Long Distance Relationships: ಸಿಗಲಾರದ ಸಂಗಾತಿಯೊಂದಿಗೆ ಆಚರಿಸಿ ಡಿಜಿಟಲ್ ವ್ಯಾಲೆಂಟೈನ್ಸ್ ಡೇ

By Suvarna NewsFirst Published Feb 14, 2022, 4:59 PM IST
Highlights

ನೀವು ಒಂದು ಕಡೆ, ನಿಮ್ಮ ಸಂಗಾತಿ ಬೇರೊಂದು ಕಡೆ ವಾಸವಾಗಿದ್ದರೆ ವ್ಯಾಲೆಂಟೈನ್ಸ್ ಡೇ ಆಚರಿಸುವುದಾದರೂ ಹೇಗೆ ಎಂಬ ಯೋಚನೆಯಲ್ಲಿ ಮುಳುಗಿದ್ದೀರಾ? ಹಾಗಾದರೆ ನೀವು ಈ ಡಿಜಿಟಲ್ ವಾಲೆಂಟೈನ್ಸ್ ಡೇ ಬಗ್ಗೆ ತಿಳಿದುಕೊಳ್ಳಲೇಬೇಕು.

ವ್ಯಾಲೆಂಟೈನ್ಸ್ ಡೇ ಅನ್ನುವುದು ಪ್ರೇಮಿಗಳಿಗಾಗಿ (Lovers) ಇರುವ ವಿಶೇಷ ದಿವಸ. ಪ್ರೇಮಿಗಳು ಅಂದರೆ ಒಂದೇ ಪ್ರದೇಶದಲ್ಲಿ ಒಟ್ಟಿಗೆ ವಾಸ ಮಾಡುತ್ತಿರಬೇಕು ಎಂದೇನಿಲ್ಲ. ಕೆಲವರು ಒಂದೇ ಊರಿನಲ್ಲಿ ವಾಸ ಮಾಡುತ್ತಿರಬಹುದು. ಅಂಥವರು ನಿಮ್ಮ ಪ್ರೇಮಿಯೊಂದಿಗೆ ಹೇಗೆಲ್ಲ ವ್ಯಾಲೆಂಟೈನ್ಸ್ ಡೇ ಆಚರಿಸಬಹುದು, ನಿಮ್ಮ ಸಮಯವನ್ನು ಸಂಪೂರ್ಣವಾಗಿ ಪ್ರೇಮಿಯೊಂದಿಗೆ ಕಳೆಯಲು ಯೋಜನೆಗಳನ್ನು (Plan) ರೂಪಿಸಿಕೊಂಡು ಇರುತ್ತೀರಿ. ಆದರೆ, ಬೇರೆ ಬೇರೆ ಊರಿನಲ್ಲಿ ವಾಸ ಮಾಡುತ್ತಿರುವವರು ನಿಮ್ಮ ಸಂಗಾತಿಯನ್ನು ಭೇಟಿ (Meet) ಮಾಡಲಾಗುತ್ತಿಲ್ಲ ಎಂದು ನೊಂದುಕೊಳ್ಳುವ ಬದಲು, ನೀವು ಕೂಡ ಇತರರಂತೆ ನಿಮ್ಮ ಸಂಗಾತಿಯೊಂದಿಗೆ ಹೇಗೆ ವ್ಯಾಲೆಂಟೈನ್ಸ್ ಡೇ ಆಚರಿಸಬಹುದು ಅನ್ನುವುದಕ್ಕೆ ನಮ್ಮಲ್ಲಿ ಕೆಲವು ಸಲಹೆಗಳಿವೆ..

ಇಬ್ಬರು ಪ್ರೇಮಿಗಳು ವ್ಯಾಲೆಂಟೈನ್ಸ್ ಡೇಯನ್ನು ಒಟ್ಟಿಗೆ ಆಚರಿಸಿಕೊಳ್ಳದೆ ಇರಲು ಹಲವು ಕಾರಣಗಳಿರಬಹುದು. ಉದಾಹರಣೆಗೆ ಬೇರೆ ಬೇರೆ ಊರುಗಳಲ್ಲಿ ನೆಲೆಸಿರಬಹುದು, ಕೆಲಸದ ಒತ್ತಡ ಹೆಚ್ಚಿರುವ ಕಾರಣ ಭೇಟಿ ಮಾಡಲು ಆಗದೇ ಇರಬಹು, ಒಬ್ಬರ ಮೇಲೆ ಇನ್ನೊಬ್ಬರಿಗೆ ಸಂಪೂರ್ಣ ನಂಬಿಕೆ ಬರಲು ಸ್ವಲ್ಪ ಸಮಯ ಹಿಡಿಯುವ ಕಾರಣ ಒಟ್ಟಿಗೆ ಭೇಟಿ ಮಾಡಿ  ವ್ಯಾಲೆಂಟೈನ್ಸ್ ಡೇ ಆಚರಿಸುವ ನಿರ್ಧಾರವನ್ನು ತಳ್ಳಿ ಹಾಕಿರಬಹುದು. ಇಂಥ ಕೆಲವು ಕಾರಣಗಳನ್ನು ಹೊಂದಿರುವವರು ಈಗಿರುವ ಟೆಕ್ನಾಲಜಿಯನ್ನು ಉಪಯೋಗಿಸಿಕೊಂಡು ದೂರದಿಂದಲೇ ನಿಮ್ಮ ಸಂಗಾತಿಯೊಂದಿಗೆ ವ್ಯಾಲೆಂಟೈನ್ಸ್ ಡೇ ಆಚರಿಸಿ ಕೊಳ್ಳಬಹುದು..

