ಎಚ್ಚರಿಕೆ... ಇದು ಖಾಸಗಿ ಕ್ಯಾಬ್​... ಖಾಸಗಿ ಜಾಗವಲ್ಲ... ಅಂತರ ಕಾಪಾಡಿ... ಕೂಲ್​ ಆಗಿರಿ... ನೋ ರೊಮಾನ್ಸ್​...

ಕ್ಯಾಬ್​ಗಳಲ್ಲಿ ರೊಮಾನ್ಸ್​ ಮಾಡುವುದನ್ನು ನೋಡಿ ನೋಡಿ ಸುಸ್ತಾಗಿ ಹೋದ ಚಾಲಕನೊಬ್ಬ ತಮ್ಮ ಕ್ಯಾಬ್​ನಲ್ಲಿ ಬರೆದಿರುವ ಬರವಣಿಗೆ ಈಗ ಸಕತ್​ ವೈರಲ್​ ಆಗುತ್ತಿದೆ. 
 

A note written in his cab by a driver for warning lovers is now going viral suc

ಪ್ರೇಮ ಕುರುಡು, ಪ್ರೇಮಕ್ಕೆ ಕಣ್ಣಿಲ್ಲ... ಅದೂ ಇದೂ ಏನೇನೋ ಪ್ರೇಮದ ಕುರಿತು ಹೇಳುವುದು ಇದೆ. ಇಂದಿನ ಯುವ ಸಮುದಾಯದಲ್ಲಿ ಹೆಚ್ಚಾಗಿ ಉಂಟಾಗುವುದು ಪ್ರೇಮವಲ್ಲ, ಬದಲಿಗೆ ಅದು ಬರಿಯ ಕಾಮ. ದೈಹಿಕ ಆಕರ್ಷಣೆಯಷ್ಟೇ. ಪ್ರೈಮರಿ, ಹೈಸ್ಕೂಲ್​ ಮಕ್ಕಳ ಕೆಲವು ವರದಿಗಳನ್ನು ನೋಡಿದರೆ ದಿಗಿಲಾಗುವುದು ಇದೆ. ಇನ್ನು ಕಾಲೇಜುಗಳ ಯುವಕ-ಯುವತಿಯರದ್ದು ಹೇಳುವುದೇ ಬೇಡ. ಸ್ವಲ್ಪ ಜಾಗ ಸಿಕ್ಕರೆ ಸಾಕು, ಅಲ್ಲಿಯೇ ಈ ಜೋಡಿಗಳ ರೊಮಾನ್ಸ್​ ಶುರುವಾಗಿಬಿಡುತ್ತದೆ. ಪಾರ್ಕುಗಳಲ್ಲಂತೂ ಹೇಳುವುದೇ ಬೇಡ, ಇನ್ನು ಪಾರ್ಕ್​ಗಳಲ್ಲಿ ಯಾರಾದರೂ ನೋಡುವ ಭಯದಿಂದ ಕ್ಯಾಬ್​ಗಳನ್ನು ಬುಕ್​ ಮಾಡಿದರೆ ಅಲ್ಲೂ ಶುರುಹಚ್ಚಿಕೊಂಡು ಬಿಡುತ್ತಾರೆ.

ಇದರಿಂದ ಬೇಸತ್ತಿರುವ ಕ್ಯಾಬ್​ ಚಾಲಕರೊಬ್ಬರು ದೊಡ್ಡದಾಗ ಫಲಕವನ್ನೇ ಹಾಕಿಬಿಟ್ಟಿದ್ದಾರೆ.  ಎಚ್ಚರಿಕೆ... ಇದು ಖಾಸಗಿ ಕ್ಯಾಬ್​... ಖಾಸಗಿ ಜಾಗವಲ್ಲ... ಅಂತರ ಕಾಪಾಡಿ... ಕೂಲ್​ ಆಗಿರಿ... ಇದು ಓಯೋ ಅಲ್ಲ... ನೋ ರೊಮಾನ್ಸ್​... ಎಂದು ಎಚ್ಚರಿಕೆಯ ಫಲಕವನ್ನು ಹಾಕಿದ್ದಾರೆ. ಇದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಕೆಲವರು ನೀವು ಹೀಗೆ ಬೋರ್ಡ್​ ಹಾಕಿದ್ರೆ, ಎಂಥವರಿಗಾದ್ರೂ ರೊಮಾನ್ಸ್​ ಮಾಡುವ ಮೂಡ್ ಬರುತ್ತದೆ, ನೀವೇ ಅವರನ್ನು ಎಚ್ಚರಿಸಿದಂತೆ ಆಗುತ್ತದೆ ಎಂದು ತಮಾಷೆಯನ್ನೂ ಮಾಡಿದ್ದಾರೆ.

