9 ವರ್ಷದ ಮಗನ ಬಿಟ್ಟು ತಾಯಿ ದಿಢೀರ್ ಬಾಯ್‌ಫ್ರೆಂಡ್ ಜೊತೆ ಓಡಿ ಹೋಗಿದ್ದಾಳೆ. ಇತ್ತ ಅಪಾರ್ಟ್‌ಮೆಂಟ್‌ನಲ್ಲಿ ಮಗ ಬರೋಬ್ಬರಿ 2 ವರ್ಷ ಏಕಾಂಗಿಯಾಗಿ ಕಳೆದಿದ್ದಾನೆ. ಶಾಲೆಗೂ ಹೋಗಿದ್ದಾನೆ. ಕೊನೆಗೆ ಪೊಲೀಸರು ಈ ಬಾಲಕನ ರಕ್ಷಣೆ ಮಾಡಿದ ಭಯಾನಕ ಘಟನೆ ನಡೆದಿದೆ.
ಮನಸ್ತಾಪ, ಸಂಬಂಧದಲ್ಲಿ ಮೂಡುವ ಬಿರುಕು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಿಶ್ವದೆಲ್ಲೆಡೆ ವಿಚ್ಚೇದನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳು ಬಡವಾಗುತ್ತಿದ್ದಾರೆ. ಇದೀಗ ವಿಚಿತ್ರ ಘಟನೆಯೊಂದು ನಡೆದಿದೆ. ಅಪಾರ್ಟ್‌ಮೆಂಟ್ ಒಂದರ ಮನೆಯಲ್ಲಿ 39 ವರ್ಷದ ಮಹಿಳೆ ಹಾಗೂ ಆಕೆಯ 9 ವರ್ಷದ ಪುತ್ರ ಮಾತ್ರ ವಾಸವಿದ್ದರು. ಆದರೆ ಈ ಮಹಿಳೆ ಬಾಯ್‍ಫ್ರೆಂಡ್ ಜೊತೆ ಓಡಿ ಹೋಗಿದ್ದಾಳೆ. ಮನೆಯಲ್ಲಿ 9 ವರ್ಷದ ಬಾಲಕ ಏಕಾಂಗಿಯಾಗಿದ್ದಾನೆ. ಬರೋಬ್ಬರಿ 2 ವರ್ಷ ಈ ಬಾಲಕ ಏಕಾಂಗಿಯಾಗಿ ಮನೆಯಲ್ಲಿದ್ದ. ಶಾಲೆಗೂ ಹೋಗಿದ್ದಾನೆ. ಮಾಹಿತಿ ತಿಳಿದು ಪೊಲೀಸರು ದಾಳಿ ಮಾಡಿದಾಗ 9 ವರ್ಷದ ಬಾಲಕನ ಪರಿಸ್ಥಿತಿ ನೋಡಿ ಆಘಾತಗೊಂಡ ಘಟನೆ ನಡೆದಿದೆ.
ಈ ಘಟನೆ ನಡೆದಿರುವುದು ಫ್ರಾನ್ಸ್‌ನ ಸೈರೆಯಿಲ್ ನಗರದಲ್ಲಿ. ಮಹಿಳೆ ಹಾಗೂ 9 ವರ್ಷದ ಬಾಲಕ ಇಬ್ಬರೇ ಅಪಾರ್ಟ್‌ಮೆಂಟ್‌ನ ಮನೆಯಲ್ಲಿ ನೆಲೆಸಿದ್ದರು. ಮಹಿಳೆ ಉದ್ಯೋಗಿಯಾಗಿದ್ದಾಳೆ. ಹೀಗಾಗಿ ಜೀವನ ಹೆಚ್ಚಿನ ಸಮಸ್ಯೆಗಳಿಲ್ಲದ ಸಾಗಿದೆ. ಇದರ ನಡುವೆ ಮಹಿಳೆಗೆ ಬಾಯ್‌ಫ್ರೆಂಡ್ ಸಿಕ್ಕಿದ್ದಾನೆ. ಇವರಿಬ್ಬರು ಆತ್ಮೀಯವಾಗಿದ್ದಾರೆ. ಹಲವು ಬಾರಿ ಮನೆಗೆ ತಡ ರಾತ್ರಿ ಬರಲು ಆರಂಭಿಸಿದ್ದಾಳೆ. ಆದರೆ 9 ವರ್ಷದ ಬಾಲಕ ಮೂಕಪ್ರೇಕ್ಷನಾಗಬೇಕಾಯಿತು.
