ಪುಟ್ಟ ಮಕ್ಕಳನ್ನು, ಮಕ್ಕಳಂತಾಡುವ ಮುದಿ ಜೀವಗಳನ್ನು ನಿಭಾಯಿಸಿ ನನ್ನ ತಲೆ ಕೆಟ್ಟೇ ಹೋಗಿದೆ ಅಂತ ಬೈಕೋತಿದ್ದೀರಾ? ಹಾಗಾದರೆ ತುಸು ಸಾವಧಾನದಿಂದ ಇದನ್ನೋದಿ, ನಿಮಗೀ ಬರಹ ಹಿರಿ ಜೀವಗಳ ನಿಭಾಯಿಸುವುದಕ್ಕೆ ತುಸು ಐಡಿಯಾ ನೀಡಬಹುದು. ಜೀವನದ ಪಾಠ ಹೇಳಲೂಬಹುದು.
ವಯಸ್ಸಾದ ಹಿರಿಜೀವಗಳು ಮಕ್ಕಳಿದ್ದಂತೆ. ಯೌವ್ವನ ಮುಗಿದು ಮಧ್ಯವಯಸ್ಸು ಕಳೆದು ಇಳಿ ವಯಸ್ಸಿಗೆ ಜಾರಿರುವ ಹಿರಿ ಜೀವಗಳು ನಿಮ್ಮ ಮನೆಯಲ್ಲೂ ಇದ್ದಾರಾ? ಹೌದು ಇದ್ದಾರೆ ಸಾವಿರ ಪ್ರಶ್ನೆ ಕೇಳಿ ತಲೆ ತಿನ್ತಾರೆ, ಮಕ್ಕಳ ತರ ಆಡ್ತಾರೆ, ಪುಟ್ಟ ಮಕ್ಕಳನ್ನು, ಮಕ್ಕಳಂತಾಡುವ ಮುದಿ ಜೀವಗಳನ್ನು ನಿಭಾಯಿಸಿ ನನ್ನ ತಲೆ ಕೆಟ್ಟೇ ಹೋಗಿದೆ ಅಂತ ಬೈಕೋತಿದ್ದೀರಾ? ಹಾಗಾದರೆ ತುಸು ಸಾವಧಾನದಿಂದ ಇದನ್ನೋದಿ, ನಿಮಗೀ ಬರಹ ಹಿರಿ ಜೀವಗಳ ನಿಭಾಯಿಸುವುದಕ್ಕೆ ತುಸು ಐಡಿಯಾ ನೀಡಬಹುದು. ಜೀವನದ ಪಾಠ ಹೇಳಲೂಬಹುದು.
ಮನೆಯಲ್ಲಿರುವ ಹಿರಿಯರನ್ನು ನಿಭಾಯಿಸುವುದು ಅಷ್ಟು ಸರಳ ಅಲ್ಲ, ಮಕ್ಕಳಂತೆ ಎಲ್ಲದಕ್ಕೂ ಹಠ ಮಾಡುವ ಈ ಹಿರಿಯರನ್ನು ಸಂಭಾಳಿಸುವುದು ಬಲು ಕಷ್ಟದ ಕೆಲಸ, ಮಕ್ಕಳಿಗೋ ಬೈದು ಬಿಡಬಹುದು ಹಿರಿಯರಿಗೆ ಬೈದರೆ ಅದು ಅವರನ್ನು ಇನ್ನಷ್ಟು ಬೇಸರಕ್ಕೆ ತಳ್ಳುತ್ತದೆ. ನಾವೇ ಸಾಕಿ ಬೆಳೆಸಿ ಬುದ್ದಿ ಕಲಿಸಿದ ಮಕ್ಕಳು ನಮಗೆ ಅವಮಾನ ಮಾಡುತ್ತಿದ್ದಾರೆ ಎಂಬ ದುಃಖ ಅವರನ್ನು ಕಾಡಲಾರಂಭಿಸುತ್ತದೆ. ಕಷ್ಟದ ಮಧ್ಯೆ ಎಷ್ಟೊಂದು ಮುದ್ದಾಗಿ ಸಾಕಿದೆವು ಈಗ ಒಂದು ಮಾತು ಕೇಳಿದ್ರೆ ನಮಗೆ ಎದುರುತ್ತರ ಕೊಡುತ್ತಾರೆ. ಸಿಟ್ಟಿನಿಂದ ಎಗರಾಡುತ್ತಾರೆ ಎಂಬುದು ಹಿರಿಜೀವಗಳ ಗೋಳು ಹಾಗಾದರೆ ಯಾರಿಗೂ ನೋವಾಗದಂತೆ ಸಂದರ್ಭವನ್ನು ನಿಭಾಯಿಸುವುದು ಹೇಗೆ?
