#Feelfree: ಮೊದಲ ಬಾರಿಗೆ ತುಂಬಾ ನೋವಾಗುತ್ತೆ ಅಂತಾರಲ್ಲ, ನಿಜವಾ?

By Suvarna News  |  First Published Sep 17, 2020, 5:30 PM IST

ಮೊದಲ ರಾತ್ರಿಯಲ್ಲಿ ಸೆಕ್ಸ್ ನಡೆಸುವಾಗ, ತುಂಭಾ ನೋವಾಗಬಹುದು ಅನಿಸುತ್ತಿದೆ. ಮದುವೆಯಾದ ನನ್ನ ಕೆಲವು ಗೆಳತಿಯರು ತಮ್ಮ ಅನುಭವ ತುಂಬಾ ಹಾರಿಬಲ್ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಭಯವಾಗುತ್ತಿದೆ. ಏನು ಮಾಡಲಿ?


ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೆರಡು. ಇದುವರೆಗೆ ಲೈಂಗಿಕ ಅನುಭವ ಪಡೆದಿಲ್ಲ. ಮುಂದಿನ ವಾರ ಮದುವೆಯಾಗುತ್ತಿದೆ. ಗಂಡನಾಗುವವನು ತುಂಬಾ ಒಳ್ಳೆಯ ವ್ಯಕ್ತಿ. ಇತ್ತೀಚೆಗೆ ಅವರ ಮನೆಗೆ ಹೋಗಿದ್ದಾಗ, ಅವರೊಬ್ಬರೇ ಇದ್ದರು. ತಬ್ಬಿಕೊಂಡು, ಸೆಕ್ಸ್‌ ಮಾಡಲು ಇಷ್ಟಪಟ್ಟರು. ಆದರೆ ಅದು ಮದುವೆಯ ನಂತರವೇ ಇರಲಿ ಎಂದು ಅವರನ್ನು ತಡೆದೆ. ಆದರೆ ನನ್ನ ಗುಪ್ತಾಂಗದಲ್ಲಿ ಬೆರಳು ತೂರಿಸಿದರು. ನೋವಾಯಿತು. ಮೊದಲ ರಾತ್ರಿಯಲ್ಲಿ ಸೆಕ್ಸ್ ನಡೆಸುವಾಗ, ತುಂಭಾ ನೋವಾಗಬಹುದು ಅನಿಸುತ್ತಿದೆ. ಮದುವೆಯಾದ ನನ್ನ ಕೆಲವು ಗೆಳತಿಯರು ತಮ್ಮ ಅನುಭವ ತುಂಬಾ ಹಾರಿಬಲ್ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಭಯವಾಗುತ್ತಿದೆ. ಏನು ಮಾಡಲಿ?