ಡೇಟಿಂಗ್ ರಟ್ಟಾಗುತ್ತಿದ್ದಂತೆ ಓಡಿ ಬಂದು ಕಾರ್ತಿಕ್ ಆರ್ಯನ್‌ಗೆ ಪ್ರಪೋಸ್ ಮಾಡಿ, ರಿಂಗ್ ತೊಡಿಸಿದ ಯುವತಿ
ಪರಿಸ್ಥಿತಿ ಹೀಗೆ ಮುಂದುವರಿದಿತ್ತು. ಇದರ ನಡುವೆ ಮಹಿಳೆ ತೆಗೆದುಕೊಂಡ ನಿರ್ಧಾರ ಬಾಲಕನ ಮತ್ತಷ್ಟು ನಕರದ ಕೂಪಕ್ಕೆ ತಳ್ಳಿತ್ತು. ಕಾರಣ ಏಕಾಏಕಿ ಈಕೆ ಬಾಯ್‌ಫ್ರೆಂಡ್ ಜೊತೆ ಓಡಿ ಹೋಗಿದ್ದಾಳೆ. ಮನೆಯಲ್ಲಿದ್ದ ಹಣ, ಒಡವೆ ಸೇರಿದಂತೆ ಕೆಲ ವಸ್ತುಗಳನ್ನು ತೆಗೆದುಕೊಂಡು ಬಾಯ್‌ಫ್ರೆಂಡ್ ಜೊತೆ ಓಡಿ ಹೋಗಿದ್ದಾಳೆ.
ಶಾಲೆಯಿಂದ ಮರಳಿದಾಗ ಮನೆಯಲ್ಲಿ ತಾಯಿ ಇರಲಿಲ್ಲ. ಇದು ಬಾಲಕನಿಗೆ ಹೊಸ ವಿಚಾರ ಆಗಿರಲಿಲ್ಲ. ಹೀಗಾಗಿ ತಾಯಿ ತಡರಾತ್ರಿ ಮರಳುವ ಸಾಧ್ಯತೆ ಇದೆ ಎಂದು ಸುಮ್ಮನಾಗಿದ್ದ. ಆದರೆ ತಾಯಿ ಮರಳಲೇ ಇಲ್ಲ. ಮರುದಿನ ತಾಯಿ ಫೋನ್ ಮಾಡಿ ಮಾತನಾಡಿದ್ದಾಳೆ. ತಾನು ಕೆಲ ಕಾರಣಗಳಿಂದ ದೂರವಿರುವುದಾಗಿ ಹೇಳಿದ್ದಾಳೆ. ಇಷ್ಟೇ ಅಲ್ಲಈ ವಿಚಾರವನ್ನು ಯಾರ ಬಳಿಯೂ ಹೇಳದಂತೆ ಸೂಚಿಸಿದ್ದಾಳೆ. ಇದರಂತೆ ಈ ಬಾಲಕ ತಾಯಿ ತನ್ನ ಜೊತೆಗಿಲ್ಲ ಅನ್ನೋ ಮಾಹಿತಿಯನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ.
