ಕೋಟಿ ಕೋಟಿ ಕಾರಿನ ಒಡತಿಗೆ ಟೈರ್ ರಿಪೇರಿ ಮಾಡಿದ ವ್ಯಕ್ತಿಯ ಮೇಲೆಯೇ ಲವ್ವಾಗೋಯ್ತು !

By Vinutha PerlaFirst Published Jan 11, 2023, 12:08 PM IST
Highlights

ಪ್ರೀತಿಯೆಂದರೆ ಹಾಗೇನೆ. ಅದಕ್ಕೆ ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ಹಂಗಿಲ್ಲ. ಹಾಗೇ ಸುಮ್ಮನೆ ಪ್ರೀತಿಯಾಗಿಬಿಡುತ್ತದೆಯಷ್ಟೇ. ಹಾಗೆಯೇ ಇಲ್ಲೊಬ್ಬಳು ಕೋಟಿ ಕೋಟಿ ಕಾರಿನ ಒಡತಿಗೆ ತನ್ನ ಪಂಕ್ಚರ್ ಆದ ಟೈರ್ ಬದಲಾಯಿಸಿದ ವ್ಯಕ್ತಿಯ ಮೇಲೆ ಲವ್ವಾಗಿ ಬಿಟ್ಟಿದೆ. ಇಬ್ಬರೂ ಮದುವೆಯನ್ನೂ ಮಾಡಿಕೊಂಡಿದ್ದಾರೆ.

ಬಡವನಾದರೆ ಏನು ಪ್ರಿಯೆ ಕೈ ತುತ್ತು ತಿನ್ನಿಸುವೆ, ಅನ್ನೋ ಹಾಡೇ ಇದೆ. ಅದರಂತೆ ಪ್ರೀತಿಗೆ ಯಾವುದರ ಹಂಗೂ ಇಲ್ಲ. ವ್ಯಕ್ತಿಯ ವಯಸ್ಸು, ಜಾತಿ, ಧರ್ಮ, ಲಿಂಗ, ಶ್ರೀಮಂತ-ಬಡವ ಯಾವುದರ ಪರಿವೆಯೂ ಇಲ್ಲದೆ ಹಾಗೇ ಸುಮ್ಮನೆ ಪ್ರೀತಿಯಾಗಿ ಬಿಡುತ್ತದೆಯಷ್ಟೆ. ಹಾಗೆಯೇ ಇಲ್ಲೊಂದು ವಿಭಿನ್ನ ಪ್ರೇಮಕಥೆ ಎಲ್ಲರ ಗಮನ ಸೆಳೀತಿದೆ. ಆಗರ್ಭ ಶ್ರೀಮಂತ ಮಹಿಳೆ, ಏನೂ ಇಲ್ಲದ ಸಾಮಾನ್ಯ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದಾಳೆ.  ಶ್ರೀಮಂತ ಪಾಕಿಸ್ತಾನಿ ಮಹಿಳೆ ತನ್ನ ಪಂಕ್ಚರ್ ಆದ ಟೈರ್ ಬದಲಾಯಿಸಿದ ವ್ಯಕ್ತಿ ಜೊತೆ ಪ್ರೀತಿಯಲ್ಲಿ ಬಿದಿದ್ದಾಳೆ. ಜೋಡಿ ಮದುವೆಯಾಗಿ ಖುಷಿಯಾಗಿದ್ದಾರೆ

