ಕಾನ್ವೆಂಟ್ ಶಾಲೆಯ ಮಕ್ಕಳಾದ ನಿಷ್ಕಾ ಮತ್ತು ಕುನಾಲ್ ಅವರ ಮುದ್ದಾದ ಸ್ನೇಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಮ ವರ್ಷದ ಕೌಟುಂಬಿಕ ಹಿನ್ನೆಲೆಯವರಾಗಿದ್ದು, ಸಾಮಾನ್ಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಈ ಮಕ್ಕಳು ನಮಗೆ ಪ್ರೀತಿಗಿಂತ ಸ್ನೇಹವೇ ಮುಖ್ಯ ಎಂದು ಹೇಳಿಕೊಂಡಿದ್ದಾರೆ.
ಜಗತ್ತಿನಲ್ಲಿ ಅತಿ ಸುಂದರವಾದ ಸಂಬಂಧವೆಂದರೆ ಸ್ನೇಹ. ನಮ್ಮ ಸ್ನೇಹಿತರನ್ನು ನಾವೇ ಆಯ್ಕೆ ಮಾಡಿಕೊಳ್ಳುತ್ತೇವೆ. ಅದರಲ್ಲಿ ಕೆಲವರು ಸ್ವಲ್ಪ ಸಮಯದ ನಂತರ ನಮ್ಮನ್ನು ಬಿಟ್ಟು ಹೋಗಬಹುದು. ಆದರೆ ಕೆಲವರು ಯಾವಾಗಲೂ ನಮ್ಮ ಸಂತೋಷ ಮತ್ತು ದುಃಖದಲ್ಲಿ ನಮ್ಮೊಂದಿಗೆ ಇರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಸ್ನೇಹ ಬೇರೆಯೇ ಲೆವೆಲ್. ಅದೇ ರೀತಿ ಸುಂದರವಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಿದ್ದೇಶ್ ಲೋಕರೆ ಎಂಬ ಇನ್ಫ್ಲುಯೆನ್ಸರ್ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಗೋವಾದ ಕಾನ್ವೆಂಟ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ವಿಡಿಯೋದಲ್ಲಿ ಇದ್ದಾರೆ. ನಿಷ್ಕಾ ಮತ್ತು ಕುನಾಲ್. ಇವರ ಸುಂದರವಾದ ಸ್ನೇಹ ಯಾರ ಹೃದಯವನ್ನಾದರೂ ಗೆಲ್ಲುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಇಬ್ಬರು ಮಕ್ಕಳನ್ನು ಗೋವಾದ ಕಾನ್ವೆಂಟ್ ಶಾಲೆಯಲ್ಲಿ ನೋಡಿದ್ದೇನೆ. ಅವರ ಸ್ನೇಹ ನಿಮ್ಮ ಹೃದಯವನ್ನು ಗೆಲ್ಲುತ್ತದೆ ಎಂದು ಲೋಕರೆ ಹೇಳುತ್ತಾರೆ. 'ಇವಳು ನಿನ್ನ ಬೆಸ್ಟ್ ಫ್ರೆಂಡಾ?' ಎಂದು ಕುನಾಲ್‌ನನ್ನು ಲೋಕರೆ ಕೇಳುತ್ತಾರೆ. ಒಂದು ಕ್ಷಣವೂ ಯೋಚಿಸದೆ ಅವನು 'ಹೌದು' ಎಂದು ಉತ್ತರಿಸುತ್ತಾನೆ.
ಇದನ್ನೂ ಓದಿ: ಇದಕ್ಕಾಗಿಯೇ ಹೇಳೋದು ಹೆಣ್ಣು ಮಗುವಿನ ಅಪ್ಪ ಆಗೋದು The Best Feeling ಅಂತ!
