ಬಾಲಿವುಡ್ ನಟಿ ವಿದ್ಯಾಬಾಲನ್ ಸಿದ್ದಾರ್ಥ್ ರಾಯ್ ಕಪೂರ್ ಮದುವೆಯಾಗಿ ಸಂತೋಷವಾಗಿದ್ದಾರೆ. ಮದುವೆಗೂ ಮುನ್ನ ವಿದ್ಯಾಬಾಲನ್ ದೃಢ ನಿರ್ಧಾರವೊಂದನ್ನು ತೆಗೆದುಕೊಂಡಿದ್ದರು. ವಿವಾಹ ಬಂಧನದಲ್ಲಿ ಬಂಧಿಯಾಗೋದು ಅವರಿಗೆ ಇಷ್ಟವಿರಲಿಲ್ಲ. ಆದ್ರೆ ಮುಂದೆ ನಡೆದಿದ್ದೇ ಬೇರೆ.
ನಟನೆ ಹಾಗೂ ವಿಭಿನ್ನ ಸ್ಟೈಲ್ ನಿಂದಲೇ ಸಿನಿ ಪ್ರೇಮಿಗಳನ್ನು ಸೆಳೆದಿರುವ ನಟಿ ವಿದ್ಯಾ ಬಾಲನ್. ಝಿರೋ ಪರ್ಸನಾಲಿಟಿಗೆ ಎಂದೂ ಮಹತ್ವ ನೀಡದ ವಿದ್ಯಾ ಬಾಲನ್, ನಟನೆ ಮೂಲಕವೇ ಕೋಟ್ಯಾಂತರ ಮಂದಿಯನ್ನು ಸೆಳೆದಿದ್ದಾರೆ. ವಿದ್ಯಾ ಬಾಲನ್ ಸದ್ಯ ದೋ ಔರ್ ದೋ ಪ್ಯಾರ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರದ ಸಂದರ್ಶನವೊಂದರಲ್ಲಿ ವಿದ್ಯಾ ತಮ್ಮ ಜೀವನದ ಗುಟ್ಟೊಂದನ್ನು ಹೇಳಿದ್ದಾರೆ.
ಮದುವೆ (Marriage) ಬೇಡವೆಂಬ ನಿರ್ಧಾರಕ್ಕೆ ಬಂದಿದ್ದ ವಿದ್ಯಾ ಬಾಲನ್ (Vidya Balan) : ನಮ್ಮಲ್ಲಿ ಅನೇಕ ಮಹಿಳೆಯರು ಮದುವೆ ಬೇಡ ಎಂದು ನಿರ್ಧರಿಸಿರುತ್ತಾರೆ. ಅದ್ರಲ್ಲಿ ನಟಿ ವಿದ್ಯಾ ಬಾಲನ್ ಕೂಡ ಸೇರಿದ್ದಾರೆ. ವಿದ್ಯಾ, ಮದುವೆ ಬೇಡ ಎಂಬ ತೀರ್ಮಾನಕ್ಕೆ ಬರಲು ಕಾರಣ ಪ್ರೀತಿ (Love) ಯಲ್ಲಾದ ಮೋಸ. ವಿದ್ಯಾ ಬಾಲನ್ ಗೂ ಪ್ರೀತಿಯಲ್ಲಿ ಮೋಸವಾಗಿತ್ತು. ಆ ಕ್ಷಣಕ್ಕೆ ವಿದ್ಯಾ ಮದುವೆ ಬೇಡ ಎನ್ನುವ ನಿರ್ಧಾರ ಕೈಗೊಂಡಿದ್ದರು. ನಿಮಗೆ ಯಾರಾದ್ರೂ ಮೋಸ ಮಾಡಿದ್ರೆ ಅದು ನಿಮ್ಮ ತಪ್ಪಲ್ಲ. ಅದು ಅವರ ಸ್ವಭಾವವಾಗಿರುತ್ತದೆ. ಆ ಸಮಯದಲ್ಲಿ ನಾನು ತುಂಬಾ ಚಿಕ್ಕವಳಾಗಿದ್ದೆ. ನನ್ನ ಹೃದಯ ಒಡೆದಿತ್ತು. ನಾನು ದ್ವಂಸಗೊಂಡಿದ್ದೆ. ನಾನು ಚೆನ್ನಾಗಿಲ್ವಾ ಎಂಬ ಆಲೋಚನೆಯೂ ಬಂದು ಹೋಗಿತ್ತು ಎನ್ನುತ್ತಾರೆ ವಿದ್ಯಾ ಬಾಲನ್.
ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಡಲು ಶಾರೂಖ್ ಜೊತೆಗಿನ ಸಂಬಂಧ ಕಾರಣನಾ?
ಮತ್ತೆ ವಿದ್ಯಾ ಬಾಲನ್ ಮದುವೆಗೆ ಒಪ್ಪಿದ್ದು ಹೇಗೆ? : ವಿದ್ಯಾ ಬಾಲನ್ ಈ ವಿಷ್ಯವನ್ನೂ ಅಭಿಮಾನಿಗಳ ಮುಂದಿಟ್ಟಿದ್ದಾರೆ. ನನಗೆ ಮದುವೆ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದೆ ಎಂದಾಗ ನಿರೂಪಕರು ಮತ್ತೆ ಮದುವೆ ಆಗಿದ್ದು ಹೇಗೆ ಎಂದು ಮರುಪ್ರಶ್ನೆ ಹಾಕಿದ್ದಾರೆ. ಅದಕ್ಕೆ ವಿದ್ಯಾ ತಮ್ಮ ಪ್ರೀತಿ ಕಥೆ ಹೇಳಿದ್ದಾರೆ.