Tap to resize

Latest Videos

undefined

ಉತ್ತರ: ನಿಮಗೆ ಒಂದು ಕೌನ್ಸೆಲಿಂಗ್‌ ಅಗತ್ಯವಿದೆ. ಕೌನ್ಸೆಲಿಂಗ್ ಅದರೆ ಭಯಬೀಳುವುದು ಅಗತ್ಯವಿಲ್ಲ. ಸಣ್ಣಪುಟ್ಟ ಆತಂಕಗಳಿದ್ದವರೂ ಇಂದು ಕೌನ್ಸೆಲಿಂಗ್ ಪಡೆಯುತ್ತಾರೆ. ನೀವು ಒಂದು ಬಾರಿ ಗೈನಕಾಲಜಿಸ್ಟ್ ಬಳಿ ಹೋಗಿ ಮಾತನಾಡುವುದು ಹೆಚ್ಚು ಒಳ್ಳೆಯದು. ನಿಮ್ಮ ಭಯ ಸಕಾರಣವಾದದ್ದೇ. ಇದುವರೆಗೂ ಯಾವುದೇ ಲೈಂಗಿಕ ಅನುಭವ ಇಲ್ಲದ, ಆ ಬಗ್ಗೆ ಕಲ್ಪನೆಯೂ ಇಲ್ಲದ ಯುವತಿಯರು ಏಕಾಏಕಿ ಮದುವೆ ಫಿಕ್ಸ್ ಆದಾಗ ಭಯ ಬೀಳುವುದು ಸಹಜವೇ. ಮದುವೆಯಾಗುತ್ತಿರುವ ಹೆಣ್ಣು ಲೈಂಗಿಕ ಅನುಭವದ ಬಗ್ಗೆ ಮಾತ್ರವಲ್ಲ, ಸುರಕ್ಷಿತ ಲೈಂಗಿಕತೆ, ಪೀರಿಯಡ್ಸ್ ಅವಧಿಯ ಬಗ್ಗೆ ಎಚ್ಚರ, ಗರ್ಭ ಧರಿಸದಿರುವಂತೆ ಮುನ್ನೆಚ್ಚರಿಕೆ ಇತ್ಯಾದಿಗಳ ಬಗ್ಗೆಯೂ ತಿಳಿದಿರಬೇಕು. 
ಈಗ ನಿಮ್ಮ ಗೆಳತಿಯರು ಏನು ಹೇಳಿದ್ದಾರೆ ಎಂಬುದರ ಮೇಲೆ ನಿಮ್ಮ ಅನುಭವವನ್ನು ಅಳೆಯಲು ಮುಂದಾಗಿದ್ದೀರಿ. ಆದರೆ ಅದು ಹಾಗಲ್ಲ. ಸೆಕ್ಸ್ ವಿಚಾರದಲ್ಲಿ ಪ್ರತಿಯೊಬ್ಬನ/ಳ ಅನುಭವವೂ ಬೇರೆಯೇ. ಅವರಿಗೆ ಸೆಕ್ಸ್ ನೋವಾಗಿರಬಹುದು. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಬಹುಶಃ ಅವರ ಯೋನಿಪೊರೆ ಈ ಮೊದಲೇ ಹರಿದಿರಲಿಕ್ಕಿಲ್ಲ, ಮೊದಲ ಸಂಭೋಗದ ವೇಳೆ ಹರಿದಿರಬಹುದು. ಅಥವಾ ಸೆಕ್ಸ್‌ನ ವೇಳೆ ಯೋನಿ ಸಾಕಷ್ಟು ಲ್ಯೂಬ್ರಿಕೆಂಟ್ ಆಗಿದ್ದಿರಲಿಕ್ಕಿಲ್ಲ. ಅದರಿಂದಲೂ ನೋವಾಗಿರುವ ಸಂಭವ ಇದೆ. ನೀವು ಯಾಕೆ ನೋವಾಗಬಹುದು ಎಂದುಕೊಂಡಿದ್ದೀರೋ ತಿಳಿಯದು. ನಿಮ್ಮ ಯೋನಿಪೊರೆ ಇನ್ನೂ ಹರಿದಿರದೇ ಇದ್ದರೆ, ಮೊದಲ ಸಂಭೋಗದ ವೇಳೆಗೆ ಅದು ಹರಿಯುವುದರಿಂದ ಸ್ವಲ್ಪ ನೋವು ಆಗಬಹುದು. ಆದರೆ ಹಾಗೆ ಆಗುವ ನೋವು, ಮುಂದಿನ ನಲಿವಿಗೆ ನಾಂದಿ ಎಂದು ನೀವು ತಿಳಯಬೇಕು. ಹಾಗೇ, ಸೆಕ್ಸ್ ಮಾಡುವ ಮೊದಲು ಇಬ್ಬರ ಗುಪ್ತಾಂಗ ಸಾಕಷ್ಟು ಲ್ಯೂಬ್ರಿಕೆಂಟ್‌ ಆಗಿರುವುದು ಅಗತ್ಯ. ಆಗದೇ ಇದ್ದರೆ ಕೃತಕ ಲ್ಯೂಬ್ರಿಕೆಂಟ್‌ಗಳನ್ನೂ ಬಳಸಬಹುದು. ಆಗ ನೋವಾಗುವ ಪ್ರಮೇಯ ಇಲ್ಲ. 

