ಸೆಕ್ಸ್‌ಗಿಂತ ಮೊದಲು ಚ್ಯೂಯಿಂಗ್ ಗಮ್ ಅಗಿಯೋ ಅಭ್ಯಾಸ ಎಷ್ಟು ಒಳ್ಳೇದು ?

By Suvarna NewsFirst Published Feb 8, 2023, 4:42 PM IST
Highlights

ಕೆಲವರ ಬಾಯಲ್ಲಿ ಸದಾ ಚ್ಯೂಯಿಂಗ್ ಗಮ್ ಇರುತ್ತೆ. ಇನ್ನು ಕೆಲವರು ಸಂಗಾತಿ ಬಳಿ ಹೋಗ್ಬೇಕು ಅಂದಾಗ ಇದನ್ನು ಬಾಯಿಗೆ ಹಾಕಿಕೊಳ್ತಾರೆ. ಬಾಯಿ ವಾಸನೆ ಕಡಿಮೆ ಮಾಡಿ ತಾಜಾತನ ನೀಡುವ ಈ ಚ್ಯೂಯಿಂಗ್ ಗಮ್ ಸಂಭೋಗ ಸುಖವನ್ನು ಕಡಿಮೆ ಮಾಡುತ್ತೆ ಗೊತ್ತಾ?
 

ಇದು ವ್ಯಾಲಂಟೈನ್ ವೀಕ್. ರೋಸ್ ಡೇ, ಪ್ರಪೋಸ್ ಡೇ, ಟೆಡ್ಡಿಬೇರ್ ಡೇ, ಪ್ರಾಮಿಸ್ ಡೇ, ಚಾಕೋಲೆಟ್ ಡೇ, ಕಿಸ್ಸಿಂಗ್ ಡೇ ಹೀಗೆ ವಾರ ಪೂರ್ತಿ ಒಂದೊಂದು ದಿನವನ್ನು ಆಚರಣೆ ಮಾಡಲಾಗುತ್ತೆ. ಪ್ರೀತಿಸುವ ವ್ಯಕ್ತಿಗಳು ಈ ವಾರವನ್ನು ಅಧ್ಬುತವಾಗಿ ಕಳೆಯಲು ಬಯಸ್ತಾರೆ. ಪ್ರೀತಿಯಲ್ಲಿ ಮುತ್ತು, ಲೈಂಗಿಕ ಕ್ರಿಯೆ ಸಾಮಾನ್ಯ. ಇದು ಪ್ರೀತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಚುಂಬಿಸಿದಾಗ, ಅಪ್ಪಿಕೊಂಡಾಗ ಪರಸ್ಪರರ ಮಧ್ಯೆ ಇರುವ ಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಅನೇಕ ಬಾರಿ ಸಂಗಾತಿಯನ್ನು ಎಷ್ಟೇ ಪ್ರೀತಿಸಿದ್ರೂ ಚುಂಬನ, ಲೈಂಗಿಕ ಕ್ರಿಯೆ ಕಷ್ಟವೆನ್ನಿಸುತ್ತದೆ. ಅದಕ್ಕೆ ಕಾರಣ ಅವರ ಬಾಯಿಂದ ಬರುವ ವಾಸನೆ. 

ಬಾಯಿಯಿಂದ ಬರುವ ವಾಸನೆ (Smell) ಮೂಡ್ ಹಾಳು ಮಾಡುತ್ತದೆ. ಹಾಗಾಗಿಯೇ ಬಹುತೇಕ ಜನರು ರೋಮ್ಯಾನ್ಸ್ (Romance) ಸಂದರ್ಭದಲ್ಲಿ ಉಸಿರಾಟದ ಬಗ್ಗೆ ಹೆಚ್ಚು ಕಾಳಜಿವಹಿಸ್ತಾರೆ. ಬಾಯಿಗೊಂದು ಚ್ಯೂಯಿಂಗ್ ಗಮ್ (Chewing Gum) ಹಾಕಿ ಜಗಿಯಲು ಶುರು ಮಾಡ್ತಾರೆ. ಆದ್ರೆ ತಜ್ಞರ ಪ್ರಕಾರ ಸಂಭೋಗದ ವೇಳೆ ಚ್ಯೂಯಿಂಗ್ ಗಮ್ ಜಗಿಯೋದು ಒಳ್ಳೆಯದಲ್ಲವಂತೆ. ನಾವಿಂದು ಯಾಕೆ ಚ್ಯೂಯಿಂಗ್ ಗಮ್ ಜಗಿಬಾರದು ಅಂತಾ ನಿಮಗೆ ಹೇಳ್ತೆವೆ.

