ಇಂದು ಜುಲೈ 16, ವರ್ಲ್ ಸ್ನೇಕ್ ಡೇ ಅಂದ್ರೆ ವಿಶ್ವ ಹಾವುಗಳ ದಿನ. ಹಾವುಗಳು ಎಷ್ಟು ವಿಷಕಾರಿಯಾಗಿರುತ್ತವೆ ಎಲ್ಲರಿಗೂ ಗೊತ್ತು. ಇದು ಮನುಷ್ಯನ ಜೀವವನ್ನೇ ತೆಗೆಯಬಲ್ಲದು. ವರ್ಲ್ಡ್ ಸ್ನೇಕ್ ಡೇ ಅಂದಾಗ ಇಂಥಹದ್ದೇ ಘಟನೆಯೊಂದು ನೆನಪಾಯಿತು. ಕೇರಳದಲ್ಲೊಬ್ಬ ವ್ಯಕ್ತಿ ವರ್ಷಗಳ ಹಿಂದೆ ವಿಷಸರ್ಪದಿಂದ ಕಚ್ಚಿಸಿ ಮುದ್ದಿನ ಮಡದಿಯನ್ನೇ ಸಾಯಿಸಿದ್ದ.
ಇಂದು ಜುಲೈ 16, ವರ್ಲ್ ಸ್ನೇಕ್ ಡೇ ಅಂದ್ರೆ ವಿಶ್ವ ಹಾವುಗಳ ದಿನ. ಹಾವುಗಳು ಎಷ್ಟು ವಿಷಕಾರಿಯಾಗಿರುತ್ತವೆ ಎಲ್ಲರಿಗೂ ಗೊತ್ತು. ಇದು ಮನುಷ್ಯನ ಜೀವವನ್ನೇ ತೆಗೆಯಬಲ್ಲದು. ಹಾವು ಕಚ್ಚಿಸಿಕೊಂಡು ಜೀವ ಕಳೆದುಕೊಂಡ ಅದೆಷ್ಟೋ ಮಂದಿಯಿದ್ದಾರೆ. ವರ್ಲ್ಡ್ ಸ್ನೇಕ್ ಡೇ ಅಂದಾಗ ಇಂಥಹದ್ದೇ ಘಟನೆಯೊಂದು ನೆನಪಾಯಿತು. ಕೇರಳದಲ್ಲೊಬ್ಬ ವ್ಯಕ್ತಿ ವರ್ಷಗಳ ಹಿಂದೆ ವಿಷಸರ್ಪದಿಂದ ಕಚ್ಚಿಸಿ ಮುದ್ದಿನ ಮಡದಿಯನ್ನೇ ಸಾಯಿಸಿದ್ದ. ಒಂದು ಸಾರಿ ಹಾವು ಕಚ್ಚಿಸಿ ಆಕೆ ಬದುಕುಳಿದಾಗ ಆಸ್ಪತ್ರೆಯಲ್ಲಿ ಆಕೆಯ ಆರೈಕೆ ಮಾಡಿದಂತೆ ನಟಿಸಿದ್ದ. ಮತ್ತೆ ಹಾವನ್ನು ತರಿಸಿ ಆಕೆಯನ್ನು ಸಾಯಿಸಿದ್ದ ಅಳುತ್ತಾ ನಿಂತಿದ್ದ ಗಂಡನೇ ಕೊಲೆ ಮಾಡಿದ್ದಾನೆಂಬ ರಹಸ್ಯ ವಾರಗಳ ತನಿಖೆಯ ನಂತರವಷ್ಟೇ ಬಯಲಿಗೆ ಬಂದಿತ್ತು.
ಕೇರಳದಲ್ಲಿ 2020ರಲ್ಲಿ ಈ ಘಟನೆ ನಡೆದಿತ್ತು. ಕೊಲ್ಲಂ ನಿವಾಸಿ ಸೂರಜ್ ನಾಗರಹಾವನ್ನು (Snake) ಬಳಸಿ ಪತ್ನಿಯನ್ನು ಕೊಲೆಗೈದಿದ್ದ. ಈ ವಿಚಾರ ದೇಶಾದ್ಯಂತ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದು ಸ್ವಾಭಾವಿಕ ಹಾವು ಕಡಿತದಿಂದ ಉಂಟಾದ ಸಾವು ಎಂದೇ ಮೊದಲು ಅಂದುಕೊಳ್ಳಲಾಗಿತ್ತು. ಆದರೆ ತನಿಖೆ (Investigation) ಮಾಡುತ್ತಾ ಹೋದಂತೆ ಎಲ್ಲವೂ ಬಯಲಾಗುತ್ತಾ ಹೋಯಿತು. ಪತ್ನಿಯ ಸಾವಿನಿಂದ ಅಳುತ್ತಾ ನಿಂತಿದ್ದ ಗಂಡನೇ ಆಕೆಯ ಸಾವಿನ ಹಿಂದಿದ್ದ ಎಂಬುದು ಬಯಲಾಯ್ತು. ಪತ್ನಿಯನ್ನು ಕೊಲೆ (Murder) ಮಾಡಲು ಸೂರಜ್ ಹಾವನ್ನು ಬಳಸಿದ್ದ. ವಿಷಸರ್ಪವನ್ನು ಬಳಸಿ ಆಕೆಯ ಜೀವ ತೆಗೆದಿದ್ದ.