ಪ್ರೀತಿ (Love)ಯೆಂದರೆ ಹಾಗೆಯೇ ಅದು ಯಾರ ಮೇಲಾದರೂ, ಯಾವಾಗ ಬೇಕಾದರೂ ಮೂಡಬಹುದು. ಜನರು ತಮ್ಮ ಸಾಮಾಜಿಕ-ಆರ್ಥಿಕ ಸ್ಥಿತಿ, ಅವರ ಕೆಲಸ ಅಥವಾ ಇತರ ಬಾಹ್ಯ ಅಂಶಗಳನ್ನು ಲೆಕ್ಕಿಸದೆ ಯಾರೊಂದಿಗಾದರೂ ಪ್ರೀತಿಯಲ್ಲಿ ಬೀಳಬಹುದು. ಸಾಮಾನ್ಯವಾಗಿ, ಜನರು ಇತರರಲ್ಲಿರುವ ದಯೆ, ಬುದ್ಧಿವಂತಿಕೆ ಮತ್ತು ಹಾಸ್ಯ ಪ್ರಜ್ಞೆಯಂತಹ ಆಂತರಿಕ ಗುಣಗಳಿಂದಾಗಿ ಯಾರನ್ನಾದರೂ ಪ್ರೀತಿಸುತ್ತಾರೆ. ಹೀಗಾಗಿಯೇ ಲವ್‌ ಈಸ್ ಬ್ಲೈಂಡ್ ಎಂದು ಹೇಳುತ್ತಾರೆ. ಯಾಕೆಂದರೆ ಪ್ರೀತಿ ಯಾವಾಗಲೂ ತರ್ಕಬದ್ಧವಾಗಿರುವುದಿಲ್ಲ ಅಥವಾ ತಾರ್ಕಿಕವಾಗಿರುವುದಿಲ್ಲ.

ಈ ಮಹಿಳೆಯರಿಗೆ ಪ್ರೀತಿಗಿಂತಲೂ, ಶ್ರೀಮಂತಿಕೆಯೇ ಮುಖ್ಯವಂತೆ!

ಟೈರ್ ರಿಪೇರಿ ಮಾಡಿದ ವ್ಯಕ್ತಿಯ ಮೇಲೆ ಶ್ರೀಮಂತ ಮಹಿಳೆಗೆ ಪ್ರೀತಿ
ಪಾಕಿಸ್ತಾನದ ಶ್ರೀಮಂತ ಕುಟುಂಬದ ಮಹಿಳೆ (Woman) ಆಯೇಷಾಗೆ ತನ್ನ ಟೈರ್ ರಿಪೇರಿ ಮಾಡಿದ ಜಿಸೆನ್ ಮೇಲೆ ಲವ್ವಾಗಿದೆ. ದಾಂಪತ್ಯ ಜೀವನಕ್ಕೆ (Married life) ಕಾಲಿಟ್ಟ ಜೋಡಿ, ಯೂಟ್ಯೂಬರ್ ಸೈಯದ್ ಬಸಿತ್ ಅಲಿ ಅವರೊಂದಿಗೆ ಆನ್‌ಲೈನ್ ಸಂದರ್ಶನದಲ್ಲಿ ಕಾಣಿಸಿಕೊಂಡರು. ಸಂದರ್ಶನದಲ್ಲಿ, ಆಯೇಷಾ ಅವರು ಜಿಸೆನ್ ಅವರನ್ನು ಹೇಗೆ ಭೇಟಿಯಾದೆ ಎಂಬುದನ್ನು ವಿವರಿಸಿದರು. ಆಯೇಷಾ ಒಂದು ಸಾರಿ ಪ್ರಯಾಣಿಸುತ್ತಿದ್ದಾಗ ಕಾರಿನ ಟೈರ್ ಪಂಕ್ಚರ್ ಆಗಿತ್ತು. ಟೈರ್‌ನ್ನು ಸರಿಪಡಿಸಲು ಅವರು ಹಲವರನ್ನು ಸಂಪರ್ಕಿಸಿದರು. ಆದರೆ ಯಾರಿಂದಲೂ ನೆರವು ಸಿಗಲ್ಲಿಲ್ಲ. ಕೊನೆಗೆ ಜಿಸೆನ್ ಅಂಗಡಿಗೆ ಕಾರನ್ನು ತಲುಪಿಸಿದರು.

