ಮಕ್ಕಳು ಅಮ್ಮನನ್ನು ನೋಡಿ ಇದನ್ನೆಲ್ಲಾ ಕಲೀತಾರೆ ಅಂತಾರೆ ಸುಧಾ ಮೂರ್ತಿ! 

Published : Jan 23, 2025, 08:47 PM ISTUpdated : Jan 24, 2025, 10:24 AM IST
ಮಕ್ಕಳು ಅಮ್ಮನನ್ನು ನೋಡಿ ಇದನ್ನೆಲ್ಲಾ ಕಲೀತಾರೆ ಅಂತಾರೆ ಸುಧಾ ಮೂರ್ತಿ! 

ಸಾರಾಂಶ

ಸುಧಾ ಮೂರ್ತಿ ಬಹು ಬೇಡಿಕೆಯ ಲೇಖಕಿ ಮಾತ್ರವಲ್ಲದೆ ಇಬ್ಬರು ಯಶಸ್ವೀ ಮಕ್ಕಳ ತಾಯಿ ಕೂಡ. ಮಕ್ಕಳನ್ನು ಸಮಾಜಕ್ಕೆ ಮಾದರಿಯಾಗಿ ಬೆಳೆಸಿರುವ ಸುಧಾ ಮೂರ್ತಿ ಅವರು ಮಕ್ಕಳ ಬಗ್ಗೆ ಆಡಿರೋ ಇಂಪಾರ್ಟೆಂಟ್‌ ಮಾತುಗಳು ಇಲ್ಲಿವೆ. 

ಬಹಳ ಸಾರಿ ನಾವು ದೊಡ್ಡವರು ಮಕ್ಕಳ ಮೇಲೆ ರೇಗುತ್ತೇವೆ. ಮಕ್ಕಳೇಕೆ ಹಾಗೆ ವರ್ತಿಸುತ್ತಾರೆ ಎಂದು ಅವರ ಮೇಲೆ ಬೇಸರ ಮಾಡಿಕೊಳ್ಳುತ್ತೇವೆ. ಎಲ್ಲರ ಮುಂದೆ ಮಕ್ಕಳ ವರ್ತನೆ ಕೆಲವೊಮ್ಮೆ ಹೆತ್ತವರ ಮರ್ಯಾದೆಯನ್ನೂ ಹರಾಜು ಮಾಡುತ್ತವೆ. ಮಕ್ಕಳ ನಡವಳಿಕೆ, ವರ್ತನೆ, ಸಾಮಾಜಿಕವಾಗಿ ಅವರು ಬೆರೆಯುವ ರೀತಿ ಇತ್ಯಾದಿಗಳೆಲ್ಲವೂ, ನಮ್ಮದೇ ವರ್ತನೆಯ ಕನ್ನಡಿ ಎಂಬುದು ಮಾತ್ರ ಬಹಳ ಸಲ ನಮಗೆ ಅರಿವಾಗುವುದೇ ಇಲ್ಲ. ಮಕ್ಕಳು ಹಾಗೆ ವರ್ತಿಸುವುದಕ್ಕೆ ಕಾರಣವೇನು ಎಂಬುದು ಹೆತ್ತವರಿಗೆ ಕೆಲವೊಮ್ಮೆ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗುತ್ತವೆ. ಮಕ್ಕಳನ್ನು ಬೆಳೆಸುವಲ್ಲಿ ಎಲ್ಲಿ ಎಡವಿದ್ದೇವೆ ಎಂಬ ಯೋಚನೆ ಒಂದೆಡೆಯಾದರೆ, ತಮ್ಮದೇ ನಡವಳಿಕೆಯೂ ಹಲವು ಬಾರಿ ಅವರ ಈ ವರ್ತನೆಗೆ ಕಾರಣವೂ ಆಗಿರಬಹುದು ಎಂದು ಯೋಚಿಸುವಲ್ಲಿ ಎಡವುತ್ತೇವೆ. ಸಾಕಷ್ಟು ಅಧ್ಯಯನಗಳೂ ಇದನ್ನು ಎತ್ತಿ ಹಿಡಿದಿವೆ ಕೂಡಾ. ಮಕ್ಕಳ ಮಾನಸಿಕತೆ, ಅವರ ನಡವಳಿಕೆ ಇಲ್ಲವೂ ಅವರ ಪೋಷಕರನ್ನೇ ಹೋಲುತ್ತವೆ, ತನ್ನ ಅಪ್ಪ ಹಾಗೂ ಅಮ್ಮನನ್ನು ನೋಡಿಯೇ ಮಗು ಕಲಿಯುತ್ತದೆ ಎಂದು ಹೇಳುತ್ತವೆ ಅನೇಕ ಅಧ್ಯಯನಗಳು. ಮುಖ್ಯವಾಗಿ ಹುಟ್ಟಿದಾರಭ್ಯ ಅಮ್ಮನ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವ ಮಕ್ಕಳು ಅಮ್ಮನ ನಡತೆಯನ್ನೇ ನೋಡಿ ಕಲಿಯುತ್ತಾರೆ ಅಂತಾರೆ ಪ್ರೇರಣಾದಾಯಕ ಲೇಖಕಿ, ಸಮಾಜಸೇವಕಿ ಸುಧಾ ಮೂರ್ತಿ.

