ನಿಮ್ಮ ಗೆಳೆಯ ನಿಮ್ಮನ್ನು ನಿಜಕ್ಕೂ ಕೇರ್ ಮಾಡ್ತಾನಾ?

By Suvarna News  |  First Published Feb 2, 2023, 6:12 PM IST

ನಿಮ್ಮ ಗೆಳೆಯ ನಿಮ್ಮನ್ನು ನಿಜಕ್ಕೂ ಕೇರ್ ಮಾಡ್ತಾರೆ ಅನ್ನೋದನ್ನ ಹೇಗೆ ಅರ್ಥ ಮಾಡಿಕೊಳ್ತೀರಿ? ಅವರ ಕೆಲವು ವರ್ತನೆ, ಸ್ವಭಾವಗಳ ಮೂಲಕ ಅವರಲ್ಲಿರುವ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬಹುದು. ಉತ್ತಮ ಗೆಳೆಯನೊಬ್ಬ ನಿಮ್ಮ ಮಿತಿಯನ್ನು ಅರಿತುಕೊಳ್ಳುವ ಜತೆಗೆ ಕೆಲವು ಗುಣಗಳನ್ನು ಸಹಜವಾಗಿ ವ್ಯಕ್ತಪಡಿಸುತ್ತಾನೆ. 
 


“ಅವರು ನಿನ್ನನ್ನು ತುಂಬ ಕೇರ್ ಮಾಡ್ತಾರೆ’ ಎನ್ನುವ ಮಾತನ್ನು ಒಂದಿಲ್ಲೊಂದು ಬಾರಿಯಾದರೂ ಕೇಳಿರುತ್ತೀರಿ. ಯಾರಾದರೂ ನಿಮ್ಮ ಬಗ್ಗೆ ಅಪರಿಮಿತ ಕಾಳಜಿಯ ಭಾವನೆ ಹೊಂದಿದ್ದಾಗ ಅವರನ್ನು ಬಲ್ಲವರು ಹೀಗನ್ನುವುದು ಸಹಜ. ಆದರೂ ಕೆಲವೊಮ್ಮೆ ಗೆಳೆಯನ ಆ ಕಾಳಜಿ, ಪ್ರೀತಿಯ ಬಗ್ಗೆ ಸ್ಪಷ್ಟತೆ ನಿಮಗೆ ಮೂಡಿರದೆ ಇರಬಹುದು. ಏನೋ ಗೊಂದಲ ಕಾಡಬಹುದು. ಏಕೆಂದರೆ, ಕಾಳಜಿಯನ್ನು ಮಾತಿನಲ್ಲಿ ತೋರ್ಪಡಿಸುವುದು ಸಾಧ್ಯವಿಲ್ಲ. ಬಹಳಷ್ಟು ಹುಡುಗರಿಗೆ ಮಾತುಗಳ ಮೂಲಕವೇ ಎಲ್ಲವನ್ನೂ ಹೇಳಿಕೊಳ್ಳುವ ಅಭ್ಯಾಸವೂ ಇರುವುದಿಲ್ಲ. ಆದರೆ, ಅವರ ವರ್ತನೆ, ಮಾತುಕತೆ, ಬಾಡಿ ಲ್ಯಾಂಗ್ವೇಜ್, ಕೆಲವು ಸಮಯದಲ್ಲಿ ಅವರು ವ್ಯಕ್ತಪಡಿಸುವ ಭಾವನೆಗಳ ಮೂಲಕ ನಿಮ್ಮ ಕುರಿತಾಗಿ ಅವರಲ್ಲಿರುವ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬಹುದು. ಇನ್ನೊಬ್ಬರ ಬಗ್ಗೆ ಮನದಾಳದಿಂದ ಪ್ರೀತಿ, ಕಾಳಜಿ ಹೊಂದಿರುವಾಗ ಕೆಲವು ರೀತಿಯ ವರ್ತನೆಗಳನ್ನು ಸಹಜವಾಗಿ ಮಾಡುತ್ತಾರೆ. ಅಂತಹ ವರ್ತನೆಗಳ ಮೇಲೆ ಕಣ್ಣಿಟ್ಟರೆ ಅವರ ಭಾವನೆಗಳನ್ನು ಅರಿತುಕೊಳ್ಳುವುದು ಸುಲಭವಾಗುತ್ತದೆ. ವರ್ತನೆ ಮೂಲಕ ನಿಮ್ಮ ಬಗ್ಗೆ ಅವರಿಟ್ಟಿರುವ ಭಾವನೆಯನ್ನು ಅರ್ಥ ಮಾಡಿಕೊಳ್ಳುವುದು ಶಬ್ದಗಳ ಮೂಲಕ ಹೇಳುವುದಕ್ಕಿಂತ ಉತ್ತಮ ಮಾರ್ಗವೂ ಹೌದು. ಹಾಗಿದ್ದರೆ, ನಿಮ್ಮ ಗೆಳೆಯನ  ಕಾಳಜಿಯನ್ನು ಹೀಗೆ ತಿಳಿದುಕೊಳ್ಳಿ.