#Feelfree: ಗುಪ್ತಾಂಗದ ಕೂದಲು ಬೆಳೆಸಬೇಕೇ, ಉಳಿಸಬೇಕೇ? 

ಪ್ರಶ್ನೆ: ನಾನು ವಿವಾಹಿತೆ.  ನಮ್ಮಿಬ್ಬರ ವಯಸ್ಸು ಮೂವತ್ತೈದು. ನನ್ನ ಗಂಡ ಇತ್ತೀಚಿಗೆ ಡಿಪ್ರೆಶನ್‌ಗೆ ಒಳಗಾಗಿದ್ದರು. ಒಂದೆರಡು ತಿಂಗಳ ಕಾಲ ಅವರ ಡಿಪ್ರೆಶನ್‌ ಮುಂದುವರಿದಿತ್ತು. ಈಗ ಮೆಡಿಕೇಶನ್‌ ಹಾಗೂ ಕೌನ್ಸೆಲಿಂಗ್‌ಗಳ ಮೂಲಕ ಅವರು ಸುಧಾರಿಸಿದ್ದಾರೆ. ಆದರೆ ಸೆಕ್ಸ್‌ನಲ್ಲಿ ಮೊದಲಿನ ಆಸಕ್ತಿ ತೋರಿಸುತ್ತಿಲ್ಲ. ನಾನಾಗಿಯೇ ಮುಂದಾಗಿ ಅವರನ್ನು ಪ್ರಚೋದಿಸಿದರೂ, ಅವರು ಉದ್ರೇಕಕ್ಕೆ ಒಳಗಾಗುತ್ತಿಲ್ಲ. ನನಗೆ ನಿರಾಸೆ ಮಾಡುತ್ತಿದ್ದೇನಲ್ಲಾ ಎಂಬ ಭಾವನೆಯಿಂದ ಇನ್ನಷ್ಟು ಡಿಪ್ರೆಸ್ ಆಗುತ್ತಾರೆ. ಇದಕ್ಕೆ ಪರಿಹಾರ ಹೇಳಿ.

ಕೆಟೋ ಡಯಟ್‌ನಿಂದ ವೀರ್ಯ ವೃದ್ಧಿ! 

ಉತ್ತರ: ನೀವು ಮನೋರೋಗ ತಜ್ಞರು ಹಾಗೂ ಲೈಂಗಿಕ ತಜ್ಞರನ್ನು ಭೇಟಿಯಾಗಿ ಈ ಸಮಸ್ಯೆಗೆ ಉತ್ತರ ಪಡೆಯಬೇಕು. ಡಿಪ್ರೆಶನ್‌ನಿಂಧ ಪೂರ್ತಿಯಾಗಿ ಚೇತರಿಸಿಕೊಂಡಿದ್ದರೆ, ನಿಮ್ಮೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳದಿರಲು ಅವರಿಗೆ ಕಾರಣಗಳಿಲ್ಲ. ಆದರೆ ಕೆಲವೊಮ್ಮೆ ಔಷಧಗಳ ಪರಿಣಾಮ ವರ್ಷಗಟ್ಟಲೆ ಉಳಿಯುವುದು, ಅಥವಾ ಹಾರ್ಮೋನ್ ಸ್ರಾವದಲ್ಲಿ ಆಗುವ ವ್ಯತ್ಯಾಸದಿಂದ ಹೀಗಾಗುವುದು ಸಾಧ್ಯವಿದೆ. ಇದಕ್ಕೆ ಕೆಲವೊಂದು ಆಯುರ್ವೇದ ಔಷಧಗಳೂ ಇವೆ. ಅವನ್ನು ಪ್ರಯತ್ನಿಸಬಹುದು. ಬೇಕರಿ ಐಟಂ, ಜಂಕ್ ಫುಡ್‌ ದೂರವಿಡಿ, ಆರೋಗ್ಯಕರ ಡಯಟ್ ಪಾಲಿಸಿ.

Sex Education: ಬೇಕಾ? ಯಾರಿಗೆ? ಯಾವಾಗ? 

click me!