
ಎಷ್ಟೋ ಮಂದಿ ಗಂಡಸರಿಗೆ ಮದುವೆಯಾಗಲು ಒಂದೇ ಒಂದು ಹೆಣ್ಣು ಸಿಗುತ್ತಿಲ್ಲ ಎಂದು ಗೋಳಾಡುತ್ತಿರುವ ನಡುವೆಯೇ, ಇಲ್ಲೊಬ್ಬ ಭೂಪ 88 ಬಾರಿ ಮದುವೆಯಾಗಿದ್ದಾನೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದ್ರೆ ಅಂಥದ್ದೊಂದು ಘಟನೆ ನಡೆದಿದೆ. ಅಂದ ಹಾಗೆ ಇದು ನಡೆದಿರುವುದು ಇಂಡೋನೇಷ್ಯಾದಲ್ಲಿ. 63 ವರ್ಷದ ವ್ಯಕ್ತಿಯೊಬ್ಬ 88 ಬಾರಿ ವಿವಾಹವಾಗಿದ್ದಾನೆ. ಈತನ ಹೆಸರು ಕಾನ್. ಈತನನ್ನು "ಪ್ಲೇಬಾಯ್ ಕಿಂಗ್" ಎಂದು ಕರೆಯಲಾಗುತ್ತದೆ.
ಅಷ್ಟಕ್ಕೂ ಇವನು ಈ ಪರಿಯಲ್ಲಿ ಮದುವೆಯಾಗುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಇವನಿಗೆ ಮೊದಲು ಮದುವೆಯಾದಾಗ 14 ವರ್ಷ ವಯಸ್ಸಂತೆ. ಆದರೆ ಆತ ಕೊಟ್ಟ ಟಾರ್ಚರ್ ತಾಳದೇ ಪತ್ನಿ ಎರಡೇ ವರ್ಷದಲ್ಲಿ ಓಡಿಹೋಗಿದ್ದಳು. ಈತನಿಂದ ದೂರ ಆಗಿದ್ದಳು. ಇದೇ ಸಿಟ್ಟಿನಿಂದ ಆತ ಪದೇ ಪದೇ ಮದುವೆಯಾಗುತ್ತಲೇ ಇದ್ದಾನೆ! ನನ್ನ ವಿಚಿತ್ರ ವರ್ತನೆಯಿಂದ ಅವಳು ಓಡಿ ಹೋದಳು, ಅದಕ್ಕಾಗಿ ನಾನು ಹೀಗೆ ಮಾಡಿದೆ ಎಂದಿರುವ ಕಾನ್, ತಾನು ಏನು ವಿಚಿತ್ರ ವರ್ತನೆ ತೋರಿದ್ದೆ ಎನ್ನುವುದನ್ನು ಮಾತ್ರ ಬಾಯಿ ಬಿಟ್ಟಿಲ್ಲ.
'ನಾನು ಹುಟ್ಟಿದ್ದೇ ನಿನಗಾಗಿ' ಎಂದು ಬರೆದುಕೊಂಡಿದ್ದ ನಟಿ ಅಪರ್ಣಾ, ಎರಡೇ ವರ್ಷದಲ್ಲಿ ಡಿವೋರ್ಸ್ ಘೋಷಣೆ!
ಈತ ಮದುವೆಯಾಗಿರುವವರಲ್ಲಿ ಹಲವರು ಮಾಜಿ ಪತ್ನಿಯರೂ ಇದ್ದಾರಂತೆ. ಮಹಿಳೆಯರನ್ನು ನಾನು ಗೌರವಿಸುತ್ತೇನೆ. ಅದಕ್ಕಾಗಿಯೇ ಅವರು ನನ್ನಿಂದ ದೂರವಾದರೂ ನನ್ನ ಮೇಲೆ ಪ್ರೀತಿ ಇರಿಸಿಕೊಂಡಿರುತ್ತಾರೆ. ಪುನಃ ಮದುವೆಯಾಗಲು ಮುಂದೆ ಬರುತ್ತಾರೆ ಎಂದಿದ್ದಾನೆ ಕಾನ್. ಅಷ್ಟಕ್ಕೂ ಇವನು ಮಾಡುವುದು ಏನೆಂದರೆ ಕೃಷಿ. ಇವನು ಇರುವುದು, ಇಂಡೋನೇಷ್ಯಾದ ಪಶ್ಚಿಮ ಜಾವಾದ ಮಜಲೆಂಗಕಾ ಎನ್ನುವಲ್ಲಿ. ಈಗ ಆತ ಮತ್ತೆ ಸದ್ದು ಮಾಡುತ್ತಿರುವ ಕಾರಣ ಏನೆಂದರೆ, ಮಾಜಿ ಪತ್ನಿಯನ್ನು ಮತ್ತೆ ಮದುವೆಯಾಗುತ್ತಿರುವ ಕಾರಣಕ್ಕೆ.
'ಮೊದಲಿಗೆ ನಾವಿಬ್ಬರು ಒಂದು ತಿಂಗಳು ಮಾತ್ರ ಒಟ್ಟಿಗೇ ಇದ್ವಿ. ನಂತರ ಬೇರೆ ಬೇರೆಯಾದ್ವಿ. ಆದ್ರೆ ಇಬ್ಬರೂ ತುಂಬಾ ಪ್ರೀತಿಸ್ತಾ ಇದ್ದೇವೆ. ಆದ್ದರಿಂದ ಬೇರೆ ಬೇರೆಯಾದ ಮೇಲೆ ಮತ್ತೆ ನಮ್ಮಿಬ್ಬರ ನಡುವೆ ಪ್ರೀತಿ ಹುಟ್ಟಿತು. ಅದೇ ಕಾರಣಕ್ಕೆ ಮತ್ತೆ ಮದುವೆಯಾಗುತ್ತಿದ್ದೇವೆ ಎಂದಿದ್ದಾನೆ ಕಾನ್. ನಾನು ಸದಾ ಮಹಿಳೆಯರು ಇಷ್ಟಪಡುವುದನ್ನೇ ಮಾಡುತ್ತೇನೆ. ಅವರ ಜೊತೆ ಆಟವಾಡುವುದಿಲ್ಲ. ಅವರ ಭಾವನೆಗಳನ್ನು ಇಚ್ಛಿಸುತ್ತೇನೆ. ನನಗೆ ಮಹಿಳೆಯರು ಎಮದರೆ ಇಷ್ಟ. ಹಾಗೆಂದು ಅನೈತಿಕ ಸಂಬಂಧ ಇಷ್ಟಪಡುವುದಿಲ್ಲ. ಆದ್ದರಿಂದಲೇ ಮದುವೆಯಾಗುತ್ತೇನೆ ಎಂದಿದ್ದಾನೆ. ಆದರೆ ಮಹಿಳೆಯರು ಇವನನ್ನು ಮದುವೆಯಾಗಲು ಹೇಗೆ ಒಪ್ಪಿಕೊಳ್ಳುತ್ತಾರೆ ಹಾಗೂ ಈತನಿಗೆ ಇಷ್ಟು ಮದುವೆಗಳಿಂದ ಮಕ್ಕಳು ಎಷ್ಟು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಪಾಕ್ ವಿರುದ್ಧ ಗುಡುಗಿ, ಭಾರತದ ಗುಣಗಾನ ಮಾಡಿದ 12 ಯೂಟ್ಯೂಬರ್ಸ್ಗೆ ಗಲ್ಲು? ಮಧ್ಯರಾತ್ರಿ ನಡೆದದ್ದೇನು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.