ಶುರುವಾಗಿದೆ ಹಸ್ಬೆಂಡ್ ಟೆಸ್ಟ್ ಎಂಬ ಹೊಸ ಟ್ರೆಂಡ್! ಅಷ್ಟಕ್ಕೂ ಹೆಣ್ಮಕ್ಕಳು ಗಂಡಿನಲ್ಲಿ ಏನು ಹುಡುಕ್ತಾರೆ?

By Bhavani Bhat  |  First Published May 11, 2024, 5:33 PM IST

ಇದೊಂದು ವಿಚಿತ್ರ ಟೆಸ್ಟ್. ತನ್ನ ಬಾಯ್‌ ಫ್ರೆಂಡ್‌ಗೆ ನಿಜಕ್ಕೂ ಈ ಸಂಬಂಧದಲ್ಲಿ ಆಸಕ್ತಿ ಇದೆಯಾ ಇಲ್ವಾ ಅನ್ನೋದನ್ನು ಹುಡುಗೀರು ಈ ಟೆಸ್ಟ್ ಮೂಲಕ ಕನ್‌ಫರ್ಮ್‌ ಮಾಡ್ಕೊಳ್ತಾರಂತೆ.


ಈ ಫಾರಿನ್ ಜನಕ್ಕೆ ಮಾಡೋಕ್ಕೇನು ಕ್ಯಾಮೆ ಇಲ್ವೇ? ದಿನ್ ದಿನಾ ಒಂದಿಲ್ಲೊಂದು ತರ್ಲೆ ತೆಗೆದು ರಾದ್ಧಾಂತ ಮಾಡ್ ಬುಡ್ತವೆ. ಇದೀಗ ಫಾರಿನ್‌ನಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿರೋದು ಬಾಯ್‌ ಫ್ರೆಂಡ್‌ಗಳ 'ಹಸ್ಬೆಂಡ್ ಟೆಸ್ಟ್'. ಬಾಯ್‌ಫ್ರೆಂಡಿಗ್ ಹಸ್ಬೆಂಡ್ ಟೆಸ್ಟಾ? ಅಂತ ಒಂದಿಷ್ಟು ಜನ ತಲೆ ಕೆರ್ಕೊಳ್ಳಬಹುದು. ಕೆಲವು ತರ್ಲೆ ಹುಡುಗೀರು ನಮ್‌ ಬಾಯ್‌ ಫ್ರೆಂಡ್‌ ಜೊತೆಗೂ ಇದನ್ಯಾಕೆ ಟ್ರೈ ಮಾಡಬಾರದು ಎಂದು ಯೋಚನೆಗೆ ಬಿದ್ದಿರಬಹುದು. ಆದರೆ ನಿಮ್ಮ ದುರಾದೃಷ್ಟಕ್ಕೆ ಇದೆಲ್ಲ ಟ್ರೆಡಿಂಗ್ ಆಗ್ತಿರೋದು ಫಾರಿನ್‌ನಲ್ಲಿ. ಅಲ್ಲಿ ಟಿಕ್‌ಟಾಕ್‌ನಲ್ಲಿ ಸದ್ಯ ಸಖತ್ ಟ್ರೆಂಡಿಂಗ್‌ ಆಗ್ತಿರೋದು ಈ ಹಸ್ಬೆಂಡ್ ಟೆಸ್ಟ್. 