•    ಪ್ರಾಮಾಣಿಕ ಭಾವನೆ (Honest Feelings)
ಯಾವುದೇ ಸಂಬಂಧದಲ್ಲಿ (Relationship) ಪ್ರಾಮಾಣಿಕತೆ ಅತಿ ಮುಖ್ಯ ಅಂಶ. ಅದು ಸಾಮಾನ್ಯ ಸ್ನೇಹವೇ (Friendship) ಆಗಿರಲಿ, ರೋಮ್ಯಾಂಟಿಕ್ (Romantic) ಬಂಧವೇ ಆಗಿರಲಿ. ನಿಮ್ಮ ಗೆಳೆಯನಲ್ಲಿ ನೀವು ಪ್ರಾಮಾಣಿಕತೆ ಕಂಡರೆ ಅದು ಉತ್ತಮ ಅಂಶ. ಆತ ತನ್ನ ಭಾವನೆಗಳು ಹಾಗೂ ಸ್ವಭಾವದ ಬಗ್ಗೆ ನಿಮ್ಮಲ್ಲಿ ಪ್ರಾಮಾಣಿಕವಾಗಿದ್ದರೆ, ತನ್ನ ಬಗ್ಗೆ ಮುಚ್ಚಿಟ್ಟುಕೊಳ್ಳುವ ಯತ್ನ ಮಾಡದಿದ್ದರೆ ಆತ ನಿಮ್ಮ ಬಗ್ಗೆ ಪ್ರಾಮಾಣಿಕ ಕಾಳಜಿ (Care) ಹೊಂದಿದ್ದಾನೆ ಎಂದು ತಿಳಿಯಬಹುದು. ಆತ ನಿಮ್ಮೊಂದಿಗೆ ಮುಚ್ಚುಮರೆಯಿಲ್ಲದೆ ಮುಕ್ತ ಮಾತುಕತೆ (Open Conversation) ನಡೆಸುವುದು ಮುಖ್ಯ.

Tap to resize

Latest Videos

Relationship Tips: ಇಂಥಾ ತಪ್ಪು ಮಾಡಿದ್ರೆ ಹೆಂಡ್ತಿ ದೂರ ಆಗೋದು ಖಂಡಿತ

•    ನಿಮ್ಮ ಮಾತಿಗೂ ಗಮನ (Listen to You)
ಕೆಲವು ಹುಡುಗರು ತಮ್ಮ ಬಗ್ಗೆ ಇಲ್ಲಸಲ್ಲದ್ದನ್ನೆಲ್ಲ ಕೊಚ್ಚಿಕೊಳ್ಳುತ್ತಾರೆ. ಆದರೆ, ಅವರಿಗೆ ಎದುರಿಗಿರುವವರು ಏನು ಹೇಳುತ್ತಾರೆ ಎಂದು ಕೇಳಿಸಿಕೊಳ್ಳುವ ಸಮಾಧಾನ ಇರುವುದಿಲ್ಲ. ನಿಮ್ಮ ಗೆಳೆಯ (Lover) ನೀವೇನು ಹೇಳುತ್ತೀರಿ ಎನ್ನುವುದನ್ನು ತಾಳ್ಮೆಯಿಂದ ಕೇಳಿಸಿಕೊಂಡರೆ ಉತ್ತಮ ಸಂಬಂಧ ಸಾಧ್ಯವಾಗುತ್ತದೆ. 