ತಮ್ಮ ಮಾಜಿ ಪ್ರೇಮಿಯನ್ನು ಅಷ್ಟೊಂದು ಸುಲಭವಾಗಿ ಮರೆಯೋಲ್ಲ ಈ ರಾಶಿಯವರು!

ಸಂಭೋಗಕ್ಕಿಂತ ಮೊದಲು ಯಾಕೆ ಚ್ಯೂಯಿಂಗ್ ಗಮ್ ಅಗಿಯಬಾರದು ಗೊತ್ತಾ? : 

ಗ್ಯಾಸ್ ಸಮಸ್ಯೆ : ಬಿಸಿಯಾದ ರಾತ್ರಿ ಕಳೆಯಬೇಕೆಂದು ಪ್ಲಾನ್ ಮಾಡಿದ್ರೆ ಚ್ಯೂಯಿಂಗ್ ಗಮ್ ಸುದ್ದಿಗೆ ಹೋಗ್ಬೇಡಿ. ಅದು ನಿಮ್ಮ ಕನಸನ್ನು ಭಗ್ನಗೊಳಿಸಬಹುದು. ಚ್ಯೂಯಿಂಗ್ ಗಮ್ ನಿಮ್ಮ ಬಾಯಿಯ ವಾಸನೆಯನ್ನು ಹೋಗಲಾಡಿಸಿ ತಾಜಾಗೊಳಿಸುತ್ತದೆ. ಇದ್ರಲ್ಲಿ ಎರಡು ಮಾತಿಲ್ಲ. ಆದ್ರೆ ನೀವು ಅದನ್ನು ಅಗೆಯುವಾಗ ಗಾಳಿ ಕೂಡ ಹೊಟ್ಟೆಯನ್ನು ಸೇರುತ್ತದೆ. ಇದ್ರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಶುರುವಾಗುತ್ತದೆ. ನೀವು ಚ್ಯೂಯಿಂಗ್ ಗಮ್ ಅಗೆದಾಗ ಗಾಳಿ ಹೊಟ್ಟೆ ಸೇರುತ್ತಿದ್ದಂತೆ ಹೊಟ್ಟೆಯು ದೇಹದೊಳಗೆ ಆಹಾರ ಬರುತ್ತಿದೆ ಎಂದು ಭಾವಿಸುತ್ತದೆ ಮತ್ತು ಜೀರ್ಣಕಾರಿ ಕಿಣ್ವಗಳು ಹೊರಬರಲು ಪ್ರಾರಂಭಿಸುತ್ತವೆ. ಇದ್ರಿಂದ ಹೊಟ್ಟೆಯಲ್ಲಿ ಗ್ಯಾಸ್ ತುಂಬಲು ಪ್ರಾರಂಭಿಸುತ್ತದೆ. ನಂತ್ರ ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗುತ್ತವೆ. ಇದು ಲೈಂಗಿಕ ಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ. ಬಾಯಿಂದ ಅಲ್ಲದೆ ಬೇರೆ ಕಡೆಯಿಂದ ಕೂಡ ವಾಸನೆ ಬರಲು ಶುರುವಾಗುತ್ತದೆ.  

ಕಡಿಮೆಯಾಗುತ್ತೆ ಲೈಂಗಿಕ ಆಸಕ್ತಿ : ನಿಮಗೆಲ್ಲ ತಿಳಿದಂತೆ ಚ್ಯೂಯಿಂಗ್ ಗಮ್ ನಲ್ಲಿ ಹೆಚ್ಚು ಪುದಿನಾ ಅಂಶವಿರುತ್ತದೆ. ಪುದೀನಾ ವಾಸ್ತವವಾಗಿ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ ಅನ್ನು ಕಡಿಮೆ ಮಾಡುತ್ತದೆ.  ಕಾಮಾಸಕ್ತಿಯ ಮೇಲೆ ಪರಿಣಾಮ ಬೀರುತ್ತದೆ.  ಚ್ಯೂಯಿಂಗ್ ಗಮ್ ತಿನ್ನುವುದರಿಂದ ದೈಹಿಕ ಆನಂದ ಕಡಿಮೆಯಾಗುತ್ತೆ ಎನ್ನುತ್ತಾರೆ ತಜ್ಞರು. 