ಇಂದಿನ ಮಾಡರ್ನ್ ಲೈಫಿನಲ್ಲಿ ಸಂಬಂಧಗಳಿಗೆ ಗ್ಯಾರಂಟಿ ಕೊಡೋದಕ್ಕಾಗಲ್ಲ. ಇವತ್ತು ಜೊತೆಗೇ ಓಡಾಡಿಕೊಂಡಿದ್ದವರು ಮರುದಿನ ಸಪರೇಟ್ ಆಗಬಹುದು. ರಿಲೇಶನ್‌ಶಿಪಲ್ಲಿ ಬೀಳೋದು, ಸಪರೇಟ್ ಆಗೋದು ನೀರು ಕುಡಿದಷ್ಟೇ ಸಲೀಸು. ಹೀಗಾಗಿ ತನ್ನ ಜೊತೆ ಇರೋ ಬಾಯ್‌ ಫ್ರೆಂಡ್‌ ತನಗೆ ಲಾಯಲ್ ಆಗಿ ಇದ್ದಾನಾ? ತನ್ನ ಜೊತೆಗೆ ಈತನ ಸಂಬಂಧ ದೀರ್ಘ ಕಾಲ ಇರುತ್ತಾ ಅಥವಾ ಜಸ್ಟ್ ಟೈಮ್‌ ಪಾಸ್‌ಗೆ ತನ್ನ ಜೊತೆ ಸುತ್ತಾಡ್ತಿದ್ದಾನಾ? ಈ ಮಾದರಿಯ ಸಂದೇಹ ಬರೋದು ಕಾಮನ್‌. ಇದಕ್ಕೆ ತಕ್ಕಂತೆ ಈ ಬಾಯ್‌ ಫ್ರೆಂಡ್‌ಗೆ ಟೆಸ್ಟಿಂಗ್ ಶುರುವಾಗಿದೆ. ಅದೇ 'ಹಸ್ಬೆಂಡ್ ಟೆಸ್ಟ್'.  ಹೆಣ್ಮಕ್ಕಳು ತಮ್ಮ ಬಾಯ್‌ಫ್ರೆಂಡ್‌ ಅನ್ನು ಪರೀಕ್ಷೆ ಮಾಡಲು ಈ ಹೊಸ ಚಾಲೆಂಜ್‌ ಶುರು ಮಾಡಿದ್ದಾರೆ. ತಮ್ಮ ರಿಲೇಶನ್‌ಶಿಪ್‌ ಎಷ್ಟು ಗಟ್ಟಿ ಇದೆ ಮತ್ತು ತಮ್ಮಬಾಯ್‌ಫ್ರೆಂಡ್‌ ಆ ಸಂಬಂಧದಲ್ಲಿ ಎಷ್ಟು ಆಳವಾಗಿ ಬೇರೂರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ನಾರಿಯರ ಹೊಸ ತಂತ್ರವಿದು.

Tap to resize

Latest Videos

  ಬಾಯ್‌ಫ್ರೆಂಡ್‌ಗಿರುವ ಬದ್ಧತೆಯನ್ನು ಪರೀಕ್ಷಿಸುವ ಹೊಸ ಸವಾಲು ಸಾಮಾಜಿಕ ಜಾಲಗಳಲ್ಲಿ  ನಡೆಯುತ್ತಿದೆ. ಈಗಾಗಾಲೇ ಹಲವು ನೀರೆಯರು 'ಹಸ್ಬೆಂಡ್ ಟೆಸ್ಟ್' ಮಾಡಿ ತಮ್ಮ ಬಾಯ್‌ಫ್ರೆಂಡ್‌ ಕುರಿತು ತಿಳಿದುಕೊಂಡಿದ್ದಾರೆ. ತಮ್ಮ ಜೊತೆಗಾರನ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಕುತೂಹಲದಿಂದ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್‌ ಮಾಡುತ್ತಿದ್ದಾರೆ.  

ಅಷ್ಟಕ್ಕೂ ಈ ಟ್ರೆಂಡ್ ಏನು ಅಂದರೆ ಮಹಿಳೆಯರು ತಮ್ಮ ಬಾಯ್‌ ಫ್ರೆಂಡ್‌ ಜೊತೆಗೆ ಸಂಭಾಷಣೆ ನಡೆಸುವ ಸಮಯದಲ್ಲಿ ಆತನನ್ನು 'ಗಂಡ' ಅಥವಾ ಹಸ್ಬೆಂಡ್‌ ಎಂದು ಕರೆಯುತ್ತಾರೆ. ಆಗ ಅವರ ಬಾಯ್‌ಫ್ರೆಂಡ್‌ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದೇ ಅವರ ಉದ್ಧೇಶ. ಅಲ್ಲದೆ ಈ ಕ್ಷಣದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.‌ ಒಂದು ವೇಳೆ ಬಾಯ್‌ಫ್ರೆಂಡ್‌ ಅನ್ನು 'ಗಂಡ' ಎಂದು ಕರೆದ ನಂತರವೂ ಆತ ನಗುತ್ತಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಆ ಸಂಬಂಧದ ಮೇಲೆ ಆತನಿಗಿರುವ ಬದ್ಧತೆ ಹುಡುಗಿಗೆ ತಿಳಿಯುತ್ತದೆ. ಒಂದು, ಅವನು ತನ್ನ ಗೆಳತಿಯನ್ನು ತಿದ್ದಿ ತಾನು ಗಂಡ ಅಲ್ಲ ಎನ್ನುವ ಮೂಲಕ ನಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸಿದರೆ, ಅವನು ದೀರ್ಘಾವಧಿಯ ಸಂಬಂಧದಲ್ಲಿ ಉಳಿಯಲ್ಲ ಎಂದು ಸೂಚಿಸುತ್ತದೆ.

