
ಮಗು ಹುಟ್ಟಿದ ಕೂಡಲೆ ಅಳೋದು ನೋಡಿದ್ದೀರಿ. ಆದರೆ ಜನಿಸಿದ ಕೂಡಲೆ ನಗೋದು ನೋಡಿದ್ದೀರಾ? ಇಲ್ಲ ತಾನೆ. ಅಂದರೆ ಅಳು ಮನುಷ್ಯನ ಸಹಜ ಪ್ರಕ್ರಿಯೆ. ಅದೊಂಥರಾ ಮೃಗೀಯ ಗುಣ. ಅಂದರೆ ಹಸಿವಾದಾಗ, ನೋವಾದಾಗ ಮಗು ಕಲಿಸದೆಯೂ ಅಳಲು ಕಲಿಯುತ್ತದೆ. ಆದರೆ ನಗಲು ಮನುಷ್ಯ ಕಲಿಯಬೇಕು. ಹೀಗೆ ಕಲಿಯಲು ಮಗು ಒಂದೆರಡು ತಿಂಗಳು ತೆಗೆದುಕೊಳ್ಳುತ್ತದೆ.ಆದರೆ ಅಪ್ರಯತ್ನಪೂರ್ವಕವಾಗಿಯೂ ಮಕ್ಕಳು ನಗುತ್ತವೆ. ಇದು ಮಕ್ಕಳಲ್ಲಿ ಭ್ರೂಣದಿಂದಲೇ ಆರಂಭವಾಗಿರುತ್ತದೆ ಎಂದರೆ ಬೆಚ್ಚಿಬೀಳಬೇಡಿ. ಇದಕ್ಕೆ ರಿಫ್ಲೆಕ್ಸ್ ನಗು ಎನ್ನುತ್ತಾರೆ. ಅಂದರೆ ಫಕ್ಕನೆ ಯಾವುದೇ ಪ್ರಯತ್ನವಿಲ್ಲದೆ ಮೂಡುವ ನಗು. ಮಗು ಸ್ಕ್ಯಾನಿಂಗ್ ಮಾಡುವಾಗ ಕಾಣುವ ಬೆಳಕನ್ನು ಕಂಡರೆ, ಪರೀಕ್ಷಾರ್ಥ ಒಳತೂರಿಸುವ ಉಪಕರಣ ಅಥವಾ ಬೇರಿನ್ನೇನಾದರೂ ಕಾಲಿಗೆ ತಾಕಿ ಕಚಗುಳಿ ಇಟ್ಟರೆ ನಗುತ್ತವೆ.
ಸುಮಾರಾಗಿ, ಹುಟ್ಟಿದ ಎರಡು ತಿಂಗಳಿನ ಒಳಗೆ ಮಕ್ಕಳು ನಗುವುದನ್ನು ಕಲಿಯುತ್ತವಂತೆ. ರಿಫ್ಲೆಕ್ಸ್ ನಗುವಿಗೂ ನಿಜವಾದ ನಗುವಿಗೂ ವ್ಯತ್ಯಾಸವನ್ನು ನೀವು ಕಂಡುಹಿಡಿಯಬಹುದು. ಕೆಲವೊಮ್ಮೆ ರಿಫ್ಲೆಕ್ಸ್ ನಗು ಮಗುವಿನ ನಿದ್ದೆಯಲ್ಲೂ ಕಾಣಿಸಿಕೊಳ್ಳಬಹುದು. ಇದು ಅತ್ಯಲ್ಪ ಅವಧಿಯದ್ದು ಹಾಗೂ ಮಗುವಿನ ಪ್ರಯತ್ನವಿಲ್ಲದೆ ಬಂದಂಥದ್ದಾಗಿರುತ್ತದೆ. ನಿಜವಾದ ನಗು ಹುಟ್ಟಿಕೊಳ್ಳುವುದು ಮಗುವಿನ ಅಪ್ಪ ಅಥವಾ ಅಮ್ಮನನ್ನು ನೋಡಿದಾಗ, ಅಥವಾ ತನ್ನ ಸಿಬ್ಲಿಂಗ್‌ನ ಮಾತು- ನಗು ಇತ್ಯಾದಿಗಳನ್ನು ಕೇಳಿದಾಗ, ನೋಡಿದಾಗ. ಮಗುವಿನ ಮೊದಲ ನಗು ಕಾಣಸಿಗುವುದು ಹೆಚ್ಚಾಗಿ ಅಮ್ಮನಿಗೇ. ಯಾಕೆಂದರೆ ಈ ಪ್ರಾಯದಲ್ಲಿ ಸದಾ ಮುಗಿನ ಜೊತೆಗೆ ಇರುವವಳೂ ಅಮ್ಮನೇ ಹಾಗೂ ಮಗುವಿನ ಜೊತೆ ಮೊದಲ ತೊದಲಿನ ನುಡಿಗಳನ್ನು ಆಡುವವಳು ಅಮ್ಮನೇ ಅದ್ದರಿಂದ. ಈ ಮೊದಲ ನಗುಗಳು ಸಾಮಾನ್ಯವಾಗಿ ತುಸು ದೀರ್ಘವಾಗಿರುತ್ತವೆ. ಅದು ಯಾವುದಕ್ಕಾದರೂ ಪ್ರತಿಕ್ರಿಯೆಯಾಗಿ ಬಂದ ನಗು ಆಗಿರುತ್ತದೆ.
