ಪ್ರೇಮಿಗಳ ದಿನದಂದು ನಿಮ್ಮ ಹಳೆ ಪ್ರೇಮ ನಿಮ್ಮ ಬಳಿಗೆ ಬಂದು ನಿಮ್ಮಿಬ್ಬರ ಹಳೆ ಸಂಬಂಧವನ್ನು ನೆನಪಿಸಿ. ಮುಂದೆ ಜೊತೆಯಾಗಿರೋಣ ಎಂದು ಕೇಳಿದರೆ ನೀವೇನು ಮಾಡುತ್ತೀರಿ? ಅವರೊಂದಿಗೆ ಸುಮ್ಮನೆ ಹೊರಟು ಬಿಡುತ್ತೀರಾ? ಅಥವಾ ಒಮ್ಮೆ ಕಡಿದುಕೊಂಡ ಸಂಬಂಧವನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುತ್ತೀರ?
ಪ್ರೇಮಿಗಳು (Lovers) ಅಂದ ಮೇಲೆ ಜಗಳಗಳು ಸಾಮಾನ್ಯ. ಆದರೆ ಒಮ್ಮೆ ಒಬ್ಬರೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಕಳೆದುಕೊಂಡ ಬಳಿಕ, ಅವರು ಒಮ್ಮಿಂದೊಮ್ಮೆಲೆ ನಿಮ್ಮ ಮುಂದೆ ಪ್ರತ್ಯಕ್ಷರಾಗಿ ಬಿಟ್ಟರೆ ನೀವು ಅವರಿಗೆ ಏನು ಹೇಳಬೇಕು ಎಂದು ಯೋಚಿಸಿದ್ದೀರಾ? ವ್ಯಾಲೆಂಟೈನ್ಸ್ ಡೇ ಇಂಥ ಕೆಲವು ವಿಭಿನ್ನ ಸನ್ನಿವೇಶಗಳನ್ನು (Situation) ನಿಮಗೆ ಎದುರಾಗುವಂತೆ ಮಾಡುತ್ತದೆ. ಅಂತಹ ಸನ್ನಿವೇಶಗಳಿಗೆ ನೀವು ಮಾನಸಿಕವಾಗಿ ಸಿದ್ಧರಾಗಬೇಕು. ಇದನ್ನು ಹೇಗೆ ಎದುರಿಸಬಹುದು ಎಂಬುದಕ್ಕೆ ಈ ಕೆಲವು ಸಲಹೆಗಳನ್ನು ಪಾಲಿಸಿ..
ನಿಮ್ಮ ಹಳೆ ಪ್ರೇಮಿ (Ex) ನಿಮ್ಮ ಜೊತೆಗೆ ಇರಲು ಬಯಸಿದರೆ ಅದಕ್ಕೆ ಎರಡು ಕಾರಣಗಳಿರಬಹುದು. ಒಂದು ಅವರು ನಿಮಗೆ ಮತ್ತೊಮ್ಮೆ ಮೋಸ (Cheat) ಮಾಡಲು ಪ್ರಯತ್ನಿಸುತ್ತಿರಬಹುದು, ಇದಲ್ಲದೆ ಅವರಿಗೆ ನಿಜವಾಗಿಯೂ ನಿಮ್ಮನ್ನು ಬಿಟ್ಟಿರಲಾಗದೆ ನಿಮ್ಮೊಂದಿಗೆ ಸ್ನೇಹ ಮುಂದುವರಿಸಲು ಬಂದಿರಬಹುದು. ಇವೆರಡರಲ್ಲಿ ಯಾವ ಉದ್ದೇಶವನ್ನು ಅವರು ಹೊಂದಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳದ ಹೊರತು ನೀವು ಮುಂದುವರೆಯಬೇಡಿ.
Valentine's day: ನಿಮ್ಮ ಕೈಯಾರೆ ವಿಶೇಷ ತಿಂಡಿ ತಯಾರಿಸಿ, ಸಂಗಾತಿಯ ಮನ ಗೆಲ್ಲಿ
ನಿಮ್ಮ ಮನದ ಭಾವನೆ ಅರಿಯಲು ಪ್ರಯತ್ನಿಸಿ
ಕೆಲವೊಂದು ಸಂದರ್ಭಗಳಲ್ಲಿ ನೀವು ನಿಮ್ಮ ಪ್ರೇಮಿಯೊಂದಿಗೆ ಬೇರೆಯಾಗುವುದಕ್ಕೆ ಕಾರಣ ಸಣ್ಣದಿರಬಹುದು. ನಿಮ್ಮಿಬ್ಬರ ನಡುವಿನ ಯಾವುದೋ ತಪ್ಪುಕಲ್ಪನೆ (Misunderstanding) ಅಥವಾ ಮೂರನೇ ವ್ಯಕ್ತಿಯಿಂದ ನೀವಿಬ್ಬರು ಜಗಳವಾಡಿ ದೂರವಿರಬಹುದು. ಇಂತಹ ಸನ್ನಿವೇಶಗಳಲ್ಲಿ ನಿಮ್ಮ ಪ್ರೇಮಿ ವಾಪಸಾಗಿದ್ದರೆ ಅವರೊಂದಿಗೆ ಕುಳಿತು ಮಾತನಾಡುವುದು ಉತ್ತಮ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ನೀವು ಒಬ್ಬರೇ ನಿಮಗಾಗಿ ಸಮಯ ತೆಗೆದುಕೊಂಡು ಚೆನ್ನಾಗಿ ಯೋಚಿಸಿ. ನೀವು ಅವರೊಂದಿಗಿದ್ದರೆ ಖುಷಿಯಾಗಿರುತ್ತೀರಿ (Happy) ಎಂದರೆ ಮಾತ್ರ ಒಪ್ಪಿಕೊಳ್ಳಿ. ಇಲ್ಲವೇ ಅವರಿಂದ ದೂರ ಇದ್ದಾಗ ನೀವು ಹೆಚ್ಚು ಖುಷಿ ಅನುಭವಿಸಿದ್ದೀರಾ ಎಂದಾದರೆ ಆಗ ಕೂಡ ನಿರ್ಧಾರ ನಿಮ್ಮದೇ..