ಕಾಡುತ್ತೆ ಈವೆಲ್ಲ ಸಮಸ್ಯೆ : ಚ್ಯೂಯಿಂಗ್ ಗಮ್  ಸೇವನೆಯಿಂದ ಜಂಕ್ ಫುಡ್  ಸೇವನೆ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳ್ತಾರೆ. ಇದಲ್ಲದೆ ಬಾಯಿಯ ಹೆಚ್ಚಿನ ಸ್ನಾಯುಗಳು ಸಕ್ರಿಯವಾಗುವ ಕಾರಣ ಆಹಾರ ಅಗೆಯುವ ಸಮಸ್ಯೆ ನಮ್ಮನ್ನು ಕಾಡುತ್ತದೆ. ದವಡೆ ಮತ್ತು ತಲೆಬುರುಡೆಯನ್ನು ಸಂಪರ್ಕಿಸುವ ಸ್ನಾಯುಗಳಲ್ಲಿ ತೀಕ್ಷ್ಣವಾದ ನೋವು ಕಾಣಿಸಿಕೊಳ್ಳುತ್ತದೆ. ಚ್ಯೂಯಿಂಗ್ ಗಮ್ ತಿನ್ನುವುದ್ರಿಂದ ತಲೆನೋವು ಮತ್ತು ಅಲರ್ಜಿ ಕೂಡ ಬರುತ್ತದೆ. ಚೂಯಿಂಗ್ ಗಮ್‌ನಲ್ಲಿ ಸಂರಕ್ಷಕಗಳು ಮತ್ತು ಕೃತಕ ಸಕ್ಕರೆಗಳು ಇರುವುದ್ರಿಂದ ಅಲರ್ಜಿ ಕಾಡುತ್ತೆ. ಹಲ್ಲುಗಳಿಗೆ  ಇದು ಹಾನಿಯನ್ನು ಉಂಟುಮಾಡಬಹುದು. ಚೂಯಿಂಗ್ ಗಮ್ ನಿಂದ ಭೇದಿಯಾಗುವ ಅಪಾಯವಿದೆ. ಮೆಥಾಲ್ ಮತ್ತು ಸೋರ್ಬಿಟೋಲ್ ನಂತಹ ಕೃತಕ ಸಿಹಿಕಾರಕಗಳು ಕರುಳಿನ ಕಿರಿಕಿರಿಯನ್ನು ಉಂಟುಮಾಡುತ್ತವೆ. 

ನಿಮ್ಮ ಸಂಗಾತಿಗೆ ಇದು ಎರಡನೇ ಮದುವೆಯೇ? ಹಾಗಿದ್ರೆ ಈ ವಿಷ್ಯ ನೆನಪಿರಲಿ

ದೈಹಿಕ ಸಂಬಂಧ ಬೆಳೆಸುವ ಮುನ್ನ ಏನು ಮಾಡ್ಬೇಕು? :ನಿಮ್ಮ ಬಾಯಿಂದ ಕೆಟ್ಟ ವಾಸನೆ ಬರ್ತಿದ್ದು, ಲೈಂಗಿಕ ಸುಖ ಹಾಳಾಗ್ತಿದೆ ಅನ್ನಿಸಿದ್ರೆ ಇನ್ಮುಂದೆ ಚ್ಯೂಯಿಂಗ್ ಗಮ್ ಮೊರೆ ಹೋಗ್ಬೇಡಿ. ಅದ್ರ ಬದಲು ಆರೋಗ್ಯಕರ ವಿಧಾನವನ್ನು ನೀವು ಬಳಸಿ. ಲೈಂಗಿಕ ಕ್ರಿಯೆ ಅಥವಾ ಸಂಗಾತಿಗೆ ಮುತ್ತಿಡುವ ಮೊದಲು ಹಲ್ಲುಗಳನ್ನು ಬ್ರಷ್ ಮಾಡಿ. ನೀವು ಮೌತ್ ವಾಶ್ ಕೂಡ ಬಳಕೆ ಮಾಡಬಹುದು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದ್ರೆ ಬಾಯಿ ವಾಸನೆ ಬರೋದಿಲ್ಲ. ನೀವು ಒಂದು ಪೀಸ್ ಸೇಬು ಹಣ್ಣನ್ನು ಕೂಡ ತಿನ್ನಬಹುದು. 

click me!