'ದಯವಿಟ್ಟು ಮದುವೆಗೆ ಯಾರೂ ಬರ್ಬೇಡಿ', ಯಪ್ಪಾ..ಮದ್ವೆಗೆ ಹೀಗೂ ಕರೀತಾರಾ..!

By Vinutha Perla  |  First Published Apr 18, 2023, 11:49 AM IST

ಮದ್ವೆಗೆ ಖಂಡಿತಾ ಬರ್ಲೇಬೇಕು ಅಂತ ಕರೆಯೋದು ಸಾಮಾನ್ಯ ವಾಡಿಕೆ. ಆದ್ರೆ ಇಲ್ಲೊಬ್ಬ ಅದೆಂಥಾ ಎಡವಟ್ಟು ಮಾಡಿಕೊಂಡಿದ್ದಾನೆ ಅಂದ್ರೆ ಇನ್ವಿಟೇಷನ್‌ನಲ್ಲಿ ತಪ್ಪಾಗಿ ಮದುವೆಗೆ ಯಾರೂ ಬರಲೇಬೇಡಿ ಎಂದು ಮುದ್ರಿಸಿದ್ದಾನೆ. ವೈರಲ್ ಆಗ್ತಿರೋ ಮದ್ವೆ ಆಮಂತ್ರಣ ಪತ್ರಿಕೆ ನೋಡಿ ಎಲ್ರೂ ಬಿದ್ದೂ ಬಿದ್ದೂ ನಗ್ತಿದ್ದಾರೆ. 


ಮದ್ವೆ ಅಂದ್ರೆ ಜೀವನದಲ್ಲಿ ತುಂಬಾ ಪ್ರಮುಖವಾದ ದಿನ. ಹೀಗಾಗಿ ಈ ವಿಶೇಷ ದಿನದಂದು ಫ್ಯಾಮಿಲಿ, ಫ್ರೆಂಡ್ಸ್‌, ರಿಲೇಟಿವ್ಸ್ ಎಲ್ಲರೂ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಎಲ್ಲರನ್ನೂ ಮದುವೆಗೆ ಆಮಂತ್ರಿಸಲು ವಿಶೇಷ ಇನ್ವಿಟೇಷನ್ ಕಾರ್ಡ್ ಸಿದ್ಧಪಡಿಸಲಾಗುತ್ತದೆ. ಮದ್ವೆಗೆ ಖಂಡಿತಾ ಬರ್ಲೇಬೇಕು ಅಂತ ಕರೆಯೋದು ಸಾಮಾನ್ಯ ವಾಡಿಕೆ. ಆದ್ರೆ ಇಲ್ಲೊಬ್ಬ ಅದೆಂಥಾ ಎಡವಟ್ಟು ಮಾಡಿಕೊಂಡಿದ್ದಾನೆ ಅಂದ್ರೆ ಇನ್ವಿಟೇಷನ್‌ನಲ್ಲಿ ತಪ್ಪಾಗಿ ಮದುವೆಗೆ ಯಾರೂ ಬರಲೇಬೇಡಿ ಎಂದು ಮುದ್ರಿಸಿದ್ದಾನೆ. ವೈರಲ್ ಆಗ್ತಿರೋ ಮದ್ವೆ ಆಮಂತ್ರಣ ಪತ್ರಿಕೆ ನೋಡಿ ಎಲ್ರೂ ಬಿದ್ದೂ ಬಿದ್ದೂ ನಗ್ತಿದ್ದಾರೆ. 

ಮದುವೆ (Marriage) ಅಂದ್ರೆ ಅದಕ್ಕೆ ಎಲ್ಲಾ ರೀತಿಯಲ್ಲೂ ಧಾಂ ಧೂಂ ಅಂತ ಸಿದ್ಧತೆ ನಡೆಯುತ್ತೆ. ಭರ್ಜರಿ ಡೆಕೊರೇಶನ್‌, ಡ್ರೆಸ್, ಡಿನ್ನರ್‌ಗೆ ಸಿದ್ಧತೆ ಮಾಡಲಾಗುತ್ತೆ. ಹಾಗೆಯೇ ಮದುವೆ ಅಂದ್ರೆ ಇನ್ವಿಟೇಷನ್ ಕಾರ್ಡ್‌ ಸೂಪರ್ ಆಗಿರ್ಬೇಕು ಅಂತ ಎಲ್ಲರೂ ಬಯಸ್ತಾರೆ. ಹೀಗಾಗಿ ಡಿಫರೆಂಟ್ ಆಗಿ ಮದ್ವೆ ಆಮಂತ್ರಣ ಪತ್ರಿಕೆಯನ್ನು (Invitation card) ಸಿದ್ಧಪಡಿಸುತ್ತಾರೆ. ಕಾಲ ಅದೆಷ್ಟು ಬದಲಾಗಿದ್ರೂ, ಟೆಕ್ನಾಲಜಿ ಸಾಕಷ್ಟು ಮುಂದುವರಿದಿದ್ರೂ ಜನರು ಇನ್ವಿಟೇಷನ್ ಕಾರ್ಡ್ ತಯಾರಿಸೋದನ್ನು ಬಿಡೋದಿಲ್ಲ. ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ ಮದುವೆಗೆ ಆಮಂತ್ರಿಸಿದರೂ ಪುನಃ ಮದುವೆ ಕಾಗದವನ್ನು ಕೊಟ್ಟು ಮದ್ವೆಗೆ ಬರಲೇಬೇಕು ಅನ್ನೋದನ್ನು ಮರೆಯೋದಿಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ಬಾಯಲ್ಲೇನೂ ಮದ್ವೆಗೆ ಬರ್ಲೇಬೇಕು ಅಂತ ಕರೆದಿದ್ದಾನೆ. ಆದ್ರೆ ಮದುವೆ ಕಾರ್ಡ್‌ನಲ್ಲಿ ತಪ್ಪಾಗಿ ಇನ್ನೇನೋ ಪ್ರಿಂಟ್ ಆಗಿದೆ. 