ವಾಹನವನ್ನು ನೋಡಿದ ತಕ್ಷಣ ಜೆಸೆನ್‌ ತನ್ನ ಅಂಗಡಿಯಲ್ಲಿದ್ದ ಕೆಲಸಗಾರರನ್ನು ಟೈರ್ ಪರಿಸ್ಥಿತಿಯನ್ನು ನೋಡಲು ಕೇಳಿದನು. ತನ್ನ ವಾಹನವನ್ನು ಸರಿಪಡಿಸಲು ಕಾಯುತ್ತಿರುವಾಗ ಆಯೇಷಾಳನ್ನು ಆರಾಮದಾಯಕವಾಗಿಸಲು ಅವನು ಚಹಾವನ್ನು ತರಿಸಿ ನೀಡಿದನು. ಅಷ್ಟರಲ್ಲಿ ಕಾರಿನ ಟೈರ್‌ನ್ನು ಸಹ ರಿಪೇರಿ ಮಾಡಲಾಯಿತು. ತನ್ನೆಡೆಗೆ ಜಿಸೆನ್‌ನ ವರ್ತನೆಯು ಆಯೇಷಾ ಮೇಲೆ ಗಾಢವಾದ ಪ್ರಭಾವ ಬೀರಿತು. ಆಯೇಷಾ ಟಯರ್ ರಿಪೇರಿ ಮಾಡಿದ ಜಿಸೆನ್ ಜೊತೆಗೆ ಪ್ರೀತಿಯಲ್ಲಿ ಬಿದ್ದಳು.

ಆ ಬಳಿಕ ಜಿಸೆನ್‌ನ್ನು ಭೇಟಿಯಾಗುವ ಉದ್ದೇಶದಿಂದಲೇ ತನ್ನ ಕಾರನ್ನು ಆಗಾಗ ಪಂಕ್ಚರ್ ಮಾಡಿಕೊಳ್ಳುತ್ತಿದ್ದಳು. ಕ್ರಮೇಣ ಜಿಸೆನ್‌ ಮನದಲ್ಲಿ ಸಹ ಆಯೇಷಾ ಬಗ್ಗೆ ಪ್ರೀತಿ ಮೂಡಲು ಆರಂಭವಾಯಿತು. ಇಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದೇವೆಂದು ಪರಸ್ಪರ ಅರಿತುಕೊಂಡ ನಂತರ ಮದುವೆಯಾಗಲು ನಿರ್ಧರಿಸಿದ. ಇಬ್ಬರ ಸ್ಥಾನಮಾನ ಸಂಬಂಧಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಲ್ಲಿಲ್ಲ.

ಕೋಚಿಂಗ್ ಕ್ಲಾಸಲ್ಲಿ ಲವ್: 20ರ ಹರೆಯದ ವಿದ್ಯಾರ್ಥಿನಿ ಮದ್ವೆಯಾದ 42 ವರ್ಷದ ಶಿಕ್ಷಕ

ಇಂಡೋನೇಷ್ಯಾ ಟೇಚರ್ ಹತ್ರ ಇಂಗ್ಲಿಷ್ ಕಲೀತಾ ಲವ್ವಾಗೋಯ್ತು!
ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಇಂಗ್ಲಿಷ್ ಕಲಿಯುವಾಗ ಭೇಟಿಯಾದ ಇಂಡೋನೇಷ್ಯಾದ ಮಹಿಳೆ (Women)ಯನ್ನು ವಿವಾಹವಾದರು.ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರುದ್ರಪುರ ತಹಸಿಲ್‌ನ ನಾರಾಯಣಪುರ ಗ್ರಾಮದ ನಿವಾಸಿ ಸನ್ವರ್ ಅಲಿ 2015ರಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಯುತ್ತಿದ್ದಾಗ ಇಂಡೋನೇಷ್ಯಾದ ಮೆಡಾನ್‌ನಿಂದ ಮಿಫ್ತಾಹುಲ್ ಜನ್ನಾ ಎಂಬಾಕೆ ಅವರಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. 2017ರಲ್ಲಿ ದಕ್ಷಿಣ ಭಾರತವು ಚಂಡಮಾರುತದಿಂದ ಅಪ್ಪಳಿಸಿದಾಗ ಅಲಿ ಮತ್ತು ಮಿಫ್ತಾಹುಲ್ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆಂದು ಅರಿತುಕೊಂಡರು. ಈ ಸುದ್ದಿಯನ್ನು ಕೇಳಿದಾಗ ಮಿಫಾತುಹುಲ್ ಅಲಿ ಮತ್ತು ಅವರ ಕುಟುಂಬದ (Family) ಯೋಗಕ್ಷೇಮದ ಬಗ್ಗೆ ಕಾಳಜಿ (Care) ವಹಿಸಿದರು.

click me!