ಮಗು ನಗುನಗುತ್ತಾ ಇದ್ದರೆ ಹೆತ್ತವರಿಗೂ ಜೊತೆಗಿರುವವರಿಗೂ ಸಂತೋಷ. ಹೀಗಾಗಿ ಮಗುವಿನ ಮುಖದಲ್ಲಿ ನಗು ಅರಳಿಸಲು, ನೀವು ಹೆಚ್ಚಾಗಿ ಮಗುವಿನ ಐ ಕಾಂಟ್ಯಾಕ್ಟ್ ಮಾಡುತ್ತಲೇ ಇರಬೇಕು, ಕಣ್ಣೂ ಮಿಟುಕಿಸುವುದು, ಬೂ ಎನ್ನುವುದು, ತಮಾಷೆಯಾಗಿ ಮುಖ ಮಾಡುವುದು, ಕೂಕಿ ಮಾಡುವುದು ಅಂದರೆ ಮುಖಕ್ಕೆ ಮುಸುಕು ಹೊದ್ದುಕೊಂಡು ಇದ್ದಕ್ಕಿದ್ದಂತೆ ಮುಖ ಕಾಣಿಸುವ ಕಣ್ಣಾಮುಚ್ಚಾಲೆ ಆಡುವುದು, ಹೊಟ್ಟೆಗೆ ಕಚಗುಳಿ ಇಡುವುದು- ಹೀಗೆ ನೀವು ಮಗುವಿನಲ್ಲಿ ನಗುವನ್ನು ಹೊಮ್ಮಿಸುವ ಪ್ರಯತ್ನಗಳನ್ನು ಜಾರಿಯಲ್ಲಿಡಬಹುದು. ಮಲಗಿಯೇ ಇರುವ ಮಗು ನ್ಕರೆ ಅದಕ್ಕೆ ಅವಶ್ಯಕವಾದ ವ್ಯಾಯಾಮ ಆಗುತ್ತದೆ.
ನೀವು ಮಕ್ಕಳನ್ನು ನೋಡ್ಕೊಳೋದು ಕೋತಿ ಥರಾನಾ, ಬೆಕ್ಕಿನ ಥರಾನಾ?
ಮಗು ನಗಲು ಶುರು ಮಾಡಿತೆಂದರೆ, ಮಗುವಿನ ಕಣ್ಣನೋಟ ಸ್ಪಷ್ಟವಾಗಿದೆ ಹಾಗೂ ಬೆಳೆಯುತ್ತಿದೆ ಎಂದರ್ಥ. ಅದು ನಿಮ್ಮನ್ನು ಅಷ್ಟು ಹೊತ್ತಿಗೆ ಗುರುತು ಹಿಡಿಯಲು ಆರಂಭಿಸಿರುತ್ತೆ. ತಾನು ನಗುವುದು ಅಥವಾ ಅಳುವುದು- ಯಾವುದು ಮಾಡಿದರೆ ಸುತ್ತಲಿದ್ದವರ ಮೇಲೆ ಏನು ಪರಿಣಾಮ ಎನ್ನುವುದು ಅದಕ್ಕೆ ಅರ್ಥವಾಗಲು ಶುರುವಾಗಿರುತ್ತೆ. ಹೀಗೆ ಮಗು ಸೋಶಿಯಲೈಸಿಂಗ್ ಆಗಲು ಶುರುಮಾಡುತ್ತದೆ. ಉದ್ವೇಗ, ಸಂತೃಪ್ತಿ, ಉತ್ಸಾಹ, ಸಂತೋಷಗಳನ್ನು ನಗುವಿನ ಮೂಲಕ ವ್ಯಕ್ತಪಡಿಸಲು ಮಗು ಕಲೀತಿರುತ್ತೆ. ನಗುವಿನ ಮೂಲಕ ತನ್ನ ಅಭೀಪ್ರಾಐ ಹೇಳೋಕೆ, ತನಗೆ ಏನು ಬೇಕೆಂದು ವ್ಯಕ್ತಪಡಿಸೋಕೆ ಕಲಿಯುತ್ತೆ. ಕೆಲವೊಮ್ಮೆ ನೀವು ಕಚಗುಳಿ ಇಡುವುದನ್ನು ನಿಲ್ಲಿಸಿ ದೂರ ಹೋದರೆ ಮಗು ಅಳಲು ಶುರು ಮಾಡಬಹುದು. ನೀನು ಇನ್ನೂ ಸ್ವಲ್ಪ ಹೊತ್ತು ನನ್ನ ಬಳಿ ಇರು ಎನ್ನುವುದು ಅದರ ಅರ್ಥ.
ಪಾಂಡಾ ಪೇರೆಂಟಿಂಗ್: ಮಕ್ಕಳನ್ನು ಸಶಕ್ತರಾಗಿಸಲು ವಿಶಿಷ್ಠ ಶೈಲಿ
ಮಗುವಿನಿಂದ ಮಗುವಿಗೆ ವ್ಯತ್ಯಾಸ ಇರುತ್ತೆ. ಸಾಮಾನ್ಯವಾಗಿ ಎರಡು ತಿಂಗಳಲ್ಲಿ ಮಗು ನಗಬೇಕು. ಸ್ವಲ್ಪ ಹೆಚ್ಚು ಕಡಿಮೆ ಅವಧಿ ತೆಗೆದುಕೊಳ್ಳಬಹುದು. ಆದರೆ ಮೂರು ತಿಂಗಳಾದರೂ ಮಗು ನಗಲಿಲ್ಲ ಎಂದಾದರೆ ಡಾಕ್ಟರನ್ನು ಕಾಣುವುದು ಅವಶ್ಯಕ.
ನಿದ್ದೆಗಣ್ಣಿನ ಮಗು, ಬೆಡ್‌ನಲ್ಲೇ ಪಾಠ, ಏನೀ ಆನ್‌ಲೈನ್ ಕ್ಲಾಸ್ ಅವಸ್ಥೆ! ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.