ಸುಖ ದಾಂಪತ್ಯ ಜೀವನಕ್ಕೆ ಮೂಲ ನಿಯಮಗಳಿವು, ತಪ್ಪಿದ್ರೆ ಜಗಳ ಗ್ಯಾರಂಟಿ!
 
ಕೆಂಜಿ ಗ್ರೀನ್ ಎಂಬ ಮಹಿಳೆ, ತನ್ನ ಗೆಳೆಯನ ಕುರಿತು ತಿಳಿಯಲು ಉದ್ದೇಶಪೂರ್ವಕವಾಗಿ ಆತನಿಗೆ ವಿಡಿಯೋ ಕಾಲ್ ಮಾಡುತ್ತಾಳೆ. ಆತನ ಪ್ರತಿಕ್ರಿಯೆಯ ವಿಡಿಯೋವನ್ನು ಪೋಸ್ಟ್ ಮಾಡುವುದರೊಂದಿಗೆ 'ಹಸ್ಬೆಂಡ್ ಟೆಸ್ಟ್' ಟ್ರೆಂಡ್ ಪ್ರಾರಂಭವಾಯಿತು. ಆದರೆ, ಆಕೆಯ ಮೊದಲ ಪ್ರಯತ್ನ ಸಫಲ ಫಲಿತಾಂಶ ಕೊಡಲಿಲ್ಲ. ಆಕೆ ತನ್ನ ಬಾಯ್‌ಫ್ರೆಂಡ್‌ ಅನ್ನು ಗಂಡ (ಹಸ್ಬೆಂಡ್‌) ಎಂದು ಕರೆದಾಗ, ಆತ “ನಾನು ನಿನ್ನ ಗಂಡನಲ್ಲ” ಎಂದು ಪ್ರತಿಕ್ರಿಯಿಸುತ್ತಾನೆ. ಅಲ್ಲದೆ ವಿಡಿಯೋ ಕಾಲ್‌ ಕೂಡಾ ಸ್ವಿಚ್ ಆಫ್ ಮಾಡುತ್ತಾನೆ.  

ಕೆಂಜಿ ಗ್ರೀನ್ ತನ್ನ ಬಾಯ್‌ಫ್ರೆಂಡ್‌ಗೆ ಆ ರಿಲೇಶನ್‌ಶಿಪ್‌ ಮೇಲೆ ಬದ್ಧತೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಅನೇಕ ಜನರು ಟಿಕ್‌ಟಾಕ್‌ನಲ್ಲಿ ಇದೇ ರೀತಿಯ ವಿಡಿಯೊಗಳನ್ನು ಪೋಸ್ಟ್ ಮಾಡಲು ಆರಂಭಿಸಿದ್ದಾರೆ. ಸೋ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿ ಬಿಡಿ, ನಿಮ್ಮ ಬಾಯ್‌ಫ್ರೆಂಡ್‌ ಟೆಸ್ಟ್‌ ಅನ್ನಂತೂ ಈ ತಂತ್ರದಲ್ಲಿ ನೀವು ಮಾಡಬಹುದು. ಆಮೇಲಿನದ್ದು ದೇವರಿಗೆ ಬಿಟ್ಟದ್ದು!

ಗಂಡ ಹೆಂಡತಿ ನಡುವೆ ಪ್ರೀತಿ ಹೆಚ್ಚಾಗಲು ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ
 

click me!