ಮಾನವೀಯತೆ ಮರೆತ ಮನುಜ..ತಾಯಿಯಿಂದ ಬೇರ್ಪಟ್ಟ ಮರಿಯಾನೆಗೆ ಕಲ್ಲೆಸೆದು ಹಿಂಸೆ

By Vinutha Perla  |  First Published Jul 27, 2023, 6:29 PM IST

ಮನುಷ್ಯನ ಕ್ರೌರ್ಯತನ ಮಿತಿಮೀರಿದೆ. ಮಣಿಪುರದಲ್ಲಿ ನಡೆದ ಘೋರ ಘಟನೆಯೇ ಇದಕ್ಕೆ ಜ್ವಲಂತ ಸಾಕ್ಷಿ. ಮನುಷ್ಯ ಪ್ರಾಣಿಗಳ ಮೇಲೆ ಮಾಡೋ ದಬ್ಬಾಳಿಕೆಗೂ ಕೊನೆಯಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೋವೊಂದು ಮಾನವೀಯತೆ ಅನ್ನೋದು ಎಲ್ಲಿದೆ ಅನ್ನೋ ಪ್ರಶ್ನೆ ಮೂಡಿಸುತ್ತದೆ.


ಪ್ರಪಂಚದಾದ್ಯಂತ ಪ್ರಾಣಿಗಳ ಮೇಲಿನ ಕ್ರೌರ್ಯವು ಹೆಚ್ಚುತ್ತಿದೆ. ಸಾಕುಪ್ರಾಣಿಗಳಾಗಲಿ ಅಥವಾ ಕಾಡು ಪ್ರಾಣಿಗಳಾಗಲಿ, ವಿಪರೀತ ಪ್ರಾಣಿ ಹಿಂಸೆಯ ಹಲವಾರು ನಿದರ್ಶನಗಳಿವೆ. ಕೆಲವು ಪ್ರಾಣಿಗಳಿಗೆ ಜನರು ಕೇವಲ ಮೋಜಿಗಾಗಿ ಚಿತ್ರಹಿಂಸೆ ನೀಡಿದರೆ, ಇನ್ನು ಕೆಲವು ಪ್ರಾಣಿಗಳಿಗೆ ಭಯದಿಂದ ಕಿರುಕುಳ ಕೊಡುತ್ತಾರೆ.. ಕಾಡು ಪ್ರಾಣಿಗಳು ಊರಿಗೆ ನುಗ್ಗಿದಾಗ ಮನುಷ್ಯ ಅವುಗಳಿಗೆ ಕಿರುಕುಳ ಉಂಟು ಮಾಡುವುದು ಸಾಮಾನ್ಯವಾಗಿದೆ. ಆದರೆ ಇತ್ತೀಚಿಗೆ ವೈರಲ್ ಆಗಿರುವ ವಿಡಿಯೋವೊಂದು ಮನುಷ್ಯನ ಕ್ರೌರ್ಯವನ್ನು ಪ್ರತಿಬಿಂಬಿಸುತ್ತದೆ.

ಇದರಲ್ಲಿ ಗ್ರಾಮಸ್ಥರ ಗುಂಪು ಆನೆ ಮರಿಯ ಮೇಲೆ ಕಲ್ಲು ತೂರಾಟವನ್ನು ಕಾಣಬಹುದು.  ದೃಶ್ಯಗಳು ನಿಸ್ಸಂಶಯವಾಗಿ ಸಂಪೂರ್ಣ ಅಮಾನವೀಯತೆ ಮತ್ತು ಪ್ರಾಣಿಗಳ (Animals) ಕಡೆಗೆ ಅನಗತ್ಯ ಕ್ರೌರ್ಯ (Cruelty)ವನ್ನು ತೋರಿಸುತ್ತವೆ. ಗ್ರಾಮದಲ್ಲಿ ಅಲೆದಾಡುತ್ತಿದ್ದ ಆನೆ ಮರಿಯ ಮೇಲೆ ಮಕ್ಕಳೂ ಸೇರಿದಂತೆ ಗ್ರಾಮಸ್ಥರ ಗುಂಪು (Villagers) ಕಲ್ಲು ತೂರಾಟ ನಡೆಸುತ್ತಿರುವ ದೃಶ್ಯವಿದೆ. ಅಡಗುತಾಣವನ್ನು ಹುಡುಕುತ್ತಿರುವ ಆನೆ ಮರಿ (Calf) ಇದನ್ನು ನೋಡಿ ಹೆದರಿ ಓಡುತ್ತದೆ. ನಂದನ್ ಪ್ರತಿಮ್ ಶರ್ಮಾ ಬೊರ್ಡೊಲೊಯ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Tap to resize

Latest Videos

ಅಯ್ಯೋ ಪಾಪಿ: ನಮ್ಮ ರಾಷ್ಟ್ರಪಕ್ಷಿಯ ಗರಿಗಳನ್ನು ಕಿತ್ತು ಹಿಂಸೆ ನೀಡಿ ಕೊಂದೇ ಹಾಕ್ದ! ವಿಡಿಯೋ ವೈರಲ್‌

