
ಪತಿ-ಪತ್ನಿ (Husband-Wife) ಮಧ್ಯೆ ಇನ್ನೊಬ್ಬ ವ್ಯಕ್ತಿ ಆಗಮನವಾದಾಗ ಸಮಸ್ಯೆ (Problem) ಗಳು ಶುರುವಾಗುತ್ತವೆ. ಆರಂಭದಲ್ಲಿ ಹೊಸ ಸಂಬಂಧ (Relationship) ಸುಖ ನೀಡುತ್ತದೆ. ಹಳೆಯ ಸಂಗಾತಿಗಿಂತ ಹೊಸ ಸಂಗಾತಿ (Partner) ಯಲ್ಲಿ ಪ್ರೀತಿ,ಹೊಸತನ,ಗೌರವ,ಆರೈಕೆ ಎಲ್ಲವೂ ಕಾಣಿಸುತ್ತದೆ. ಆದರೆ ದಿನ ಕಳೆದಂತೆ ಒಂದೊಂದೇ ತೆರೆದುಕೊಳ್ಳಲು ಶುರುವಾಗುತ್ತದೆ. ಕೆಲವೊಮ್ಮೆ ಇಬ್ಬರೂ ಬೇಕು ಎಂಬ ಭಾವನೆ ಮೂಡುವುದಿದೆ. ಹಳೆ ಸಂಗಾತಿ ಬಿಡಲಾಗದೆ ಹೊಸ ಸಂಗಾತಿ ಮರೆಯಲಾಗದೆ ಪರಿತಪಿಸುವವರಿದ್ದಾರೆ. ಇಂಥ ಸಂದರ್ಭದಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಮೂಡುತ್ತದೆ. ಇದು ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಎರಡೂ ಸಂಬಂಧ ಹಾಳಾಗುವ ಸಾಧ್ಯತೆಯಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಸಮಸ್ಯೆಯನ್ನು ತೋಡಿಕೊಂಡಿದ್ದಾನೆ. ಮದುವೆಯಾದವಳ ಜೊತೆ ಪ್ರೀತಿಸುವವಳೂ ಬೇಕು. ಇಬ್ಬರ ಜೊತೆ ಒಟ್ಟಿಗೆ ಜೀವನ ನಡೆಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಎಲ್ಲರ ಮುಂದಿಟ್ಟಿದ್ದಾನೆ.
ಆತನ ಕಥೆಯೇನು ? : ಆತನಿಗೆ 52 ವರ್ಷ. ಮದುವೆಯಾಗಿ 20 ವರ್ಷವಾಗಿದೆ. ಕಾಲೇಜಿಗೆ ಹೋಗುವ ಮಕ್ಕಳಿವೆ. ಪತಿ-ಪತ್ನಿ ಮಧ್ಯೆ ಸಂಬಂಧ ಸುಮಧುರವಾಗಿದೆ. ಪತ್ನಿಯನ್ನು ಕಾಲೇಜಿನ ದಿನಗಳಲ್ಲಿಯೇ ಬಲ್ಲ ವ್ಯಕ್ತಿ, ಮದುವೆಗೆ ಮುನ್ನ 7 ವರ್ಷಗಳ ಕಾಲ ಪ್ರೇಮ ಸಂಬಂಧದಲ್ಲಿದ್ದನಂತೆ. ಮದುವೆಯಾದ್ಮೇಲೆ ಇಬ್ಬರ ಮಧ್ಯೆಯಿರುವ ಪ್ರೀತಿ ಕಡಿಮೆಯಾಗಿಲ್ಲವಂತೆ. ಆದ್ರೆ ಕಚೇರಿಗೆ ಬಂದ ಮಹಿಳೆಯೊಬ್ಬಳ ಜೊತೆ ಶುರುವಾದ ಪ್ರೀತಿ ಈಗ ಸಮಸ್ಯೆ ತಂದೊಡ್ಡಿದೆಯಂತೆ.
ಕಚೇರಿಯಲ್ಲಿ ಶುರುವಾಯ್ತು ಪ್ರೀತಿ : ಸುಮಾರು 20 ಸಿಬ್ಬಂದಿಗಳನ್ನು ಲೀಡ್ ಮಾಡುವ ಈ ವ್ಯಕ್ತಿ ಗ್ರೂಪ್ ಗೆ 35 ವರ್ಷದ ಸುಂದರ ಮಹಿಳೆ ಹೊಸದಾಗಿ ಸೇರಿದ್ದಳಂತೆ. ಕಚೇರಿಯಲ್ಲಿ ಅತ್ಯುತ್ತಮ ಉದ್ಯೋಗಿ ಎಂಬ ಬಿರುದು ಪಡೆದಿದ್ದ ಆಕೆ ಸ್ವಭಾವ ಈ ವ್ಯಕ್ತಿಯನ್ನು ಸೆಳೆದಿತ್ತಂತೆ. ಆರಂಭದಲ್ಲಿ ಸ್ನೇಹಿತರಾಗಿದ್ದ ಇಬ್ಬರು ದಿನ ಕಳೆದಂತೆ ಹತ್ತಿರವಾದ್ರಂತೆ. ಮೀಟಿಂಗ್ ಒಂದಕ್ಕಾಗಿ ಲಂಡನ್ ಗೆ ಹೋಗಿದ್ದ ವೇಳೆ ವ್ಯಕ್ತಿ ಪ್ರೇಮ ನಿವೇದನೆ ಮಾಡಿದ್ದನಂತೆ. ಅದನ್ನು ಖುಷಿಯಾಗಿ ಸ್ವೀಕರಿಸಿದ್ದ ಮಹಿಳೆ ನಿನ್ನ ಜೊತೆಗಿದ್ದರೆ ನನಗೆ ಹೆಚ್ಚಿನ ಸಂತೋಷ ಸಿಗುತ್ತದೆ ಎಂದಿದ್ದಳಂತೆ. ಆ ನಂತ್ರ ಇಬ್ಬರ ಮಧ್ಯೆ ಶಾರೀರಿಕ ಸಂಬಂಧ ಬೆಳೆದಿತ್ತಂತೆ. ಅದಾನ ನಂತ್ರ ವ್ಯಕ್ತಿ, ಸಹೋದ್ಯೋಗಿ ಮಹಿಳೆ ಜೊತೆ ಅನೇಕ ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ದಾನಂತೆ.
