ಅಪ್ಪ-ಅಮ್ಮನ ಮದ್ವೆಗೆ ಕರೆದಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಮಗಳು: ತಪ್ಪು ಮಾಡಿಬಿಟ್ರಿ ಅಂತಿರೋ ನೆಟ್ಟಿಗರು

Published : Apr 20, 2025, 05:20 PM ISTUpdated : Apr 20, 2025, 06:59 PM IST
ಅಪ್ಪ-ಅಮ್ಮನ ಮದ್ವೆಗೆ ಕರೆದಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಮಗಳು: ತಪ್ಪು ಮಾಡಿಬಿಟ್ರಿ ಅಂತಿರೋ ನೆಟ್ಟಿಗರು

ಸಾರಾಂಶ

ಮದುವೆಯ ಫೋಟೋದಲ್ಲಿ ತಮ್ಮಿಲ್ಲವೆಂದು ಮಗಳು ಅಳುವ ವಿಡಿಯೋ ವೈರಲ್ ಆಗಿದೆ. ಅಪ್ಪ-ಅಮ್ಮನ ಮದುವೆಗೆ ತನ್ನನ್ನು ಕರೆಯಲಿಲ್ಲವೆಂದು ಬಾಲಕಿ ಬಿಕ್ಕಿ ಬಿಕ್ಕಿ ಅಳುತ್ತಾ, ಫೋಟೋವನ್ನೂ ತಿರಸ್ಕರಿಸಿದ್ದಾಳೆ. ತಾನು ಚಿಕ್ಕವಳಿದ್ದಾಗಿನ ಫೋಟೋವಷ್ಟೇ ಚೆನ್ನಾಗಿದೆ ಎಂದಿದ್ದಾಳೆ. ನೆಟ್ಟಿಗರು ಪೋಷಕರನ್ನು ತಮಾಷೆ ಮಾಡುತ್ತಾ ಮತ್ತೊಮ್ಮೆ ಮದುವೆಯಾಗಲು ಸಲಹೆ ನೀಡಿದ್ದಾರೆ.

ಅಪ್ಪ-ಅಮ್ಮನ ಮದುವೆಯ ಫೋಟೋ ನೋಡಿ ತಮ್ಮನ್ನು ಯಾಕೆ ಕರೆದಿಲ್ಲ ಎಂದು ಮಕ್ಕಳು ಕೇಳುವುದು ಬಹುತೇಕ ಮನೆಗಳಲ್ಲಿ ಮಾಮೂಲಾಗಿದೆ. ಮದುವೆಯ ಆಲ್ಬಂ ನೋಡುತ್ತಿದ್ದಂತೆಯೇ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಅಪ್ಪ-ಅಮ್ಮ ಉತ್ತರಿಸಲಾಗದೇ ಕಕ್ಕಾಬಿಕ್ಕಿಯಾಗುವುದು ಸಹಜ. ಆ ಸಮಯದಲ್ಲಿ ನೀನು ಹುಟ್ಟಿರಲಿಲ್ಲ ಎಂದರೆ ಯಾಕೆ, ಎಲ್ಲಿದ್ದೆ? ಮದುವೆಯಾದ ಮೇಲೆ ಯಾಕೆ ಹುಟ್ಟಿದೆ, ಎಲ್ಲಿಂದ ಬಂದೆ...? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿ ತಬ್ಬಿಬ್ಬು ಮಾಡುವ ಮಕ್ಕಳು ಬಹುತೇಕ ಮನೆಗಳಲ್ಲಿ ಕಾಣಸಿಗುತ್ತಾರೆ. ಕೆಲವೊಮ್ಮೆ ಬಂದಿರುವ ಅತಿಥಿಗಳ ಎದುರು ಏನೇನೋ ಪ್ರಶ್ನೆಗಳನ್ನು ಕೇಳಿ ಮುಜುಗರವನ್ನೂ ಮಾಡುವುದು ಉಂಟು. ಮಕ್ಕಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಗೊತ್ತಿಲ್ಲ ಎನ್ನಬಾರದು, ಸಮಾಧಾನಚಿತ್ತವಾಗಿ ಎಲ್ಲದ್ದಕ್ಕೂ ಉತ್ತರಿಸಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ ಇಂಥ ಪ್ರಶ್ನೆಗಳನ್ನು ಕೇಳಿದಾಗ ಅವರಿಗೆ ಅರ್ಥ ಮಾಡಿಸುವುದು ಹೇಗೆ ಎನ್ನುವ ಪ್ರಶ್ನೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.

ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ದಿ ವಂಡರ್​ಲಸ್ಟ್​ ಎನ್ನುವ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದೆ. ಇದಲ್ಲಿ ಬಾಲಕಿಯೊಬ್ಬಳು ಜೋರಾಗಿ ಅಳುವುದನ್ನು ನೋಡಬಹುದು. ಪಕ್ಕದಲ್ಲಿ ಇರುವ ಅಪ್ಪ-ಅಮ್ಮ ಅದಕ್ಕೆ ಕಾರಣ ಕೇಳಿದಾಗ ಮದುವೆಗೆ ಕರೆದಿಲ್ಲ ಎನ್ನುವ ಕೋಪ ಅವಳಿಗೆ. ಅಪ್ಪ-ಅಮ್ಮನ ಮದುವೆಯ ಫೋಟೋ ನೋಡಿ ತನ್ನನ್ನು ಯಾಕೆ ಕರೆದಿಲ್ಲ ಎಂದು ಅಳುತ್ತಿದ್ದಾಳೆ. ನಿನಗೆ ಕರೆದಿಲ್ವಾ ಎಂದು ಕೇಳಿದಾಗ, ಮತ್ತಷ್ಟು ದುಃಖ ಬಂದು ಜೋರಾಗಿ ಬಿಕ್ಕಿಬಿಕ್ಕಿ ಅಳುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. 

