ಹಸುವಿಗೆ ಕೈ ಮುಗಿದ ಮಹಿಳೆ : ಅದ ನೋಡಿ ಮಕ್ಕಳೇನು ಮಾಡಿದ್ರು : ವೈರಲ್ ಆಯ್ತು ವೀಡಿಯೋ

By Anusha Kb  |  First Published Jul 17, 2023, 2:31 PM IST

ಮಕ್ಕಳ ಮುಂದೆ ಒಳ್ಳೆಯದ್ದನ್ನೇ ಮಾಡಿ ಎಂದು ಬಹುತೇಕ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಏಕೆಂದರೆ ಮಕ್ಕಳು ನಾವು ಏನು ಮಾಡುತ್ತೇವೆಯೋ ಅದನ್ನು ಮಾಡಲು ನೋಡುತ್ತಾರೆಯೇ ಹೊರತು ನಾವು ಏನು ಹೇಳತ್ತೇವೆ ಎಂಬುದನ್ನು ಅಲ್ಲ


ಮಕ್ಕಳ ಮುಂದೆ ಒಳ್ಳೆಯದ್ದನ್ನೇ ಮಾಡಿ ಎಂದು ಬಹುತೇಕ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಏಕೆಂದರೆ ಮಕ್ಕಳು ನಾವು ಏನು ಮಾಡುತ್ತೇವೆಯೋ ಅದನ್ನು ಮಾಡಲು ನೋಡುತ್ತಾರೆಯೇ ಹೊರತು ನಾವು ಏನು ಹೇಳುತ್ತೇವೆ ಎಂಬುದನ್ನು ಅಲ್ಲ, ತಮ್ಮ ಪರಿಸರ ಸುತ್ತ ನಡೆಯುವುದನ್ನು ಸೂಕ್ಷ್ಮವಾಗಿ ಗಮನಿಸುವ ಮಕ್ಕಳು ಅದನ್ನು ನೋಡಿ ಕಲಿಯಲು ಆರಂಭಿಸುತ್ತಾರೆ. ಪುಟ್ಟ ಮಕ್ಕಳು ದೊಡ್ಡವರನ್ನು ನೋಡುತ್ತಾ ಅನುಕರಣೆ ಮಾಡಲು ಶುರು ಮಾಡುತ್ತಾರೆ. ಇದೇ ಕಾರಣಕ್ಕೆ ಮಕ್ಕಳ ಮುಂದೆ ಒಳ್ಳೆಯದ್ದನ್ನೇ ಮಾಡಿ ಎಂದು ಬಹುತೇಕರು ಹೇಳುತ್ತಾರೆ. ಈ ಮಾತಿಗೆ ಸಾಕ್ಷಿ ಎಂಬಂತೆ ಒಂದು ಉತ್ತಮ ವೀಡಿಯೋವೊಂದು ವೈರಲ್ ಆಗಿದೆ.

ವೀಡಿಯೋದಲ್ಲೇನಿದೆ?

Tap to resize

Latest Videos

ವೀಡಿಯೋದಲ್ಲಿ ರಸ್ತೆ ಬದಿ ಹಸುವೊಂದು ಮೆಲುಕು ಹಾಕುತ್ತಾ ಮಲಗಿದೆ. ಇದರ ಹತ್ತಿರವೇ ಪುಟ್ಟ ಮಕ್ಕಳಿಬ್ಬರು ಆಟವಾಡುತ್ತಿರುತ್ತಾರೆ. ಈ ವೇಳೆ ಅದೇ ಹಾದಿಯಲ್ಲಿ ಸಾಗಿಬಂದ ಮಹಿಳೆಯೊಬ್ಬರು ಹಸುವನ್ನು ನೋಡಿ ತಮ್ಮ ಕಾಲಿನಲ್ಲಿದ್ದ ಪಾದರಕ್ಷೆಯನ್ನು ಬಿಚ್ಚಿ ಹಸುವಿಗೊಂದು ಕೈ ಮುಗಿದು ಮುಂದೆ ಸಾಗುತ್ತಾರೆ ಇದನ್ನು ನೋಡಿದ ಮಕ್ಕಳು ಕೂಡ ಹಸು ಹಾನಿ ಮಾಡುವುದೋ ಏನೋ ಎಂಬ ಭಯದಿಂದ ಅಳುಕುತ್ತಲೇ ಅವುಗಳ ಹತ್ತಿರ ಹತ್ತಿರ ಹೋಗಿ ಮೆಲ್ಲನೆ ಅದರ ತಲೆ ಮುಟ್ಟಿ ನಮಸ್ಕರಿಸುತ್ತಾರೆ. 

