Personality Test: ಈ ಚಿತ್ರಗಳ ಪೈಕಿ ನಿಮ್ಮ ಆಯ್ಕೆ ಯಾವ್ದು? ಇವು ಭವಿಷ್ಯ, ವ್ಯಕ್ತಿತ್ವ ಸೂಚಿಸುತ್ವೆ

Published : Jun 30, 2023, 05:08 PM IST
Personality Test: ಈ ಚಿತ್ರಗಳ ಪೈಕಿ ನಿಮ್ಮ ಆಯ್ಕೆ ಯಾವ್ದು? ಇವು ಭವಿಷ್ಯ, ವ್ಯಕ್ತಿತ್ವ ಸೂಚಿಸುತ್ವೆ

ಸಾರಾಂಶ

ಇಲ್ಲಿರುವ ಚಿತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿ. ಇವು ಸದ್ಯದ ನಿಮ್ಮ ಮನಸ್ಥಿತಿ, ಭವಿಷ್ಯ ಹಾಗೂ ವ್ಯಕ್ತಿತ್ವನ್ನು ಸೂಚಿಸುತ್ತವೆ. ನೀವು ಮಾಡುವ ಆಯ್ಕೆಯಿಂದ ನಿಮ್ಮದೇ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತವೆ. ಸುಪ್ತಪ್ರಜ್ಞೆಯಲ್ಲಿರುವ ಭಾವನೆಗಳ ಬಗ್ಗೆ ಕೊಂಚ ಅರಿವು ಮೂಡಲು ಸಹಾಯವಾಗುತ್ತದೆ.  

ನಮ್ಮ ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ಅರಿತುಕೊಳ್ಳುವ ಅವಕಾಶವನ್ನು ನಾವ್ಯಾರೂ ಬಿಡುವುದಿಲ್ಲ. ನಮ್ಮ ಗುಣಾವಗುಣಗಳ ಬಗ್ಗೆ ಅರಿವು ಹೊಂದಿದ್ದರೂ ಇನ್ನೂ ಹೆಚ್ಚಿನದನ್ನು ಅರಿತುಕೊಳ್ಳುವ ಬಯಕೆ ಸಾಮಾನ್ಯ. ನಮ್ಮ ಬಗ್ಗೆಯೇ ನಮಗೆ ಸ್ಪಷ್ಟತೆ ಬರುವಂತಾಗಲು ಹಲವು ಪ್ರಯತ್ನ ಮಾಡುತ್ತೇವೆ. ಇಲ್ಲಿ ಕೆಲವು ಚಿತ್ರಗಳನ್ನು ನೀಡಲಾಗಿದೆ. ಇವುಗಳನ್ನು ಸ್ಪಷ್ಟವಾಗಿ ನೋಡಿ. ನಾಲ್ಕು ರೀತಿಯ ದಾರಿಗಳಿವೆ. ಇವುಗಳಲ್ಲಿ ನೀವು ಯಾವುದನ್ನು ಆಯ್ಕೆ ಮಾಡುತ್ತೀರೋ ಅದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ, ಭವಿಷ್ಯ ಮತ್ತು ಸದ್ಯದ ನಿಮ್ಮ ಮನಸ್ಥಿತಿಯನ್ನು ಅರಿತುಕೊಳ್ಳಬಹುದು. ಮೈಂಡ್ಸ್‌ ಜರ್ನಲ್‌ ಪ್ರಕಾರ, ಇವು ನಮ್ಮ ಸುಪ್ತಪ್ರಜ್ಞೆಯನ್ನು ಬಿಂಬಿಸುತ್ತವೆ. ಇಲ್ಲಿರುವ ಚಿತ್ರಗಳ ಪೈಕಿ ಯಾವ ಮಾರ್ಗ ಇಷ್ಟವಾಗುತ್ತದೆ ಎನ್ನುವುದನ್ನು ಮನಃಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಿ. ಈ ಮಾರ್ಗಗಳು ನಿಜವಾಗಿ ಏನನ್ನು ಬಹಿರಂಗಪಡಿಸುತ್ತವೆ ಎಂದು ನೋಡಿ.

