Parenting Tips: ಮಕ್ಕಳ ಪ್ರಶ್ನೆಗೆ ‘ಬಹುಶಃ’ ಎಂಬ ಉತ್ತರ ಕೊಡ್ಬೇಬೇಡಿ !

By Suvarna News  |  First Published Feb 15, 2022, 11:40 AM IST

ಮಕ್ಕಳು (Children) ಕೊಶ್ಚನ್‌ ಕೇಳೋ ರೀತಿ ನೀವು ಕೂಡಾ ನೋಡಿರ್ಬೋದು. ಅರ್ಥವಾಗದ ಪ್ರಶ್ನೆಯನ್ನು ಕೇಳ್ತಾನೆ ಹೋಗ್ತಾರೆ. ಎಂಥವರು ಉತ್ತರ (Answer) ಕೊಡೋಕಾಗದೆ ಒದ್ದಾಡಬೇಕಾಗುತ್ತದೆ. ಹೀಗಿದ್ದಾಗ ಏನು ಹೇಳ್ಬೇಕು ಅನ್ನೋ ಗೊಂದಲದಲ್ಲೇ ಹಲವರು ‘ಬಹುಶಃ’(May Be) ಆಗಿರ್ಬೋದು ಅನ್ನೋ ಉತ್ತರವನ್ನೇ ಕೊಡ್ತಾರೆ. ಆದ್ರೆ ಈ ರೀತಿ ಮಾಡ್ಬೇಡಿ. ಇದ್ರಿಂದ ಮಕ್ಕಳಿಗೆ ಎಷ್ಟು ತೊಂದ್ರೆಯಿದೆ ಗೊತ್ತಾ ?


ಮಕ್ಕಳೆಂದರೆ ಹಾಗೆಯೇ. ನೋಡಿದ ಪ್ರತಿಯೊಂದು ವಸ್ತುವಿನ ಬಗ್ಗೆ, ವಿಷಯದ ಬಗ್ಗೆ ಪ್ರಶ್ನೆ (Question) ಯನ್ನು ಕೇಳುತ್ತಲೇ ಇರುತ್ತಾರೆ. ಉತ್ತರ ನೀಡಿದಷ್ಟೂ ಅವರಲ್ಲಿ ಹೊಸ ಹೊಸ ಪ್ರಶ್ನೆಗಳು ಬೆಳೆಯುತ್ತಾ ಹೋಗುತ್ತವೆ. ಹೀಗಿದ್ದಾಗ ಪೋಷಕರು, ಹಿರಿಯರು ಅವರಿಗೆ ಏನು ಉತ್ತರ (Answer) ನೀಡಬೇಕೆಂದು ಗೊಂದಲಕ್ಕೊಳಗಾಗುತ್ತಾರೆ. ಕೆಲವೊಬ್ಬರು ಮನಸ್ಸಿಗೆ ತೋಚಿದ ಉತ್ತರ ನೀಡಿ, ಮಕ್ಕಳ ಬಾಯಿ ಮುಚ್ಚಲು ಯತ್ನಿಸುತ್ತಾರೆ. ಬಹುಶಃ ಆಗಿರಬಹುದು, ಹಾಗಾಗಿರಬಹುದು, ಹೀಗಾಗಿರಬಹುದು ಎಂಬಂತಹಾ ಉತ್ತರಗಳನ್ನು ನೀಡುತ್ತಾರೆ. 

ಮಗು ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಒತ್ತಾಯಿಸಿದಾಗ ಅಥವಾ ಕೆಲವು ವಿಷಯಗಳಿಗಾಗಿ ಪುನರಾವರ್ತಿತ ವಿನಂತಿಗಳನ್ನು ಮಾಡಿದಾಗ ಹೆಚ್ಚಿನ ಪೋಷಕರು ತಾತ್ಕಾಲಿಕವಾಗಿ ‘ಬಹುಶಃ’ ಎಂಬ ಉತ್ತರವನ್ನು ಆಶ್ರಯಿಸುತ್ತಾರೆ. ಇಂಥಹಾ ಉತ್ತರ ಮಕ್ಕಳನ್ನು ವಿಚಲಿತಗೊಳಿಸಬಹುದು. ದ್ವಂದ್ವ ಸ್ಥಿತಿಯ ಮನೋಭಾವ ಅವರಲ್ಲೂ ಗೊಂದಲದ ಮನಸ್ಥಿತಿಗೆ ಕಾರಣವಾಗುತ್ತದೆ. ಹೋಂವರ್ಕ್, ಆಟ ಮೊದಲಾದ ವಿಚಾರಗಳಲ್ಲೂ ಮಕ್ಕಳು (Children) ಗೊಂದಲದ ಮನಸ್ಥಿತಿಯನ್ನು ಎದುರಿಸುತ್ತಾರೆ.

