ಬಾಗೇಶ್ವರ ಧಾಮದಲ್ಲಿ ಸಪ್ತಪದಿ ತುಳಿಯುವ ಇಚ್ಛೆ ವ್ಯಕ್ತಪಡಿಸಿದ ಪಬ್‌ಜಿ ಲವರ್ಸ್!

By Santosh Naik  |  First Published Jul 17, 2023, 12:56 PM IST

ಬಾಬಾ ಬಾಗೇಶ್ವರ್ ಅಂದರೆ ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರ ಆಶೀರ್ವಾದ ಪಡೆದು ಮದುವೆಯಾಗುವುದಾಗಿ ಪಾಕಿಸ್ತಾನಿ ಸೀಮಾ ಹೈದರ್ ಮತ್ತು ಆಕೆಯ ಪ್ರೇಮಿ ಸಚಿನ್ ಹೇಳಿದ್ದಾರೆ. ಈ ಹಿಂದೆ ನೇಪಾಳದ ದೇವಸ್ಥಾನವೊಂದರಲ್ಲಿ ಸಚಿನ್ ನನ್ನು ಮದುವೆಯಾಗಿರುವುದಾಗಿ ಸೀಮಾ ಹೇಳಿದ್ದರು. ಇದೀಗ ಭಾರತದಲ್ಲಿ ಕಾನೂನು ರೀತಿಯಲ್ಲಿ ರಿಜಿಸ್ಟರ್‌ ಮದುವೆ ಮಾಡಿಕೊಳ್ಳುವುದಾಗಿಯೂ ಇವರು ತಿಳಿಸಿದ್ದಾರೆ.
 


ನವದೆಹಲಿ (ಜು.17): ಪಬ್‌ಜಿ ಮೂಲಕ ಸ್ನೇಹವಾಗಿ ಬಳಿಕ ಈ ಸ್ನೇಹ ಪ್ರೀತಿ ತಿರುಗಿ ಪಾಕಿಸ್ತಾನದ ಮಹಿಳೆಯೊಬ್ಬಳು ನೇಪಾಳ ಮೂಲಕ ಭಾರತಕ್ಕೆ ಪ್ರವೇಶಿಸಿದ್ದು ಮಾತ್ರವಲ್ಲದೆ, ಇಲ್ಲಿಯೇ ಅಕ್ರಮವಾಗಿ ವಾಸವಾಗಿರುವು ಸುದ್ದಿ ಗೊತ್ತೇ ಇದೆ. ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಮೂಲದ ಸೀಮಾ ಹೈದರ್‌ ಹಾಗೂ ಸಚಿನ್‌ ಲವ್‌ಸ್ಟೋರಿ ಈಗ ಎಲ್ಲಾ ಕಡೆ ವೈರಲ್‌ ಆಗಿದೆ. ಪ್ರಸ್ತುತ ಈ ಜೋಡಿ ನೋಯ್ಡಾದಲ್ಲಿ ವಾಸವಾಗಿದೆ. ಈ ಜೋಡಿಯನ್ನು ನೋಡಲು ಸಾಕಷ್ಟು ಜನರೂ ಕೂಡ ಇವರ ಮನೆಯತ್ತ ಆಗಮಿಸುತ್ತಿದ್ದಾರೆ. ಪಾಕಿಸ್ತಾನಿ ಮೂಲದ ಸೊಸೆಯನ್ನು ನೋಡಲು ಅವರೆಲ್ಲರೂ ನೋಯ್ಡಾಗೆ ಆಗಮಿಸುತ್ತಿದ್ದಾರೆ. ಇನ್ನು ಮಾಧ್ಯಮಗಳೂ ಕೂಡ ಇದರಿಂದ ಹಿಂದೆ ಬಿದ್ದಿಲ್ಲ. ಈಗಾಗಲೇ ಕೆಲವೊಂದು ಮಾಧ್ಯಮಗಳು ಇವರ ಸಂದರ್ಶನವನ್ನೂ ಮಾಡಿದ್ದು, ಇತ್ತೀಚೆಗೆ ಮಾಧ್ಯಮದ ಲೈವ್‌ ಟೆಲಿಕಾಸ್ಟ್‌ನ ಕ್ಯಾಮೆರಾ ಎದುರೇ ಹೆಚ್ಚೂ ಕಡಿಮೆ ಇವರು ಮುತ್ತಿಡುವ ಹಂತಕ್ಕೆ ಹೋಗಿದ್ದರು. ಈ ನಡುವೆ ಸೀಮಾ ಹಾಗೂ ಸಚಿನ್‌ ತಮ್ಮ ಆಸೆಯೊಂದನ್ನು ತೋಡಿಕೊಂಡಿದ್ದು, ಬಾಬಾ ಬಾಗೇಶ್ವರ ಧಾಮಕ್ಕೆ ಭೇಟಿ ನೀಡಿ ಬಾಬಾ ಧೀರೇಂದ್ರ ಶಾಸ್ತ್ರಿ ಅವರ ಎದುರೇ ಮತ್ತೊಮ್ಮೆ ಸಪ್ತಪದಿ ತುಳಿಯಬೇಕು ಎನ್ನುವ ಆಸೆ ವ್ಯಕ್ತಪಡಿಸಿದ್ದಾರೆ. ಆದರೆ, ಇದಕ್ಕಾಗಿ ಅವರು ಪೊಲೀಸರ ಅನುಮತಿ ಪಡೆಯಬೇಕಿದೆ.