ಆಹಾರಕ್ಕಾಗಿ ಸೂಪರ್ ಮಾರ್ಕೆಟ್‌ನಿಂದ ಕೆಲ ವಸ್ತುಗಳನ್ನು ತಂದಿದ್ದಾನೆ. ಈತನ ಖರ್ಚಿಗೆ ಒಂದಷ್ಟು ಹಣವನ್ನು ಮನೆಯಲ್ಲಿಟ್ಟಿದ್ದ ಈತನ ತಾಯಿ ಬರೋಬ್ಬರಿ 2 ವರ್ಷ ಹೀಗೆ ಕಳೆದಿದ್ದಾಳೆ. ಇದರ ನಡುವೆ 2 ಬಾರಿ ಈಕೆ ಮಗನ ಬಳಿ ಬಂದಿದ್ದಾಳೆ. ಈ ಎರಡು ವರ್ಷ ಈ ಬಾಲಕ ಏಕಾಂಗಿಯಾಗಿ ಮನೆಯಲ್ಲಿದ್ದ. ಸರಿಯಾಗಿ ಆಹಾರವಿಲ್ಲದೆ ಸೊರಗಿಹೋಗಿದ್ದ. ಆರೋಗ್ಯ ಸಮಸ್ಯೆಗಳು ಕಾಡತೊಡಗಿದೆ. ಹಲವು ಬಾರಿ ಆಹಾರವಿಲ್ಲದೆ ಕುಸಿದು ಬಿದ್ದಿದ್ದಾನೆ.
ಈತನ ಪರಿಸ್ಥಿತಿ ನೋಡಿದ ನೆರೆಮನೆಯವರಿಗೆ ಅನುಮಾನ ಮೂಡಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಳಿಕ ಬಾಲಕನಿದ್ದ ಮನೆಗೆ ದಾಳಿ ಮಾಡಿದ್ದಾರೆ. ಮನೆಗೆ ಬಂದ ಪೊಲೀಸರಿಗೆ ಅಚ್ಚರಿಯಾಗಿದೆ. ಮನೆಯಲ್ಲಿ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಾಯಾಗಿದೆ. ಅಡುಗೆ ಮನೆಯಲ್ಲಿ ಆರ್ಡರ್ ಮಾಡಿದ ಪ್ಲಾಸ್ಟಿಕ್ ಕವರ್ ಸೇರಿದಂತೆ ಹಲವು ವಸ್ತುಗಳು ಬಿದ್ದಿತ್ತು. ಫ್ರಿಡ್ಜ್‌ನಲ್ಲಿ ಒಂದಷ್ಟು ಜ್ಯೂಸ್ ಹಾಗೂ ತಿನಿಸುಗಳಿದ್ದವು. ಮಾನಸಿಕವಾಗಿ ಈ ಬಾಲಕ ಕುಗ್ಗಿ ಹೋಗಿದ್ದ. ಬಾಲಕನ ರಕ್ಷಣೆ ಮಾಡಿದ ಪೊಲೀಸರು, ಈತನ ನೀಡಿದ ಮಾಹಿಯಂತೆ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಹಲವು ಕತೆಗಳನ್ನು ಮಹಿಳೆ ಹೇಳಿದ್ದಾಳೆ. ಆದರೆ ಪೊಲೀಸರು ದಾಖಲೆ ಸಮೇತ ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಮಹಿಳೆ ತಪ್ಪಿತಸ್ಥೆ ಎಂದು ತೀರ್ಪು ನೀಡಿದೆ. ಈಗಾಗಲೇ ಮಗ ತಾಯಿ ಇಲ್ಲದೆ ಸೊರಗಿ ಇರುವ ಕಾರಣ ಮಹಿಳೆಗೆ ಜೈಲು ಶಿಕ್ಷೆ ವಿಧಿಸಿಲ್ಲ. ಆದರೆ ಮಗನ ಸಂಪೂರ್ಣ ಆರೈಕೆ ಮಾಡಲು ಸೂಚಿಸಿದೆ. ಪೊಲೀಸರ ಕಣ್ಗಾವಲು ಇರಲೇಬೇಕು ಎಂದು ಸೂಚಿಸಿದೆ.
ಗಂಡು ಮಗುವಿನ ಆಸೆಗೆ 9 ಹೆಣ್ಣು ಮಕ್ಕಳಿಗೆ ಜನ್ಮ, ವಿಚಿತ್ರವಾಗಿದೆ ಎಲ್ಲರ ಹೆಸರು