ಹುಡುಗಿ ಜೊತೆ ಲವ್​, ಹುಡುಗನ ಜೊತೆ ಮದ್ವೆ! ಮಂಟಪದಿಂದ ಸ್ನೇಹಿತೆಯ ಎಳೆದೊಯ್ದ ಯುವತಿ

ಈ ಬಾಲಕಿಗೆ ಮದುವೆಗೆ ಕರೆದಿಲ್ಲ ಎನ್ನುವುದು ಎಷ್ಟು ಕೋಪ ತರಿಸಿದೆ ಎಂದರೆ, ಅಪ್ಪ-ಅಮ್ಮನ ಮದುವೆ ಫೋಟೋ ಅನ್ನೇ ಕೈಯಿಂದ ತಿರುಗಿಸಿ ಹಾಕಿದ್ದಾಳೆ, ಈ ಫೋಟೋ ಚೆನ್ನಾಗಿಲ್ಲ ಎಂದು ಸಿಟ್ಟಿನಿಂದ ಹೇಳಿದ್ದಾಳೆ. ಅದೇ ತಾವು ಇನ್ನೂ ಚಿಕ್ಕವಳು ಇರುವಾಗಿನ ಫೋಟೋ ತೋರಿಸಿದ್​ರೆ ಅದು ಚೆನ್ನಾಗಿದೆ ಎಂದಿದ್ದಾಳೆ. ಅಪ್ಪ- ಅಮ್ಮ ತಮ್ಮ ಮದುವೆಗೆ ಕರೆದಿಲ್ಲ ಎನ್ನುವ ಕಾರಣದಿಂದ ರೊಚ್ಚಿಗೆದ್ದಿರುವ ಬಾಲಕಿ, ಅವರ ಫೋಟೋ ನೋಡಿ ಕಣ್ಣು ದೊಡ್ಡದು ಮಾಡಿ ಚೆನ್ನಾಗಿಲ್ಲ ಎಂದು ಸಿಟ್ಟಿನಿಂದ ಹೇಳಿದ್ದಾರೆ. ಅದನ್ನು ಹರಿದು ಹಾಕುವುದು ಒಂದೇ ಬಾಕಿ.

ಇಂಥ ಸ್ಥಿತಿ ನಿಮ್ಮ ಮನೆಯಲ್ಲಿಯೂ ಬಂದಿರಬೇಕಲ್ಲವೆ? ಮಕ್ಕಳಿಗೆ ಏನೇ ಹೇಳಿದರೂ ಅವರು ಅದಕ್ಕೆ ಕೇಳುವ ಇನ್ನೊಂದು ಪ್ರಶ್ನೆಗೆ ಉತ್ತರಿಸಲು ಆಗದೇ ಪೇಚಿಗೆ ಸಿಲುಕಿರಬೇಕಲ್ಲವೆ? ಕೆಲವು ಮನೆಗಳಲ್ಲಿ ನೀನು ತುಂಬಾ ಚಿಕ್ಕವಳಿದ್ದಿ ನಿನಗೆ ನೆನಪಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುವುದೂ ಇದೆ. ಅದೇನೆ ಇದ್ದರೂ ನೆಟ್ಟಿಗರು ಮಾತ್ರ, ಅಪ್ಪ-ಅಮ್ಮನಿಗೆ ನೀವು ಮಗಳಿಗೆ ತುಂಬಾ ಮೋಸ ಮಾಡಿದ್ರಿ, ಅವಳನ್ನೂ ಕರೆದುಕೊಂಡು ಹೋಗಬೇಕಿತ್ತು ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವರು ನೀನು ಮದುವೆಗೆ ಹೋಗುವ ಹಾಗಿದ್ರೆ ಅವರ ಮನೆಯಲ್ಲಿ ಮದ್ವೆಯನ್ನೇ ಮಾಡ್ತಿರಲಿಲ್ಲ ಎಂದು ತಮಾಷೆ ಮಾಡಿದ್ದರೆ, ಹೋಗಲಿ ಬಿಡಿ, ಆ ಪುಟ್ಟ ಮಗುವಿನ ಸಲುವಾಗಿ ಅವಳ ಎದುರೇ ಮತ್ತೊಮ್ಮೆ ಮದ್ವೆಯಾಗಬಾರದಾ ಎಂದೂ ಸಲಹೆ ಕೊಡುತ್ತಿದ್ದಾರೆ. 

ಮದ್ವೆ ಆಗಲೇಬೇಕಾ? ಹೆಣ್ಣು ಬೇಕೇ ಬೇಕಾ? ನಟ ರವಿಚಂದ್ರನ್ ಅದ್ಭುತ ಮಾತು ಕೇಳಿ... ​

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!