Latest Videos

ನಿಮ್ಮ ಕ್ಯಾಮೆರಾವನ್ನು (Camera) ಸರಿಯಾದ ಸ್ಥಳದಲ್ಲಿ ಇಟ್ಟುಕೊಂಡು ಇಂಟರ್ನೆಟ್ ಕನಕ್ಟ್ (Internet) ಮಾಡಿಕೊಂಡು ನಿಮ್ಮ ಸಂಗಾತಿಗೆ ವಿಡಿಯೋ ಕಾಲ್ ಮಾಡಿ, ಜೊತೆಗೆ ಈ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡುತ್ತಾ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳಿ

Hug day: ಮನದ ಮಾತನ್ನು ಅಪ್ಪಿಕೊಂಡು ಹೇಳಿದ್ರೆ ಒಪ್ಪಿಕೊಳ್ದೆ ಇರ್ತಾರಾ?

ಹೊಸ ಉಡುಗೆ ತೊಡುಗೆಯೊಂದಿಗೆ (Dressing) ಅಲಂಕರಿಸಿಕೊಳ್ಳಿ 

ನೀವು ಹೊರಗೆ ಹೋಗುವಾಗ ಯಾವ ರೀತಿ ತಯಾರಿಯಾಗಿ ಹೋಗುತ್ತೀರೋ ಅದೇ ರೀತಿಯಲ್ಲಿ ನಿಮ್ಮ ಈ ವಿಶೇಷ ಡೇಟ್‌ಗೆ (Date) ಕೂಡ ತಯಾರಾಗಿ, ಇದರಿಂದಾಗಿ ನಿಮ್ಮ ಸಂಗಾತಿ ಬೇಗ‌ ಇಂಪ್ರೆಸ್ ಆಗಿಬಿಡುತ್ತಾರೆ. ಅದಕ್ಕೂ ಹೆಚ್ಚಿನದಾಗಿ ನೀವು ಹೀಗೆ ತಯಾರಾದಾಗ ನಿಮ್ಮ ಬಗ್ಗೆ ನಿಮಗೆ ಆತ್ಮವಿಶ್ವಾಸ (Confidence) ಹೆಚ್ಚುತ್ತದೆ ಹಾಗೂ ಇದು ಒಂದು ರೀತಿಯ ಅನುಭವವನ್ನು ನೀಡುತ್ತದೆ. ನೀವು ಧರಿಸಿರುವ ಹೊಸ ಬಟ್ಟೆ ನಿಮ್ಮ ಈ ವಿಶೇಷ ದಿನಕ್ಕೆ ಒಂದು ಪಾಸಿಟಿವ್ ಫೀಲ್ ನೀಡುತ್ತದೆ. 