ಮಕ್ಕಳು ಗಮನಿಸುವುದರಲ್ಲಿ ಸಿದ್ಧ ಹಸ್ತರು. ಮಕ್ಕಳು ನಮ್ಮನ್ನು ನೋಡುತ್ತಿಲ್ಲ ಎಂದು ನಾವು ಅವರಿರುವಾಗ ಆಡುವ ಜಗಳ, ಮಾತು, ಮುನಿಸು, ಬಳಸುವ ಶಬ್ದಗಳು ಎಲ್ಲವೂ ಮಕ್ಕಳ ಮನಸ್ಸಿನೊಳಗೆ ಅಚ್ಚಾಗಿಬಿಡುತ್ತವೆ. ಶಾಶ್ವತವಾಗಿ ನೆಲೆಯೂರುತ್ತವೆ. ಅಷ್ಟೇ ಅಲ್ಲ, ಅವನ್ನು ತನ್ನ ಜೀವನದಲ್ಲಿ ಮಗು ಬಳಸುತ್ತದೆ ಕೂಡಾ. ಇದನ್ನು ಪ್ರತಿಯೊಬ್ಬ ಹೆತ್ತವರೂ ಗಮನಿಸಿ ಹೆತ್ತವರಾಗಿ ಜವಾಬ್ದಾರಿಯುತವಾಗಿ ವರ್ತಿಸುವುದು ಹಾಗೂ ಮಕ್ಕಳಿಗೆ ಮಾದರಿಯಾಗಿ ನಡೆದುಕೊಳ್ಳುವುದು ಪ್ರತಿ ಪೋಷಕರಿಗೆ ಇರುವ ಬಹುದೊಡ್ಡ ಜವಾಬ್ದಾರಿ. ಬನ್ನಿ, ಪ್ರತಿ ಮಗುವೂ ಅಮ್ಮನನ್ನು ನೋಡಿ ತನ್ನ ಬಾಲ್ಯದಲ್ಲಿ ಏನೆಲ್ಲ ಕಲಿಯುತ್ತದೆ ಹಾಗೂ ಕಾಪಿ ಮಾಡುತ್ತದೆ ಅಂತ ಆಸಕ್ತಿಕರವಾಗಿ  ತಿಳಿಸಿದಾರೆ ಸುಧಾ ಮೂರ್ತಿ. 

1) ಅಮ್ಮ ಹೇಗೆ ಮಾತಾಡುತ್ತಾಳೆ ಎಂಬುದನ್ನು ಮಗು ಗಮನಿಸುತ್ತದೆಯಂತೆ. ಅಮ್ಮ ಮಾತಾಡುವ ಹಾಗೆಯೇ ಮಾತನಾಡಲು ಮಗು ಪ್ರಯತ್ನಿಸುತ್ತದೆ. ಅಮ್ಮ ಒಳ್ಳೆಯ ಮಾತಾಡಿದರೆ, ಮಗುವಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಕೆಟ್ಟದ್ದಾದರೆ, ಅದರ ಪರಿಣಾಮವನ್ನೂ ಮಗು ಆಡುವ ಮಾತಿನಿಂದಲೇ ಕಂಡುಹಿಡಿಯಬಹುದು.

2) ಅಮ್ಮನ ಒತ್ತಡವನ್ನೂ ಮಗು ಗಮನಿಸುತ್ತದೆಯಂತೆ. ಅಮ್ಮ ಗಡಿಬಿಡಿಯಲ್ಲಿ, ಹೆಚ್ಚು ಒತ್ತಡದಲ್ಲಿದ್ದಾಗ ಹೇಗೆ ವ್ಯವಹರಿಸುತ್ತಾಳೆ ಎಂಬುದು ಮಗುವಿಗೆ ಮುಖ್ಯವಾಗುತ್ತದೆ. ಆಕೆಯ ಕೋಪ, ತಾಪ, ಚೀರಾಟ ಇವೆಲ್ಲವನ್ನೂ ಮಗು ತನ್ನ ಒತ್ತಡದ ಸಮಯದಲ್ಲೂ ಕಾಪಿ ಮಾಡುತ್ತದೆ. ಅಮ್ಮ ಶಾಂತವಾಗಿ ಪರಿಸ್ಥಿತಿ ನಿಭಾಯಿಸುವವಳಾಗಿದ್ದರೆ ಮಗುವೂ ಶಾಂತವಾಗಿರುವುದನ್ನು ಕಲಿಯುತ್ತದೆ.

