Parenting Tips: ನಿಮ್ಮ ಮಕ್ಕಳು ಶಾಲೆಯಿಂದ ಮನೆಗೆ ಬರ್ತಿದ್ದ ಹಾಗೆ ಈ 5 ಪ್ರಶ್ನೆಗಳನ್ನು ಕೇಳಬೇಡಿ

Published : Apr 22, 2025, 12:01 PM ISTUpdated : Apr 22, 2025, 12:56 PM IST
Parenting Tips: ನಿಮ್ಮ ಮಕ್ಕಳು ಶಾಲೆಯಿಂದ ಮನೆಗೆ ಬರ್ತಿದ್ದ ಹಾಗೆ ಈ 5 ಪ್ರಶ್ನೆಗಳನ್ನು ಕೇಳಬೇಡಿ

ಸಾರಾಂಶ

ಮಕ್ಕಳ ಆತಂಕ ಹೆಚ್ಚಿಸುವ ಐದು ಪ್ರಶ್ನೆಗಳನ್ನು ಶಾಲೆಯಿಂದ ಬಂದ ಮೇಲೆ ಕೇಳಬೇಡಿ. "ಇವತ್ತು ಏನಾಯ್ತು?", "ಎಷ್ಟು ಅಂಕ?", "ಯಾರು ಬುದ್ಧಿವಂತರು?", "ಶಿಕ್ಷಕರು ಗದರಿಸಿದರಾ?", "ಏನನ್ನಾದರೂ ಮರೆಮಾಚುತ್ತಿದ್ದೀಯಾ?" ಇವು ಮಕ್ಕಳ ಮೇಲೆ ಒತ್ತಡ ಹೇರುತ್ತವೆ. ಬದಲಾಗಿ, ಅವರಿಗೆ ವಿಶ್ರಾಂತಿ ನೀಡಿ, ಸ್ವಯಂಪ್ರೇರಿತವಾಗಿ ಮಾತನಾಡಲು ಅವಕಾಶ ಕಲ್ಪಿಸಿ, ಸಕಾರಾತ್ಮಕ ಸಂವಾದ ನಡೆಸಿ.

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಸಂತೋಷವಾಗಿರಬೇಕು, ಮುಂದೆ ಬರಬೇಕು ಮತ್ತು ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಬಯಸುತ್ತಾರೆ. ಇದೇ ಕಾರಣಕ್ಕೆ ಶಾಲೆಯಿಂದ ಬಂದಾಗ ಮಗುವಿಗೆ  ಇವತ್ತು ಏನಾಯಿತು, ಯಾರಿಗೆ ಎಷ್ಟು ಅಂಕಗಳನ್ನು ಕೊಟ್ಟಿದ್ದಾರೆ?, ಶಿಕ್ಷಕರು ಏನಾದರೂ ಹೇಳಿದರಾ? ಎಂಬಂತಹ ಹಲವಾರು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾರೆ. ಆದರೆ ನಿಮಗೆ ಗೊತ್ತಾ... ಇಂತಹ ಪ್ರಶ್ನೆಗಳು ಮಕ್ಕಳಿಗೆ ಮುದ ಕೊಡುವ ಬದಲಾಗಿ ಮಾನಸಿಕ ಒತ್ತಡ ಉಂಟು ಮಾಡುತ್ತವೆ. ಹಾಗೆ ನೋಡಿದರೆ ಮಕ್ಕಳು ಶಾಲೆಯಿಂದ ಹಿಂತಿರುಗಿದಾಗ ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿರುತ್ತಾರೆ. ಆಗ ಅವರ ಮೇಲೆ ಪ್ರಶ್ನೆಗಳ ಸುರಿಮಳೆ ಸುರಿಸಿದರೆ, ಅವರು ಕಿರಿಕಿರಿಗೊಳ್ಳುವುದಲ್ಲದೆ, ಕ್ರಮೇಣ ಆತಂಕ ಮತ್ತು ಮಾನಸಿಕ ಒತ್ತಡದ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ಹಾಗಾಗಿ ಶಾಲೆಯಿಂದ ಹಿಂತಿರುಗುವ ಮಕ್ಕಳಿಗೆ ತಪ್ಪಿಯೂ ಕೇಳಬಾರದ 5 ಪ್ರಶ್ನೆಗಳು (Do not Ask Your Kids This After School) ಯಾವುವು ಮತ್ತು ಏಕೆ ಎಂದು ತಿಳಿಯೋಣ ಬನ್ನಿ... 