ಟೊಮೆಟೋ ಹಣ್ಣಿನ ರಾಶಿ ಮಧ್ಯದಲ್ಲಿ ಸರ್ಪರಾಜ: ಮುಟ್ಟಲು ಹೋದವರನ್ನೇ ಕಚ್ಚಲು ಬಂದ ಹಾವು..!
ಘಟನೆಯ ವಿವರ:
ಕೊಲ್ಲಂ ಜಿಲ್ಲೆಯ ಅಂಚಲಾ ಎಂಬಲ್ಲಿ 25 ವರ್ಷದ ಉತ್ತರಾ, ಮೇ 7, 2020ರಂದು ಗಂಡನ (Husband) ಮನೆಯಲ್ಲಿ ಮಲಗಿದ್ದಲ್ಲಿಯೇ ಹಾವು ಕಡಿತದಿಂದ ಮೃತಪಟ್ಟಿದ್ದರು. ಆಕೆ ಮಲಗಿದ್ದಲ್ಲಿಯೇ ಹಾವು ಬಂದು ಕಚ್ಚಿ ಆಕೆಯ ಸಾವಾಗಿತ್ತು. ಮಲಗಿದ್ದಲ್ಲಿಂದ ಎದ್ದು ಆಕೆ ಎಲ್ಲಿಗೂ ಹೋಗಿರಲ್ಲಿಲ್ಲ. ಆಕೆಗೆ ಈ ಹಿಂದೆಯೂ ಒಂದು ಸಾರಿ ಹಾವು ಕಚ್ಚಿ ಆಸ್ಪತ್ರೆಗೆ (Hospital) ದಾಖಲಾಗಿ ಚೇತರಿಸಿಕೊಂಡು ಬಂದಿದ್ದರು. ಹೀಗಾಗಿ ಜನರು ಸರ್ಪದೋಷದಿಂದಲೇ ಹೀಗಾಗಿದೆ ಎಂದು ಮಾತನಾಡಿಕೊಂಡಿದ್ದರು. ಇಲ್ಲದಿದ್ದರೆ ಕುಟುಂಬ ದೋಷದಿಂದ ಆಕೆಗೆ ಹೀಗಾಗಿದೆ ಎಂದು ಮಾತನಾಡಿಕೊಂಡರು. ಆಕೆಯ ಸಾವು ಸಾಕಷ್ಟು ಪ್ರಶ್ನೆಗಳನ್ನು ಬಳಸಿಕೊಂಡು ನಿಗೂಢವಾಗಿಯೇ ಉಳಿದಿತ್ತು. ಆದರೆ ಉತ್ತರಾ ಪೋಷಕರು ಗಂಡನ ಕೈವಾಡವಿರುವುದರ ಬಗ್ಗೆ ಆರೋಪಿಸಿದರು.
ಮೊಬೈಲ್‌ನಲ್ಲಿ ಹಾವಿನ ಬಗ್ಗೆ ಸರ್ಚ್ ಮಾಡಿದ್ದ ಸೂರಜ್
ಯಾವುದೇ ಪ್ರತ್ಯಕ್ಷ ಸಾಕ್ಷಿ ಇಲ್ಲದ ಕಾರಣ ಪೊಲೀಸರು ಸಾಂದರ್ಭಿಕ ಸಾಕ್ಷ್ಯಗಳನ್ನು ಆಶ್ರಯಿಸಬೇಕಾಯಿತು. ಮನೆಯಲ್ಲಿ ಹಾವನ್ನು ತೆಗೆದುಕೊಂಡ ಬಂದ್ ಜಾರ್ ಪತ್ತೆ ಮಾಡಲಾಗಿದ್ದು ಪೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿಕೊಡಲಾಯಿತು. ಸೂರಜ್‌ನ ಮೊಬೈಲ್‌ನಿಂದ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಆತ ನಾಗರ ಹಾವು ಮತ್ತು ವಿಷಪೂರಿತ ಹಾವುಗಳಿಗಾಗಿ ಹುಡುಕಾಟ ನಡೆಸಿರುವುದು ಬಹಿರಂಗವಾಯಿತು. ಇದಾದ ಮೇಲೆ ಪೊಲೀಸರು ವಿಚಾರಣೆ ನಡೆಸಿದಾಗ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಸೂರಜ್ ಒಪ್ಪಿಕೊಂಡಿದ್ದ.