ತಾಯಿಯಿಂದ ಬೇರ್ಪಟ್ಟು ಭಯದಿಂದ ಓಡುತ್ತಿದ್ದ ಮರಿಯಾನೆ
ಪೋಸ್ಟ್‌ನ ವಿವರಣೆ ಹೀಗಿದೆ. 'ತಾಯಿಯಿಂದ ಬೇರ್ಪಟ್ಟ ಪುಟ್ಟ ಮನೆ ಭಯ ಮತ್ತು ಹಸಿವಿನಿಂದ ಅಲೆದಾಡುತ್ತಿದೆ. ಆದರೆ ನಿರ್ದಯಿ ಜನರು ಮರಿಯಾನೆ ಮೇಲೆ ಕಲ್ಲು ಎಸೆದು ದಾಳಿ ಮಾಡುತ್ತಿದ್ದಾರೆ. ಹಿರಿಯರು ಮಕ್ಕಳಿಗೆ ಮಾನವೀಯತೆಯನ್ನು ಕಲಿಸಬೇಕು. ಆದರೆ ಇಲ್ಲಿ ಮಕ್ಕಳ ಜೊತೆಗೆ ಪೋಷಕರು ಸಹ ತಪ್ಪು ಮಾಡುತ್ತಿದ್ದಾರೆ. ನಾವೆಂಥಾ ಸಮಾಜದಲ್ಲಿ ವಾಸಿಸುತ್ತಿದ್ದೇವೆ' ಎಂದು ಹೇಳಲಾಗಿದೆ.

ಅಸ್ಸಾಂನ ಜಮುಗುರಿಯಲ್ಲಿ ಈ ಘಟನೆ ನಡೆದಿರೋದಾಗಿ ವರದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗಿನಿಂದ ಇದು ಎಲ್ಲರ ಗಮನ ಸೆಳೆಯುತ್ತಿದೆ. ಹಲವಾರು ನೆಟಿಜನ್‌ಗಳು ಘಟನೆಯ ಬಗ್ಗೆ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಒಬ್ಬ ಬಳಕೆದಾರರು, 'ಮಕ್ಕಳನ್ನು ತಿದ್ದಬೇಕಾದ ಪೋಷಕರೇ ಹೀಗೆ ಮಾಡಿದರೆ ಹೇಗೆ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ತಾಯಿ-ಮಗುವಿಂದ ಬೇರ್ಪಟ್ಟ ನೋವು ಇವರಿಗೆ ಯಾರಿಗೂ ಅರ್ಥವಾಗುತ್ತಿಲ್ಲ ಏಕೆ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ಮಾನವೀಯತೆ ಸತ್ತ ಜಗತ್ತಿನಲ್ಲಿ ನಾವಿದ್ದೇವೆ' ಎಂದು ಕಮೆಂಟಿಸಿದ್ದಾರೆ.

ಕುರಿ ಮೇಯಿಸಲು ಹೋದವರಿಂದ ತಬ್ಬಲಿಯಾದ್ವು ಚಿರತೆ ಮರಿಗಳು: ಈ ರೀತಿ ಮಾಡದಿರಿ: IFS ಅಧಿಕಾರಿ ಮನವಿ

ಭಾರತೀಯ ಅರಣ್ಯ ಸೇವೆಗಳ (IFS) ಅಧಿಕಾರಿ ಸುಸಂತ ನಂದಾ ಅವರು ಪೋಸ್ಟ್ ಅನ್ನು  ಮರುಹಂಚಿಕೊಂಡಿದ್ದಾರೆ. 'ಘಟನೆಯನ್ನು ನೋಡಿ ಮನಸ್ಸು ಛಿದ್ರಗೊಂಡಿದೆ. ನಾವು ಕಲ್ಲು ತೂರಾಟಗಾರರ ರಾಷ್ಟ್ರವಾಗಲಿದ್ದೇವೆಯೇ? ಮಕ್ಕಳು ಜೀವಿಗಳ ಬಗ್ಗೆ ಕರುಣೆ ತೋರದಿದ್ದರೆ ಶಿಕ್ಷಣಕ್ಕೆ ಅರ್ಥವಿಲ್ಲ. ಇದಲ್ಲದೆ, ಅವರ ಬೆಳೆಸುವಿಕೆಯಲ್ಲಿ ಭಯಾನಕ ತಪ್ಪು ಇದೆ ಎಂದರ್ಥ. ಯಾವುದೇ ಕಾನೂನು ಇದನ್ನು ತಡೆಯಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ

Elephant calf separated from mother wandering around in fear & hunger. Calf was attacked throwing stones. Adults should explain this to children. Or, they are not worthy parents. Having children is not a pride; it's more proud to be a successful parent. Today in Jamuguri, Assam. pic.twitter.com/UjtpNmkSxj

— Nandan Pratim Sharma Bordoloi (@NANDANPRATIM)
click me!