ಇತ್ತ ಯುವಕರು ಒಂದು ಮದುವೆಯಾಗಲು ಹುಡುಗಿಯೇ ಸಿಕ್ತಿಲ್ಲ ಎಂದು ಗೋಳೋ ಎನ್ನುತ್ತಿದ್ದರೆ, ಅತ್ತ ಲವ್ ಫೇಲ್ಯೂರ್ ಆದ ಯುವಕನೊಬ್ಬ ಕೊನೆಗೆ ಇಬ್ಬರನ್ನು ಲವ್ ಮಾಡಿ ಇಬ್ಬರನ್ನೂ ಮದ್ವೆಯಾಗಿದ್ದಾನೆ. ವಿಡಿಯೋ ವೈರಲ್ ಆಗಿದೆ.
ಕಡಿಮೆ ಸಂಬಳವಷ್ಟೇ ಅಲ್ಲ... ಲಕ್ಷ ಲಕ್ಷ ಸಂಬಳ ಪಡೆಯುವವರಿಗೂ ಇಂದು ಹುಡುಗಿಯರು ಸಿಗದೇ ಇರುವುದು ಮಾಮೂಲಾಗಿಬಿಟ್ಟಿದೆ. ಹಲವು ಸಂದರ್ಭಗಳಲ್ಲಿ ಈಗಿನ ಹುಡುಗಿಯರ ಡಿಮಾಂಡ್ಗೆ ಯುವಕರು ಬೆಚ್ಚಿಬೀಳ್ತಿದ್ರೆ, ಮತ್ತೆ ಕೆಲವು ಉದಾಹರಣೆಗಳನ್ನು ನೋಡಿ ಹುಡುಗರೇ ಮದ್ವೆಯಾಗೋದೋ, ಬೇಡ್ವೋ ಎನ್ನುವ ಆತಂಕದಲ್ಲಿದ್ದಾರೆ. ಹಲವು ಘಟನೆಗಳಲ್ಲಿ ಮದುವೆಯಾಗೋದು ಆಮೇಲೆ ಡಿವೋರ್ಸ್ ಕೊಟ್ಟು ಪರಿಹಾರ ಪಡೆಯುವುದು... ಇದು ಹೆಚ್ಚುತ್ತಿರುವ ಕಾರಣ, ಯುವಕರು ಮದುವೆ ಎಂದರೆ ದೂರ ಸರಿಯುತ್ತಿರುವುದೂ ನಡೆಯುತ್ತಿದೆ. ಇನ್ನು, ಸಂಬಳ ಕಡಿಮೆ ಇರುವ ಯುವಕರ ಕಥೆ ಹೇಳೋದೇ ಬೇಡ ಬಿಡಿ. ಅಂದ ಚೆಂದದ ಮಾತುಗಳನ್ನಾಗಿ, ಮೋಡಿ ಮಾಡಿ, ದುಬಾರಿ ಬೈಕು, ಕಾರು ಎಲ್ಲಿಂದಲೋ ತಂದು ತನ್ನದೇ ಎಂದು ಪೋಸ್ ಕೊಡುವ ಹುಡುಗರನ್ನು ನಂಬಿ ಮೋಸ ಹೋಗುವ ಹುಡುಗಿಯರೂ ಇದ್ದಾರೆ, ಆದರೆ ಹುಡುಗ ಒಳ್ಳೆಯವ, ಸಂಭಾವಿತ, ಸೈಲೆಂಟ್ ಎಂದು ಹೇಳಿದರೆ ಅತ್ತ ತಿರುಗಿಯೂ ನೋಡದ ಕಾರಣ, ಇಂದು ಎಷ್ಟೋ ಯುವಕರು ಅವಿವಾಹಿತರಾಗಿಯೇ ಉಳಿದುಬಿಟ್ಟಿದ್ದಾರೆ.
ಹೀಗೆಲ್ಲಾ ಇತ್ತ ಪರಿಸ್ಥಿತಿ ಇರುವಾಗ, ಅಲ್ಲೊಬ್ಬ ಪುಣ್ಯಾತ್ಮ ಒಂದೇ ಮಂಟಪದಲ್ಲಿ ಇಬ್ಬರು ಲವರ್ಸ್ ಅನ್ನು ಮದುವೆಯಾಗಿ ಅವಿವಾಹಿತ ಯುವಕರಿಗೆ ಹೊಟ್ಟೆಗೆ ಬೆಂಕಿ ಇಟ್ಟಿದ್ದಾನೆ! ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಲಿಂಗಾಪುರ ಮಂಡಲದ ಗುಮ್ನೂರ್ ಗ್ರಾಮದ ನಿವಾಸಿ ಸೂರ್ಯದೇವ್ ಇಬ್ಬರಿಗೂ ಒಟ್ಟಿಗೇ ತಾಳಿ ಕಟ್ಟಿರೋ ಪುಣ್ಯಾತ್ಮ. ಈ ಯುವಕನನ್ನು ಇಬ್ಬರೂ ಪ್ರೀತಿಸುತ್ತಿದ್ದರು. ಆತ ಇನ್ನೊಬ್ಬರನ್ನು ಪ್ರೀತಿಸುತ್ತಿರುವುದು ಗೊತ್ತಿಲ್ಲದ ಕಾರಣ, ಇಬ್ಬರೂ ಯುವಕನ ಬಲೆಗೆ ಬಿದ್ದಿದ್ದರು. ಆತನೂ ಅದನ್ನು ಮೆಂಟೇನ್ ಮಾಡಿದ್ದ. ಆದರೆ ಕೊನೆಗೆ ವಿಷಯ ರಿವೀಲ್ ಆದಾಗ, ಒಪ್ಪಂದ ಮಾಡಿಕೊಂಡು ಒಂದೇ ಮಂಟಪದಲ್ಲಿ ಇಬ್ಬರನ್ನೂ ಮದುವೆಯಾಗಿದ್ದಾನೆ!