3) ಅಮ್ಮನ ಕೆಲಸವನ್ನು ಮಗು ನೋಡುತ್ತದೆ. ಅಮ್ಮ ಕಷ್ಟಪಟ್ಟು ದುಡಿಯುವವಳಾಗಿದ್ದರೆ ಮಗುವೂ ಅದನ್ನು ಮುಂದೆ ಅಳವಡಿಸಿಕೊಳ್ಳುತ್ತದೆ.

4) ಅಮ್ಮನ ವಹಿಸುವ ಆರೋಗ್ಯದ ಕಾಳಜಿ, ತನ್ನನ್ನು ತಾನು ನೋಡುವ ರೀತಿ ಎಲ್ಲವನ್ನೂ ಮಗು ಕಾಪಿ ಮಾಡುತ್ತದಂತೆ. ತಾನೂ ಹಾಗಿರಲು ಪ್ರಯತ್ನಿಸುತ್ತದಂತೆ.

5) ಅಮ್ಮನ ಆತ್ಮವಿಶ್ವಾಸ ಮಕ್ಕಳ ಮೇಲೆ ಪರಿಣಾಮ ಬೀರುತ್ತದಂತೆ. ಅಮ್ಮ ಆತ್ಮವಿಶ್ವಾಸಿಯಾಗಿದ್ದರೆ ಮಗುವೂ ಅಷೇ ಧೈರ್ಯಶಾಲಿಯಾಗಿ, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತದಂತೆ.

6) ಅಮ್ಮ ಸಾಮಾಜಿಕವಾಗಿ ಹೇಗೆ ನಡೆದುಕೊಳ್ಳುತ್ತಾಳೆ, ಬೇರೆಯವರ ಜೊತೆಗೆ ಹೇಗೆ ವ್ಯವಹರಿಸುತ್ತಾಳೆ ಎಂಬುದನ್ನೂ ಮಗು ನೋಡುತ್ತದೆ. ಅಷ್ಟೇ ಅಲ್ಲ, ತಾನೂ ಅದನ್ನೇ ಕಲಿಯುತ್ತದೆ.

ಪುಟ್ಟ ಕಂದ ಫಟಾಫಟ್ ನಿದ್ದೆ ಹೋಗ್ಬೇಕಾ? ಹೀಗೆ ಮಾಡಿ!

7) ಅಮ್ಮ ಹಣವನ್ನು ಹೇಗೆ ಖರ್ಚು ಮಾಡುತ್ತಾಳೆ ಎಂಬುದೂ ಕೂಡ ಮಕ್ಕಳಿಗೆ ಸೋಜಿಗದ ವಿಚಾರವೇ. ಅದನ್ನೇ ಮಗೂ ಕೂಡಾ ಅಮ್ಮನನ್ನೇ ನೋಡಿ ಕಲಿಯುತ್ತದಂತೆ.

8) ಒಟ್ಟಾರೆಯಾಗಿ, ಅಮ್ಮನೆಂಬ ಜೀವ ಪ್ರತಿಯೊಂದು ಹಂತದಲ್ಲೂ ಮಕ್ಕಳ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಅಮ್ಮನ ಒಟ್ಟಾರೆ ವ್ಯಕ್ತಿತ್ವ ಮಕ್ಕಳ ಮೇಲೆ ಒಳ್ಳೆಯ ಹಾಗೂ ಕೆಟ್ಟ ಎರಡೂ ಪರಿಣಾಮಗಳನ್ನು ಬೀರಬಲ್ಲುದು. ಹಾಗಾಗಿ ಅಮ್ಮನೆಂಬ ತನ್ನ ಜವಾಬ್ದಾರಿಯುತ ಹುದ್ದೆಯ ಮೇಲೆ ಪ್ರತಿಯೊಬ್ಬ ಅಮ್ಮನಿಗೂ ತನ್ನ ಜವಾಬ್ದಾರಿಗಳ ಅರಿವಿರುವುದು ಅತ್ಯಂತ ಅಗತ್ಯ.

ಪತಿಗಿಂತ ಪತ್ನಿ ಸಂಬಳ ಹೆಚ್ಚಿದ್ರೆ ದಾಂಪತ್ಯ ಉಳಿಯುತ್ತಾ? ಗಂಡನಿಗೆ ಕಾಡೋ ಖಾಯಿಲೆ ಯಾವ್ದು?
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು