ಇನ್ನೂ ಸಣ್ಣ ಮಕ್ಕಳನ್ನು ಶಾಲೆಗೆ ಕಳಿಸುವುದು ತಾಯಂದಿರಿಗೆ ತಲೆನೋವು. ಬೆಳಗಿನ ಹೊತ್ತು ಆ ಮಗುವನ್ನು ತಯಾರು ಮಾಡಿ ಶಾಲೆಗೆ ಕಳಿಸುವುದು ದೊಡ್ಡದೊಂದು ಯಜ್ಞ. ಆದರೆ ಒಮ್ಮೆ ಕಳಿಸಿಬಿಟ್ಟರೆ, ಸಂಜೆಯವರೆಗೂ ಬೇರ್ಯಾವುದೇ ರಗಳೆ ಇರುವುದಿಲ್ಲ. ಆದರೆ ಆನ್‌ಲೈನ್‌ ಕ್ಲಾಸ್‌ ಹಾಗಲ್ಲ. ಅದು ಪ್ರತಿಕ್ಷಣದ ಅಟೆನ್ಷನ್‌ ಅನ್ನು ಬೇಡುತ್ತದೆ. ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ಗೆ ಸರಿಯಾಗಿ ಇಂಟರ್ನೆಟ್‌ ಕನೆಕ್ಷನ್‌ ಇರಬೇಕು, ಮಧ್ಯೆ ಮಧ್ಯೆ ಇಂಟರ್ರಪ್ಷನ್‌ ಆಗುತ್ತಾ ಇದ್ದರೆ ಸರಿಪಡಿಸಬೇಕು. ಆಗತಾನೇ ಎದ್ದು ಬೆಡ್‌ ಮೇಲೆ ಪೈಜಾಮದಲ್ಲಿ ತೂಕಡಿಸುತ್ತಾ ಇರುವ ಮಗಳನ್ನು ಎಳೆದು ತಂದು ಕಣ್ಣಿಗೆ ನೀರು ಉಗ್ಗಿ ಸಿದ್ಧಪಡಿಸಿ ಕಂಪ್ಯೂಟರ್‌ ಮುಂದೆ ಕೂರಿಸಬೇಕು. ಮಗುವಿಗೆ ಅರ್ಥವಾಗದಿದ್ದರೆ ಮತ್ತೊಮ್ಮೆ ಟೀಚರ್‌ ಬಳಿ ಕೇಳಿ ಮಗುವಿಗೆ ಹೇಳಲು ಅಪ್ಪ- ಅಮ್ಮ ರೆಡಿ ಇರಬೇಉ=ಕು. ಒಟ್ಟಿನಲ್ಲಿ ಆನ್‌ಲೈನ್‌ ಕ್ಲಾಸ್‌ ಅಂದ್ರೆ ಅಪ್ಪ- ಅಮ್ಮನಿಗೆ ಹೋಮ್‌ವರ್ಕ್ ದುಪ್ಪಟ್ಟು ಆದ ಹಾಗೇ. ಟೀಚರ್‌ಗಳಿಂದ ನೂರಾರು ಇಮೈಲ್‌ಗಳು, ಕ್ಲಾಸ್‌ಗಳ ಮೇಲೆ ಹೆತ್ತವರೇ ನಿಗಾ ಇಡಬೇಕಾದ ಪರಿಸ್ಥಿತಿ. ಕೆಲವು ಮಕ್ಕಳು ಟೀಚರ್‌ಗಳನ್ನು ನೋಡಲು ಸಾಧ್ಯವಾಗದೆ, ಆನ್‌ಲೈನ್‌ ಕ್ಲಾಸ್‌ಗೆ ಹೊಂದಿಕೊಳ್ಳಲಾಗದೆ ಅಳುತ್ತಾ ಇರುವ ಸನ್ನಿವೇಶವನ್ನು ಕೆಲವು ತಾಯಂದಿರು ತಮ್ಮ ಸೋಶಿಯಲ್‌ ತಾಣಗಳಲ್ಲಿ ಅಪ್‌ಲೋಡ್‌ ಮಾಡಿ ತಮ್ಮ ಗೋಳನ್ನು ಹೇಳಿಕೊಂಡಿದ್ದಾರೆ.

ಹಾಗಿದ್ದರೆ ಇಂಥ ಸಂದರ್ಭದಲ್ಲಿ ಏನು ಮಾಡಬಹುದು? ಮಕ್ಕಳ ಆನ್‌ಲೈನ್‌ ಕ್ಲಾಸ್‌ಗಳ ಗತಿ ಕಾದುಕೊಳ್ಳುವುದು ಹೇಗೆ?