ಅಕ್ರಮವಾಗಿ ದೇಶಕ್ಕೆ ಪ್ರವೇಶ ಪಡೆದ ಹಿನ್ನಲೆಯಲ್ಲಿ ಹಾಗೂ ಅದಕ್ಕೆ ಸಹಾಯ ಮಾಡಿದ ಕಾರಣಕ್ಕೆ ಸಚಿನ್‌ ಹಾಗೂ ಸೀಮಾರನ್ನು ಉತ್ತರ ಪ್ರದೇಶ ಪೊಲೀಸರು ಜುಲೈ 4 ರಂದು ಬಂಧಿಸಿದ್ದರು. ಪ್ರಸ್ತುತ ಇಬ್ಬರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.

ಜೇವರ್ ಕೋರ್ಟ್ ಇಬ್ಬರಿಗೂ ಜಾಮೀನು ಮಂಜೂರು ಮಾಡಿದ್ದು, ಮನೆಯಿಂದ ಹೊರ ಬರುವಂತಿಲ್ಲ ಎಂದು ಷರತ್ತು ವಿಧಿಸಿದೆ. ಈ ವಿಷಯದಲ್ಲಿ ಇನ್ನೂ ತನಿಖೆ ನಡೆಯುತ್ತಿದೆ. ಪ್ರಸ್ತುತ, ಯುಪಿ ಎಟಿಸಿ ಇದರ ತನಿಖೆಯಲ್ಲಿದೆ. ಸೀಮಾ ಹೈದರ್ ಹಿನ್ನೆಲೆ ಮತ್ತು ಆಕೆ ಹೇಳಿದ ಕಥೆಯನ್ನು ಪರಿಶೀಲಿಸುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದರು. ಈಗ ಸೀಮಾ ಅವರ ಮೊಬೈಲ್ ಫೋನ್‌ನಲ್ಲಿ ಅವರ ಸಾಮಾಜಿಕ ಮಾಧ್ಯಮದ ಚಟುವಟಿಕೆಯನ್ನು ಸಹ ಪರಿಶೀಲಿಸಲಾಗುತ್ತಿದೆ.