ಅಶುಭ ಮುಹೂರ್ತದಲ್ಲೇ ಮದ್ವೆಯಾಗೋಯ್ತು, ಡಿವೋರ್ಸ್ ಪಕ್ಕಾ ಎಂದುಬಿಟ್ರು: ನಟ ಅಜಯ್ ರಾವ್ ಮಾತು ಕೇಳಿ..
ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಲಾಲ್ ದೇವಿ ಮತ್ತು ಜಲಕರ್ ದೇವಿ ಎಂಬ ಯುವತಿಯರು ಇವರು. ಇವರಿಬ್ಬರೂ ಬೇರೆ ಬೇರೆ ಗ್ರಾಮದವರು. ಮೂರು ವರ್ಷಗಳಿಂದ ಈ ಮಹಾನ್ ವ್ಯಕ್ತಿ ಗುಟ್ಟಾಗಿ ಇಬ್ಬರನ್ನೂ ಪ್ರೀತಿಸುತ್ತಿದ್ದದ. ಇವರಿಬ್ಬರನ್ನೂ ಬಿಟ್ಟಿರಲು ಅವನಿಂದ ಸಾಧ್ಯವಾಗಲಿಲ್ಲವಂತೆ. ನಂತರ ವಿಷಯವನ್ನು ಇಬ್ಬರಿಗೂ ತಿಳಿಸಿದಾಗ ಒಪ್ಪಂದಕ್ಕೆ ಬರಲಾಗಿದೆ. ಮೊದಲಿಗೆ ಸೂರ್ಯದೇವ್ ತನ್ನ ಕುಟುಂಬದವರನ್ನು ಒಪ್ಪಿಸಲು ಪ್ರಯತ್ನಿಸಿದ್ದ, ಆದರೆ ಇಬ್ಬರನ್ನು ಮದುವೆಯಾಗಲು ಊರಿನ ಜನರು ಒಪ್ಪಿರಲಿಲ್ಲ. ಆದರೂ ಈತ ಛಲ ಬಿಡಲಿಲ್ಲ. ತನ್ನ ಕುಟುಂಬ, ಗ್ರಾಮದ ಹಿರಿಯರು ಹಾಗೂ ಹುಡುಗಿಯರ ಮನೆಯವರನ್ನು ಒಪ್ಪಿಸಿದ್ದಾನೆ!
ಅಂದಹಾಗೆ, ಬುಡಕಟ್ಟು ಪದ್ಧತಿಗಳನ್ನು ಅನುಸರಿಸಿ ಮತ್ತು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಒಂದೇ ಸಮಾರಂಭದಲ್ಲಿ ಇಬ್ಬರು ಮಹಿಳೆಯರನ್ನು ವಿವಾಹವಾಗಿರುವುದಾಗಿ ಹೇಳಲಾಗುತ್ತಿದೆ. ಸೂರ್ಯದೇವ್ ಹೈದರಾಬಾದ್‌ನಲ್ಲಿ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾನಂತೆ ಸಿರ್ಪುರ್ ಮಂಡಲದ ಶೆಟ್ಟಿಹಡ್ಪನೂರ್ ರಾಜುಲಗುಡದಲ್ಲಿರುವ ಒಬ್ಬ ಹುಡುಗಿಯೊಂದಿಗೆ ಮೂರು ವರ್ಷಗಳ ಕಾಲ ಸಂಬಂಧವಿತ್ತು. ಆದರೆ, ಕೆಲವೇ ದಿನಗಳಲ್ಲಿ ಬ್ರೇಕ್‌ಅಪ್ ಆಯಿತು. ಕೊನೆಗೆ ಇನ್ನಿಬ್ಬರನ್ನು ಪ್ರೀತಿಸಿದ. ಬ್ರೇಕಪ್ನಿಂದ ಮನನೊಂದಿದ್ದ ಈತ ಈಗ ಇಬ್ಬರು ಹೆಂಡಿರ ಮುದ್ದಿನ ಗಂಡ. ವಿಡಿಯೋ ಇಲ್ಲಿದೆ ನೋಡಿ...
ಈಜುಕೊಳದಲ್ಲಿ ಮೈಮರೆತು ರೊಮಾನ್ಸ್ ಮಾಡ್ತಿದ್ದ ಪ್ರೇಮಿಗಳು ಭೂಕಂಪದಿಂದ ಜಸ್ಟ್ ಎಸ್ಕೇಪ್! ವಿಡಿಯೋ ವೈರಲ್
Tribal Youth Marries Two Women in Single Ceremony in Kumurambheem Asifabad
In an incident in Kumurambheem Asifabad district, a young man from Gumnoor (K) village in Lingapur mandal married two women in one ceremony, following tribal customs and in the presence of village elders.… pic.twitter.com/nnGe6ciFmh