Latest Videos

ಎಷ್ಟು ಮಂದಿ ಜೊತೆ ಬೇಕಿದ್ರೂ ಡೇಟಿಂಗ್​ ಮಾಡಿ, ಆದ್ರೆ... ಮಕ್ಕಳಿಗೆ ಗೌರಿ ಖಾನ್​ ಸಲಹೆ ಏನು? ಫ್ಯಾನ್ಸ್​ ಶಾಕ್​!

 dancing_pappu ಎಂಬ ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಇದು ವೈರಲ್​ ಆಗಿದೆ. ಈ  ಫೋಟೋವನ್ನು ಅವರು ಶೇರ್​ ಮಾಡಿಕೊಂಡಿದ್ದು, “ಇಂದು ಬೆಂಗಳೂರಿನ ಕ್ಯಾಬ್‌ ಒಂದರಲ್ಲಿ ಇದನ್ನು ನೋಡಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಎಚ್ಚರಿಕೆ ಫಲಕ ಫೋಟೋದಲ್ಲಿ “Warning, No romance, This is cab, Not your private place or Oyo, So please keep distance and stay calm (ಎಚ್ಚರಿಕೆ, ಪ್ರಣಯ ಸಲ್ಲದು, ಇದು ಕ್ಯಾಬ್, ನಿಮ್ಮ ಖಾಸಗಿ ಸ್ಥಳ ಅಥವಾ ಓಯೋ ಅಲ್ಲ, ಆದ್ದರಿಂದ ದಯವಿಟ್ಟು ಅಂತರ ಕಾಯ್ದುಕೊಳ್ಳಿ ಮತ್ತು ಶಾಂತವಾಗಿರಿ) ಎಂದು ಬರೆದಿರುವುದನ್ನು ನೋಡಬಹುದಾಗಿದೆ. ಆದರೆ ಇದು ಎಲ್ಲಿಯ ಕ್ಯಾಬ್​ ಎನ್ನುವುದು ಸ್ಪಷ್ಟವಾಗಿಲ್ಲ.  ಏಕೆಂದರೆ ಹಲವರು ತಮ್ಮದೇ ನಗರಗಳ ಹೆಸರುಗಳನ್ನು ಹಾಕಿಕೊಂಡು ಶೇರ್​ ಮಾಡುತ್ತಿದ್ದಾರೆ. ಜಿಸ್ಟ್​ ನ್ಯೂಸ್ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿಯೂ ಇದು ಶೇರ್​ ಆಗಿದೆ. ಇದರಲ್ಲಿ ಹೈದರಾಬಾದ್​ ಎಂದು ಬರೆಯಲಾಗಿದೆ. 

ಇಂಥದ್ದೇ ಫಲಕ ಇನ್ನೂ ಹಲವರು ಹಾಕಿಕೊಂಡರೂ ಅಚ್ಚರಿಯೇನಿಲ್ಲ. ಏಕೆಂದರೆ, ಪ್ರೇಮಿಗಳ ರೊಮಾನ್ಸ್​ನಿಂದ ಕ್ಯಾಬ್​ ಡ್ರೈವರ್​ಗಳಿಗೆ ತುಂಬಾ ಕಷ್ಟವಾಗುತ್ತಿದೆ ಎಂದು ಇದರಲ್ಲಿಯೇ ತಿಳಿಯುತ್ತಿದೆ. ಇನ್ನು ಅವಿವಾಹಿತ ಡ್ರೈವರ್​ ಆಗಿದ್ದರಂತೂ ಇವರ ರೊಮಾನ್ಸ್​ನಿಂದಾಗಿ ಅಪಘಾತ ಮಾಡುವ ಸಾಧ್ಯತೆಯೂ ಇದೆ ಎಂದು ಕೆಲವರು ಕಮೆಂಟ್​ ಹಾಕಿದ್ದಾರೆ. ಆದ್ದರಿಂದ ನಿಮ್ಮ ಪ್ರಾಣ ಸೇಫ್​ ಆಗಿರಬೇಕು ಎಂದರೆ, ಕ್ಯಾಬ್​ನಲ್ಲಿ ರೊಮಾನ್ಸ್​ ಮಾಡಬೇಡಿ ಎಂದು ಪಾಠ ಮಾಡುತ್ತಿದ್ದಾರೆ. 

ಶಾರುಖ್​, ಆಮೀರ್​ ಖಾನ್​ ನಿಗೂಢ ಸಹೋದರಿಯರು ಪತ್ತೆ! ಯಾರಿವರು? ಎಲ್ಲಿಂದ ಬಂದರು?

 
 
 
 
 
 
 
 
 
 
 
 
 
 
 

A post shared by Jist (@jist.news)

vuukle one pixel image
click me!