ಟೈಮ್‌ಟೇಬಲ್‌ ಕಾಯ್ದುಕೊಳ್ಳಿ
ಮಲಗುವ ಸಮಯ ಯಾವುದು, ಏಳುವ ಸಮಯ ಯಾವುದು, ಯಾವುದು ಊಟದ ಸಮಯ, ಯಾವುದು ಕ್ಲಾಸಿನ ಸಮಯ ಎಂಬುದನ್ನು ಒಂದು ಟೈಮ್‌ಟೇಬಲ್‌ ರೂಪಿಸಿ ಹಾಗೆಯೇ ಕಾಯ್ದುಕೊಳ್ಳುವುದು ಮುಖ್ಯ. ಹೇಗೆ ರಿಯಲ್‌ ಶಾಲೆ ಇದ್ದಾಗ ನಡೆಯುತ್ತಿತ್ತೋ ಹಾಗೇ ಈಗಲೂ ನಡೆಯಬೇಕು. ಹಾಗಿದ್ದರೆ ಮಾತ್ರ ಮಕ್ಕಳು ಶಾಲಾ ಭಾವನೆ ಫೀಲ್ ಮಾಡುತ್ತವೆ.

ಎರಡು ವರ್ಷದ ಈ ಪುಟ್ಟ ಬಾಲೆಗೆ ಆನೆಯೇ ಬೆಸ್ಟ್ ಫ್ರೆಂಡ್..!

ಆನ್‌ಲೈನ್‌ ಕ್ಲಾಸಿನ ಸ್ವರೂಪ
ಆನ್‌ಲೈನ್‌ ಕ್ಲಾಸುಗಳಿಂದ ಏನನ್ನು ನಿರೀಕ್ಷೆ ಮಾಡಬೇಕು, ಏನನ್ನು ಮಾಡಬಾರದು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ರಿಯಲ್‌ ಕ್ಲಾಸಿನಲ್ಲಿ ಟೀಚರ್‌ ಪ್ರತಿಯೊಬ್ಬ ಮಗುವಿನ ಬಳಿಯೂ ಹರಟೆ ಹೊಡೆಯಬಹುದು, ವೈಯಕ್ತಿಕ ಫೋಕಸ್‌ ಕೊಡಬಹುದು. ಇಲ್ಲಿ ಅದು ಸಾಧ್ಯವಿಲ್ಲ. ಕೆಲವೊಮ್ಮೆ ಮಗುವನ್ನು ನಿದ್ದೆಯಿಂದಲೇ ಎಳೆದು ತಂದು ಕಂಪ್ಯೂಟರ್‌ ಮುಂದೆ ಕೂರಿಸದ್ದನ್ನು ಟೀಚರ್‌ಗಳು ನೋಡಬೇಕಾದೀತು. ಮಕ್ಕಳಿಗೆ ಫೋಕಸ್‌ ಅತಿ ಮುಖ್ಯ.

ದಿನಚರಿ ಮತ್ತು ವಾರದ ಗುರಿಗಳು
ಒಂದು ದಿನಕ್ಕಿಷ್ಟು ಕಲಿಕೆ ಮತ್ತು ಒಂದು ವಾರಕ್ಕಿಷ್ಟು ಹೋಮ್‌ವರ್ಕ್‌ ಅಥವಾ ಕಲಿಕೆ ಎಂದು ಗುರಿ ನಿಗದಿಪಡಿಸಿಕೊಳ್ಳಿ. ಅದನ್ನು ಮುಗಿಸದೆ ಮುಂದೆ ಹೋಗಬೇಡಿ. ಇಲ್ಲವಾದರೆ ಹಿಂದುಳಿದಿದ್ದನ್ನು ಫಾಲೋಅಪ್‌ ಮಾಡಲು ಕಷ್ಟ ಆದೀತು. ಇದು ಮಕ್ಕಳಿಗೂ ಹೆತ್ತವರಿಗೂ ಶಿಕ್ಷಕರಿಗೂ ಎಲ್ಲರಿಗೂ ಒಳ್ಳೆಯದು.

ಫೇರಿ ಟೇಲ್‌ಗಳನ್ನು ಓದಿ ಭ್ರಮಿತರಾಗ್ತಾರಂತೆ ಮಕ್ಕಳು! 

ಧನಾತ್ಮಕ ಕಲಿಕೆ
ರಿಯಲ್‌ ಕ್ಲಾಸುಗಳಂತೆ ಆನ್‌ಲೈನ್‌ ಕ್ಲಾಸುಗಳಲ್ಲಿ ಭಾಗವಹಿಸಿದವರಿಗೂ ರಿವಾರ್ಡ್‌ಗಳು ಅಥವಾ ಬಹುಮಾನಗಳನ್ನು ಕೊಡಬೇಕು. ಅದು ಒಂದು ಒಳ್ಳೆಯ ಮಾತು, ಮೆಚ್ಚುಗೆ, ಇತ್ಯಾದಿ ಇರಬಹುದು. ಸರಿಯುತ್ತರ ಕೊಟ್ಟದ್ದಕ್ಕೆ, ಒಳ್ಳೆಯ ಪ್ರಶ್ನೆ ಕೇಳಿದ್ದಕ್ಕೆ, ಸುಮ್ಮನೆ ಕುಳಿತದ್ದಕ್ಕೂ ಕೂಡ!

