Health

ಸ್ವತಃ ನಿರ್ಧಾರ ತೆಗೆದುಕೊಳ್ಳಿ

ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಪ್ರತಿ ಬಾರಿಯೂ ಇನ್ನೊಬ್ಬರನ್ನು ಡಿಪೆಂಡ್ ಆಗಬೇಡಿ. ನಿಮ್ಮ ಮನಸ್ಸಿನ ಗಟ್ಟಿ ನಿಲುವನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳಿ. ಇದು ನಿಮ್ಮನ್ನು ನೀವು ಟ್ರಸ್ಟ್ ಮಾಡಲು ನೆರವಾಗುತ್ತದೆ.

Image credits: Pexel

ಜೀವನದ ಮಂತ್ರ

ಪ್ರತಿದಿನ ನೆನಪಿಸಿಕೊಳ್ಳಲು ಒಂದು ನಿರ್ಧಿಷ್ಟ ಮಂತ್ರವಿರಲಿ. ಐ ಕಾನ್ ಡು ಇಟ್‌, ಐ ಹೇವ್‌ ಡನ್‌ ಮೈ ಬೆಸ್ಟ್ ಟುಡೇ ಹೀಗೆ ನಿಮಗೆ ಸ್ಪೂರ್ತಿ ತುಂಬುವ ವಾಕ್ಯವನ್ನು ಮನಸ್ಸಿನಲ್ಲೇ ನೆನಪಿಸಿಕೊಳ್ಳುತ್ತಿರಿ. ಇದು ಮನಸ್ಸಿನಲ್ಲಿ ಧನಾತ್ಮಕತೆಯನ್ನು ಹುಟ್ಟು ಹಾಕುತ್ತದೆ.

Image credits: Pexel

ಫೋಕಸ್ಡ್ ಆಗಿರಿ

ಪಾಸ್ಟ್‌ ಅಥವಾ ಫ್ಯೂಚರ್ ಬಗ್ಗೆ ವಿಪರೀತ ತಲೆಕೆಡಿಸಿಕೊಳ್ಳಬೇಡಿ. ಇವತ್ತಿನ ದಿನಗಳಲ್ಲಿ ಬದುಕಿ. ಈ ಕ್ಷಣವನ್ನು ಹೇಗೆ ದಿ ಬೆಸ್ಟ್ ಆಗಿ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

Image credits: Pexel

ಮಾತಿನ ಬಗ್ಗೆ ಗಮನವಿರಲಿ

ಯಾವಾಗಲೂ ನಿಮ್ಮ ಮಾತಿನ ಬಗ್ಗೆ ನಿಮಗೆ ಖಚಿತತೆಯಿರಲಿ. ಎಸ್‌ ಹೇಳಬೇಕಿರುವಲ್ಲಿ ನೋ, ನೋ ಎನ್ನುವಲ್ಲಿ ಎಸ್ ಎನ್ನುವ ಮೂಲಕ ಹಿಂಜರಿಯಬೇಡಿ. ಇಷ್ಟವಿಲ್ಲದ್ದಕ್ಕೆ ಯಾವುದೇ ಹಿಂಜರಿಕೆಯಿಲ್ಲದೆ ನೋ ಹೇಳಲು ಕಲಿಯಿರಿ. 

Image credits: Pexel

ಆಪ್ತರ ಆಯ್ಕೆ ಸರಿಯಾಗಿರಲಿ

ನಿಮ್ಮ ಆಪ್ತರು ನಿಮ್ಮ ಉತ್ತಮ ಕೆಲಸವನ್ನು ಪ್ರೋತ್ಸಾಹಿಸುವವರಾಗಿರಲಿ. ಯಾವಾಗಲೂ ನೀವು ಮಾಡುವ ಕೆಲಸವನ್ನು ಪ್ರಶ್ನಿಸುವ, ಅನುಮಾನಿಸುವ ಮಂದಿಯಿಂದ ನಿಮಗೆ ಕೇವಲ ನೆಗೆಟಿವ್ ವೈಬ್ಸ್ ಮಾತ್ರ ದೊರಕುತ್ತದೆ.

Image credits: Pexel

ಮನಸ್ಸಿಗೆ ಧನ್ಯವಾದ ತಿಳಿಸಿ

ಕಷ್ಟಕರವಾದ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಿದಾಗ ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಿ. ನಿಮ್ಮಲ್ಲಿರುವ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿ. ಇದು ನಿಮ್ಮಲ್ಲಿನ ಪಾಸಿಟಿವಿಟಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. 

Image credits: Pexel
Find Next One