ಲಿವ್-ಇನ್ ಪಾರ್ಟನರ್ ಆಗಿದ್ದ ಟ್ರಾನ್ಸ್‌ಜೆಂಡರ್ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ 51 ವರ್ಷದ ಮಹಿಳೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಲಿವ್-ಇನ್ ಪಾರ್ಟನರ್ ಆಗಿದ್ದ ಟ್ರಾನ್ಸ್‌ಜೆಂಡರ್ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ 51 ವರ್ಷದ ಮಹಿಳೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ಮಂಜು ನಾಯ್ಕ್ (42) ಎಂದು ಗುರುತಿಸಲಾಗಿದೆ. ಮಂಜು ಆರೋಪಿ ಪ್ರೇಮಾ (51) ಅವರೊಂದಿಗೆ ಪೂರ್ವ ಬೆಂಗಳೂರಿನ ಮುರುಗೇಶಪಾಳ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಇಬ್ಬರ ಮಧ್ಯೆ ನಡೆದ ಮನಸ್ತಾಪದಲ್ಲಿ ಪ್ರೇಮಾ, ತೃತೀಯಲಿಂಗಿ ಮಂಜು ನಾಯ್ಕ್‌ರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಂಜು ಸಹೋದರ ಪರಸಾ ನಾಯ್ಕ್ ಮಂಜು ನಾಪತ್ತೆಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಮಂಜು ನಾಯ್ಕ್ ಕೊಲೆಯಾಗಿರುವುದು ಬಯಲಾಗಿದೆ. ಪ್ರೇಮಾ ನಾಯಕ್, ಮಂಜುವನ್ನು ಟವೆಲ್‌ನಿಂದ ಕತ್ತು ಹಿಸುಕಿ, ಫೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪಾರ್ಸೆಲ್ ಸ್ಫೋಟಿಸಿ ಅಪ್ಪ ಮಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್: ಬಾಂಬ್ ಕಳಿಸಿದ್ದ ಪತ್ನಿಯ ಸ್ಯಾಡಿಸ್ಟ್ ಲವರ್
ಸರ್ ಸಿ ವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆ ಉಸಿರುಗಟ್ಟಿರುವುದು ಸಾವಿಗೆ ಕಾರಣ ಎಂದು ಹೇಳಿದೆ. ಪೊಲೀಸರು ಮೇ 7ರಂದು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮಾಹಿತಿದಾರರು ನೀಡಿದ ಮಾಹಿತಿ ಮೇರೆಗೆ ಚನ್ನರಾಯಪಟ್ಟಣ ತಾಲೂಕಿನ ಅಯ್ಯರಹಳ್ಳಿ ಗ್ರಾಮದ ಆಕೆಯ ತಾಯಿಯ ನಿವಾಸದಲ್ಲಿ ಮೇ 8ರಂದು ಹಾಸನ ಜಿಲ್ಲೆಯಲ್ಲಿ ಪ್ರೇಮಾಳನ್ನು ಬಂಧಿಸಲಾಗಿದೆ.
ಪತಿ ಮೃತಪಟ್ಟಿರುವ ಆರೋಪಿ ,ಸಂತ್ರಸ್ತೆಯೊಂದಿಗೆ ಮುರುಗೇಶಪಾಳ್ಯದಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 26 ರ ರಾತ್ರಿ ಪ್ರೇಮಾ ಮತ್ತು ಮಂಜು ನಾಯ್ಕ್ ನಡುವೆ ಘರ್ಷಣೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಮಂಜು ನಾಯ್ಕ್, ಪ್ರೇಮಾ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಪ್ರಯತ್ನಿಸಿದಾಗ ಪ್ರೇಮಾ ಅವರು ಟವೆಲ್‌ನಿಂದ ಮಂಜು ಕತ್ತು ಹಿಸುಕಿ ಸಾಯಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಕಾಳಿ ವೇಷ ಧರಿಸಿ ನೃತ್ಯ ರೂಪಕದಲ್ಲಿ ತೊಡಗಿದ್ದ ಬಾಲಕನಿಂದ ರಾಕ್ಷಸ ವೇಷಧಾರಿ ಬಾಲಕನ ಹತ್ಯೆ