
ಪ್ರೇಮಿಗಳಾಗಿದ್ದಾಗ ಎಲ್ಲವೂ ಚೆನ್ನಾಗಿರುತ್ತೆ, ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಆರಂಭದಲ್ಲಿಯೂ ಚಿನ್ನ, ರನ್ನ, ಬೆಳ್ಳಿ, ಎಂದೆಲ್ಲಾ ಹೊಗಳಿಕೊಳ್ಳುವ, ಮನೆಯಲ್ಲಿ ಹೀಗೆ ಎದುರಿಗೆ ಹೊಗಳದಿದ್ದರೂ, ಜನರಿಗೆ ಕಾಣಿಸಲಿ ಎಂಬ ಕಾರಣಕ್ಕೆ ನನ್ನ ಗಂಡ ಹೀಗೆ, ನನ್ನ ಪತ್ನಿ ಹೀಗೆ... ಎಂದೆಲ್ಲಾ ಹಾಡಿ ಹೊಗಳಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ದಂಪತಿ ಕೆಲವೇ ವರ್ಷಗಳಲ್ಲಿ ಗಪ್ಚುಪ್ ಆಗಿ ಬೇರೆಯಾಗಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಸೆಲೆಬ್ರಿಟಿಗಳಾದ ಕಾರಣಕ್ಕೆ ನಟ-ನಟಿಯರ ವಿಷಯಗಳು ಬೇಗನೇ ಸದ್ದು ಮಾಡುತ್ತವೆ. ಇದಾಗಲೇ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ದಾಂಪತ್ಯ ಜೀವನವನ್ನು ಕೊನೆಗಾಣಿಸಿಕೊಂಡಿರುವ ನಡುವೆಯೇ, ಅವರ ಸಾಲಿಗೆ ಮತ್ತೋರ್ವ ಖ್ಯಾತ ನಟಿ , ಮಾಲಿವುಡ್ನ ಅಪರ್ಣಾ ವಿನೋದ್ ಸೇರ್ಪಡೆಯಾಗಿದ್ದಾರೆ.
2023ರಲ್ಲಿ ರಿನಿಲ್ ರಾಜ್ ಎನ್ನುವವರನ್ನು ಮದುವೆಯಾಗಿದ್ದ ಅಪರ್ಣಾ, ಸೋಷಿಯಲ್ ಮೀಡಿಯಾದಲ್ಲಿ 'ನಾನು ಹುಟ್ಟಿದ್ದೇ ನಿನಗಾಗಿ, ಹಗಲು- ರಾತ್ರಿ ಇರುವುದೇ ನಿನಗಾಗಿ, ನನ್ನ ಸ್ವೀಟೆಸ್ಟ್ ರಿನಿಲ್' ಎಂದು ಪೋಸ್ಟ್ ಮಾಡಿದ್ದರು. ಆಗ ಈ ದಂಪತಿಯನ್ನು ಅಭಿಮಾನಿಗಳು ಹಾಡಿ ಹೊಗಳಿ, ಇದ್ದರೆ ಹೀಗೆ ಇರಬೇಕು ಎಂಬೆಲ್ಲಾ ಉದಾಹರಣೆ ಕೊಟ್ಟು, ಸಾಂಸಾರಿಕ ಜೀವನ ಶುಭವಾಗಲಿ ಎಂದು ಹಾರೈಸಿದ್ದರು. ಇಂದು ಅದೇ ನಟಿ, ಸೋಷಿಯಲ್ ಮೀಡಿಯಾದಲ್ಲಿ, ನಾನು ಮತ್ತು ರಿನಿ ಬೇರೆಯಾಗುವ ನಿರ್ಧಾರ ಮಾಡಿದ್ದೇವೆ. ಎರಡು ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗಾಣಿಸುತ್ತಿದ್ದೇನೆ. ಎರಡು ವರ್ಷಗಳ ನಂತರ ಸಂಬಂಧದಲ್ಲಿನ ಭಾವನಾತ್ಮಕ ಒತ್ತಡದಿಂದಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ' ಎಂದು ಬರೆದುಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಚಂದನ್ ಡಿವೋರ್ಸ್ಗೆ ನಾನೇ ಕಾರಣ ಅಂತ ಹೇಳಿ ಮದ್ವೆನೂ ಮಾಡಿಸಿಬಿಟ್ರು: ನಟಿ ಸಂಜನಾ ಆನಂದ್ ನೋವಿನ ನುಡಿ...