ಪೋಷಕರು ಮಕ್ಕಳ ಮುಂದೆ ಇವುಗಳನ್ನು ಮಾಡಬೇಡಿ ಅಂತಾರೆ ಚಾಣಕ್ಯ

ಪ್ರಶ್ನೆ 1: ಇವತ್ತು ಶಾಲೆಯಲ್ಲಿ ಏನಾಯಿತು?
ಕೇಳಬಾರದೇಕೆ: ಮಕ್ಕಳು ಇಡೀ ದಿನ ಶಾಲೆಯಲ್ಲಿ ಕಳೆದು ನಂತರ ಮನೆಗೆ ಹಿಂತಿರುಗುತ್ತಾರೆ. ದಿನವಿಡೀ ಏನಾಯಿತು ಎಂದು ಹೇಳಲು ಅವರಿಗೆ ತಿಳಿಯುವುದಿಲ್ಲ.ಈ ರೀತಿಯ ಪ್ರಶ್ನೆಯು ಮಗುವನ್ನು ಪ್ರತಿಯೊಂದು ಸಣ್ಣ ವಿವರವನ್ನು ನೆನಪಿಟ್ಟುಕೊಂಡು ಪುನರಾವರ್ತಿಸಲು ಇನ್ನಷ್ಟು ಹೊರೆ ಮತ್ತು ದಣಿದಂತೆ ಮಾಡುತ್ತದೆ. ಇದರ ಬದಲಾಗಿ ಮಕ್ಕಳಿಗೆ ಸ್ವಲ್ಪ ಸಮಯ ನೀಡಿ. ಅವರು ಸ್ವಲ್ಪ ವಿಶ್ರಾಂತಿ ಪಡೆಯಲಿ. ಒಂದು ವೇಳೆ ಮಕ್ಕಳೇ ನಿಮ್ಮ ಬಳಿ ಬಂದು ಏನಾದರೂ ಹೇಳಲು ಬಯಸಿದಾಗ ಎಚ್ಚರಿಕೆಯಿಂದ ಆಲಿಸಿ.

ಪ್ರಶ್ನೆ 2: ಎಷ್ಟು ಅಂಕ ಬಂದಿದೆ? 
ಕೇಳಬಾರದೇಕೆ: ಎಲ್ಲಾ ಮಕ್ಕಳು ಪ್ರತಿಯೊಂದು ವಿಷಯದಲ್ಲೂ ನಿಪುಣನಾಗಿರಲು ಸಾಧ್ಯವಿಲ್ಲ. ನಾವು ಪ್ರತಿದಿನ ಅಂಕಗಳು ಅಥವಾ  ಗ್ರೇಡ್‌ ಗಳ ಬಗ್ಗೆ ಮಾತನಾಡಿದರೆ, ಮಕ್ಕಳು ತಮ್ಮನ್ನು ತಾವು ಕೇವಲ ಅಂಕ ಪಡೆಯಲು ಶಾಲೆಗೆ ಹೋಗಬೇಕು ಎಂದು ಪರಿಗಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕ್ರಮೇಣ ಅವರಿಗೆ ಒಳ್ಳೆಯ ಅಂಕಗಳು ಬರದಿದ್ದರೆ ಹೆತ್ತವರು ಕೋಪಗೊಳ್ಳುತ್ತಾರೆ ಎಂಬ ಭಯ ಕಾಡಲು ಸಹ ಪ್ರಾರಂಭಿಸುತ್ತದೆ. ಆದರೆ ಮಕ್ಕಳ ಪ್ರಯತ್ನಗಳನ್ನು ಪ್ರಶಂಸೆ ಮಾಡಿ, ಫಲಿತಾಂಶಗಳನ್ನಲ್ಲ. "ಕಷ್ಟಪಟ್ಟು ಓದಿದ್ದೀಯ ವೆರಿ ಗುಡ್" ಎಂದು ಹೇಳಿ ಖುಷಿಯಾಗುತ್ತದೆ.   

ಪ್ರಶ್ನೆ 3:ಯಾರು ಬಹಳ ಬುದ್ಧಿವಂತರು? 
ಕೇಳಬಾರದೇಕೆ:ಈ ಪ್ರಶ್ನೆಯು ಇತರರೊಂದಿಗೆ ಹೋಲಿಸುತ್ತಿದ್ದಾರೆ ಎಂಬ ಆಳವಾದ ಸಂದೇಶವನ್ನು ಹೊಂದಿದೆ. ಇದು ಮಕ್ಕಳ ಮನಸ್ಸಿನಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು ಮತ್ತು  ತನ್ನನ್ನು ತಾನು ಕೀಳಾಗಿ ಪರಿಗಣಿಸಲು ಪ್ರಾರಂಭಿಸಬಹುದು. "ಯಶಸ್ಸು ಎಂದರೆ ಇತರರಿಗಿಂತ ಬುದ್ಧಿವಂತ ಎಂಬುದನ್ನು ತೋರಿಸಿಕೊಳ್ಳುವುದಲ್ಲ, ಬದಲಾಗಿ ಉತ್ತಮನಾಗುವುದು" ಎಂಬುದನ್ನು ಮಕ್ಕಳಿಗೆ ಕಲಿಸಿ.