Latest Videos

undefined

8 ವರ್ಷ ಅಣ್ಣಾ ಎಂದು ಕರೆದವನನ್ನೇ ಮದ್ವೆಯಾದ್ಲು, ವೀಡಿಯೋ ನೋಡಿ ನೆಟ್ಟಿಗರು ಶಾಕ್‌!

ಹೌದು, ಎಲ್ಲರೂ ಮದುವೆಗೆ ಬನ್ನಿ ಎಂದು ಮುದ್ರಿಸುವ ಬದಲು ವೆಡ್ಡಿಂಗ್ ಕಾರ್ಡ್‌ನಲ್ಲಿ ಮದ್ವೆಗೆ ಬರಲೇಬೇಡಿ ಎಂದು ಪ್ರಿಂಟ್ ಮಾಡಲಾಗಿದ್ದು, ಎಲ್ಲೆಡೆ ವೈರಲ್ ಆಗ್ತಿದೆ. ಮದುವೆ ಕಾಗದದಲ್ಲಿ 'ಸ್ನೇಹಪೂರ್ವಕವಾಗಿ ನಮ್ಮ ಮದುವೆಗೆ ಬರಬೇಡಿ ಎಂದು ಹೇಳುತ್ತೇನೆ' ಎಂದು ಮುದ್ರಿಸಲಾಗಿದೆ. ಮದುವೆ ಕಾರ್ಡ್‌ನ್ನು ಮುದ್ರಿಸುವ ಮುದ್ರಣಾಲಯದಿಂದ ತಪ್ಪಾಗಿದ್ದು ಈ ವೆಡ್ಡಿಂಗ್ ಕಾರ್ಡ್ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ. ಇದು ಹಲವರಲ್ಲಿ ತಪ್ಪು ಅಭಿಪ್ರಾಯಕ್ಕೆ ಕಾರಣವಾಯಿತು. ಹಲವರು ಮದುವೆಗೆ ಬರುವುದು ಬೇಡ ಎಂದದು ಹೇಳಿದ್ದಾರೆ ಎಂದೇ ತಪ್ಪಾಗಿ ಭಾವಿಸಿದರು. 

ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಈ ವೆಡ್ಡಿಂಗ್ ಕಾರ್ಡ್‌ ಫುಲ್ ವೈರಲ್ ಆಗ್ತಿದೆ. ಇದಕ್ಕೆ ನೀಡಿರುವ ಶೀರ್ಷಿಕೆ ಇನ್ನೂ ನಗು ತರಿಸುವಂತಿದೆ. 'ಮದುವೆ ಆಮಂತ್ರಣ ಪತ್ರಿಕೆಯೊಂದು ಬಂದಿದೆ. ಆದರೆ ಆಮಂತ್ರಣ ಪತ್ರಿಕೆಯಲ್ಲಿ ಬರೆದಿರೋದನ್ನು ನೋಡಿ ಮದುವೆಗೆ ಹೋಗಬೇಕೇ ಬೇಡವೇ ಎಂಬ ಬಗ್ಗೆ ಗೊಂದಲ ಮೂಡಿದೆ' ಎಂದು ಬರೆದುಕೊಂಡಿದ್ದಾರೆ. ವೈರಲ್ ಆಗಿರೋ ಪೋಸ್ಟ್‌ಗೆ ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. 138ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. 

ಮಗಳ ಡಿಎನ್‌ಎ ಟೆಸ್ಟ್ ಮಾಡಿಸಿದ ದಂಪತಿ, ರಿಪೋರ್ಟ್‌ ನೋಡಿದ್ರೆ ಇಬ್ಬರಿಗೂ ಮ್ಯಾಚ್ ಆಗ್ತಿಲ್ಲ!

ಒಬ್ಬ ಬಳಕೆದಾರರು (User) 'ಇದು ಅತಿದೊಡ್ಡ ಅವಮಾನ' ಎಂದಿದ್ದಾರೆ. ಮತ್ತೊಬ್ಬರು 'ಮದುವೆಯ ಸಂಭ್ರಮದಲ್ಲಿ ಹೀಗೆಲ್ಲಾ ಆದರೆ ಹೇಗೆ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು 'ಮ್ಯಾರೇಜ್ ಪ್ರಿಪರೇಶನ್‌ ಕೆಲಸದ ಗಡಿಬಿಡಿಯಲ್ಲಿ ಹೀಗೆಲ್ಲಾ ಆಗಿರಬಹುದು' ಎಂದು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು 'ಇದು ತಿಳಿಯದೇ ಆಗಿರುವ ತಪ್ಪು. ಇದನ್ನು ಕ್ಷಮಿಸಿ ಮದುವೆಗೆ ಹೋಗಲು ನಿರ್ಧರಿಸಬಹುದು' ಎಂಬ ಸಲಹೆ ನೀಡಿದ್ದಾರೆ. ಅದೇನೆ ಇರ್ಲಿ, ಮದುವೆ ಸಿದ್ಧತೆಯಲ್ಲಿ ಈ ರೀತಿಯ ಎಡವಟ್ಟು ಆಗಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

ಮದ್ವೆ ಮನೆಯಲ್ಲಿ ಡಿಜೆ ಅಬ್ಬರಕ್ಕೆ ಪೊಲೀಸರ ತಡೆ, ಸಿಟ್ಟಿಗೆದ್ದ ವಧು-ವರ ಏನ್ ಮಾಡಿದ್ರು ನೋಡಿ!

click me!