•    ಅರಣ್ಯದ (Forest) ಮಧ್ಯೆ ಹಾದಿ (Path), ಅಕ್ಕಪಕ್ಕೆ ಹೂವಿನ (Flower) ರಾಶಿ
ಹೂವಿನ ಹಾದಿಯನ್ನು ನೀವು ಆಯ್ಕೆ ಮಾಡಿದ್ದರೆ, ನಿಮ್ಮ ವ್ಯಕ್ತಿತ್ವ ಮೃದುವಾದದ್ದು. ಎಷ್ಟೇ ನೋವಾಗಿದ್ದರೂ (Hurt) ನೀವು ಪ್ರತೀಕಾರದ (Revenge) ಬಗ್ಗೆ ಎಂದಿಗೂ ಯೋಚನೆ ಮಾಡುವುದಿಲ್ಲ. ಆರೈಕೆ, ಕಾಳಜಿ (Nurture) ಮಾಡುವ ಗುಣ ಹೊಂದಿದ್ದು, ಕರ್ಮ ಫಲಗಳ ಬಗ್ಗೆ ನಂಬಿಕೆ ಹೊಂದಿರುತ್ತೀರಿ. ಸಂಪ್ರದಾಯಗಳನ್ನು ಗೌರವಿಸುತ್ತೀರಿ. ಉತ್ತಮ ಭವಿಷ್ಯದ ಬಗ್ಗೆ ನಿಮಗೆ ನಿರೀಕ್ಷೆಯಿದೆ. ನಿಮಗೆ ಈಗ ಬೇಕಾಗಿರುವುದು ತಾಳ್ಮೆ. ಶ್ರಮಪಟ್ಟು ಕೆಲಸ ಮಾಡುವುದನ್ನು ಮುಂದುವರಿಸಿದರೆ ನಿಮ್ಮ ಕನಸು, ಗುರಿಯನ್ನು ಸಾಧಿಸಬಹುದು.

ಇವರು 'ವೈರಿ'ಗಳಿಗಿಂತ ಡೇಂಜರ್: ಇಂತವರಿಂದ ದೂರ ಇರಿ ಅಂತಾರೆ ಚಾಣಕ್ಯರು..!

•    ಕಲ್ಲಿನ ಮೆಟ್ಟಿಲುಗಳು (Rocky Stairs) ಅಕ್ಕಪಕ್ಕ ಹಸಿರು
ಕಲ್ಲಿನ ಮೆಟ್ಟಿಲುಗಳನ್ನು ಹೊಂದಿದ ಹಾದಿಯನ್ನು ನೀವು ಆಯ್ಕೆ ಮಾಡಿದ್ದೀರಿ ಎಂದಾದರೆ, ನೀವು ಸಾಹಸವನ್ನು (Adventure) ಇಷ್ಟಪಡುತ್ತೀರಿ ಎಂದರ್ಥ. ದೈನಂದಿನ ಸಾಮಾನ್ಯ ಕ್ರಿಯೆಗಳೆಂದರೆ ನಿಮಗೆ ಬೋರು. ಹೊಸದನ್ನು ಅನ್ವೇಷಿಸುವ, ಪ್ರಯಾಣ (Travel) ಬೆಳೆಸುವ, ಹೊಸ ವಸ್ತುವಿನ ಅನುಭವಕ್ಕಾಗಿ ನಿರೀಕ್ಷಿಸುವ ಗುಣ ನಿಮ್ಮಲ್ಲಿದೆ. ನೇರವಾದ ನಡೆನುಡಿ ನಿಮ್ಮದು. ಒಂದೇ ಒಂದು ಕೊರತೆ ಎಂದರೆ, ಯಾವುದೇ ಸಾಹಸಮಯ ಕೃತ್ಯಕ್ಕೆ ಅವಕಾಶ ಸಿಗದೇ ಇದ್ದಾಗ ನೀವು ಇದ್ದಕ್ಕಿದ್ದ ಹಾಗೆ ಉತ್ಸಾಹ ಕಳೆದುಕೊಳ್ಳುತ್ತೀರಿ. ಇನ್ನು, ಭವಿಷ್ಯದ (Future) ವಿಚಾರಕ್ಕೆ ಬಂದರೆ, ಮೆಟ್ಟಿಲುಗಳು ಬೆಳವಣಿಗೆಯನ್ನು (Growth) ಸೂಚಿಸುತ್ತವೆ. ಬದ್ಧತೆಯಿಂದ, ಕಠಿಣ ಪರಿಶ್ರಮದಿಂದ, ಪ್ರಯತ್ನದಿಂದ ಯಶಸ್ಸು (Success) ಸಾಧಿಸಬಲ್ಲಿರಿ.