ಪೋಷಕರು ಮತ್ತು ಹದಿಹರೆಯದವರು ನೋಡಲೇಬೇಕಾದ 'ಅಡೋಲಸೆನ್ಸ್' ವೆಬ್ ಸಿರೀಸ್

ಪ್ರಶ್ನೆ 4: ಶಿಕ್ಷಕರು ನಿನಗೆ ಗದರಿಸಿದರಾ?
ಕೇಳಬಾರದೇಕೆ:ಈ ಪ್ರಶ್ನೆಯಿಂದ ಶಾಲೆಯಲ್ಲಿ  ನನ್ನ ವರ್ತನೆ ಸರಿಯಿಲ್ಲ ಎಂದು ಪೋಷಕರು ಅಂದುಕೊಳ್ಳುತ್ತಿದ್ದಾರೆ ಎಂದು ಮಕ್ಕಳು ಭಾವಿಸುತ್ತಾರೆ. ಇದರಿಂದ ಮಗುವಿಗೆ ತನ್ನ ವರ್ತನೆ ಬಗ್ಗೆ ಯಾವಾಗಲೂ ಪೋಷಕರಿಗೆ ಅನುಮಾನವಿದೆ ಎಂದನಿಸುವಂತೆ ಮಾಡುತ್ತದೆ. ಆದ್ದರಿಂದ ಹೀಗೆ ಕೇಳುವ ಬದಲು "ಇಂದು ಶಾಲೆಯಲ್ಲಿ ಅತ್ಯಂತ ಫನ್ನಿ  ಕ್ಷಣ ಯಾವುದು?" ಎಂದು ಕೇಳಿ. ಇದು ಸಂಭಾಷಣೆಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ಕೊಂಡೊಯ್ಯುತ್ತದೆ.

ಪ್ರಶ್ನೆ5: ಏನನ್ನಾದರೂ ಮರೆಮಾಚುತ್ತಿದ್ದೀಯಾ?
ಕೇಳಬಾರದೇಕೆ: ಎಲ್ಲಾ ಮಕ್ಕಳು ಪ್ರತಿದಿನ ಮುಕ್ತವಾಗಿ ಮಾತನಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಸುಮ್ಮನಿರಲು ಬಯಸುತ್ತವೆ. ಒಂದು ವೇಳೆ ನೀವು ಮತ್ತೆ ಮತ್ತೆ ಪ್ರಶ್ನೆ ಕೇಳಿದಾಗ, ಅವರು ಮತ್ತೆ ಗೊಂದಲಕ್ಕೊಳಗಾಗುತ್ತಾರೆ. ಹೆತ್ತವರು ಕೋಪಗೊಳ್ಳುತ್ತಾರೆಂದು  ಏನನ್ನಾದರೂ ಹೇಳಬೇಕಾ ಎಂದು ಭಾವಿಸುತ್ತಾರೆ. ಆದ್ದರಿಂದ ಮಗುವಿಗೆ ಸಮಯ ಕೊಡಿ. ಅದು ಬಯಸಿದಾಗಲೆಲ್ಲಾ ಮಾತನಾಡಬಹುದೆಂಬ ಭರವಸೆ ನೀಡಿ.

ಈ ವಿಷಯಗಳನ್ನು ನೆನಪಿಡಿ...
* ಶಾಲೆಯಿಂದ ಹಿಂತಿರುಗಿದ ನಂತರ ಮಕ್ಕಳು 30 ನಿಮಿಷಗಳ ಕಾಲ ತನಗೆ ಬೇಕಾದುದನ್ನು ಮಾಡಲು ಬಿಡಿ.  ಆಟವಾಡಲು, ತಿನ್ನಲು ಅಥವಾ ಮಲಗಲು ಬಿಡಿ.
* ಏನನ್ನಾದರೂ ಮಾತನಾಡುವಂತೆ ವಾತಾವರಣವನ್ನು ರಚಿಸಿ. ಮಗುವಿಗೆ ಆರಾಮದಾಯಕ ಅನಿಸಿದಾಗ, ನಿಧಾನವಾಗಿ ಸಂಭಾಷಣೆಯನ್ನು ಪ್ರಾರಂಭಿಸಿ.
* ನೀವೂ ಸಹ ಹಂಚಿಕೊಳ್ಳಿ. ನಿಮ್ಮ ದಿನ ಹೇಗಿತ್ತು ಎಂದು ಹೇಳಿ. ಇದರಿಂದ ಅವರು ಓಪನ್ ಅಪ್ ಆಗಲು ಪ್ರಾರಂಭಿಸುತ್ತಾರೆ. 
* ಅವರನ್ನು ತಬ್ಬಿಕೊಳ್ಳಿ, ತಲೆಯನ್ನು ತಟ್ಟಿ, ಈ ಸಣ್ಣ ಭಾವನಾತ್ಮಕ ಸನ್ನೆಗಳು ಮಕ್ಕಳ ಆತಂಕವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!