Personality Tips: ಸ್ಮಾರ್ಟ್ ಜನರಿಗೆ ಕೆಲವೇ ಸ್ನೇಹಿತರು ಅದ್ಯಾಕೆ ಹಾಗೆ?

By Suvarna News  |  First Published Jul 1, 2023, 5:10 PM IST

ಸ್ಮಾರ್ಟ್ ಮಂದಿ ಹೆಚ್ಚು ಜನ ಸ್ನೇಹಿತರನ್ನು ಹೊಂದಿರುವುದಿಲ್ಲ. ಅಂಥವರನ್ನು ನೀವೂ ನೋಡಿರಬಹುದು. ಅದಕ್ಕೆ ಹಲವಾರು ಕಾರಣಗಳಿವೆ. ಅವರು ಹೊಸಬರ ಬಗ್ಗೆ ಭಾರೀ ಎಚ್ಚರಿಕೆ ವಹಿಸುತ್ತಾರೆ, ಅನಗತ್ಯ ಗೊಂದಲಗಳಲ್ಲಿ ಸಿಲುಕುವುದನ್ನು ಇಷ್ಟಪಡುವುದಿಲ್ಲ. 
 


ಸ್ನೇಹ ನಮ್ಮ ಬದುಕಿನ ಅಮೂಲ್ಯ ಆಸ್ತಿ. ಹೀಗೆ ಸುಮ್ಮನೆ ಕಂಪನಿಗೆ, ಖುಷಿ ಸಮಯದಲ್ಲಿ, ದುಃಖದ ಕ್ಷಣಗಳಲ್ಲಿ, ಬೆಂಬಲ ಬೇಕಾದ ಸನ್ನಿವೇಶಗಳಲ್ಲಿ ಸ್ನೇಹಿತರನ್ನು ಅವಲಂಬಿಸುವುದು ಹೆಚ್ಚು. ಸ್ನೇಹಿತರು ನಮಗೆ ಅದೆಷ್ಟೋ ಕೌಶಲಗಳನ್ನೂ ಕಲಿಸಿಕೊಡುತ್ತಾರೆ. ಕಿವಿಮಾತು ಹೇಳಿ ತಿದ್ದುತ್ತಾರೆ. ಸ್ನೇಹ ಪರಸ್ಪರರ ಬೆಳವಣಿಗೆಯನ್ನು ಆಶಿಸುತ್ತದೆ. ಕೆಲವರು ಹೆಚ್ಚು ಸ್ನೇಹಿತರನ್ನು ಹೊಂದಿರುತ್ತಾರೆ. ಕೆಲವರಿಗೆ ಬೆರಳೆಣಿಕೆಯಷ್ಟೇ ಜನ ಸ್ನೇಹಿತರು. ಹಾಗೆಯೇ, ಕೆಲವರು ಕಂಡವರೆಲ್ಲ, ಚೆನ್ನಾಗಿ ಮಾತನಾಡಿದವರೆಲ್ಲ ಸ್ನೇಹಿತರೆಂದುಕೊಂಡು ಮೋಸ ಹೋಗುತ್ತಾರೆ. ಕೆಲವರಿಗೆ ಸ್ನೇಹಿತರೇ ಇರುವುದಿಲ್ಲ. ಇವೆರಡೂ ಅತಿರೇಕಗಳೇ. ಆದರೆ, ಕೆಲ ಸ್ಮಾರ್ಟ್ ಜನ ಮಾತ್ರ ಬೆರಳೆಣಿಕೆಯಷ್ಟೇ ಸ್ನೇಹಿತರನ್ನು ಹೊಂದಿರುತ್ತಾರೆ. ಅವರ ಸ್ನೇಹಿತರ ಬಳಗ ಚಿಕ್ಕದಾಗಿರುತ್ತದೆ ಆದರೆ, ಅಮೂಲ್ಯವಾಗಿರುತ್ತದೆ. ಅಂಥವರನ್ನು ಸ್ಮಾರ್ಟ್ ಜನ ಎಂದೇ ಹೇಳಬಹುದು. ಏಕೆಂದರೆ, ಸ್ನೇಹದ ಮೌಲ್ಯ ಅವರಿಗೆ ಗೊತ್ತಿರುತ್ತದೆ, ಸ್ನೇಹ ಅವರಿಗೆ ಬೇಕು, ಆದರೆ, ಯಾರ್ಯಾರನ್ನೋ ಅವರು ಹತ್ತಿರ ಸೇರಿಸುವುದಿಲ್ಲ. ಇದಕ್ಕೆ ಅವರದ್ದೇ ಆದ ಕೆಲವು ಕಾರಣಗಳಿರುತ್ತವೆ. 