ಹಿರಿ ಜೀವಕ್ಕೆ ತೋರಿದ ಕಾಳಜಿ, ಒಂದು ಮೆಸೇಜ್‌ಗೆ ವಹಿಸಿದ ಮುತುವರ್ಜಿ, ಭಾರತೀಯ ರೈಲ್ವೇಸ್‌ಗೆ ನಮೋ ನಮಃ
1. ಅವರಿಗೆ ಮಾತನಾಡಲು ಬಿಡಿ, ಮತ್ತು ಅಷ್ಟೇ ಕಾಳಜಿಯಿಂದ ಅವರಾಡಿದ್ದನ್ನು ಕೇಳಲು ಆಸಕ್ತಿ ತೋರಿ. ಹಿರಿಯರು ಹೇಳಿದ ಕತೆಯನ್ನೇ ಹೇಳುತ್ತಾರಾ ಹೇಳಲಿ ಬಿಡಿ ಅವರಿಗೆ ಮಾತನಾಡಲು ಬಿಡಿ. ಅವರಾಡಿದ ಮಾತಿನ್ನು ಕೇಳಿಸಿಕೊಳ್ಳುವುದರಿಂದ ನಿಮ್ಮ ಗಂಟೇನೂ ಹೋಗದು. ಸೋ ಅದೇ ಮೊದಲ ಸಲವೆಂಬಂತೆ ಅದೇ ಆಸಕ್ತಿಯಿಂದ ಅವರ ಮಾತನ್ನು ಕೇಳಿಸಿಕೊಳ್ಳಿ. ಏಕೆಂದರೆ ನೀವು ಸಣ್ಣವರಿದ್ದಾಗ ಹೇಳಿದ ಒಂದೇ ಕತೆಯನ್ನು ಅವರು ಹಲವು ಬಾರಿ ನೀವು ಮೊದಲ ಸಲ ಹೇಳುತ್ತಿದ್ದೀರೇನು ಎಂಬಂತೆ ತಾಳ್ಮೆಯಿಂದ ಅಷ್ಟೇ ಪ್ರೀತಿಯಿಂದ ಕೇಳಿಸಿಕೊಂಡಿರುತ್ತಾರೆ. ಮಕ್ಕಳು ನಮ್ಮ ಮಾತು ಕೇಳಬೇಕು ಎಂಬ ಕನಿಷ್ಟ ಸೆ ಅವರಿಗಿರೋದು ತಪ್ಪಲ್ಲ
2. ನೀವು ಒಂದು ವೇಳೆ ಅವರ ಜೊತೆ ಆಟ ಆಡುತ್ತಿದ್ದರೆ ಅವರನ್ನು ಮಾತನಾಡುತ್ತಿದ್ದರೆ ವಾದ ಮಾಡುತ್ತಿದ್ದರೆ ಗೆಲ್ಲಲು ಬಿಡಿ. ಏಕೆಂದರೆ ಅವರು ನೀವು ಸಣ್ಣವರಿದ್ದಾಗ ಗೆಲ್ಲುವ ಅವಕಾಶವಿದ್ದರೂ ಅನೇಕ ಬಾರಿ ಅವರು ತಮ್ಮ ಮಗ ಮಗಳು ಗೆಲ್ಲಬೇಕು ಎಂಬ ಕಾರಣಕ್ಕೆ ಸೋತಿದ್ದಾರೆ. ಸೋತು ಗೆಲ್ಲಲ್ಲು ಪ್ರಯತ್ನಿಸಿ.
3. ಅವರ ಸ್ನೇಹಿತರು ಆತ್ಮೀಯರ ಜೊತೆ ಸ್ನೇಹಿತರಂತೆ ಬೆರೆಯಲು ಅವಕಾಶ ನೀಡಿ ಏಕೆಂದರೆ ನೀವು ಚಿಕ್ಕವರಿದ್ದಾಗ ಅವರು ನಿಮ್ಮನ್ನು ನಿಮ್ಮ ಸ್ನೇಹಿತರ ಜೊತೆ ಆತ್ಮೀಯರ ಜೊತೆ ಬೆರೆಯಲು ಬಿಟ್ಟಿದ್ದಾರೆ. ಅದೇ ರೀತಿ ಅವರ ಮೊಮ್ಮಕ್ಕಳ ಜೊತೆ ಅವರನ್ನು ಆಟವಾಡಿ ಖುಷಿ ಪಡಲು ಬಿಡಿ, ಮನೆಯ ಹಿರಿ ಜೀವಗಳಿಗೆ ಮೊಮ್ಮಕ್ಕಳೇ ಸ್ನೇಹಿತರು. ಅಲ್ಲದೇ ಅವರು ಮೊಮ್ಮಕ್ಕಳಲ್ಲಿ ನಿಮ್ಮ ಬಾಲ್ಯವನ್ನು ಮರಳಿ ನೋಡಲು ಬಯಸುತ್ತಾರೆ. ಅವರ ಸ್ನೇಹಿತರ ಜೊತೆ ಮಾತನಾಡುವಾಗ ಮೂಗು ತೂರಿಸಲು ಹೋಗದಿರಿ.