Self Marriage Trend: ನನ್ನನ್ನೇ ನಾನು ಮದುವೆಯಾದೆ ! ಸೆಲ್ಫ್ ಮ್ಯಾರೇಜ್ ಟ್ರೆಂಡ್ ಬಗ್ಗೆ ಗೊತ್ತಾ ?
ಲಾಕ್ ಡೌನ್ ನಲ್ಲಿ ಬದಲಾಯ್ತು ಮನಸ್ಥಿತಿ : ಕೊರೊನಾ ಲಾಕ್ ಡೌನ್ ನಲ್ಲಿ ಆತನ ಮನಸ್ಥಿತಿ ಬದಲಾಯ್ತಂತೆ. ಸದಾ ಕೆಲಸದಲ್ಲಿರುತ್ತಿದ್ದ ವ್ಯಕ್ತಿಗೆ ಮನೆಯಲ್ಲಿ ಸಮಯ ಕಳೆಯುವ ಅವಕಾಶ ಸಿಕ್ಕಿತ್ತಂತೆ. ಪತ್ನಿ ಜೊತೆ ಸಮಯ ಕಳೆದ ವ್ಯಕ್ತಿ ಆಕೆಯನ್ನು ಮತ್ತಷ್ಟು ಅರ್ಥ ಮಾಡಿಕೊಂಡಿದ್ದನಂತೆ. ಪತ್ನಿಯ ಪ್ರೀತಿ, ಜವಾಬ್ದಾರಿ ಎಲ್ಲವೂ ನನ್ನನ್ನು ಮತ್ತಷ್ಟು ಸೆಳೆಯಿತು ಎನ್ನುತ್ತಾನೆ ವ್ಯಕ್ತಿ.
ಇಬ್ಬರಲ್ಲಿ ಯಾರು ? : ಪತ್ನಿಯನ್ನು ಆಳವಾಗಿ ಪ್ರೀತಿಸುತ್ತಿರುವ ವ್ಯಕ್ತಿಗೆ ಆಕೆಯನ್ನು ಬಿಡಲು ಮನಸ್ಸಿಲ್ಲವಂತೆ. ಹಾಗೆ ಸಹೋದ್ಯೋಗಿಯನ್ನು ಕೂಡ ಬಿಡಲು ಮನಸ್ಸಿಲ್ಲ. ಒಂದೇ ಸಮಯದಲ್ಲಿ ನಾನು ಇಬ್ಬರು ಮಹಿಳೆಯರನ್ನು ಪ್ರೀತಿಸುತ್ತಿದ್ದೇನೆ. ನನಗೆ ಏನು ಮಾಡ್ಬೇಕೆಂಬುದು ಗೊತ್ತಾಗ್ತಿಲ್ಲ. ಇದ್ರಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದೆ. ನಿದ್ರೆ ಸರಿಯಾಗಿ ಬರ್ತಿಲ್ಲ. ಸರಿಯಾಗಿ ಕೆಲಸ ಮಾಡಲು ಆಗ್ತಿಲ್ಲ. ನನ್ನ ಸಮಸ್ಯೆಗೆ ಪರಿಹಾರ ಹೇಳಿ ಎಂದಿದ್ದಾನೆ ವ್ಯಕ್ತಿ.
ಪತಿ ಇನ್ನಷ್ಟು ಹತ್ತಿರ ಬರಬೇಕೆಂದ್ರೆ ಇಲ್ಲಿದೆ ಮ್ಯಾಜಿಕ್ ಮಂತ್ರ
ತಜ್ಞರ ಸಲಹೆ : ವ್ಯಕ್ತಿಯ ಈ ಸಮಸ್ಯೆಗೆ ತಜ್ಞರು ಉತ್ತರ ಹೇಳುವ ಪ್ರಯತ್ನ ನಡೆಸಿದ್ದಾರೆ. ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಅದ್ರಿಂದಾಗು ತೊಂದರೆಗಳ ಬಗ್ಗೆ ಆಲೋಚನೆ ಮಾಡಿ ಎಂದು ತಜ್ಞರು ಹೇಳಿದ್ದಾರೆ. ಕುಟುಂಬ, ಮಕ್ಕಳು, ಸಮಾಜ, ಕಚೇರಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಿ. ಒಂದು ವೇಳೆ ಒಳ್ಳೆಯ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲವೆಂದಾದ್ರೆ ಮಾನಸಿಕ ತಜ್ಞರನ್ನು ಭೇಟಿಯಾಗಿ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.