•    ಹೆಚ್ಚು ಜನಕ್ಕಿಂತ ಏಕಾಂತ (Solitude) ಬೇಕು
ಕೆಲವು ಸ್ಮಾರ್ಟ್ ಜನಕ್ಕೆ (Smart People) ಸ್ನೇಹಿತರ ಒಡನಾಟವೂ ಬೇಕು, ಅದಕ್ಕಿಂತ ಹೆಚ್ಚಾಗಿ ಅವರಿಗೆ ಏಕಾಂತವೂ ಬೇಕು. ಒಡನಾಟವೇ ಅತಿ ಮುಖ್ಯ ಎಂದು ಇವರಿಗೆ ಅನಿಸುವುದಿಲ್ಲ. ಬೇರೆಯವರೊಂದಿಗೆ ಒಡನಾಡುವ ಬದಲು ಒಬ್ಬರೇ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಉತ್ತಮ ಎಂದು ನಂಬಿರುತ್ತಾರೆ. ಕ್ರಿಯಾಶೀಲ ಸಾಮರ್ಥ್ಯ (Creative Ability) ವೃದ್ಧಿಸಿಕೊಳ್ಳಲು ಹೆಚ್ಚು ಜನರ ಒಡನಾಟ (Interaction) ಬೇಕಾಗಿಲ್ಲ ಎನ್ನುವುದು ಅವರ ಅನುಭವ.

Personality Tips: ಒರಟಾಗಿ ಹ್ಯಾಂಡ್ ಶೇಕ್ ಮಾಡಿದ್ರೆ ನಿಮ್ಮನ್ಯಾರೂ ಇಷ್ಟ ಪಡೋಲ್ಲ!

Tap to resize

Latest Videos

•    ಜನರ ಅಭಿಪ್ರಾಯ (Opinion) ಅಗತ್ಯವಿಲ್ಲ
ಬಹಳಷ್ಟು ಜನ ಮತ್ತೊಬ್ಬರನ್ನು ಇಂಪ್ರೆಸ್ ಮಾಡುವ ಗುಣ ಹೊಂದಿರುವುದಿಲ್ಲ. ಹೀಗಾಗಿ, ಅವರಿಗೆ ಜನರ ಅಭಿಪ್ರಾಯ ಯಾವ ಕಾರಣಕ್ಕೂ ಮುಖ್ಯವಾಗುವುದಿಲ್ಲ. ಸದೃಢ ಮತ್ತು ಸ್ವತಂತ್ರರಾಗಿರುವ ಹಲವು ಜನ ಹೆಚ್ಚು ಜನರಿಂದ ದೂರವುಳಿಯುವುದು ಇದೇ ಕಾರಣಕ್ಕೆ. ಅವರಿಗೆ ತಮ್ಮ ಅಗತ್ಯ (Need), ಆಸಕ್ತಿ, ಗುರಿಗಳ ಬಗ್ಗೆ ಸ್ಪಷ್ಟತೆ ಇರುತ್ತದೆ.

•    ಹೊಸಬರ ಬಗ್ಗೆ ಎಚ್ಚರಿಕೆ
ಬುದ್ಧಿವಂತ ಜನ ಸಾಮಾನ್ಯವಾಗಿ ಶಾಂತವಾಗಿರುತ್ತಾರೆ. ಆದರೆ, ಹೊಸಬರ ಬಗ್ಗೆ ಭಾರೀ ಎಚ್ಚರಿಕೆ (Careful) ಹೊಂದಿರುತ್ತಾರೆ. ತಮ್ಮ ಸಮಯ (Time) ಮತ್ತು ನಂಬಿಕೆಯನ್ನು (Trust) ಯಾರ ಮೇಲಾದರೂ ಹೊಂದುವುದು ಅವರಿಗೆ ಸರಿ ಕಾಣುವುದಿಲ್ಲ. ಹೀಗಾಗಿಯೇ ಅವರು ಹೊಸಬರನ್ನು ಹತ್ತಿರ ಸೇರಿಸುವುದು ಅತಿ ಕಡಿಮೆ. ತಮ್ಮ ಬಗ್ಗೆ ಸ್ನೇಹಭಾವ ತೋರಿಸುವವರ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ವರ್ತಿಸುತ್ತಾರೆ.