ನಿಷ್ಕಾ ಮತ್ತು ಕುನಾಲ್ ಸೆಂಟ್ ಜಾನ್ ಆಫ್ ದಿ ಕ್ರಾಸ್ ಶಾಲೆಯಲ್ಲಿ ಓದುತ್ತಿದ್ದಾರೆ, ಆರ್ಥಿಕವಾಗಿ ಹಿಂದುಳಿದವರಿಗೆ ಇಲ್ಲಿ ವಸತಿ ಸೌಲಭ್ಯವಿದೆ. ತಂದೆ ತಾಯಿಯಿಲ್ಲದ ಮತ್ತು ಕೈಬಿಟ್ಟ 30 ಮಕ್ಕಳು ಇಲ್ಲಿದ್ದಾರೆ. ಅದರ ನಡುವೆ ಲೋಕರೆ ಮಕ್ಕಳಿಗೆ, 'ಪ್ರೀತಿ ಒಳ್ಳೆಯದೋ, ಸ್ನೇಹ ಒಳ್ಳೆಯದೋ?' ಎಂದು ಕೇಳುತ್ತಾರೆ. ಇಬ್ಬರೂ ಒಂದೇ ರೀತಿ ಉತ್ತರಿಸಿದರು, ಅದು 'ಸ್ನೇಹ'. 'ಒಂದು ದೋಣಿಯಲ್ಲಿ ಒಂದು ಕೋಟಿ ರೂಪಾಯಿ ಮತ್ತು ಇನ್ನೊಂದು ದೋಣಿಯಲ್ಲಿ ನಿಷ್ಕಾ ಇದ್ದಾಳೆ. ಎರಡು ದೋಣಿಗಳೂ ಮುಳುಗುತ್ತಿವೆ. ಈ ಎರಡು ದೋಣಿಗಳಲ್ಲಿ ಯಾವ ದೋಣಿಯನ್ನು ನೀನು ಮುಳುಗದಂತೆ ರಕ್ಷಿಸುತ್ತೀಯ' ಎಂದು ಕುನಾಲ್‌ನನ್ನು ಲೋಕರೆ ಮುಂದಿನದಾಗಿ ಕೇಳುತ್ತಾರೆ. ಅವನು ಸ್ವಲ್ಪವೂ ಯೋಚಿಸಬೇಕಾಗಿರಲಿಲ್ಲ. 'ನಿಷ್ಕಾ ಇರುವ ದೋಣಿ' ಎಂದು ಅವನು ಉತ್ತರಿಸುತ್ತಾನೆ.
ಇಬ್ಬರೂ ಅಪ್ಪಿಕೊಂಡು ಎಂದಿಗೂ ಬೇರೆಯಾಗುವುದಿಲ್ಲ ಎಂದು ಪ್ರಮಾಣ ಮಾಡಿದರು. ಪ್ರತಿ ವರ್ಷ ಕುನಾಲ್ ಕೈಗೆ ರಾಖಿ ಕಟ್ಟುವುದಾಗಿ ನಿಷ್ಕಾ ಭರವಸೆ ನೀಡಿದ್ದಾಳೆ. ತಿರುಗಿ ಏನು ಬೇಕು ಎಂಬ ಪ್ರಶ್ನೆಗೆ 'ಒಂದು ಗೊಂಬೆ' ಎಂದು ಅವಳು ಉತ್ತರಿಸುತ್ತಾಳೆ. ಅದನ್ನು ನೀಡುತ್ತೇನೆ ಎಂದು ಕುನಾಲ್ ಭರವಸೆ ನೀಡಿದ್ದಾನೆ. ಅತಿ ಸುಂದರವಾದ ಈ ಸ್ನೇಹದ ವಿಡಿಯೋವನ್ನು ಅನೇಕರು ನೋಡಿದ್ದಾರೆ. ಇವರ ಸ್ನೇಹ ಎಂದಿಗೂ ಮುಗಿಯಬಾರದು ಎಂದು ಹೆಚ್ಚಿನವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಪುಟ್ಟ ಮಗಳ ಮುಂದೆ ಮೊಬೈಲ್ ನೋಡಿದ ಬಿಗ್ ಬಾಸ್ ಧನರಾಜ್ ಆಚಾರ್; ಸೌಟು ಹಿಡಿದು ಬಂದ ಹೆಂಡ್ತಿ!