ಯುಪಿ ಎಟಿಎಸ್‌ನಿಂದ ತನಿಖೆ: ಯುಪಿ ಎಟಿಎಸ್ ಪಾಕಿಸ್ತಾನದಿಂದ ದುಬೈಗೆ ಮತ್ತು ನಂತರ ನೇಪಾಳದ ಮೂಲಕ ಭಾರತಕ್ಕೆ ಬರುವ ಸೀಮಾ ಹೈದರ್ ಸಂಪೂರ್ಣ ಮಾರ್ಗ ಮತ್ತು ಜಾಲವನ್ನು ತನಿಖೆ ಮಾಡುತ್ತಿದೆ.  ಈ ಬೆಳವಣಿಗೆ ಸಮಯದಲ್ಲಿ ಸೀಮಾಗೆ ಸಹಾಯ ಮಾಡಿ ವ್ಯಕ್ತಿಗಳು ಅವರ ಮಾಹಿತಿ, ಅವರು ಬಳಸಿದ ಮೊಬೈಲ್‌ ಸಂಖ್ಯೆಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಮತ್ತೊಂದೆಡೆ, ಕೇಂದ್ರ ಗುಪ್ತಚರ ಸಂಸ್ಥೆಗಳು ಸೀಮಾ ಹೈದರ್ ಅವರ ಹಿನ್ನೆಲೆಯನ್ನು ಪಾಕಿಸ್ತಾನದಲ್ಲಿ ಪರಿಶೀಲಿಸುತ್ತಿವೆ. ಸೀಮಾ ಹೈದರ್ ಸಂಪೂರ್ಣ ವಿವರ ಹಾಗೂ ಪಾಕಿಸ್ತಾನದಲ್ಲಿರುವ ಆಕೆಯ ಸಂಬಂಧಿಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸೀಮಾ ಹೈದರ್ ಜೊತೆಗೆ ಯುಪಿ ಎಟಿಎಸ್ ಗ್ರೇಟರ್ ನೋಯ್ಡಾದಲ್ಲಿ ವಾಸಿಸುವ ಸಚಿನ್ ಹಿನ್ನೆಲೆಯನ್ನು ಹುಡುಕುತ್ತಿದೆ.

ಪರ್ಫೆಕ್ಟ್‌ ಫಿಗರ್‌ಗಾಗಿ ಫೋಟೋ ಎಡಿಟ್‌ ಮಾಡಿದ ಜಾನ್ವಿ ಕಪೂರ್‌ ಟ್ರೋಲ್‌!

ಅದೇ ಸಮಯದಲ್ಲಿ, ಸೀಮಾ ಹೈದರ್ ಮಾರ್ಚ್‌ನಲ್ಲಿ ನೇಪಾಳದಲ್ಲಿ ಸಚಿನ್ ಅವರನ್ನು ಭೇಟಿಯಾದಾಗ, ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದೆವು ಎಂದು ಹೇಳಿಕೊಂಡಿದ್ದಾರೆ. ಅವರ ಬಳಿ ಅದರ ಪುರಾವೆಯೂ ಇದೆ. ಸಚಿನ್ ಅವರನ್ನು ಭಾರತದಲ್ಲಿ ಕಾನೂನುಬದ್ಧವಾಗಿ ಮದುವೆಯಾಗುವುದಾಗಿಯೂ ಸೀಮಾ ಈ ವೇಳೆ ಹೇಳಿದ್ದರು. ಇದೀಗ ಬಾಬಾ ಬಾಗೇಶ್ವರರ ಆಶೀರ್ವಾದ ಪಡೆದು ಅವರ ಮುಂದೆ ಮದುವೆಯಾಗುವುದಾಗಿಯೂ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಬಿಹಾರ ಬಿಡಿಓ ಬೀಳ್ಕೊಡುಗೆ ಪಾರ್ಟಿಯಲ್ಲಿ ನಂಗಾನಾಚ್‌, ತನಿಖೆಗೆ ಆದೇಶಿಸಿದ ಜಿಲ್ಲಾಧಿಕಾರಿ!

ಗಡಿ ಭದ್ರತೆ ಹೆಚ್ಚಳ:
ಸೀಮಾಗೆ ಭಾರತದಲ್ಲಿ ಇರಲು ಅನುಮತಿ ಸಿಗುತ್ತದೆಯೇ ಅಥವಾ ಆಕೆಯನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗುತ್ತದೆಯೇ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಗಡಿಯಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ. ಈಗ ಸೀಮಾ ಭಾರತದಲ್ಲಿ ಉಳಿಯಲು ವೀಸಾ ಪಡೆಯಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಭಾರತೀಯ ಪ್ರಜೆಯಾಗಿರುವ ಸಚಿನ್‌, ಸೀಮಾ ತನ್ನ ಪತ್ನಿ ಎಂದು ಅರ್ಜಿ ಸಲ್ಲಿಸಿದರೆ ದೀರ್ಘಾವಧಿ ವೀಸಾ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.

click me!