ಬಾಲಿವುಡ್ ನಟ ಆಮೀರ್ ಖಾನ್ ಮದ್ವೆ ನಟ ಸಲ್ಮಾನ್ ಖಾನ್ ಮನೆಯಲ್ಲಿ ನಡೆಯುತ್ತಿದೆ. ಸಲ್ಮಾನ್ ಖಾನ್ ಎತ್ತರಕ್ಕೆ ದೊಡ್ಡ ಹೆಸರು ಮಾಡಿರುವ ಆಮೀರ್ ಖಾನ್ ತನ್ನ ಮಗಳ ಮದುವೆಯನ್ನು ಸಲ್ಮಾನ್ ಖಾನ್ ಮನೆಯಲ್ಲಿ ಮಾಡುತ್ತಿರುವುದೇಕೆ ಎಂಬ ಪ್ರಶ್ನೆ ಹಲವರದ್ದು ಇದಕ್ಕೆ ಈಗ ಉತ್ತರ ಸಿಕ್ಕಿದೆ.
ಬಾಲಿವುಡ್ ನಟ ಆಮೀರ್ ಖಾನ್ ಮದ್ವೆ ನಟ ಸಲ್ಮಾನ್ ಖಾನ್ ಮನೆಯಲ್ಲಿ ನಡೆಯುತ್ತಿದೆ. ಇರಾ ಮದುವೆಯ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಮನೆಗೆ ನೆಂಟರು ಬಂಧುಗಳು ದಾಂಗುಡಿ ಇಡುತ್ತಿದ್ದಾರೆ. ನಿನ್ನೆಯೇ ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಮಗ ಜುನೈದ್ ಖಾನ್, ಇನ್ನೋರ್ವ ಮಗ ಅಜಾದ್ ಸಲ್ಮಾನ್ ಮನೆಗೆ ಆಗಮಿಸಿದ್ದಾರೆ. ಆದರೆ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಎತ್ತರಕ್ಕೆ ದೊಡ್ಡ ಹೆಸರು ಮಾಡಿರುವ ಆಮೀರ್ ಖಾನ್ ತನ್ನ ಮಗಳ ಮದುವೆಯನ್ನು ಸಲ್ಮಾನ್ ಖಾನ್ ಮನೆಯಲ್ಲಿ ಮಾಡುತ್ತಿರುವುದೇಕೆ ಎಂಬ ಪ್ರಶ್ನೆ ಹಲವರದ್ದು ಇದಕ್ಕೆ ಈಗ ಉತ್ತರ ಸಿಕ್ಕಿದೆ.
ಸಲ್ಮಾನ್ ಖಾನ್ ಹಾಗೂ ಆಮೀರ್ ಖಾನ್ ಅವರು ದಶಕಗಳಿಂದಲೂ ಬಹಳ ಒಳ್ಳೆಯ ಸ್ನೇಹಿತರು. ಆಮೀರ್ ಖಾನ್ ಮಗಳು ಇರಾ ಖಾನ್‌ಳನ್ನು ಸಲ್ಮಾನ್ ಖಾನ್ ಎತ್ತಿ ಆಡಿಸಿದ್ದು, ಆಕೆಯ ಮೇಲೆ ಸಲ್ಮಾನ್ ಖಾನ್‌ಗೆ ತನ್ನದೇ ಮಗಳೆಂಬ ಭಾವನೆ ಇದೆ. ಇದೇ ಕಾರಣಕ್ಕೆ ಇರಾ ಮದ್ವೆ ಎಂದ ಕೂಡಲೇ ಸಲ್ಮಾನ್ ಖಾನ್ ತುಂಬಾ ಭಾವುಕರಾಗಿದ್ದು, ಆಕೆ ಬಹಳ ಖುಷಿ ಖುಷಿಯಾಗಿ ಮದ್ವೆಯಾಗಿ ಹೋಗಬೇಕು ಎಂಬ ಕಾರಣಕ್ಕೆ ಸಲ್ಮಾನ್ ಖಾನ್ ತನ್ನ ಮನೆಯಲ್ಲೇ ಆಕೆಯ ಮದುವೆಯನ್ನು ಆಯೋಜಿಸಿದ್ದಾರೆ ಸಲ್ಮಾನ್ ಖಾನ್ ಎಂದು ಬಾಲಿವುಡ್‌ನ ಕೆಲ ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸಿನಿಮಾ ವೆಬ್‌ಸೈಟೊಂದು ವರದಿ ಮಾಡಿದೆ.