ನಿಮ್ಮ ಸಂಬಂಧ ಹೇಗೆ ಕಡಿದೋಯಿತು (Breakup) ಎಂಬುದನ್ನು ನೆನಪಿಸಿಕೊಳ್ಳಿ
ಈಗ ನಿಮ್ಮೆದುರಿಗೆ ಬಂದಿರುವ ನಿಮ್ಮ ಹಳೆ ಪ್ರೇಮಿ ಅವರನ್ನು ನೋಡಿದ ಕೂಡಲೇ ನಿಮ್ಮ ಮನಸ್ಸು ಕರಗಿ ಹೋಗಬಹುದು. ಆದರೆ, ನೀವಿಬ್ಬರೂ ಬೇರೆಯಾದ ಸನ್ನಿವೇಶವನ್ನು ನೆನಪಿಸಿಕೊಳ್ಳಿ, ಅದಕ್ಕೂ ಈಗಿನ ಸಂದರ್ಭಕ್ಕೂ ಹೋಲಿಕೆ ಮಾಡಿಕೊಳ್ಳಿ. ಆಗ ನಿಮ್ಮೆದುರಿಗೆ ಇರುವ ವ್ಯಕ್ತಿ ಯಾವ ಭಾವನೆಯನ್ನು ಹೊಂದಿರಬಹುದು ಎಂಬ ಒಂದು ಊಹೆ ನಿಮಗೆ ಸಿಗುತ್ತದೆ. ಆಗ ನಿಮಗೊಂದು ನಿರ್ಧಾರ ತೆಗೆದುಕೊಳ್ಳುವ ದಾರಿ ಕಾಣಿಸುತ್ತದೆ. ಹಿಂದಿನ ದಿನಗಳನ್ನು (Past) ನೆನಪಿಸಿಕೊಳ್ಳದ ಹೊರತು ಯಾವುದೇ ನಿರ್ಧಾರಕ್ಕೆ ಬಂದುಬಿಡಬೇಡಿ.
Promise day: ದಿನದ ವಿಶೇಷತೆ ಏನು? ಹೇಗೆ ಆಚರಿಸುವುದು?
ಯಾವುದೇ ನಿರ್ಧಾರಕ್ಕೂ ಮೊದಲು ಸಮಯ (Time) ತೆಗೆದುಕೊಳ್ಳಿ
ನಿಮ್ಮ ಹಳೆಯ ಪ್ರೇಮಿ ಎಷ್ಟೇ ಮಾತಿನಲ್ಲಿ ಮೋಡಿ ಮಾಡಲು ಪ್ರಯತ್ನಿಸಿದರು. ಆ ಕ್ಷಣದಲ್ಲಿ ಯಾವೊಂದು ನಿರ್ಧಾರಕ್ಕೂ ಬಂದುಬಿಡಬೇಡಿ. ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಂಡು ಚೆನ್ನಾಗಿ ಯೋಚಿಸಿ, ಸಹಜವಾಗಿ ಅವರನ್ನು ನೋಡಿದ ಕೂಡಲೇ ನಿಮ್ಮ ಮನಸ್ಸು ಕರಗುತ್ತದೆ ಇಲ್ಲವೇ ಕೋಪಗೊಂಡು ಬಿಡುತ್ತೀರಾ. ಆದರೆ, ಸ್ವಲ್ಪ ಸಮಯ ತೆಗೆದುಕೊಂಡು ಯೋಚಿಸಿ ಬಳಿಕ ನಿರ್ಧಾರ ತೆಗೆದುಕೊಳ್ಳುವುದರಿಂದ ನಿಮ್ಮ ನಿರ್ಧಾರದ ಗುಣಮಟ್ಟ (Quality) ಹೆಚ್ಚುತ್ತದೆ.
ಸ್ನೇಹಿತರಿಂದ ಸಲಹೆ (Suggestion) ತೆಗೆದುಕೊಳ್ಳಿ
ನಿಮ್ಮ ಸ್ನೇಹಿತರಿಗೆ ಹಳೆಯ ಪ್ರೇಮಿ ನಿಮ್ಮೊಂದಿಗೆ ಮತ್ತೆ ಸಂಬಂಧ ಬೆಳೆಸಲು ಬಂದಿರುವ ವಿಷಯವನ್ನು ತಿಳಿಸಿ ಅದರಿಂದ ಸಲಹೆ ಪಡೆದುಕೊಳ್ಳಿ. ಯಾಕೆಂದರೆ ಕೆಲವೊಂದು ಬಾರಿ ಅವರಿಂದ ದೂರವಿದ್ದೀರ ಎಂಬ ಕಾರಣವನ್ನು ನೀವು ಮರೆತಿರಬಹುದು. ಆದರೆ, ನಿಮ್ಮ ಸ್ನೇಹಿತರು ಮರೆತಿರುವುದಿಲ್ಲ. ಸದಾ ನಿಮ್ಮ ಒಳಿತನ್ನು ಬಯಸುವ ಒಬ್ಬ ಸ್ನೇಹಿತರೊಂದಿಗೆ ಕುಳಿತು ಮಾತನಾಡಿ ಬಳಿಕ ನಿರ್ಧಾರ ತೆಗೆದುಕೊಳ್ಳಿ.