ಮಕ್ಕಳು ಬಿಟ್ಟು ಹೋದ 80ರ ವಯಸ್ಸಿನ ಅಪ್ಪನ ಕತೆ, ತುತ್ತು ಅನ್ನಕ್ಕಾಗಿ ಚಿತ್ರ ಬಿಡಿಸಿ ಮಾರಾಟ!
4. ತಪ್ಪು ಮಾಡುತ್ತಿದ್ದಾರಾ ಮಾಡಲಿ ಬಿಡಿ ಅವರನ್ನು ಮುಜುಗರಕ್ಕೀಡು ಮಾಡಬೇಡಿ, ಸೌಮ್ಯವಾಗಿ ಹೇಳಿ ಏಕೆಂದರೆ ಹಿರಿಜೀವಗಳು ಮಕ್ಕಳಂತೆ. ನೀವು ನಿಮ್ಮ ಬಾಲ್ಯದಲ್ಲಿ ಸಾವಿರ ತಪ್ಪು ಮಾಡಿರುತ್ತೀರಿ ಆಗಲೆಲ್ಲಾ ನಿಮ್ಮ ಪೋಷಕರು ನಿಮ್ಮನ್ನು ಎಲ್ಲರೆದುರು ನಿಂದಿಸಿಲ್ಲ, ಏನೇ ಇದ್ದರೂ ನಿಮ್ಮ ತಪ್ಪುಗಳನ್ನು ತಿದ್ದಲು ಸರಿ ದಾರಿಗೆ ಸೇರಿಸಲು ಮನೆಯ ಕೋಣೆಯ ಬಾಗಿಲು ಹಾಕಿ ಎರಡೂ ಬಾರಿಸಿರಲೂ ಬಹುದು. ಹಾಗಂತ ಹಿರಿ ಜೀವಗಳನ್ನು ಎಲ್ಲರೆದುರು ನಿಂದಿಸಿ ಅವಮಾನಿಸುವುದು ಶೋಭೆಯಲ್ಲ,
5. ಅವರನ್ನು ಅವರಿಷ್ಟದಂತೆ ಬದುಕಲು ಬಿಡಿ ಏಕೆಂದರೆ ಅವರು ಬದುಕಿನ ಕೊನೆಘಟ್ಟದಲ್ಲಿದ್ದಾರೆ. ಅವರಿಗೆ ಅಗತ್ಯವಿದ್ದಲ್ಲಿ ನಿಮ್ಮ ನೆರವಿನ ಹಸ್ತ ನೀಡಿ. ಏಕೆಂದರೆ ಅವರು ನಿಮ್ಮ ಬಾಲ್ಯದಲ್ಲಿ ನಿಮಗೆ ಹೆಜ್ಜೆ ಇಡಲು ನೆರವಾಗಿದ್ದಾರೆ. ನಡೆಸಲು ಕಲಿಸಿದ್ದಾರೆ. ಹೀಗಾಗಿ ಬದುಕಿನ ಮುಸಂಜೆಯಲ್ಲಿ ಹೆಜ್ಜೆ ಇಡಲು ಅವರಿಗೂ ನೀವು ನೆರವಾಗಿ. ನಿಮ್ಮ ಅಪ್ಪ ಅಮ್ಮನನ್ನು ಗೌರವಿಸಿ, ನಿಮ್ಮ ಇಡೀ ದಿನ ಜೀವನ ಚೆನ್ನಾಗಿರುವುದು. ಇಂತದ್ದೆಲ್ಲಾ ಬೇರೆಯವರಿಗೆ ಹೇಳುವುದಕ್ಕೆ ಕೇಳುವುದಕ್ಕೆ ಚೆಂದ ಎಂದು ಗೋಳಾಡಿದಿರಿ. ತಾಳ್ಮೆಯಿರಲಿ ಏಕೆಂದರೆ ಮುಂದೆ ನಮಗೂ ವಯಸ್ಸಾಗುವುದು. ನಿಮ್ಮ ಹಾಗೂ ನಿಮ್ಮ ಪೋಷಕರಿಗೆ ಒಳ್ಳೆಯದಾಗಲಿ.