ಸರಳ ಪ್ರಶ್ನೆಗಳೊಂದಿಗೆ ಮಾತನ್ನು ಆರಂಭಿಸಿ

ನಿಮ್ಮ ಸಂಗಾತಿ ನಿಮ್ಮ ಪಕ್ಕದಲ್ಲಿ ಕುಳಿತುಕೊಂಡಿಲ್ಲ.  ಬದಲಿಗೆ ನೀವಿಬ್ಬರೂ ವಿಡಿಯೋ ಕಾಲ್ (Video call) ನಲ್ಲಿ ಡೇಟ್ ಮಾಡುತ್ತಿದ್ದೀರಾ ಅಂದಾಗ ಇಬ್ಬರಲ್ಲಿಯೂ ಸ್ವಲ್ಪ ನರ್ವಸ್ನೆಸ್ ಇರುವುದು ಸಾಮಾನ್ಯ. ಅದಕ್ಕಾಗಿ ನೀವು ಮಾತನ್ನು ಆರಂಭ ಮಾಡುವಾಗ ಬಹಳ ಸರಳ ಎನಿಸುವ ಪ್ರಶ್ನೆಗಳನ್ನು ಕೇಳಿದಾಗ ಅವರು ಕೂಡ ನಿಮ್ಮೊಂದಿಗೆ  ಮಾತನಾಡುವುದಕ್ಕೆ ಹೊಂದಿಕೊಳ್ಳುತ್ತಾರೆ. ಉದಾಹರಣೆಗೆ 'ನೀವು ಇನ್ನೂ ಬಾಲ್ಯ ಸ್ನೇಹಿತರೊಂದಿಗೆ ಸ್ನೇಹ ಮುಂದುವರಿಸಿದ್ದಾರೆ?', 'ನಿಮಗೆ ಯಾವ ಕೆಲಸ ಅತಿ ಹೆಚ್ಚು ಸಂತೋಷ ನೀಡುತ್ತದೆ?' ಇಂತಹ ಪ್ರಶ್ನೆಗಳಿಂದ ನಿಮ್ಮ ಸಂಗಾತಿಯಲ್ಲಿರುವ ಆತಂಕ ಕಡಿಮೆಯಾಗುತ್ತದೆ. ಅವರು ನಿಮ್ಮೊಂದಿಗೆ ಕಂಫರ್ಟಬಲ್ ಆಗಿ ಫೀಲ್ ಮಾಡುತ್ತಾರೆ.

Valentine's day: ನಿಮ್ಮ ಕೈಯಾರೆ ವಿಶೇಷ ತಿಂಡಿ ತಯಾರಿಸಿ, ಸಂಗಾತಿಯ ಮನ ಗೆಲ್ಲಿ

ಸಣ್ಣಪುಟ್ಟ ಆಟವಾಡಿ (Games)

ನಿಮ್ಮಿಬ್ಬರಿಗೂ ಇರಿಸು ಮುರಿಸಾಗದಂತೆ ಸರಳ ಆಟವನ್ನು ಆಡಬಹುದು. ‌ ಮಾತಿನಲ್ಲಿ ಆಡುವ ಆಟ, ಅಥವಾ ಕೈಬೆರಳು ಹಾಗೂ ಸನ್ನೆಯ ಮೂಲಕ ಆಡುವಂತಹ ಆಟಗಳನ್ನು ಆಡಬಹುದು. ಇದರಿಂದಾಗಿ ನಿಮ್ಮಿಬ್ಬರ ನಡುವಿನ ಹೊಂದಾಣಿಕೆ ಹೆಚ್ಚುತ್ತದೆ. ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಹೆಚ್ಚು ಅರ್ಥವಾಗುತ್ತದೆ. ಅಥವಾ ನೀವು ನೋಡಿದ ಯಾವುದಾದರೂ ಕಾಮಿಡಿ ಶೋ (Comedy show) ಅಥವಾ ಸಿನಿಮಾಗಳ ಬಗ್ಗೆ ಚರ್ಚೆ ಮಾಡಬಹುದು, ನೀವು ಪುಸ್ತಕ ಪ್ರೇಮಿಗಳಾಗಿದ್ದಾರೆ ಇಬ್ಬರೂ ಇಷ್ಟ ಪಡುವ ಪುಸ್ತಕದ ಬಗ್ಗೆ ಚರ್ಚಿಸಬಹುದು. ಹೀಗೆ ಆಸಕ್ತಿಕರವಾದ ವಿಚಾರಗಳನ್ನು ನಿಮ್ಮ ಡಿಜಿಟಲ್ ಡೇಟಿಂಗ್ ನಲ್ಲಿ ಅಳವಡಿಸಿಕೊಳ್ಳಿ.

ಅನವಶ್ಯಕ ವಿಚಾರಗಳ ಚರ್ಚೆ ಬೇಡ

ಈಗ ಎಲ್ಲೆಡೆಗಳಲ್ಲಿ ಹೆಚ್ಚು ಚರ್ಚಿತವಾಗುವ ವಿಷಯ ಕರೋನವೈರಸ್ ಇದರ ಬಗ್ಗೆ ಈಗಾಗಲೇ ಬೇಕಾದಷ್ಟು ಚರ್ಚೆ ಮಾಡಿರುತ್ತೀರಿ ಇಂತಹ ವಿಶೇಷ ದಿನದಂದು ಮತ್ತೆ ಅದೇ ವಿಷಯದ ಬಗ್ಗೆ ಚರ್ಚೆ (Discussion) ಮಾಡದೆ ಇದ್ದರೆ ಒಳ್ಳೆಯದು. ಆದಷ್ಟು ಸಂತೋಷ ಕೊಡುವ ವಿಚಾರಗಳ ಬಗ್ಗೆ ಮಾತನಾಡಿ.

click me!