ವಿದ್ಯಾಬಾಲನ್ ಅವರನ್ನು ಸಿದ್ದಾರ್ಥ್ ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ರಾತ್ರಿ ಧಾರಾಕಾರ ಮಳೆ ಬರ್ತಿತ್ತು. ವಿದ್ಯಾಬಾಲನ್ ಗೆ ಕಾಫಿ ಕುಡಿಯುವ ಆಸೆಯಾಗಿತ್ತು. ಸುಮಾರು ಮೂರು ಗಂಟೆ ಸಮಯದಲ್ಲಿ ಒಂದೇ ಒಂದು ಅಂಗಡಿ ತೆರೆದಿರಲಿಲ್ಲ. ಸಿದ್ಧಾರ್ಥ್ ಬಾಲಾಜಿ ಬಳಿ ಹೋಗಿ ಕೈನಲ್ಲಿ ಕಾಫಿ ಹಿಡಿದು ಬರ್ತಿದ್ದರು. ಆಗ ನನಗೆ ಮನೆಯಲ್ಲಿದ್ದೇನೆ ಎಂಬ ಅನುಭವವಾಯ್ತು. ಆ ಘಟನೆ ನಂತ್ರ ನನಗೂ ಮದುವೆ ಆಗ್ಬೇಕು ಅನ್ನಿಸ್ತು ಎನ್ನುತ್ತಾರೆ ವಿದ್ಯಾಬಾಲನ್.
ಅನೇಕ ಜನರ ಜೊತೆ ಡೇಟಿಂಗ್ (Dating) ಮಾಡಿದ್ದ ವಿದ್ಯಾಬಾಲನ್ ಅದನ್ನೂ ಹೇಳಿದ್ದಾರೆ. ನಾನು ಅನೇಕರ ಜೊತೆ ಡೇಟಿಂಗ್ ಮಾಡಿದ್ದೆ. ಆದ್ರೆ ಸಿದ್ದಾರ್ಥ್ ಜೊತೆ ಗಂಭೀರವಾಗಿದ್ದೆ. ಅವರ ಜೊತೆ ಮದುವೆಯಾಗಿದ್ದು ನನ್ನ ಪುಣ್ಯ. ದೇವರಿಗೆ ಧನ್ಯವಾದ ಹೇಳ್ತೇನೆ ಎನ್ನುತ್ತಾರೆ ವಿದ್ಯಾಬಾಲನ್.
ಸಂಬಂಧದ ಬಗ್ಗೆ ವಿದ್ಯಾಬಾಲನ್ ಹೇಳೋದೇನು? : ವಿದ್ಯಾಬಾಲನ್ ಒಮ್ಮೆ ಪ್ರೀತಿಯಲ್ಲಿ ಮೋಸ ಹೋಗಿದ್ದರು. ಆದ್ರೆ ಅದರ ಆಲೋಚನೆಯಲ್ಲೇ ಅವರು ಭವಿಷ್ಯ ಹಾಳುಮಾಡಿಕೊಳ್ಳಲಿಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಪ್ರೀತಿಯಲ್ಲಿ ಮೋಸವಾಗುತ್ತದೆ ಇಲ್ಲವೆ ಪ್ರೀತಿ ಸಿಗೋದಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಿ ಜೀವನ ಹಾಳುಮಾಡಿಕೊಳ್ಳುವ ಬದಲು ನಮಗೆ ನಾವು ಮತ್ತೊಂದು ಅವಕಾಶ ನೀಡಬೇಕು. ನಾನು ಮತ್ತೊಂದು ಅವಕಾಶ ನೀಡಿದ್ದಕ್ಕೆ ನನಗೆ ಸಿದ್ದಾರ್ಥ್ ರಂತಹ ಪತಿ ಸಿಕ್ಕಿದ್ದು ಎನ್ನುತ್ತಾರೆ ವಿದ್ಯಾ ಬಾಲನ್.
ಹೈದರಾಬಾದ್ ಟ್ರಾಫಿಕ್ ತಪ್ಪಿಸೋಕೆ ಮೆಟ್ರೋ ರೈಡ್ ಮಾಡಿದ ರಶ್ಮಿಕಾ ಬಾಯ್ ಫ್ರೆಂಡ್! ಇವ್ರು ಅವ್ರಲ್ಲ?
ಹುಡುಗಿಯರ ಮನಸ್ಸು ಬದಲಾಗೋದು ಯಾವಾಗ? : ವಿದ್ಯಾಬಾಲನ್ ರಂತೆಯೇ ಅನೇಕ ಮಹಿಳೆಯರು ಪ್ರೀತಿಯಲ್ಲಿ ಮೋಸ ಹೋದ್ಮೇಲೆ ಮದುವೆ ಬೇಡ ಎಂದುಕೊಳ್ತಾರೆ. ಆದ್ರೆ ಕೊನೆಯಲ್ಲಿ ಇನ್ನೊಬ್ಬರನ್ನು ಮದುವೆ ಆಗಲು ಒಪ್ಪುತ್ತಾರೆ. ಯಾವುದೇ ವ್ಯಕ್ತಿಯನ್ನು ನೋಡಿದಾಗ ಅಥವಾ ಆತನ ಜೊತೆಗಿದ್ದಾಗ ಸುರಕ್ಷತೆಯ ಅನುಭವವಾದ್ರೆ ನಮ್ಮ ಮನೆಯವರಂತೆ ಎಂಬ ಭಾವನೆ ಬಂದ್ರೆ ಹುಡುಗಿಯರು ನಿರ್ಧಾರ ಬದಲಿಸಿಕೊಳ್ತಾರೆ.