•    ಚಿಕ್ಕಪುಟ್ಟ ಗಿಫ್ಟ್
ಸಮಯಕ್ಕೆ ತಕ್ಕಂತೆ ಆಗಾಗ ನಿಮ್ಮ ಗೆಳೆಯ ನಿಮಗೆ ಗಿಫ್ಟ್ (Gift) ತಂದುಕೊಡುತ್ತ ಸರ್ ಪ್ರೈಸ್ ಮೂಡಿಸುತ್ತಿದ್ದರೆ ಆತ ನಿಮ್ಮ ಬಗ್ಗೆ ನಿಜಕ್ಕೂ ಕಾಳಜಿ ಹೊಂದಿರಬಹುದು. ಎಲ್ಲವನ್ನೂ ನೆನಪಿಟ್ಟುಕೊಂಡು ನಿಮ್ಮನ್ನು ಖುಷಿಪಡಿಸಲು (Happy) ಯತ್ನಿಸಬಹುದು. ಇಂತಹ ಸಮಯದಲ್ಲಿ ಚಿಕ್ಕಪುಟ್ಟ ಅಥವಾ ದೊಡ್ಡ ಉಡುಗೊರೆ ನೀಡುವುದು ಆತನಲ್ಲಿರುವ ಭಾವನೆ ವ್ಯಕ್ತಪಡಿಸುತ್ತದೆ.

ಇಂಥಾ ಅಭ್ಯಾಸಗಳಿಂದ್ಲೇ ಮದ್ವೆ ವಯಸ್ಸಾದ್ರೂ ನೀವಿನ್ನೂ ಸಿಂಗಲ್ ಆಗಿರೋದು

•    ನಿಮ್ಮ ರಕ್ಷಣೆಗೆ (Protection) ಆದ್ಯತೆ
ನಿಮ್ಮ ಬಗ್ಗೆ ರಕ್ಷಣಾತ್ಮಕ ಧೋರಣೆ ಹೊಂದಿರುವುದು ಆತನಲ್ಲಿರುವ ಕಾಳಜಿಯ ಪ್ರಮುಖ ಲಕ್ಷಣ. ಸಂಜೆ ತಡವಾದಾಗ ನಿಮ್ಮನ್ನು ಮನೆಯವರೆಗೆ ಡ್ರಾಪ್ (Drop) ನೀಡುವುದು ಅಥವಾ ಯಾರಾದರೂ ನಿಮ್ಮ ಸ್ನೇಹ ಬೆಳೆಸಲು ಯತ್ನಿಸಿದರೆ ಪೊಸೆಸಿವ್ ನೆಸ್ (Possessiveness) ತೋರಿಸುವುದು, ಕೆಲವು ಸನ್ನಿವೇಶಗಳಿಂದ ನಿಮ್ಮನ್ನು ಪಾರು ಮಾಡಲು ಯತ್ನಿಸುವುದೆಲ್ಲ ಅವರಲ್ಲಿರುವ ಕಾಳಜಿಯನ್ನು ತೋರುತ್ತದೆ. 

•    ನಿಮ್ಮ ಮಿತಿ (Boundary) ಅರ್ಥವಾಗುತ್ತೆ!
ಉತ್ತಮ ಗೆಳೆಯನಲ್ಲಿ ಇರಬೇಕಾದ ಅತಿ ಪ್ರಮುಖ ಗುಣವೆಂದರೆ ತಮ್ಮ ಹುಡುಗಿಯ (Woman) ಮಿತಿಯನ್ನು ಅರ್ಥೈಸಿಕೊಳ್ಳುವುದಾಗಿ ಎಂದರೆ ತಪ್ಪಿಲ್ಲ. ಸಾಮಾನ್ಯವಾಗಿ ಹುಡುಗರು (Guy) ತಾವು ಆಸಕ್ತಿ ಹೊಂದಿರುವ ಹುಡುಗಿ (Girl) ತಮಗೆ ಮಾತ್ರ ಸಮಯ ನೀಡಬೇಕು, ತಮ್ಮೊಂದಿಗೆ ಮಾತ್ರ ಸುತ್ತಾಡಬೇಕು, ತಡರಾತ್ರಿಯವರೆಗೂ ತಮ್ಮೊಂದಿಗೆ ಚಾಟ್ ಮಾಡಬೇಕು, ಇತ್ಯಾದಿ ಇತ್ಯಾದಿ ಭಾವನೆ ಹೊಂದಿರುತ್ತಾರೆ. ಆದರೆ, ಆತ ನಿಮ್ಮ ಬಗ್ಗೆ ನಿಜವಾಗಿಯೂ ಕಾಳಜಿ ಹೊಂದಿದ್ದರೆ ನಿಮ್ಮ ಮಿತಿಗಳನ್ನು ಅರಿತುಕೊಂಡು ವರ್ತಿಸುತ್ತಾರೆ. ನಿಮಗೆ ಸಾಕಷ್ಟು ಸ್ಪೇಸ್ (Space) ನೀಡುತ್ತಾರೆ.  
 

click me!