ಮಾಜಿ ಪತ್ನಿ, ಮಗಳೊಂದಿಗೆ ಪ್ರಶಸ್ತಿ ಸ್ವೀಕರಿಸಿದ ಆಮೀರ್ ಖಾನ್: ಮಗಳ ಮದುವೆ ಬಗ್ಗೆ ಈಗಲೇ ಭಾವುಕನಾದ ನಟ
ಇನ್ನು ಆಮೀರ್ ಖಾನ್ ಗೆಳೆಯ ಟೈಗರ್ 3 ನಟ ಸಲ್ಮಾನ್ ಖಾನ್ ಜೊತೆ ಬಹಳ ಗಟ್ಟಿಯಾದ ಸ್ನೇಹವನ್ನು ಹೊಂದಿದ್ದಾರೆ. ಹೀಗಾಗಿಯೇ ಆಮೀರ್ ಖಾನ್ ಏಕೈಕ ಪುತ್ರಿ ಇರಾ ಖಾನ್ ಹಾಗೂ ನೂಪುರ್ ಶಿಖರೆ ಮದುವೆಯನ್ನು ಬಹಳ ಅದ್ದೂರಿಯಾಗಿ ನಡೆಸಿಕೊಡಲು ಮುಂದಾಗಿದ್ದಾರೆ ಈ ಬಾಲಿವುಡ್ ಬ್ರಹ್ಮಚಾರಿ. ಆಮೀರ್ ಖಾನ್ ಅವರು ತಮ್ಮ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ನೂಪುರ್ ಶಿಖರೆಯನ್ನು ಜೀವನ ಸಂಗಾತಿಯಾಗಿ ಮಗಳು ಆಯ್ಕೆ ಮಾಡಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು ಆಮೀರ್. ಅವರಿಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಆಮೀರ್ ಖಾನ್ ಹೇಳಿದ್ದರು.
ಬಹುಶ ಇದು ಸಿನಿಮಾ ಡೈಲಾಗ್‌ನಂತೆ ಕೇಳಬಹುದು. ಆದರೆ ನಾನು ನೂಪುರ್‌ನಲ್ಲಿ ನಾನು ಮಗನನ್ನು ಕಾಣುತ್ತಿದ್ದೇನೆ ನೂಪುರ್ ಓರ್ವ ಅಂತಹ ಒಳ್ಳೆ ಹುಡುಗ, ನೂಪುರ ಹಾಗೂ ಆತನ ಅಮ್ಮ ಪ್ರೀತಮಜಿ ಈಗಾಗಲೇ ನಮ್ಮ ಕುಟುಂಬದ ಭಾಗವಾಗಿದ್ದು, ಅವರೊಂದಿಗಿನ ಬಂಧ ಇನ್ನಷ್ಟು ಬಲಿಷ್ಠವಾಗುತ್ತಿರುವುದಕ್ಕೆ ನನಗೆ ತುಂಬಾ ಖುಷಿ ಇದೆ ಎಂದು ಆಮೀರ್ ಖಾನ್ ಹೇಳಿದ್ದರು.
ಮಹಾರಾಷ್ಟ್ರದ ಹಿಂದೂ ಸಂಪ್ರದಾಯದಂತೆ ಆಮೀರ್ ಖಾನ್ ಪುತ್ರಿ ಇರಾ ಖಾನ್ ವಿವಾಹ ಪೂರ್ವ ಶಾಸ್ತ್ರ ಶುರು!
ಈ ವೇಳೆ ಇರಾ ಮದುವೆ ವೇಳೆನೀವು ಅಳುವಿರಾ ಭಾವುಕರಾಗುವಿರಾ ಎಂದು ಆಮೀರ್ ಖಾನ್ ಅವರನ್ನು ಕೇಳಿದಾಗ ನಾನು ಬಹಳ ಭಾವುಕ ವ್ಯಕ್ತಿ ಸಹೋದರ, ಆ ದಿನ ನಾನು ತುಂಬಾ ಅಳುವುದಂತೂ ನಿಜ, ಆ ದಿನ ಆಮೀರ್‌ನ್ನು ಸಮಾಧಾನ ಮಾಡೋದ್ಯಾರು ಎಂದು ಈಗಾಗಲೇ ನಮ್ಮ ಕುಟುಂಬದಲ್ಲಿ ಚರ್ಚೆಯಾಗುತ್ತಿದೆ. ನಾನು, ನನ್ನ ನಗು ಹಾಗೂ ಅಳು ಎರಡನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಆಮೀರ್ ಖಾನ್ ಭಾವುಕರಾಗಿ ಹೇಳಿದ್ದರು. ಇತ್ತೀಚೆಗೆ ಆಮೀರ್ ಖಾನ್ ಹಾಗೂ ಮಗಳು ಇರಾ ಖಾನ್‌ಗೆ ಜೊತೆಯಾಗಿ ಪ್ರಶಸ್ತಿ ಸಿಕ್ಕಿತ್ತು. ಈ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿದ್ದ ಆಮೀರ್ ಖಾನ್ ಮಗಳ ಮದುವೆಯ ಬಗ್ಗೆ ಕೇಳಿದಾದ ಭಾವುಕರಾಗಿದ್ದರು.
ಇರಾ ಖಾನ್ ಮದ್ವೆಯಾಗುತ್ತಿರುವ ನೂಪುರ್ ಶಿಖರೆ ಸೆಲೆಬ್ರಿಟಿ ಫಿಟ್ನೆಸ್ ಟ್ರೈನರ್ ಆಗಿದ್ದು, ನಟ ಆಮೀರ್ ಖಾನ್ ಅವರಿಗೂ ಟ್ರೈನರ್ ಆಗಿದ್ದರು. ಇತ್ತ ಇರಾ ಖಾನ್ ಆಗಸ್ತು ಫೌಂಡೇಶನ್ ಎಂಬ ಎನ್‌ಜಿಒ ಒಂದನ್ನು ಸ್ಥಾಪಿಸಿದ್ದು, ಜನರ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಫೌಂಡೇಶನ್ ಮೂಲಕ ಕೆಲಸ ಮಾಡುತ್ತಿದ್ದಾರೆ.