ಗರ್ಭ ಸಂಸ್ಕಾರ: ಗರ್ಭಧಾರಣೆಯ ಪ್ರಾಚೀನ ವೈದಿಕ ವಿಜ್ಞಾನದ ಬಗ್ಗೆ ಗೊತ್ತು ಮಾಡ್ಕೊಳ್ಳಿ!

ಮನ್ಸಿ ಗುಪ್ತಾ ಎಂಬುವವರು ತಮ್ಮ sahaara_by_mansi ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ.  ಮಕ್ಕಳು ನಾವು ಏನು ತೋರಿಸುತ್ತೇವೆಯೋ ಅದನ್ನು ಮಾಡುತ್ತಾರೆ ನಾವು ಏನು ಹೇಳುತ್ತೇವೆ ಎಂಬುದನ್ನಲ್ಲ,  ಹಾಗೂ ಪ್ರತಿಯೊಂದರಲ್ಲಿಯೂ ಪ್ರತಿಯೊಬ್ಬರಲ್ಲಿಯೂ ದೇವರನ್ನು ಕಾಣುವಂತಹ ಪ್ರಪಂಚವನ್ನು ಸೃಷ್ಟಿ ಮಾಡುವುದು  ನಮ್ಮ ಕರ್ತವ್ಯವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. 

ಮನೆಯಲ್ಲಿ ಪೋಷಕರು ಏನು ಮಾಡುತ್ತಾರೋ ಅದನ್ನು ಮಕ್ಕಳು ಮಾಡುತ್ತಾರೆ. ಗಂಡ ಹೆಂಡತಿ ಜಗಳವಾಡಿದರೆ ಮಕ್ಕಳು ಕೂಡ ಅದನ್ನೇ ಮಾಡುತ್ತಾರೆ. ಹೀಗಾಗಿ ಸಂಸ್ಕಾರದ ಪಾಠ ಮಕ್ಕಳಿಗೆ ಬಾಲ್ಯದಲ್ಲಿ ಮನೆಯಲ್ಲೇ ಆಗಬೇಕಿದೆ. ಮಕ್ಕಳು ತಮ್ಮ ಮಾತನ್ನು ಕೇಳುವುದಿಲ್ಲ ಯಾವಾಗಲೂ ಮೊಬೈಲ್ ಹಿಡಿದುಕೊಂಡು ಮಕ್ಕಳು ಮೊಬೈಲ್‌ಗೆ ದಾಸರಾಗಿದ್ದಾರೆ ಎಂದು ಪೋಷಕರು ಗೋಳಾಡುವುದನ್ನು ನೀವು ನೋಡಿರಬಹುದು. ಆದರೆ ಹೀಗೆ ಗೋಳಾಡುವ ಮೊದಲು ಪೋಷಕರು ಕೂಡ ತಾವೇನು ಇಡೀ ದಿನ ಮಾಡುತ್ತಿದ್ದೇವೆ ಎಂಬುದನ್ನು ಕೂಡ ಯೋಚಿಸಬೇಕಿದೆ. ಏಕೆಂದರೆ ಇಂದು ಹಾಲುಗಲ್ಲದ ನವಜಾತ ಶಿಶು ಕೂಡ ಮೊಬೈಲ್‌ ಕೊಡುವಂತೆ ಅಳುವುದನ್ನು ನೋಡಬಹುದು. ಒಟ್ಟಿನಲ್ಲಿ ಇದು ಮಕ್ಕಳ ಮುಂದೆ ನಾವು ಒಳ್ಳೆಯದ್ದನೇ ಏಕೆ ಮಾಡಬೇಕು ಎಂದು ಹೇಳುವುದಕ್ಕೆ ಒಂದು ಉತ್ತಮ ಉದಾಹರಣೆ ಆಗಿದೆ. 

ಮಕ್ಕಳಿಗೆ ಬ್ರ್ಯಾಂಡೆಡ್​ ವಸ್ತುಗಳನ್ನು ಕೊಡಿಸೋ ಮುನ್ನ ಇದನ್ನೊಮ್ಮೆ ಓದಿ! 

 

click me!