“ನನ್ನ ಜೀವನದಲ್ಲಿ ಮಹತ್ವದ ಬದಲಾವಣೆ ಒಂದು ಆಗಿದೆ. ಉಸಿರುಗಟ್ಟಿದಂತೆ ಆಗುತ್ತಿದೆ. ಸಾಕಷ್ಟು ಯೋಚಿಸಿದ ಬಳಿಕವೇ ನಾನು ಈ ನಿರ್ಧಾರ ಪಡೆದುಕೊಂಡೆ. ನನ್ನ ಬದುಕಿನಲ್ಲಿ ಆಗಿತ್ತಿರುವ ಬದಲಾವಣೆಗಳಿಂದ ಹೊರಕ್ಕೆ ಬರಬೇಕಾಗಿದೆ. ಆದ್ದರಿಂದ ಗಂಡನಿಂದ ದೂರವಾಗುವ ನಿರ್ಧಾರ ಮಾಡಿದ್ದೇನೆ. ನನ್ನ ವೈಯಕ್ತಿಯ ಬೆಳವಣಿಗೆಗೆ ಇದು ಅವಶ್ಯಕವಾಗಿತ್ತು. ನಿರ್ಧಾರ ತೆಗೆದುಕೊಳ್ಳುವುದು ಸುಲಭ ಆಗಿರದಿದ್ದರೂ ದೊಡ್ಡ ಹೆಜ್ಜೆ ಇಟ್ಟಿದ್ದೇನೆ. ಜೀವನದ ಒಂದು ಅಧ್ಯಾಯವನ್ನು ಮುಚ್ಚಿ ಮುಂದಡಿ ಇಡುತ್ತಿದ್ದೇನೆ ಎಂದಿರುವ ನಟಿ, ಈ ಸಮಯದಲ್ಲಿ ನೆರವು ನೀಡಿದವರಿಗೆ ಧನ್ಯವಾದ ಎಂದಿದ್ದಾರೆ.
ಇನ್ನು ನಟಿಯ ಕುರಿತು ಹೇಳುವುದಾದರೆ, ಮಲಯಾಳದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. 2015ರಲ್ಲಿ ತೆರೆಕಂಡ ‘ನನ್ನ ನಿನ್ನೊಡು ಕೂಡೆಯುಂಡು’ ಮೂಲಕ ನಟಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆಸಿಫ್ ಅಲಿ ಮತ್ತು ಇಂದ್ರಜಿತ್ ಸುಕುಮಾರ್ ಅಭಿನಯದ ಕೊಹಿನೂರ್ ಚಿತ್ರ ಈಕೆಗೆ ಬ್ರೇಕ್ ಕೊಟ್ಟಿತು. ಇದರ ಬಳಿಕ ಮತ್ತೊಂದು ಬ್ರೇಕ್ ನೀಡಿದ್ದು ಇಳಯ ದಳಪತಿ ವಿಜಯ್ ಅಭಿನಯದ ಭೈರವ ಚಿತ್ರದಲ್ಲಿ. ಹೀಗೆ ಸ್ಟಾರ್ ನಟಿಯಾದರು ಅಪರ್ಣಾ. ಚಿತ್ರರಂಗದ ಉನ್ನತಿಯಲ್ಲಿ ಇರುವಾಗಲೇ ರಿನಿಲ್ ರಾಜ್ರನ್ನು ಮದುವೆಯಾದರು. ಈಗ ಪತಿಯ ಜೊತೆಗಿರುವ ಎಲ್ಲಾ ಫೋಟೋಗಳನ್ನು ಹಾಗೂ ನಾನು ಹುಟ್ಟಿದ್ದೇ ನಿನಗಾಗಿ ಎಂದು ಬರೆದುಕೊಂಡಿರುವ ಪೋಸ್ಟ್ಗಳನ್ನೂ ಡಿಲೀಟ್ ಮಾಡಿದ್ದಾರೆ. ಅಂದಹಾಗೆ, ಎರ್ನಾಕುಲಂ ಮೂಲದ ಅಪರ್ನಾ ವಿನೋದ್ ಮನೋವಿಜ್ಞಾನದಲ್ಲಿ ಪದವಿ ಪಡೆದು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು.
ಪತ್ನಿಯೇ ಬೇರೆ, ಆತ್ಮಸಂಗಾತಿಯೇ ಬೇರೆ... ಡಿವೋರ್ಸ್ಗೂ, ಹಿಂದಿನ ಜನ್ಮಕ್ಕೂ ಇದೆ ನಂಟು! ಗುರೂಜಿ ಮಾತು ಕೇಳಿ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.