•    ಗುರಿಗಳ (Goal) ಮೇಲಷ್ಟೇ ಗಮನ
ಕೆಲವರು ತಮ್ಮ ಗುರಿ ಸಾಧನೆಯ ಬಗ್ಗೆಯಷ್ಟೇ ಆದ್ಯತೆ ನೀಡುತ್ತಾರೆ. ಅಂಥವರಿಗೂ ಹೊಸ ಸ್ನೇಹಿತರಾಗುವುದು ಕಡಿಮೆ. ಅಲ್ಲದೆ, ಅಂಥವರು ಸದಾಕಾಲ ಯಶಸ್ಸು, ಗುರಿಯ ಬಗ್ಗೆ ಗಮನ ಹರಿಸುತ್ತಾರೆ. ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಬದಲು ತಮಗೇನು ಬೇಕೋ ಅದರ ಕುರಿತು ಹೆಚ್ಚು ಅಧ್ಯಯನ ಮಾಡುವುದು ಇವರಿಗೆ ಅಪ್ಯಾಯವೆನಿಸುತ್ತದೆ.

ಕಾನ್ಫಿಡೆಂಟ್ ಆಗಿರಬೇಕಾ, ಈ ಟಿಪ್ಸ್ ಫಾಲೋ ಮಾಡಿ

•    ಹೆಚ್ಚು ಮಾತನಾಡುವುದಿಲ್ಲ (Less Talk)
ಬಹಳಷ್ಟು ಜನ ತಾವು ಹೆಚ್ಚು ಮಾಡುವುದಿಲ್ಲ. ಆದರೆ, ಉತ್ತಮ ಕೇಳುಗರಾಗಿರುತ್ತಾರೆ. ಇವರಿಗೆ ಹೆಚ್ಚು ಸ್ನೇಹಿತರ ಅಗತ್ಯವಿಲ್ಲ. ಸ್ನೇಹಿತರ ಗುಂಪಿನಲ್ಲಿರುವಾಗ ಹೆಚ್ಚು ಮಾತನಾಡದೆ ಎಲ್ಲರನ್ನೂ ಗಮನಿಸುತ್ತಾರೆ ಹಾಗೂ ಕೇಳಿಸಿಕೊಳ್ಳುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎನ್ನುವ ಇರಾದೆಯೂ ಇವರಿಗೆ ಇರುವುದಿಲ್ಲ. ಸ್ಮಾರ್ಟ್ ಜನ ಹೆಚ್ಚು ಸೈಲೆಂಟ್ (Silent) ಆಗಿರುವುದು ಕಂಡುಬರುತ್ತದೆ. 

•    ಸಣ್ಣ ವಲಯದಲ್ಲೇ (Small Circle) ಹಿತ
ಬಹಳಷ್ಟು ಬುದ್ಧಿವಂತ ಜನ ತಮ್ಮ ಸಣ್ಣದೊಂದು ವಲಯದಲ್ಲಿ ಭಾರೀ ಹಿತ ಕಾಣುತ್ತಾರೆ. ಹೆಚ್ಚು ಸ್ನೇಹಿತರ ವಲಯದಲ್ಲಿ ಕಳೆದುಹೋಗದೆ ಸೀಮಿತ ಜನರೊಂದಿಗೆ ಹೆಚ್ಚು ಸುಖವಾಗಿರುತ್ತಾರೆ. 

•    ಅನಗತ್ಯ ಮಾತುಕತೆ ಬೇಕಾಗಿಲ್ಲ
ಹೆಚ್ಚು ಸ್ನೇಹಿತರಿದ್ದಾಗ ಸಹಜವಾಗಿ ಮಾತುಕತೆಗಳೂ ಹೆಚ್ಚುತ್ತವೆ. ಆದರೆ, ಸ್ಮಾರ್ಟ್ ಜನರಿಗೆ ಈ ರಗಳೆಗಳು ಬೇಕಾಗಿಲ್ಲ. ಅವರು ಅನಗತ್ಯ ಗೊಂದಲ (Dilemma) , ಡ್ರಾಮಾ (Drama), ಒತ್ತಡಗಳಲ್ಲಿ ಸಿಲುಕುವುದನ್ನು ಬಯಸುವುದಿಲ್ಲ. ತಮ್ಮ ಮನಃಶಾಂತಿಯನ್ನು ಉಳಿಸಿಕೊಳ್ಳುವುದು ಅವರಿಗೆ ಮುಖ್ಯ.
 

click me!