದ್ದಾರೆ. ಆದ್ರೆ ಮದುವೆಗೆ ತಮ್ಮ ಒಪ್ಪಿಗೆ ಯಾವಾಗಲೂ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಇದೆಂಥಾ ವಿಚಿತ್ರ, ತನ್ನನ್ನೇ ತಾನು ಮದ್ವೆಯಾದ ಯುವತಿ ಈಗ ಡಿವೋರ್ಸ್ ಬೇಕು ಅಂತಿದ್ದಾಳೆ !
ನೀವು ಯಾವಾಗ ಮದುವೆಯಾಗಲು ಬಯಸುತ್ತೀರಿ ಎಂದು ಕೇಳಿದಾಗ, ಪ್ರತಿಕ್ರಿಯಿಸಿದವರಲ್ಲಿ 39 ಪ್ರತಿಶತದಷ್ಟು ಜನರು ಒತ್ತಡದಲ್ಲಿದ್ದಾರೆ ಎಂದು ಹೇಳಿದರು. ಭಾರತೀಯ ವಿವಾಹ ಋತುವಿನಲ್ಲಿ, ಸುಮಾರು ಮೂರನೇ ಒಂದು ಭಾಗದಷ್ಟು ಅವಿವಾಹಿತ ಭಾರತೀಯರು (33 ಪ್ರತಿಶತ) ಸಮೀಕ್ಷೆಗೆ ಒಳಪಟ್ಟಿದ್ದಾರೆ, ಅವರು ಬಲವಂತವಾಗಿ ಮದುವೆಗೆ ಒಪ್ಪಿಕೊಳ್ಳುತ್ತೇವೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸಮೀಕ್ಷೆಯಲ್ಲಿ, ಜನರನ್ನು ಮದುವೆ ಮತ್ತು ಸಂಬಂಧಗಳ ಬಗ್ಗೆ ಅನೇಕ ಪ್ರಶ್ನೆಗಳನ್ನ ಕೇಳಲಾಯಿತು. ಅದರಲ್ಲಿ 81 ಪ್ರತಿಶತದಷ್ಟು ಹುಡುಗಿಯರು ಮದುವೆಯ ಪ್ರಶ್ನೆಗೆ ಉತ್ತರಿಸಿದರು. ಇದರಲ್ಲಿ ಬಹುತೇಕರು ಮದುವೆಯೆಂಬ ಬಂಧನವಿಲ್ಲದೆ ಒಂಟಿಯಾಗಿ ಖುಷಿಯಿಂದ ಜೀವನ (Life) ನಡೆಸಲು ತುಂಬಾ ಇಷ್ಟಪಡುವುದಾಗಿ ಬಹಿರಂಗಪಡಿಸಿದರು.
ಸಮೀಕ್ಷೆಯ ಪ್ರಕಾರ, 33 ಪ್ರತಿಶತದಷ್ಟು ಜನರು ಮದುವೆಯಾದ ನಂತರ ಬದ್ಧತೆಯ ಸುದೀರ್ಘ ಸಂಬಂಧವನ್ನ ಪ್ರವೇಶಿಸಲು ಒತ್ತಾಯಿಸಲ್ಪಡುತ್ತಾರೆ ಎಂದು ಭಾವಿಸುತ್ತಾರೆ. ಸರಳವಾಗಿ ಹೇಳುವುದಾದರೆ, ಮದುವೆಯ ನಂತರ, ಒಬ್ಬ ಹುಡುಗ ಮತ್ತು ಹುಡುಗಿ ಸಂಬಂಧವನ್ನ ಕಾಪಾಡಿಕೊಳ್ಳಲು ಜೀವನಪರ್ಯಂತ ಒಟ್ಟಿಗೆ ವಾಸಿಸುತ್ತಾರೆ ಎಂದು ಈ ಜನರು ಭಾವಿಸುತ್ತಾರೆ. ಅಲ್ಲಿ ಹುಡುಗ-ಹುಡುಗಿಯ ಇಷ್ಟಕಷ್ಟಗಳನ್ನು ಯಾರೂ ಗಮನಿಸುವುದಿಲ್ಲ.
ಇಂಥಾ ಅಭ್ಯಾಸಗಳಿಂದ್ಲೇ ಮದ್ವೆ ವಯಸ್ಸಾದ್ರೂ ನೀವಿನ್ನೂ ಸಿಂಗಲ್ ಆಗಿರೋದು
81% ಮಹಿಳೆಯರು ತಮ್ಮ ಅತ್ತೆ-ಮಾವನ ಮನೆಗೆ ಹೋಗಲು ಬಯಸುವುದಿಲ್ಲ.!
ಸುದ್ದಿ ವೆಬ್ಸೈಟ್ ಐಎಎನ್ಎಸ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಸಮೀಕ್ಷೆ (Survey) ನಡೆಸಿದ ಭಾರತದ 81 ಪ್ರತಿಶತದಷ್ಟು ಮಹಿಳೆಯರು ಮದುವೆಯಾಗದೆ ಮತ್ತು ಏಕಾಂಗಿ (Alone)ಯಾಗಿ ಹೆಚ್ಚು ಆರಾಮದಾಯಕ ಮತ್ತು ಸಂತೋಷವನ್ನ ಅನುಭವಿಸುತ್ತಾರೆ ಎಂದು ಹೇಳಿದ್ದಾರೆ. 62 ಪ್ರತಿಶತದಷ್ಟು ಜನರು ತಮ್ಮ ಆದ್ಯತೆಗಳು, ಮತ್ತು ಅಗತ್ಯಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. 83 ಪ್ರತಿಶತದಷ್ಟು ಹುಡುಗಿಯರು ಉತ್ತಮ ಸಂಗಾತಿಯನ್ನ (Partner) ಕಂಡುಕೊಳ್ಳುವವರೆಗೂ ಮದುವೆಯಾಗುವುದಿಲ್ಲ ಎಂದರು.
ಅದೇನೆ ಇರ್ಲಿ, ಸಿಂಗಲ್ ಆಗಿರೋದೆ ಬೆಸ್ಟ್, ಒಂಟಿ ಜೀವನವೇ ಲೇಸು ಅಂತಿದ್ದಾರೆ ಗರ್ಲ್ಸ್. ಹುಡುಗಿಯರ ಮನಸ್ಥಿತಿ ಹೀಗಿರುವಾಗ ಸಿಂಗಲ್ ಆಗಿರುವವರ ಕಥೆಯೇನಪ್ಪಾ ಅಂತ ಬೇಜಾರ್ ಮಾಡಿಕೊಳ್ತಿದ್ದಾರೆ ಯುವಕರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.