Tap to resize

Latest Videos

undefined

ಹೀಗಾಗಿ ಮಕ್ಕಳ ವ್ಯಕ್ತಿತ್ವ ಸಮರ್ಪಕವಾಗಿ ರೂಪುಗೊಳ್ಳಲು ಪೋಷಕರು ಸಹ ಸರಿಯಾಗಿ ವರ್ತಿಸಬೇಕಾದುದು ಮುಖ್ಯ. ಮಕ್ಕಳ ಜತೆ ಹೇಗೆ ವರ್ತಿಸಬೇಕು ? ಹೇಗೆ ವರ್ತಿಸಬಾರದು ಎಂಬುದನ್ನು ತಿಳಿಯೋಣ.

Health Tips: ಮಕ್ಕಳಲ್ಲಿ ಹೆಚ್ಚಾಗಿದೆ ಅಪಾಯಕಾರಿ ಎನರ್ಜಿ ಡ್ರಿಂಕ್ಸ್ ಸೇವನೆ

ನಿಮ್ಮ ಮಗುವಿಗೆ ನೀವೇ ರೋಲ್ ಮಾಡೆಲ್
ಮಕ್ಕಳು ತಮ್ಮ ಹೆತ್ತವರು ಮತ್ತು ಹಿರಿಯರನ್ನು ಮಾದರಿಯಾಗಿ ಪರಿಗಣಿಸುತ್ತಾರೆ. ಸಣ್ಣ ಪುಟ್ಟ ಸಂಶಯಗಳು ಬಂದಾಗ ಹಿರಿಯರನ್ನೇ ಕೇಳುತ್ತಾರೆ. ಒಂದು ಸಣ್ಣ ಅನುಮಾನಕ್ಕೂ ಅವರು ಉತ್ತರಕ್ಕಾಗಿ ಹಿರಿಯರ ಕಡೆಗೆ ನೋಡುತ್ತಾರೆ. ಹೀಗಿದ್ದಾಗ ಮಗುವಿನ ಜಿಜ್ಞಾಸೆಯ ಮನಸ್ಸಿಗೆ ಯಾವಾಗಲೂ ನಿಖರವಾದ ಉತ್ತರ ಬೇಕಾಗುತ್ತದೆ. ಹೀಗಾಗಿ ಮಕ್ಕಳಿಗೆ ಉತ್ತರ ಕೊಡುವಾಗ ಯಾವಾಗಲೂ ಹೆಚ್ಚು ಯೋಚಿಸಿ ನಂತರ ಉತ್ತರ ಕೊಡಿ. ನಿಮ್ಮ ದಿಢೀರ್ ಎಂದು ತಪ್ಪು (Wrong) ಉತ್ತರ ಕೊಡುವುದು, ಕೆಲವೊಮ್ಮೆ ಮಕ್ಕಳ ಮೇಲೆ ಭಾವನಾತ್ಮಕವಾಗಿ ಪರಿಣಾಮ ಬೀರಬಹುದು. 