•    ಕಾಡುಹಾದಿ, ಅಕ್ಕಪಕ್ಕ ಹಸಿರು (Green)
ಸಹಜವಾದ ಕಾಡಿನ ಹಾದಿ ನಿಮ್ಮ ಆಯ್ಕೆಯಾಗಿದ್ದರೆ, ನೀವು ನಿರ್ಧಾರ (Decision) ಕೈಗೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುವ ಮಂದಿ. ಕೇರ್‌ ಫುಲ್‌ ಆಗಿರುತ್ತೀರಿ. ಆಳವಾದ, ಸೈದ್ಧಾಂತಿಕ ಮನಸ್ಥಿತಿ ಹೊಂದಿದ್ದೀರಿ. ಅತ್ಯಂತ ಆದರ್ಶವಾದಿ ಹಾಗೂ ಪರಿಪೂರ್ಣವಾದಿಯೂ ಹೌದು. ಚುರುಕಾದ ಉತ್ತಮ ಗ್ರಹಿಕೆ ಹೊಂದಿದ್ದು, ನೀವು ಎಲ್ಲೇ ಹೋದರೂ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಮನ್ನಣೆ ಇದೆ. ನಿಮ್ಮ ಶಾಂತವಾದ ಶಕ್ತಿ ಸುತ್ತ ಇರುವವರಿಗೂ ನೋವಿನ ಮುಲಾಮಿನಂತೆ ಕೆಲಸ ಮಾಡುತ್ತದೆ.

•    ಹಸಿರು ಮರಗಳಿಂದ (Tree) ಆವೃತವಾದ ಹಾದಿ
ಹಕ್ಕಿಯಂತೆ ಚಿಲಿಪಿಲಿಗುಟ್ಟುವ, ಉತ್ಸಾಹ ಹೊಂದಿರುವ ಗುಣವಿರುವವರ ಆಯ್ಕೆ ಈ ಹಾದಿ. ವಿನೋದವನ್ನು ಇಷ್ಟಪಡುತ್ತಾರೆ. ಪ್ರವಾಹದ ಹರಿವಿನ ಜತೆಯಲ್ಲಿ ಸಾಗುತ್ತಾರೆ, ಹೇಗೆ ಬರುತ್ತದೆಯೋ ಹಾಗೆ ಜೀವನವನ್ನು ಸ್ವೀಕರಿಸುತ್ತಾರೆ. ನೀರಸ ಮತ್ತು ಬೋರಿಂಗ್‌ (Boring) ಎನ್ನುವ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಖುಷಿ (Happy) ಯಾಗಿದ್ದು, ಎಲ್ಲ ರೀತಿಯ ಅಡೆತಡೆಗಳನ್ನು ಸಂತಸದಿಂದಲೇ ದಾಟುತ್ತಾರೆ.

Personality Tips: ಒರಟಾಗಿ ಹ್ಯಾಂಡ್ ಶೇಕ್ ಮಾಡಿದ್ರೆ ನಿಮ್ಮನ್ಯಾರೂ ಇಷ್ಟ ಪಡೋಲ್ಲ!

•    ಕಿರಿದಾದ ಸ್ಪಷ್ಟ ಹಾದಿ
ನೀವು ಅತ್ಯಂತ ಸರಳವಾದ ವ್ಯಕ್ತಿ. ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಹಾಗೂ ಪ್ರೀತಿಸುತ್ತಾರೆ. ಯಾವುದೇ ಸಮಯದಲ್ಲೂ ಕೋಪಿಸಿಕೊಳ್ಳುವುದಿಲ್ಲ. ನಕಾರಾತ್ಮಕ ಚಿಂತನೆಗಳಿಗೆ ನಿಮ್ಮಲ್ಲಿ ಅವಕಾಶವಿಲ್ಲ.ಪ್ರಬುದ್ಧ, ಸಮತೋಲಿತ ವ್ಯಕ್ತಿತ್ವ ನಿಮ್ಮದು.

•    ಮಂಜಿನಿಂದ ಆವೃತವಾದ ಹಾದಿ
ಸೂಕ್ಷ್ಮ ಚಿಂತನೆಗಳು ನಿಮ್ಮದು. ರಿಸರ್ವ್‌ ನೇಚರ್‌ ಹೊಂದಿದ್ದೀರಿ. ಸ್ವಲ್ಪ ಭಯಪಡುವ ಗುಣವಿದ್ದರೂ ಸದಾಕಾಲ ರಕ್ಷಣೆ ಬೇಕೆಂಬ ಹಂಬಲ ಹೊಂದಿಲ್ಲ. ಏಕಾಂಗಿಯಾಗಿರುವುದೆಂದರೆ ಭಾರೀ ಇಷ್ಟ. 


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!