ಉತ್ತರಾಳನ್ನು ಮದುವೆಯಾದ ನಂತರ ನಿರಂತರವಾಗಿ ಆಕೆಯ ಮನೆಯವರನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಪ್ರತಿ ಬಾರಿಯೂ ಆಕೆಯ ಹೆತ್ತವರು ಹಣ ಕೊಡುತ್ತಿದ್ದರು. ಯಾವಾಗ ಅವರು ಹಣ ಕೊಡುವುದನ್ನು ನಿಲ್ಲಿಸಿದರೋ ಆಗ ಸೂರಜ್ ಉತ್ತರಾಳನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದ. 10 ಸಾವಿರ ರೂ. ಕೊಟ್ಟು ಎರಡು ಹಾವು ತಂದಿದ್ದಾಗಿಯೂ ಹೇಳಿದ್ದ. ಮೇ 2 ರಂದೇ ಕೊಲೆ ಮಾಡಲು ಯತ್ನ ಮಾಡಿದ್ದ ಆದರೆ ಹಾವು ಕೈಕೊಟ್ಟಿತ್ತು. ಸೂರಜ್ ಅವರ ಮನೆಯಲ್ಲಿ ಈ ಹಿಂದೆ ಸಹ ಉತ್ತರಾಗೆ ಹಾವು ಕಚ್ಚಿದ್ದು, ಆಕೆ ಒಟ್ಟು ಎರಡು ಬಾರಿ ಹಾವು ಕಡಿತಕ್ಕೆ ಒಳಗಾಗಿದ್ದರು. ಇದರ ಹಿಂದಿರುವುದೇ ಸೂರಜ್ ಎಂಬುದು ತಿಳಿದುಬಂತು.10 ಸಾವಿರ ರೂ. ಕೊಟ್ಟು ಎರಡು ಹಾವು ತಂದಿದ್ದಾಗಿಯೂ ಹೇಳಿದ್ದ. ಮೇ 2 ರಂದೇ ಕೊಲೆ ಮಾಡಲು ಯತ್ನ ಮಾಡಿದ್ದ ಆದರೆ ಹಾವು ಕೈಕೊಟ್ಟಿತ್ತು. ಸೂರಜ್ ಅವರ ಮನೆಯಲ್ಲಿ ಈ ಹಿಂದೆ ಸಹ ಉತ್ತರಾಗೆ ಹಾವು ಕಚ್ಚಿದ್ದು, ಆಕೆ ಒಟ್ಟು ಎರಡು ಬಾರಿ ಹಾವು ಕಡಿತಕ್ಕೆ ಒಳಗಾಗಿದ್ದರು. ಇದರ ಹಿಂದಿರುವುದೇ ಸೂರಜ್ ಎಂಬುದು ತಿಳಿದುಬಂತು.
ವಿಷಕಾರಿ ಹಾವಿಂದ ಮಾಲೀಕರ ಕುಟುಂಬ ಬಚಾವ್ ಮಾಡಿದ ಜೋಡಿ ಬೆಕ್ಕು..!
ಪ್ರಕರಣಕ್ಕೆ ಸಂಬಂಧಿಸಿ ಸೂರಜ್ ನ ಇಬ್ಬರು ಸಹಚರರನ್ನು ವಶಕ್ಕೆ ಪಡೆಯಲಾಯಿತು. ಯೂ ಟ್ಯೂಬ್ ಮೂಲಕ ಹಾವನ್ನು ಬಳಸಿ ಹೇಗೆ ಕೊಲೆ ಮಾಡಬಹುದು ಎಂಬುದನ್ನು ಸೂರಜ್ ನೋಡಿ ತಿಳಿದುಕೊಂಡಿದ್ದ ಎಂಬ ಸಂಗತಿಯೂ ವಿಚಾರಣೆ ವೇಳೆ ಗೊತ್ತಾಯಿತು. ಆ ನಂತರ ಪ್ರಕರಣದಲ್ಲಿ ಮೃತಪಟ್ಟ ಉತ್ತರಾ ಅವರ ಪತಿಗೆ ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿಸಿದ್ದು, 17 ವರ್ಷ ಜೀವಾವಧಿ ಶಿಕ್ಷೆ ವಿಧಿಸಿದೆ.