ಮಗುವಿಗೆ ಗೊಂದಲದು ಉತ್ತರಗಳನ್ನು ನೀಡಬೇಡಿ
ಮಕ್ಕಳು ಪ್ರಶ್ನೆಗಳನ್ನು ಕೇಳಿದಾಗ ಯಾವತ್ತೂ ಅವರಿಗೆ ಗೊಂದಲದ ಉತ್ತರಗಳನ್ನು ನೀಡಬೇಡಿ. ಇದು ಮಕ್ಕಳ ಮನಸ್ಸಲ್ಲಿ ಗೊಂದಲ (Confusion)ವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನೀವು ಮಗುವಿನೊಂದಿಗೆ ಹೇಗೆ ವ್ಯವಹರಿಸುತ್ತೀರಿ ಎಂಬುದು ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಮಕ್ಕಳಲ್ಲಿ ನೀವು ಗೊಂದಲಮಯವಾಗಿ ಮಾತನಾಡಿದರೆ, ಅವರು ಸುತ್ತಮುತ್ತಲಿನ ಜನರಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಎಲ್ಲಾ ವಿಷಯದ ಬಗ್ಗೆ ಗೊಂದಲದ ಮನೋಭಾವವನ್ನೇ ಇಟ್ಟುಕೊಳ್ಳುತ್ತಾರೆ.

Super Food For Kids: ಮಕ್ಕಳು ಕುಳ್ಳಗಿದ್ದಾರೆ ಅನ್ನೋ ಬೇಜಾರಾ..ಮೊಟ್ಟೆ, ಸಿಹಿ ಗೆಣಸು ಕೊಟ್ಟು ನೋಡಿ

ಯಾವಾಗಲೂ ತಾತ್ಕಾಲಿಕ ಉತ್ತರಗಳನ್ನು ಪಡೆಯುವ ಮಕ್ಕಳು ಅನಿಶ್ಚಿತತೆಯಿಂದ ಕೂಡಿರುತ್ತಾರೆ. ಮಗುವಿನ ಕುತೂಹಲದ ಮನಸ್ಸು ತನ್ನದೇ ಆದ ಇಚ್ಛಾಶಕ್ತಿಯಿಲ್ಲದೆ ಪೋಷಕರು ಮುಂದಿಡುವ ಯಾವುದೇ ಷರತ್ತುಗಳೊಂದಿಗೆ ತನ್ನನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತದೆ. ಪೋಷಕರು ಬಹುಶಃ ಎಂಬ ಪದವನ್ನು ಬಳಸಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದಾಗ, ಮಗುವು ಪೋಷಕರನ್ನು ನಂಬುವುದನ್ನು ನಿಲ್ಲಿಸಬಹುದು. ಮಗುವಿನೊಳಗೆ ಎಲ್ಲೋ ಆಳವಾಗಿ ಹೆತ್ತವರು ನಂಬಲರ್ಹರಲ್ಲ ಎಂಬ ಅನಿಸಿಕೆ ಬೆಳೆಯುತ್ತದೆ.

ಬಹುಶಃ ಎನ್ನುವ ಬದಲು ನೀವೇನು ಮಾಡಬೇಕು ?
ಮಕ್ಕಳಿಗೆ ಯಾವ ರೀತಿಯಲ್ಲಿ ಉತ್ತರ ನೀಡುವುದು ಸೂಕ್ತ. ಯಾವ ರೀತಿ ಮಾತನಾಡಿದರೆ ಮಕ್ಕಳ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮಕ್ಕಳಿಗೆ ಯಾವಾಗಲೂ ನೇರವಾಗಿ ಉತ್ತರ ಕೊಡಿ. ನೇರವಾದ ಉತ್ತರವು ಯಾವುದೇ ವಿವರಣೆಗಿಂತ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ನೀವು ನೀಡುವ ಉತ್ತರವು ಮಕ್ಕಳ ಮನಸ್ಸಲ್ಲಿ ಗೊಂದಲ ಮೂಡಿಸಬಾರದು. 

ಮಗುವಿನ ಪ್ರಶ್ನೆಗೆ ಉತ್ತರಿಸಲು ಗೊಂದಲಮಯವಾಗುತ್ತಿದ್ದಲ್ಲಿ ಅದನ್ನು ಸರಿಯಾಗಿ ವಿವರಿಸಿ. ಇದು ನಿಮ್ಮ ಮಗುವಿನೊಂದಿಗೆ ಸೌಹಾರ್ದ ಸಂಬಂಧವನ್ನು ಬೆಳೆಸಲು ಕಾರಣವಾಗುತ್ತದೆ. ಇದರಿಂದ ಮುಂದಿನ ಬಾರಿ ಮಗು ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಸಮಸ್ಯೆಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗುತ್ತದೆ. 

click me!