ಸ್ಟ್ರೀನ್‌ ಟೈಮ್‌ ಬ್ರೇಕಪ್‌
ಒಂದು ಗಂಟೆಯ ಆನ್‌ಲೈನ್‌ ಸೆಷನ್‌ ಇದ್ದರೆ. ಮಧ್ಯೆ ಮೂರು ನಿಮಿಷಗಳ ಎರಡು ಗ್ಯಾಪ್‌ ಕೊಡುವುದು ಒಳ್ಳೆಯದು. ನಿರಂತರ ಸ್ಕ್ರೀನ್ ನೋಡುವುದು ಕಲಿಕೆಗೆ ಒಳ್ಳೆಯದಲ್ಲ. ಆ ಹೊತ್ತಿನಲ್ಲಿ ನೀವು ಮಗುವಿಗೆ ಒಂದು ರೌಂಡ್‌ ಮನೆಗೆ ಸುತ್ತು ಹೊಡೆದು, ಮನೆಯಲ್ಲಿ ಕಿಟಕಿಗಳು ಎಷ್ಟಿವೆ ಎಂದು ಎಣಿಸಲು ಹೇಳಬಹುದು!

ಸ್ವಾತಂತ್ರ್ಯಕ್ಕೆ ಪ್ರೋತ್ಸಾಹ
ಸಾಧ್ಯವಾದಷ್ಟು ಅವರ ಕೆಲಸ ಅವರೇ ಮಾಡಿಕೊಳ್ಳಲು ಕಲಿಸಬೇಕು. ಅಂದರೆ ಇಂದು ಕೊಟ್ಟ ಹೋಮ್‌ವರ್ಕ್‌ ನಾಳೆ ಕ್ಲಾಸಿನ ಹೊತ್ತಗೆ ಅವರು ತಾವಾಗಿಯೇ ಮುಗಿಸುವಂತಿದ್ದರೆ ಅಷ್ಟರ ಮಟ್ಟಿಗೆ ಶಿಕ್ಷಕರಿಗೂ ಹೆತ್ತವರಿಗೂಊ ಹೊರೆ ಕಡಿಮೆಯಾಗುತ್ತದೆ. 

ನಾಲಿಗೆಗೆ ರುಚಿಸದ, ದೇಹಕ್ಕೆ ಹಿತವಾದ ಆಹಾರವನ್ನು ಹೊಟ್ಟೆಗೆ ಸೇರಿಸೋದು ಹೇಗೆ? ...

ನೆರವು ಕೇಳಲು ಮುಜುಗರ ಬೇಡ
ಮಗುವಿಗೆ ಕಲಿಕೆಯಲ್ಲಿ ಏನಾದರೂ ಸಮಸ್ಯೆ ಆಗುತ್ತಿದೆ ಅನಿಸಿದರೆ ನಿಮ್ಮ ಶಿಕ್ಷಕರ ನೆರವು ಕೇಳಲು, ಮನೋವಿಶ್ಲೇಷಕರ ನೆರವು ಪಡೆಯಲು ಆತಂಕ ಬೇಡ.

ಹೊರಗೆ ಕರೆದುಕೊಂಡು ಹೋಗಿ
ಒಂದು ದಿನಕ್ಕೆ ಒಂದಕ್ಕಿಂತ ಹೆಚ್ಚು ಆನ್‌ಲೈನ್‌ ಕ್ಲಾಸ್‌ ಬೇಡ. ಎರಡು ಆನ್‌ಲೈನ್‌ ಕ್ಲಾಸ್‌ಗಳ ನಡುವೆ ಒಂದು ಬ್ರೇಕ್‌ ಇರಲಿ. ಮನೆಯಿಂದ ಸ್ವಲ್ಪ ಹೊರಗೆ, ಉತ್ತಮ ಗಾಳಿಯಲ್ಲಿ ಸುತ್ತಾಡುವ ಅಭ್ಯಾಸ ಮಾಡಿಸಿ.

ಸರಿಯಾದ ಆಸನ
ಮಗುವಿಗೆ ಕಂಪ್ಯೂಟರ್‌ ಎದುರು ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆ ಇರಲಿ. ಒರಗಿಕೊಂಡೋ, ಮಲಗಿಕೊಂಡೋ ಕ್ಲಾಸ್‌ನಲ್ಲಿ ಕುಳಿತುಕೊಳ್ಳುವುದು ಸೂಕ್ತವಲ್ಲ.